• Home
 • »
 • News
 • »
 • trend
 • »
 • Viral Story: ಎಂಜಾಯ್ ಮಾಡ್ಲಿಲ್ಲ ಅಂತ ಕೆಲಸದಿಂದ ಕಿತ್ತು ಹಾಕಿದ ಕಂಪನಿ: ಕೋರ್ಟ್ ಮೆಟ್ಟಿಲೇರಿದ ಉದ್ಯೋಗಿ

Viral Story: ಎಂಜಾಯ್ ಮಾಡ್ಲಿಲ್ಲ ಅಂತ ಕೆಲಸದಿಂದ ಕಿತ್ತು ಹಾಕಿದ ಕಂಪನಿ: ಕೋರ್ಟ್ ಮೆಟ್ಟಿಲೇರಿದ ಉದ್ಯೋಗಿ

 ಸಾಂದರ್ಭಿಕ ಚಿತ್ರ (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)

ಸಾಂದರ್ಭಿಕ ಚಿತ್ರ (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)

ಕಂಪನಿಯು  ತಮ್ಮ ಮೋಜಿನಲ್ಲಿ ಪಾಲ್ಗೊಳ್ಳಬೇಕು ಅಂತ ಉದ್ಯೋಗಿಯನ್ನು ಬಲವಂತ ಮಾಡಿದ್ದು ಆ ಉದ್ಯೋಗಿಯ "ಖಾಸಗಿ ಜೀವನದ ಘನತೆ ಮತ್ತು ಗೌರವದ ಹಕ್ಕನ್ನು ಉಲ್ಲಂಘಿಸಿದೆ" ಎಂದು ನ್ಯಾಯಾಲಯ ಹೇಳಿದೆ.

 • Trending Desk
 • 4-MIN READ
 • Last Updated :
 • Share this:

  ಸಾಮಾನ್ಯವಾಗಿ ಈ ಕಾರ್ಪೊರೇಟ್ ಕಂಪನಿಗಳಲ್ಲಿ (Corporate Companies) ಕೆಲಸ ಮಾಡುವವರು ತಮ್ಮ ಆಫೀಸಿನ ಕೆಲಸ ಮುಗಿದ ಬಳಿಕವೂ ಸಹ ರೆಸ್ಟೋರೆಂಟ್, ದೊಡ್ಡ ಹೊಟೇಲ್ ಮತ್ತು ರಿಸಾರ್ಟ್ ಗಳಿಗೆ ಹೋಗುತ್ತಾರೆ (After Work Party). ಕಂಪನಿಯ ಕೆಲಸದ ಬಗ್ಗೆ, ತಂಡವನ್ನು ಹೇಗೆ ಬಲಪಡಿಸಬೇಕು, ಕೆಲಸವನ್ನು ಇನ್ನಷ್ಟು ಚುರುಕಾಗಿ ಮತ್ತು ತ್ವರಿತವಾಗಿ ಹೇಗೆ ಮಾಡುವುದು ಅನ್ನೋ ಅನೇಕ ಅಂಶಗಳ ಬಗ್ಗೆ ಚರ್ಚೆ ಮಾಡುವುದನ್ನು ನಾವು ನೋಡಿರುತ್ತೇವೆ.


  ಆದರೆ ಇಂತಹ ಡ್ರಿಂಕ್ ಪಾರ್ಟಿಗಳಿಗೆ ಮತ್ತು ಸಭೆಗಳಿಗೆ ಆಸಕ್ತಿ ಇರುವ ತಂಡದ ಸದಸ್ಯರನ್ನು ಕರೆದುಕೊಂಡು ಹೋಗಬೇಕು. ಏಕೆಂದರೆ ಆಫೀಸಿನ ಕೆಲಸ ಆಗಲೇ ಮುಗಿದು ಹೋಗಿರುತ್ತದೆ. ಆಫೀಸಿನ ಸಮಯ ಮುಕ್ತಾಯವಾದ ನಂತರ ಅದು ಉದ್ಯೋಗಿಗಳಿಗೆ ಸೇರಿದ ಅವರ ಖಾಸಗಿ ಸಮಯವಾಗಿರುತ್ತದೆ. ಅದರಲ್ಲೂ ಈ ಸಭೆಗಳನ್ನು ಆಲ್ಕೋಹಾಲ್ ಕುಡಿಯುತ್ತಾ ಮೋಜು ಮಾಡುತ್ತಾ ತಂಡದ ಬಗ್ಗೆ ಮತ್ತು ಕೆಲಸದ ಬಗ್ಗೆ ಮಾತಾಡುವುದು ಕೆಲವರಿಗೆ ಇಷ್ಟವಾಗಬಹುದು. ಇನ್ನೂ ಕೆಲವರಿಗೆ ಅದೆಲ್ಲವೂ ಇಷ್ಟವಾಗದೆ ಸಹ ಇರಬಹುದು.


  ಸಾಂದರ್ಭಿಕ ಚಿತ್ರ (ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ)


  ಇಲ್ಲಿಯೂ ಸಹ ಅಂತಹದೇ ಒಂದು ಘಟನೆ ನಡೆದಿದೆ ನೋಡಿ.. ತನ್ನ ಸಹೋದ್ಯೋಗಿಗಳೊಂದಿಗೆ ಕೆಲಸದ ನಂತರ ಡ್ರಿಂಕ್ ಮಾಡಲು ಆಗಾಗ್ಗೆ ಹೊರಗೆ ಹೋಗದ ಕಾರಣ ತನ್ನ ಉದ್ಯೋಗಿಯನ್ನು ಕಂಪನಿಯ ಮಾಲೀಕ ಕೆಲಸದಿಂದ ತೆಗೆದು ಹಾಕಿರುವ ಘಟನೆಯೊಂದು ನಡೆದಿದೆ.


  ಕಂಪನಿಯ ‘ಮೋಜಿ’ ನಲ್ಲಿ ಪಾಲ್ಗೊಂಡಿಲ್ಲ ಅಂತ ಕೆಲಸದಿಂದ ತೆಗೆದು ಹಾಕಿದ್ರಂತೆ..


  ಡೈಲಿ ಟೆಲಿಗ್ರಾಫ್ ನ ವರದಿಯ ಪ್ರಕಾರ, ಟಿ ಎಂದು ಗುರುತಿಸಲ್ಪಟ್ಟ ಈ ವ್ಯಕ್ತಿ ಫ್ರಾನ್ಸ್ ನ ಪ್ಯಾರಿಸ್ ನಲ್ಲಿರುವ ಒಂದು ಕನ್ಸಲ್ಟೆನ್ಸಿ ಸಂಸ್ಥೆಯಾದ ಕ್ಯೂಬಿಕ್ ಪಾರ್ಟ್ನರ್ಸ್ ನಲ್ಲಿ ಹಿರಿಯ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು. ಮ್ಯಾನೇಜ್ಮೆಂಟ್ ಕನ್ಸಲ್ಟೆನ್ಸಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಗುಂಪೊಂದು ತಂಡ ನಿರ್ಮಾಣಕ್ಕೆ ಅಂತ "ಮೋಜಿನ" ವಿಧಾನವನ್ನು ಬಳಸಿದೆ ಎಂದು ಹೇಳಲಾಗುತ್ತಿದೆ. ಆದರೆ ಟಿ ಎಂಬ ಉದ್ಯೋಗಿ ಈ ಮೋಜಿನಲ್ಲಿ ಪಾಲ್ಗೊಳ್ಳಲು ಒಪ್ಪಲಿಲ್ಲ, ಇದು ಪ್ರತಿ ವಾರ ನಡೆಯುವ ಡ್ರಿಂಕ್ ಪಾರ್ಟಿಯಾಗಿತ್ತು ಎಂದು ಹೇಳಲಾಗುತ್ತಿದೆ.


  ಕೆಲಸದ ಸಮಯದ ನಂತರದ ಡ್ರಿಂಕ್ ಪಾರ್ಟಿ ಮತ್ತು ತಂಡ ನಿರ್ಮಾಣ ಚಟುವಟಿಕೆಗಳಲ್ಲಿ ಭಾಗವಹಿಸಲು ಟಿ ನಿರಾಕರಿಸಿದಾಗ, ಅವರ ಕಂಪನಿಯು "ವೃತ್ತಿಪರ ಅಸಮರ್ಪಕತೆ" ಎಂಬ ಆಧಾರದ ಮೇಲೆ 2015 ರಲ್ಲಿ ಅವರನ್ನು ಕೆಲಸದಿಂದ ತೆಗೆದು ಹಾಕಿತ್ತು. ಅವರು ತುಂಬಾನೇ ಬೋರಿಂಗ್ ಆಗಿದ್ದಾರೆ, ಅವರೊಂದಿಗೆ ಕೆಲಸ ಮಾಡುವುದು ತುಂಬಾನೇ ಕಷ್ಟ ಎಂದು ಸಂಸ್ಥೆ ಆರೋಪಿಸಿದೆ.


  ತನಗೆ ನ್ಯಾಯ ಬೇಕು ಅಂತ ಕೋರ್ಟ್ ಮೆಟ್ಟಿಲೇರಿದ ಉದ್ಯೋಗಿ


  ತನ್ನನ್ನು ಕೆಲಸದಿಂದ ತೆಗೆದು ಹಾಕಿದ ನಂತರ 2015 ರಲ್ಲಿ ತನಗೆ ನ್ಯಾಯ ಕೊಡಿಸಿ ಅಂತ ಕೇಳಿಕೊಂಡು ಆ ವ್ಯಕ್ತಿ ತನ್ನ ಉದ್ಯೋಗದಾತರ ವಿರುದ್ದ ನ್ಯಾಯಾಲಯದ ಮೆಟ್ಟಿಲನ್ನು ಹತ್ತಿದ್ದರು. ಸುಮಾರು ಏಳು ವರ್ಷಗಳ ಬಳಿಕೆ ಆ ಉದ್ಯೋಗಿಗೆ ನ್ಯಾಯ ಸಿಕ್ಕಿದೆ ನೋಡಿ. ಫ್ರೆಂಚ್ ವ್ಯಕ್ತಿಯು ಕೆಲಸದಲ್ಲಿ 'ನೀರಸವಾಗಿರುವ ಹಕ್ಕನ್ನು' ಗೆದ್ದಿದ್ದಾನೆ ಎಂದು ಹೇಳಲಾಗುತ್ತಿದೆ.
  ತನ್ನ ದಾವೆಯಲ್ಲಿ, ಮಾಜಿ ಉದ್ಯೋಗಿ "ವಿಮರ್ಶಾತ್ಮಕ ನಡವಳಿಕೆ ಮತ್ತು ವಿವಿಧ ಅತಿರೇಕಗಳಲ್ಲಿ ಪಾಲ್ಗೊಳ್ಳಲು ಪ್ರಚೋದನೆಯ ಆಧಾರದ ಮೇಲೆ ಕಂಪನಿಯ ನೀತಿಯನ್ನು ನಿರಾಕರಿಸಲು" ಹಕ್ಕು ಹೊಂದಿದ್ದಾರೆ ಎಂದು ವಾದಿಸಿದರು ಮತ್ತು "ಮೋಜು" ಎಂಬ ಕಂಪನಿಯ ವ್ಯಾಖ್ಯಾನವನ್ನು ಒಪ್ಪಲಿಲ್ಲ.


  ಕಂಪನಿಯನ್ನು ತರಾಟೆಗೆ ತೆಗೆದುಕೊಂಡ ಕೋರ್ಟ್


  ಪ್ಯಾರಿಸ್ ನ ಕ್ಯಾಸೇಶನ್ ನ್ಯಾಯಾಲಯವು ಅವನ ಮಾತನ್ನು ಒಪ್ಪಿತು. ಏಳು ವರ್ಷಗಳ ಕಾನೂನು ಪ್ರಕರಣದಲ್ಲಿ ಟಿ ಅವರ ಮಾಜಿ ಉದ್ಯೋಗದಾತರು ಅವರಿಗೆ 2,574 ಪೌಂಡ್ ಎಂದರೆ ಭಾರತೀಯ ಮೌಲ್ಯದಲ್ಲಿ 2.5 ಲಕ್ಷ ರೂ ದಂಡವನ್ನು ಪಾವತಿಸುವಂತೆ ನ್ಯಾಯಾಲಯ ಕಂಪನಿಗೆ ಆದೇಶಿಸಿದೆ.


  ಈ ತಿಂಗಳ ಆರಂಭದಲ್ಲಿ ತನ್ನ ತೀರ್ಪಿನಲ್ಲಿ, ನ್ಯಾಯಾಲಯವು "ಸೆಮಿನಾರ್ ಗಳು ಮತ್ತು ವಾರಾಂತ್ಯದ ಡ್ರಿಂಕ್ ಪಾರ್ಟಿಗಳಲ್ಲಿ ಬರಲು ಉದ್ಯೋಗಿಗಳಿಗೆ ಬಲವಂತ ಮಾಡುವ ಹಾಗಿಲ್ಲ, ಇದು ಆಗಾಗ್ಗೆ ಅತಿಯಾದ ಆಲ್ಕೋಹಾಲ್ ಸೇವನೆಗೆ ಕಾರಣವಾಗುತ್ತದೆ" ಎಂದು ಹೇಳಿದೆ.


  ಕಂಪನಿಯು  ತಮ್ಮ ಮೋಜಿನಲ್ಲಿ ಪಾಲ್ಗೊಳ್ಳಬೇಕು ಅಂತ ಉದ್ಯೋಗಿಯನ್ನು ಬಲವಂತ ಮಾಡಿದ್ದು ಆ ಉದ್ಯೋಗಿಯ "ಖಾಸಗಿ ಜೀವನದ ಘನತೆ ಮತ್ತು ಗೌರವದ ಹಕ್ಕನ್ನು ಉಲ್ಲಂಘಿಸಿದೆ" ಎಂದು ನ್ಯಾಯಾಲಯ ಹೇಳಿದೆ.

  Published by:Kavya V
  First published: