ಭೂಮಿಯ (Earth) ಮೇಲೆ ಹುಟ್ಟಿದ ಪ್ರತಿಯೊಂದು ಪ್ರಾಣಿಯೂ (Animal) ಸಾಯುವುದು ನಿಶ್ಚಿತ. ಆದರೆ ಪ್ರತಿಯೊಂದು ಪ್ರಾಣಿಯ ಜೀವಿತಾವಧಿ ವಿಭಿನ್ನವಾಗಿರುತ್ತದೆ. ನೂರು ವರ್ಷ ದಾಟಿದವರ ಬಗ್ಗೆ ಕೇಳಿರುತ್ತೇವೆ, ಓದಿರುತ್ತೇವೆ. ಆದರೆ ಈಗ 190 ವರ್ಷಕ್ಕೂ ಹೆಚ್ಚು ವರ್ಷದ ಆಮೆ ಪ್ರಪಂಚದಾದ್ಯಂತ ಫೇಮಸ್ ಆಗಿದೆ. ಈ ತಿಂಗಳು (ಡಿಸೆಂಬರ್ 2022) ಆಮೆಯ 190 ನೇ ವರ್ಷದ ಹುಟ್ಟುಹಬ್ಬವನ್ನುಆಚರಿಸಿಕೊಳ್ಳೂತ್ತದೆ. ಇದು ವಿಶ್ವದ ಅತ್ಯಂತ ಹಳೆಯ ಆಮೆ (Turtle) ಎಂದು ಗಿನ್ನೆಸ್ ವಿಶ್ವ ದಾಖಲೆಗಳಲ್ಲಿ ( Ginnis World Record) ದಾಖಲಾಗಿದೆ. ಈ ಕುರಿತು ಮಾಹಿತಿ ಇಲ್ಲಿದೆ. ಜಗತ್ತಿನಲ್ಲಿ ಕೆಲವು ಪ್ರಾಣಿಗಳು ಅಮರವೆಂದು ನಂಬಲಾಗಿದೆ. ಇದು ಟೂರಿಟೋಪ್ಸಿಸ್ ಡೋರ್ನಿ ಮತ್ತು ಹೈಡ್ರಾ ಜೀವಿಗಳನ್ನು ಒಳಗೊಂಡಿದೆ.
ಪ್ರಸ್ತುತ, ಆಮೆಯ ಸುದ್ಧಿಯು ಸಖತ್ ಪಾಪ್ಯುಲರ್ಲ್ಲಿ ಇದೆ. ಈ ಆಮೆಯ 190 ನೇ ಹುಟ್ಟುಹಬ್ಬವನ್ನು ಆಚರಿಸಲಾಗುವುದು. ಗಿನ್ನೆಸ್ ವರ್ಲ್ಡ್ ರೆಕಾರ್ಡ್ನಿಂದ ಆಮೆಗೆ ಅತ್ಯಂತ ಹಳೆಯ ಆಮೆ ಎಂಬ ಬಿರುದನ್ನು ನೀಡಲಾಗಿದೆ. ಈ ಆಮೆಯ ಹೆಸರು ಜೊನಾಥನ್ ಮತ್ತು ಇದರ ವೈಜ್ಞಾನಿಕ ಹೆಸರು ಅಲ್ಡಾಬ್ರಶೆಲ್ಸ್ ಗಿಗಾಂಟಾ ಹೋಲೋಲಿಸಾ. ಈ ಆಮೆಯ ನಿಖರವಾದ ಜನ್ಮ ದಿನಾಂಕ ಯಾರಿಗೂ ತಿಳಿದಿಲ್ಲ. ಆದರೆ ಇದು 1882 ರ ಮೊದಲು ಭೂಮಿಗೆ ಬಂದಿದೆ ಎಂದು ಹೇಳಲಾಗುತ್ತದೆ .
ಜೊನಾಥನ್ ದಿ ಟಾರ್ಟಾಯ್ಸ್ ಕುರಿತು ಮಾತನಾಡುತ್ತಾ, ದಕ್ಷಿಣ ಅಟ್ಲಾಂಟಿಕ್ ಸಾಗರದ ಸೇಂಟ್ ಹೆಲೆನಾ ದ್ವೀಪದ ಪ್ರಸ್ತುತ ಗವರ್ನರ್ ನಿಗೆಲ್ ಫಿಲಿಪ್ಸ್ ಇತ್ತೀಚೆಗೆ ಜೊನಾಥನ್ ಅವರ ಅಧಿಕೃತ ಜನ್ಮದಿನವನ್ನು ಡಿಸೆಂಬರ್ 4, 1832 ಎಂದು ಘೋಷಿಸಿದರು.
1882 ರಲ್ಲಿ, ಆಮೆಯನ್ನು ಮೊದಲ ಬಾರಿಗೆ ಬ್ರಿಟಿಷ್ ಪ್ರಾಂತ್ಯದ ಸೇಂಟ್ ಹೆಲೆನಾಗೆ ಅಂದಿನ ಗವರ್ನರ್ ವಿಲಿಯಂ ಗ್ರೇ-ವಿಲ್ಸನ್ ಅವರು ಸೀಶೆಲ್ಸ್ (ಪೂರ್ವ ಆಫ್ರಿಕಾದ ದೇಶ) ನಿಂದ ಉಡುಗೊರೆಯಾಗಿ ತರಲಾಯಿತು. ಈ ಆಮೆಯ ಜನನದ ಬಗ್ಗೆ ಸ್ಥಳೀಯ ಆಡಳಿತದ ಬಳಿ ಯಾವುದೇ ದಾಖಲೆ ಲಭ್ಯವಿಲ್ಲದಿದ್ದರೂ, ಈ ಆಮೆ 39 ಯುಎಸ್ ಅಧ್ಯಕ್ಷರ ಬದಲಾವಣೆಯನ್ನು ಕಂಡಿದೆ ಎಂದು ಸ್ಥಳೀಯ ಜನರಲ್ಲಿ ಚರ್ಚೆ ಇದೆ. ಆಮೆಯು ರಾಣಿ ವಿಕ್ಟೋರಿಯಾ ಆಳ್ವಿಕೆಯ ಮೊದಲು ಜನಿಸಿದೆ ಎಂದು ಮಾತನಾಡುತ್ತಾರೆ ಜನರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ