Viral Video: ಕೊರಿಯರ್ ಬಾಯ್ ಆಗಿ ಬಂದ ಮಗ, ಪತ್ರ ಪಡೆದು ಮುತ್ತುಕೊಟ್ಟ ತಂದೆ! ಭಾವುಕ ಕ್ಷಣಗಳ ದೃಶ್ಯ ನೀವೂ ಕಣ್ತುಂಬಿಕೊಳ್ಳಿ

ಇಲ್ಲಿ ಏನೋ ನಡೆಯುತ್ತಿದೆಯಲ್ಲಾ ಅನ್ನೋದನ್ನು ಆ ವೃದ್ಧರು ಗೆಸ್ ಮಾಡ್ತಾರೆ. ಈತ ಕೊರಿಯರ್ ಬಾಯ್ ಅಲ್ಲ, ಖುದ್ದು ನನ್ನ ಮಗನೇ ಅನ್ನುವುದನ್ನು ಅವರು ಕಂಡು ಹಿಡಿಯುತ್ತಾರೆ. ಮುಂದೇನಾಗುತ್ತದೆ ಅಂತ ನೀವೇ ನೋಡಿ...

ತಂದೆ-ಮಗ ಒಂದಾದ ಭಾವುಕ ಕ್ಷಣ

ತಂದೆ-ಮಗ ಒಂದಾದ ಭಾವುಕ ಕ್ಷಣ

  • Share this:
ಮಕ್ಕಳು (Children) ಅಂದ್ರೆ ತಂದೆ (Father) ಹಾಗೂ ತಾಯಿ (Mother) ಇಬ್ಬರಿಗೂ ಜೀವಕ್ಕಿಂತ ಹೆಚ್ಚು ಪ್ರೀತಿ (Love). ನಮಗೆ ಏನೇ ಕಷ್ಟ ಬಂದರೂ ಪರ್ವಾಗಿಲ್ಲ, ನಮ್ಮ ಮಕ್ಕಳಿಗೆ ಏನೂ ಕಷ್ಟ ಬರಬಾರದು ಅಂತ ತಂದೆ-ತಾಯಿ ಅಂದುಕೊಳ್ತಾರೆ. ತಾವು ಕಷ್ಟಪಡುತ್ತಾ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ತಾರೆ. ಮಕ್ಕಳು ಹೇಗೇ ಇರಲಿ, ಎಷ್ಟೇ ದೂರ ಇರಲಿ, ಅವರನ್ನು ನೋಡದೇ ಎಷ್ಟೇ ವರ್ಷವಾಗಿರಲಿ ಇವರೇ ನಮ್ಮ ಮಕ್ಕಳು ಅಂತ ತಂದೆ-ತಾಯಿ ಕಂಡು ಹಿಡಿತಾರೆ. ಕಣ್ಣು (Eye) ಅರಿಯದಿದ್ದರೂ ಕರುಳು ಅರಿಯುವುದಿಲ್ಲವೇ ಅಂತ ಹಿರಿಯರು ಹೇಳುವುದು ಇದಕ್ಕೆ ಅಲ್ಲವಾ? ನೀವು ಈ ವಿಡಿಯೋವನ್ನೇ (Video) ನೋಡಿ.. ಇಲ್ಲಿ ವೃದ್ಧ ತಂದೆಯೊಬ್ಬರು ತನ್ನ ಮಗನನ್ನು ಹೇಗೆ ಕಂಡು ಹಿಡಿಯುತ್ತಾರೆ ಅಂತ. ಈ ಭಾವುಕ ವಿಡಿಯೋವನ್ನೂ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ (Viral) ಆಗಿದ್ದು, ನೀವೂ ಒಮ್ಮೆ ಈ ದೃಶ್ಯ ಕಣ್ತುಂಬಿಕೊಳ್ಳಿ…

 ಕೊರಿಯರ್ ಹುಡುಗನಂತೆ ಬಂದ ಮಗ

ಈ ಭಾವುಕ ಕ್ಷಣಗಳ ವಿಡಿಯೋ ದೃಶ್ಯ ನಡೆದಿದ್ದು ಅಮೆರಿಕಾದಲ್ಲಿ. @GoodNewsCorres1 ಎಂಬ ಟ್ವಿಟ್ಟರ್ ಖಾತೆಯಲ್ಲಿ ಹಾಗೂ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಆಗಿರುವ ದೃಶ್ಯ ಇದು. ಕೊರಿಯರ್ ಬಾಯ್ ಒಬ್ಬರು ಪತ್ರ ಹಿಡಿದು ಬಾಗಿಲ ಬಳಿ ಬಂದು, ಆ ಮನೆಯ ಬೆಲ್ ಮಾಡುತ್ತಾರೆ. ತಕ್ಷಣ ವೃದ್ಧರೊಬ್ಬರು ಹೊರಗೆ ಬರುತ್ತಾರೆ. ಇವರ ಕೈಗೆ ಪತ್ರವೊಂದನ್ನು ಕೊಟ್ಟು ಈ ಹುಡುಗ ಮುಂದೆ ಸಾಗುತ್ತಾರೆ. ಆದರೆ, ಅಲ್ಲೇ ಕ್ಯಾಮೆರಾ ಹಿಡಿದು ನಿಂತಿರುವ ಒಬ್ಬರನ್ನು ಕಂಡ ತಕ್ಷಣ ವೃದ್ಧರಿಗೆ ಅಚ್ಚರಿಯಾಗುತ್ತದೆ.

ಮಗನನ್ನು ಗುರುತಿಸಿದ ವೃದ್ಧ ತಂದೆ

ಇಲ್ಲಿ ಏನೋ ನಡೆಯುತ್ತಿದೆಯಲ್ಲಾ ಅನ್ನೋದನ್ನು ಆ ವೃದ್ಧರು ಗೆಸ್ ಮಾಡ್ತಾರೆ. ಈತ ಕೊರಿಯರ್ ಬಾಯ್ ಅಲ್ಲ, ಖುದ್ದು ನನ್ನ ಮಗನೇ ಅನ್ನುವುದನ್ನು ಅವರು ಕಂಡು ಹಿಡಿಯುತ್ತಾರೆ. ಇದೇ ಅಚ್ಚರಿಯಿಂದ ಹೊರಬಂದು ನೋಡಿದರೆ ದೂರದಲ್ಲಿ ಲಂಡನ್‌ನಿಂದ ಅಮೆರಿಕಾಕ್ಕೆ ಮರಳಿರುವ ಇವರ ಪುತ್ರ ನಿಂತಿರುವುದು ಕಾಣಿಸುತ್ತದೆ.

ಇದನ್ನೂ ಓದಿ: Viral Video: ನನ್ನ ತಂಗಿಯಾ ಮದುವೆ ಜೋರು ಜೋರು ಜೋರು! ಸಹೋದರಿ ವಿವಾಹದಲ್ಲಿ ಅಣ್ಣನ ಸಂಭ್ರಮ ನೋಡಿ ಕಣ್ತುಂಬಿಕೊಳ್ಳಿ

ತನ್ನ ಮಗನನ್ನು ಬಿಗಿದಪ್ಪಿ ಮುದ್ದಾಡಿದ ವೃದ್ಧ ತಂದೆ

ಪೋಸ್ಟ್‌ ಮ್ಯಾನ್‌ನಂತೆ ಬಂದು ತಮ್ಮ ಕೈಗೆ ಪತ್ರ ಕೊಟ್ಟಿದ್ದು, ಕೊರಿಯರ್ ಬಾಯ್ ಅಲ್ಲ, ತನ್ನದೇ ಮಗ ಎನ್ನುವುದು  ಆ ವೃದ್ಧ ತಂದೆಗೆ ಕೂಡಲೇ ಗೊತ್ತಾಗುತ್ತದೆ. ಅಷ್ಟರಲ್ಲೇ ಕಣ್ಣೆದುರು ಮಗ ನಿಂತಿರುತ್ತಿದ್ದಂತೆಯೇ ಈ ವೃದ್ಧರಿಗೆ ಖುಷಿ ತಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಪುತ್ರನನ್ನು ಪ್ರೀತಿಯಿಂದ ಬಿಗಿದಪ್ಪಿ  ಮುತ್ತು ಕೊಡುತ್ತಾರೆ. ಭಾವುಕರಾಗಿ ತಂದೆ ಹಾಗೂ ಮಗ ಒಬ್ಬರಿಗೊಬ್ಬರು ಸಾಂತ್ವನ ಹೇಳಿಕೊಳ್ಳುತ್ತಾರೆ.ನೋಡುಗರನ್ನು ಭಾವುಕವಾಗಿಸುವ  ತಂದೆ-ಮಗನ ಪ್ರೀತಿ

ಆರಂಭದಲ್ಲಿ ಕುತೂಹಲದಿಂದ ನೋಡುವಂತೆ ಮಾಡುವ ಈ ದೃಶ್ಯ ಕೊನೆಯಲ್ಲಿ ಹೃದಯವನ್ನೇ ಭಾರವಾಗಿಸುತ್ತದೆ. ಆ ಅಪೂರ್ವ ಪ್ರೀತಿ ಕಣ್ಣಾಲಿಗಳು ತುಂಬಿ ಬರುವಂತೆ ಮಾಡುತ್ತದೆ. ವೃದ್ಧನ ಆನಂದಭಾಷ್ಪ ಎಲ್ಲರನ್ನೂ ಭಾವುಕರನ್ನಾಗಿಸುತ್ತದೆ.

ಇದನ್ನೂ ಓದಿ: Viral Story: ಎರಡು ಅಪರೂಪದ ಕ್ಯಾನ್ಸರ್ ವಿರುದ್ಧ ಹೋರಾಡಿ ಬದುಕುಳಿದು, ಮಾದರಿಯಾದ ಮಹಿಳೆಯ ಕಥೆಯಿದು

ಸೋಶಿಯಲ್ ಮೀಡಿಯಾಗಳಲ್ಲಿ 2.2 ಮಿಲಿಯನ್ ವೀಕ್ಷಣೆ

@GoodNewsCorres1 ಎಂಬ ಟ್ವಿಟ್ಟರ್ ಖಾತೆಯಲ್ಲಿ ಹಾಗೂ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಆಗಿರುವ ದೃಶ್ಯ ಇದು.  ಇದು Instagram ನಲ್ಲಿ 2.2 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ, ಹಲವಾರು ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಪಡೆದಿದೆ. ಇದನ್ನು ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ತಂದೆ ಹಾಗೂ ಮಗನ ನಡುವಿನ ಪ್ರೀತಿ, ಬಾಂಧವ್ಯವನ್ನು ಕೊಂಡಾಡಿದ್ದಾರೆ. ತಂದೆ, ಮಗನ ಭಾವುಕ ಕ್ಷಣಗಳ ದೃಶ್ಯ ನೋಡಿ ಕಣ್ಣಾಲಿಗಳು ಒದ್ದೆಯಾಗಿದ್ದಾಗಿ ಹೇಳಿದ್ದಾರೆ.
Published by:Annappa Achari
First published: