Viral Story: ಸೈಕ್ಲೋನ್​ನಿಂದಾಗಿ ಕಡಲತೀರಕ್ಕೆ ತೇಲಿ ಬಂತು 80 ಅಡಿ ಉದ್ದದ ನಿಗೂಢ ವಸ್ತು!

ಪತ್ತೆಯಾಗಿರುವ ವಸ್ತು

ಪತ್ತೆಯಾಗಿರುವ ವಸ್ತು

ಈ ನಿಗೂಢ ವಸ್ತುವನ್ನು ಈ ಹಿಂದೆ ಮರಳಿನಲ್ಲಿ ಹೂಳಲಾಗಿತ್ತು. ಆದರೆ ನವೆಂಬರ್‌ನಲ್ಲಿ ಅಪ್ಪಳಿಸಿರುವ ನಿಕೋಲ್ ಚಂಡಮಾರುತವು ಕಡಲತೀರವನ್ನು ಸವೆಸಿದ ಕಾರಣ ಈ ವಸ್ತು ಹೊರಕ್ಕೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • Trending Desk
  • 4-MIN READ
  • Last Updated :
  • Share this:

ಈ ವಿಶ್ವದಲ್ಲಿ(World) ಕೌತುಕಗಳಿಗೆ ಹಾಗೂ ಸ್ವಾರಸ್ಯಗಳಿಗೆ ಅಂತ್ಯವೆಂಬುದೇ ಇಲ್ಲ. ಹೊಸ ಹೊಸ ಆವಿಷ್ಕಾರಗಳು ನಡೆದಂತೆ ಕೆಲವೊಂದು ನಿಗೂಢ ಅಂಶಗಳು ಭೂಮಿಗೆ ಬರುತ್ತಲೇ ಇರುತ್ತವೆ. ಇದೀಗ ಫ್ಲೋರಿಡಾದ(Florida) ವೊಲುಸಿಯಾ ಕೌಂಟಿಯ ಡೇಟೋನಾ ಕಡಲ ತೀರದಲ್ಲಿ(Beach) ದೈತ್ಯವಾದ ನಿಗೂಢ ವಸ್ತುವೊಂದು ಪತ್ತೆಯಾಗಿದೆ. ಇದು ಅಲ್ಲಿನ ಸ್ಥಳೀಯರು ಹಾಗೂ ಅಧಿಕಾರಿಗಳನ್ನು ದಿಗ್ಭ್ರಮೆಗೊಳಿಸಿದೆ ಎಂದು ತಿಳಿದುಬಂದಿದೆ.


80 ಅಡಿ ಉದ್ದದ ನಿಗೂಢ ವಸ್ತು ಪತ್ತೆ


ಮರ ಹಾಗೂ ಬಹುಶಃ ಲೋಹದಿಂದ ಕೂಡಿರುವ ಈ ವಸ್ತುವು ಸುಮಾರು 80 ಅಡಿ ಉದ್ದವಿದೆ ಎಂಬುದಾಗಿ ತಿಳಿದುಬಂದಿದೆ. ಸಮುದ್ರ ತೀರಕ್ಕೆ ಹೋದವರ ಗಮನಕ್ಕೆ ಇದು ಮೊದಲು ಕಂಡುಬಂದಿದೆ ಎಂದು ವರದಿಯಾಗಿದೆ.


ಸಮುದ್ರದ ಹೆಚ್ಚಿನ ಉಬ್ಬರವಿಳಿತದ ಸಮಯದಲ್ಲಿ ಆ ವಸ್ತುವನ್ನು ನೀರಿನ ಅಲೆಗಳು ಆವರಿಸುತ್ತಿರುವುದರಿಂದ ಅದನ್ನು ಹಗ್ಗದಿಂದ ಹೊರತೆಗೆಯಲಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಚಂಡಮಾರುತದಿಂದ ಕಡಲತೀರಕ್ಕೆ ಬಂದಿರುವ ನಿಗೂಢ ವಸ್ತು


ಈ ನಿಗೂಢ ವಸ್ತುವನ್ನು ಈ ಹಿಂದೆ ಮರಳಿನಲ್ಲಿ ಹೂಳಲಾಗಿತ್ತು. ಆದರೆ ನವೆಂಬರ್‌ನಲ್ಲಿ ಅಪ್ಪಳಿಸಿರುವ ನಿಕೋಲ್ ಚಂಡಮಾರುತವು ಕಡಲತೀರವನ್ನು ಸವೆಸಿದ ಕಾರಣ ಈ ವಸ್ತು ಹೊರಕ್ಕೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಈ ವರ್ಷದ ಆರಂಭದಲ್ಲಿ ಇಯಾನ್ ಮತ್ತು ನಿಕೋಲ್ ಚಂಡಮಾರುತಗಳು ಕೌಂಟಿಯಾದ ಮೇಲೆ ತಮ್ಮ ಪ್ರಚಂಡತೆಯನ್ನು ತೋರಿದ ನಂತರ ಈ ವಸ್ತು ಮರಳಿನಿಂದ ಹೊರಬರಲಾರಂಭಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ ಎಂದು ಅಧಿಕಾರಿಗಳು ಸುದ್ದಿಪತ್ರಿಕೆಗೆ ವರದಿ ನೀಡಿದ್ದಾರೆ.


ನಿಗೂಢ ವಸ್ತುವಿನ ಕುರಿತು ತಲೆಗೊಂದರಂತೆ ಮಾತನಾಡುತ್ತಿರುವ ಸ್ಥಳೀಯರು


ಈ ನಿಗೂಢವಾಗಿರುವ ಹಾಗೂ ದೈತ್ಯಾಕಾರದ ವಸ್ತು ಏನೆಂಬುದನ್ನು ಪತ್ತೆಹಚ್ಚಲು ತಜ್ಞರು ಪ್ರಯತ್ನಿಸುತ್ತಿರುವಾಗಲೇ ಸಾಮಾಜಿಕ ತಾಣದಲ್ಲಿ ಈ ವಸ್ತುವಿನ ಕುರಿತು ಅನೇಕ ಊಹಾಪೋಹಗಳು ಹಾಗೂ ಕಟ್ಟುಕತೆಗಳು ಹೊರಬರಲಾರಂಭಿಸಿವೆ.


ಇದನ್ನೂ ಓದಿ: Lady Auto Driver: ಹೆಣ್ಣು ಮಕ್ಕಳನ್ನು ಸಾಕಲು ಆಟೋ ಚಲಾಯಿಸುತ್ತಿರುವ ತಾಯಿ: ಆನಂದ್ ಮಹೀಂದ್ರಾ ಮೆಚ್ಚುಗೆ


ಪುರಾತನ ಕಾಲದಲ್ಲಿ ಸಂಭವಿಸಿದ ನೌಕಾಘಾತದ ಭಾಗವಾಗಿರಬಹುದು ಎಂದು ಹಲವಾರು ಜನರು ತಿಳಿಸಿದ್ದರೆ, ಇದು ಹಳೆಯ ಹಡಗುಕಟ್ಟೆಯ ತುಂಡಾಗಿರಬಹುದು ಎಂದು ಇನ್ನೊಂದಿಷ್ಟು ಜನ ತಿಳಿಸಿದ್ದಾರೆ.


ಡೇಟೋನಾ ಬೀಚ್‌ನಲ್ಲಿ ಎನ್‌ಎಎಸ್‌ಸಿಎಆರ್ ರೇಸ್ ಆಗುವ ಸಮಯದಲ್ಲಿದ್ದ ಹಿಂದಿನ ವೀಕ್ಷಕರ ಆಸನದ ಭಾಗವಾಗಿರಬಹುದು ಎಂದು ಕೆಲ ಜನರು ಹೇಳಿದ್ದಾರೆ.


ಒಟ್ಟಿನಲ್ಲಿ ಈ ವಸ್ತುವಿನ ಬಗೆಗೆ ಜನರು ತಮಗೆ ತೋಚಿದ ರೀತಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಸುದ್ದಿಪತ್ರಿಕೆ ವರದಿ ಮಾಡಿದೆ. ಇದೊಂದು ನಿಗೂಢವಾದ ಹಾಗೂ ಪುರಾತನ ವಸ್ತುವಾಗಿದೆ ಎಂದು ಕೌಂಟಿ ಬೀಚ್‌ನ ಸುರಕ್ಷತಾ ಅಧಿಕಾರಿ ತಮ್ರಾ ಮಾಲ್ಫರ್ಸ್ ತಿಳಿಸಿದ್ದಾರೆ.  ಇದು ಹಳೆಯ ಹಡಗಿನ ಭಾಗವಾಗಿದೆ ಎಂದು ಜನರು ಭಾವಿಸಿದ್ದಾರೆ ಎಂದು ತಿಳಿಸಿದ್ದಾರೆ.


ಇಂತಹ ಸವೆತ ಇದೇ ಮೊದಲ ಬಾರಿಗೆ ಸಂಭವಿಸಿದೆ


ಕಡಲತೀರದ ಸವೆತವು ಅತ್ಯಂತ ಅಭೂತಪೂರ್ವವಾಗಿದೆ ಎಂದು ಹೇಳಿರುವ ವೊಲುಸಿಯಾ ಬೀಚ್‌ನ ಸುರಕ್ಷತಾ ಅಧಿಕಾರಿ ಮಾಲ್ಫರ್ಸ್ ಸಿಬಿಎಸ್ ಇಂತಹ ಸವೆತವನ್ನು ಬಹಳ ಸಮಯದಿಂದ ನೋಡಿರಲಿಲ್ಲ ಎಂದು ಅನಿಸಿಕೆ ಹಂಚಿಕೊಂಡಿದ್ದಾರೆ.


ಇಂತಹ ನಿಗೂಢ ವಸ್ತುವನ್ನು ಮರಳಿನೊಳಗಿನಿಂದ ಹೊರಬರುವಂತೆ ಮಾಡಿರುವ ಈ ಸವೆತ ನಿಜಕ್ಕೂ ಅತ್ಯದ್ಭುತವಾದುದು ಎಂದು ಮಾಲ್ಫರ್ಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.


25 ವರ್ಷಗಳಿಂದ ಕಡಲ ತೀರದಲ್ಲಿ ಸುರಕ್ಷತಾ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವುದಾಗಿ ಮಾಲ್ಫರ್ಸ್ ತಿಳಿಸಿದ್ದು, ಇದೇ ಮೊದಲ ಬಾರಿಗೆ ಇಂತಹ ನಿಗೂಢತೆಯನ್ನು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.


ಪುರಾತತ್ವ ತಂಡಕ್ಕೆ ಮಾಹಿತಿ ರವಾನೆ


ಫ್ಲೋರಿಡಾದ ನೀರೊಳಗಿನ ಸಮೀಕ್ಷೆ ನಡೆಸುವ ಪುರಾತತ್ವ ತಂಡಕ್ಕೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಂಡವು ನೀರಿನೊಳಗಿನ ದೃಶ್ಯವನ್ನು ಚಿತ್ರಿಸುತ್ತದೆ ಹಾಗೂ ವಿಶ್ಲೇಷಣೆ ನಡೆಸುತ್ತದೆ ಎನ್ನಲಾಗಿದೆ.


ಈ ಸಮಯದಲ್ಲಿ ಇದು ಸ್ಪಷ್ಟವಾಗಿ ಕಂಡುಬಂದರೆ ಅದು ಏನು ಎಂಬುದನ್ನು ನಿಖರವಾಗಿ ಹೇಳಬಹುದಾಗಿದೆ ಎಂದು ಮಾಲ್ಫರ್ಸ್ ತಿಳಿಸಿದ್ದಾರೆ. ಅದಾಗ್ಯೂ ಈ ವಸ್ತು ಇದುವೇ ಎಂಬುದಾಗಿ ಖಚಿತಪಡಿಸುವುದು ಅಷ್ಟು ಸುಲಭವಲ್ಲ ಎಂಬುದು ಅವರ ಮಾತಾಗಿದೆ.


ವಿಪರೀತ ಹವಾಮಾನ ಬದಲಾವಣೆಗಳಿಂದ ವೈಪರೀತ್ಯಗಳುಂಟಾಗಿದ್ದು ಪ್ರಪಂಚದಾದ್ಯಂತ ಹಲವಾರು ಅಸಾಮಾನ್ಯ ನಿಗೂಢ ವಸ್ತುಗಳ ಪತ್ತೆಗೆ ಕಾರಣವಾಗಿದೆ.

Published by:Latha CG
First published: