news18-kannada Updated:December 20, 2020, 4:09 PM IST
2020 ಚಾಲೆಂಜ್
2020ನೇ ವರ್ಷವನ್ನು ಕೋವಿಡ್ 19 ವರ್ಷವೆಂದು ಕರೆಯಲಾಗುತ್ತದೆ. ಸಾಕಷ್ಟು ವಿಚಾರಗಳು ಈ ವರ್ಷ ವೈರಲ್ ಆಗಿದೆ. ಹಲವಾರು ಚಾಲೆಂಜ್ಗಳು ಬಂದು ಹೋಗಿವೆ. ಅದರಂತೆ ಈ ವರ್ಷ ಅತಿ ಹೆಚ್ಚು ವೈರಲ್ ಆಗಿರುವ ಚಾಲೆಂಜ್ಗಳ ಬಗ್ಗೆ ಮಾಹಿತಿ ಇಲ್ಲಿದೆ.
ಪಿಲ್ಲೊ ಚಾಲೆಂಜ್:ಕೊರೋನಾ ಸಮಯಲ್ಲಿ ಕ್ವಾರಂಟೈನ್ ಪಿಲ್ಲೊ ಚಾಲೆಂಜ್ ಹೆಚ್ಚು ವೈರಲ್ ಆಗಿತ್ತು. ವಿದೇಶದಲ್ಲಿ ಹುಟ್ಟಿಕೊಂಡ ಈ ಚಾಲೆಂಜ್ ಭಾರತಕ್ಕೂ ಕಾಲಿಟ್ಟಿತ್ತು. ಅನೇಕು ಈ ಚಾಲೆಂಜ್ ಮಾಡಿದ್ದರು. ಅದರಲ್ಲೂ ಸಿನಿ ತಾರೆಯರು ಪಿಲ್ಲೊ ಚಾಲೆಂಜ್ ಮಾಡುವ ಮೂಲಕ ತಮ್ಮ ಸ್ನೇಹಿತರಿಗೆ ಹೇಳುತ್ತಿದ್ದರು. ಜೊತೆಗೆ ಫೋಟೋ ಕ್ಲಿಕ್ಕಿಸಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ.
ಕೊರೋನಾ ಸಮಯದಲ್ಲಿ ಮನೆಯಿಂದ ಹೊರಗೆ ಬಾರಲಾಗದ ಪರಿಸ್ಥಿತಿಯಲ್ಲಿ ಅನೇಕರು ಮನೆಯಲ್ಲಿದ್ದುಕೊಂಡು ಸುರಕ್ಷತೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿದ್ದರು. ಈ ವೇಳೆ ಕ್ವಾರಂಟೈನ್ ಆಗಿದ್ದವರು ಪಿಲ್ಲೊ ಚಾಲೆಂಜ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದರು.
ಪೇಪರ್ ಬ್ಯಾಗ್ ಚಾಲೆಂಜ್:
ಪೇಪರ್ ಬ್ಯಾಗ್ ಎಂಬ ವಿಶೇಷ ಚಾಲೆಂಜ್ ಈ ವರ್ಷ ವೈರಲ್ ಆಗಿತ್ತು. ಅನೇಕ ತಾರೆಯರು ಈ ಚಾಲೆಂಜ್ ಅನ್ನು ಮಾಡಿದ್ದರು. ವಿದೇಶದಲ್ಲಿ ಪೇಪರ್ ಬ್ಯಾಗ್ ಚಾಲೆಂಜ್ ಹೆಚ್ಚು ವೈರಲ್ ಆಗಿತ್ತು.ಮಳಿಗೆಯಲ್ಲಿ ದೊರಕುವ ಪೇಪರ್ ಬ್ಯಾಗ್ಗಳನ್ನು ಹರಿದು ಅದನ್ನು ಮೈ ಮೇಲೆ ತೊಟ್ಟುಕೊಂಡು ಫೋಟೋಗೆ ಪೋಸು ನೀಡುತ್ತಿದ್ದರು. ಸೆಲೆಬ್ರಿಟಿಗಳು ಈ ಚಾಲೆಂಜ್ ಮಾಡುವ ಮೂಲಕ ಸುದ್ದಿಯಾಗಿದ್ದರು.
ಮಿ ಅಟ್ 20:
ಹಳೆಯ ಫೋಟೋ ಮತ್ತು ಸದ್ಯದ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಮಿ ಅಟ್ 20 ಚಾಲೆಂಜ್ ಹೆಚ್ಚು ಜನಪ್ರಿಯವಾಗಿತ್ತು. ಅನೇಕರು ಸಾಮಾಜಿಕ ಜಾಲತಾಣದಲ್ಲಿ ಈ ಚಾಲೆಂಜ್ ಸ್ವೀಕರಿಸುವ ಮೂಲಕ ತಮ್ಮ ಬಾಲ್ಯದ ಫೋಟೋ ಹಂಚಿಕೊಂಡಿದ್ದರು.
ಸಿನಿ ತಾರೆಯರು ಕೂಡ ಎಳೆ ವಯಸ್ಸಿನಲ್ಲಿದ್ದ ಫೋಟೋ ಮತ್ತು 2020ರ ಫೋಟೋವನ್ನು ಹಂಚಿಕೊಂಡಿದ್ದರು. ಜೊತೆಗೆ ಸ್ನೇಹಿತರೊಂದಿಗೆ, ಕುಟುಂಬಸ್ಥರೊಂದಿಗೆ ತೆಗೆದ ಫೋಟೋ ಕೂಡ ಅಪ್ಲೋಡ್ ಮಾಡುವ ಮೂಲಕ ಮಿ ಅಟ್ 20 ಚಾಲೆಂಜ್ ಸ್ವೀಕರಿಸಿದ್ದಾರೆ.
2020 ಚಾಲೆಂಜ್;
ಈ ವರ್ಷ ವೈರಲ್ ಆಗಿರುವ ಚಾಲೆಂಜ್ಗಳಲ್ಲಿ 2020 ಚಾಲೆಂಜ್ ಕೂಡ ಒಂದು. ಭಾವನೆಗೆ ಸಂಬಂಧಿಸಿದ ಚಾಲೆಂಜ್ ಇದಾಗಿದೆ. ವಿದೇಶದಲ್ಲಿ 2020 ಚಾಲೆಂಜ್ ವೈರಲ್ ಆಗಿತ್ತು. ಪ್ರತಿ ತಿಂಗಳು ವ್ಯಕ್ತಿ ಯಾವ ಭಾವನೆಯಲ್ಲಿರುತ್ತಾನೆ ಎಂಬುದನ್ನು ಈ ಚಾಲೆಂಜ್ನಲ್ಲಿ ತೋರಿಸಲಾಗಿದೆ.
ಕ್ವಾರಟೈನ್ ಟ್ರಾವೆಲ್ ಚಾಲೆಂಜ್:
ಕೊರೋನಾ ಸಮಯಲ್ಲಿ ಅನೇಕರು ಮನೆಯಲ್ಲಿದ್ದುಕೊಂಡು ಸುರಕ್ಷತೆಯನ್ನು ಕಾಪಾಡಿಕೊಂಡಿದ್ದಾರೆ. ಮನೆಯಿಂದ ಹೊರ ಹೋಗದೆ ಕುಟುಂಬಸ್ಥರೊಂದಿಗೆ ಸಮಯ ಕಳೆದಿದ್ದಾರೆ. ಆದರೆ ಆನೇಕರು ಕೊರೋನಾ ಇಲ್ಲದಿದ್ದರೆ ಪ್ರವಾಸಿ ತಾಣಗಳಿಗೆ ಸುತ್ತುತ್ತಾ ಎಂಜಾಯ್ ಮಾಡುತ್ತಿದ್ದರು.
ಆದರಂತೆ ಕ್ವಾರಂಟೈನ್ ಚಾಲೆಂಜ್ ಮೂಲಕ ಎಂಜಾಯ್ ಮಾಡುತ್ತಿರುವ ಕ್ಷಣವನ್ನು ಮರುಚಿತ್ರಿಸಿ ಸಾಮಾಜಿಕ ಜಾಲತಾಣದ ಮೂಲಕ ಅಪ್ಲೋಡ್ ಮಾಡಿದ್ದಾರೆ. ಅನೇಕರು ಈ ಚಾಲೆಂಜ್ ಸ್ವೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
Published by:
Harshith AS
First published:
December 20, 2020, 4:06 PM IST