ಹತ್ತಾರು ದೈತ್ಯ ಹಾವುಗಳ ಮಧ್ಯೆ ಆರಾಮಾಗಿ ಕುಳಿತಿರುವ ಭೂಪ.!; ಈ ವೈರಲ್ ವಿಡಿಯೋವನ್ನು ನೀವು ನೋಡ್ಲೇಬೇಕು

ಟ್ವಿಟ್ಟರ್​​​ನಲ್ಲಿ ಈ ವಿಡಿಯೋ ಹಾಕಿರುವ Aqualady ಕ್ಯಾಪ್ಶನ್ ಒಂದನ್ನೂ ಹಾಕಿಕೊಂಡಿದ್ದಾರೆ. ಅದೇನೆಂದರೆ, ''ನೀವು 50 ಮಿಲಿಯನ್ ಡಾಲರ್ ಹಣಕ್ಕೆ ಒಂದು ಗಂಟೆ ಅದರೊಳಗೆ ಇರುತ್ತೀರಾ..?'' ಎಂದು ಚಾಲೆಂಜ್ ಮಾಡಿದ್ದಾರೆ.

ಹಾವುಗಳ ಮಧ್ಯೆ ಕುಳಿತಿರುವ ವ್ಯಕ್ತಿ

ಹಾವುಗಳ ಮಧ್ಯೆ ಕುಳಿತಿರುವ ವ್ಯಕ್ತಿ

 • Share this:
  ಹಾವನ್ನು ಕಂಡರೆ ಮನುಷ್ಯ ಹೆದರುವುದು ಸಾಮಾನ್ಯ ಸಂಗತಿ. ಒಂದು ಹಾವಿದ್ದರೂ ಮಾರುದ್ದ ದೂರ ಓಡಿಹೋಗ್ತೀವಿ. ಇಲ್ಲದಿದ್ದರೆ ತೀವ್ರ ಭಯದಿಂದ ನಲುಗಿಹೋಗ್ತೀರಾ. ಆದರೆ, ಇಲ್ಲೊಬ್ಬ ವ್ಯಕ್ತಿ ಹತ್ತಾರು ಭಯಾನಕ ಹಾವುಗಳಿದ್ದರೂ ಅದರ ಭಯವೇ ಇಲ್ಲದೆ ಆರಾಮಾಗಿ ಶಾಂತವಾಗಿದ್ದಾರೆ. ಈ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಹಾವುಗಳಿಂದ ಸುತ್ತುವರೆದಿರುವ ಪ್ರದೇಶದಲ್ಲಿ ಆ ವ್ಯಕ್ತಿ ಹಾವುಗಳನ್ನು ಕಂಡರೂ ಅದರ ವಿವೇಚನೆಯೇ ಇಲ್ಲವೇನೋ ಎಂಬಂತೆ ಕುಳಿತುಕೊಂಡಿದ್ದಾರೆ. ಈ ವಿಡಿಯೋ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದ್ದು, ಇದನ್ನು ನೋಡಿದರೆ ನಿಮ್ಮ ರಕ್ತ ಕಲಕಬಹುದು. ಹೆದರುವುದಂತೂ ಖಚಿತ. ಟ್ವಿಟ್ಟರ್​​ನಲ್ಲಿ Aqualady ಎಂಬ ಹೆಸರಿನ ಖಾತೆ ಹೊಂದಿರುವ ವ್ಯಕ್ತಿಯೊಬ್ಬರು ಈ 12 ಸೆಕೆಂಡ್ಗಳ ಚಿಕ್ಕ ವಿಡಿಯೋವೊಂದನ್ನು ಶೇರ್ ಮಾಡಿದ್ದು, ಇದು ಆನ್​​ಲೈನ್​ನಲ್ಲಿ ಲಭ್ಯವಾದ 24 ಗಂಟೆಗಳಲ್ಲಿ ಸುಮಾರು ಮೂರು ಲಕ್ಷ ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ.

  ಆ ವ್ಯಕ್ತಿ ಬೃಹತ್ ಗಾತ್ರದ ಹಾವುಗಳಿಂದ ಸುತ್ತುವರೆದಿರುವ ಪ್ರದೇಶದಲ್ಲಿ ಕುಳಿತಿದ್ದಾನೆ. ಆದರೂ, ಆತ ಸಂಪೂರ್ಣವಾಗಿ ಶಾಂತನಾಗಿರುತ್ತಾನೆ ಮತ್ತು ಹಾವುಗಳು ಅವನ ಸುತ್ತಲೂ ಸುತ್ತುತ್ತಿದ್ದರೂ ಆತ ತೊಂದರೆಗೊಳಗಾಗಿಲ್ಲ. ಸಂಯೋಜನೆಗೊಂಡಿದ್ದರಿಂದ ಮನುಷ್ಯನಿಗೆ ತೊಂದರೆಯಾಗಿಲ್ಲ.

  ಬಾಗಲಕೋಟೆಯಲ್ಲಿ ಆತ್ಮನಿರ್ಭರ ಯೋಜನೆಯಡಿ ಬೀದಿ ಬದಿ ವ್ಯಾಪಾರಸ್ಥರಿಗೆ ಸಾಲ ಮೇಳ

  ಇನ್ನು, ವಿಡಿಯೋ ಆರಂಭದಲ್ಲಿ ಆತನ ಬಳಿ ಕೆಲವು ಹಾವುಗಳಿರುತ್ತವೆ. ಸ್ವಲ್ಪ ಸಮಯದ ನಂತರ, ಕೊಂಬೆಯೊಂದರ ಮೇಲೆ ನೇತಾಡುತ್ತಿದ್ದ ಹಲವು ಹಾವುಗಳು ಒಮ್ಮೆಲೇ ಆತನ ಮೇಲೆ ಬಿದ್ದು ವ್ಯಕ್ತಿ ಸಂಪೂರ್ಣ ಮುಚ್ಚಿಕೊಳ್ಳುತ್ತಾನೆ. ನೀವು ಆ ಸ್ಥಳದಲ್ಲಿದ್ದರೆ ನೀವು ಹೇಗೆ ಇರುತ್ತಿದ್ದೀರಿ ಎಂದು ಒಮ್ಮೆ ಊಹಿಸಿ ನೋಡೋಣ. ಹಾವುಗಳು ಆತನ ಮೇಲೆ ಬಿದ್ದ ವೇಳೆಯಲ್ಲಿಯೂ ಸಹ ಆ ವ್ಯಕ್ತಿ ಗಾಬರಿಯಾಗಿಲ್ಲ. ಬದಲಾಗಿ "ವೊಹ್!" ಎಂದು ಕಿರುಚಿದ್ದಾನೆ. ಆಗ ಸ್ವಲ್ಪ ಭಯವಾಗಿರಬಹುದು ಅಷ್ಟೇ..!

  ಇನ್ನು, ಟ್ವಿಟ್ಟರ್​​​ನಲ್ಲಿ ಈ ವಿಡಿಯೋ ಹಾಕಿರುವ Aqualady ಕ್ಯಾಪ್ಶನ್ ಒಂದನ್ನೂ ಹಾಕಿಕೊಂಡಿದ್ದಾರೆ. ಅದೇನೆಂದರೆ, ''ನೀವು 50 ಮಿಲಿಯನ್ ಡಾಲರ್ ಹಣಕ್ಕೆ ಒಂದು ಗಂಟೆ ಅದರೊಳಗೆ ಇರುತ್ತೀರಾ..?'' ಎಂದು ಚಾಲೆಂಜ್ ಮಾಡಿದ್ದಾರೆ.

  ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ ನೋಡಿ

  ಸಾವಿರಾರು ಲೈಕ್ಗಳು ಮತ್ತು ರಿಟ್ವೀಟ್ಗಳನ್ನು ಗಳಿಸಿದ ಈ ವಿಡಿಯೋ ನೋಡಿದ ಸಾಮಾಜಿಕ ಜಾಲತಾಣ ಬಳಕೆದಾರರು ನಾನಾ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಪೋಸ್ಟ್ನಲ್ಲಿನ ಕೆಲವು ಕಾಮೆಂಟ್ಗಳು ನಿಜವಾಗಿಯೂ ತಮಾಷೆಯಾಗಿವೆ.

  ''ಹಾವುಗಳು ವಿಷಪೂರಿತವಾಗದಿರಬಹುದು. ಆದರೆ, ಅವು ನಮ್ಮನ್ನು ಸುತ್ತುವರಿಯುತ್ತವೆ, ನಿರ್ಬಂಧಿಸುತ್ತವೆ'' ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ.

  ಮತ್ತೊಬ್ಬ ನೆಟ್ಟಿಗ ಚಾಲೆಂಜ್ ಅನ್ನು ಸ್ವೀಕರಿಸಿದ್ದು, ''ಹೌದು, ಅವು ವಿಷಕಾರಿಯಾಗಿಲ್ಲದಿದ್ದರೆ - ನನಗೆ ಆ ಮಿಲಿಯನ್ ಬೇಕು. ಆದರೆ, ಅದು ಗಾಜಿನ ಸೇತುವೆಯಾಗಿದ್ದರೆ ನನಗೆ ಬೇಡ'' ಎಂದೂ ಹೇಳಿಕೊಂಡಿದ್ದಾರೆ.

  ಈ ಚಾಲೆಂಜ್ಗೆ ನೀವೇನ್ ಹೇಳ್ತೀರಾ..? ವಿಡಿಯೋ ನೋಡಿ ಭಯ ಆಗಲಿಲ್ಲವಾ..?
  Published by:Latha CG
  First published: