Viral Song Manike Mage Hithe.. ಒರಿಜಿನಲ್ ಹಾಡು ನೋಡಿದ್ದೀರಾ: ಹಾಡಿದವರು ಯಾರು ಗೊತ್ತಾ..?

ಯೋಹಾನಿ ಹಾಡಿರುವ ಹಾಡು ವೈರಲ್​ ಆಗುತ್ತಿದ್ದಂತೆಯೇ ಈ ಹಾಡಿನ ಇಂಗ್ಲಿಷ್​, ಹಿಂದಿ, ತಮಿಳು ವರ್ಷನ್​ಗಳು ಸಹ ರಿಲೀಸ್ ಆದವು. ಅದರಲ್ಲೂ ಭಾರಿ ಬೇಡಿಕೆ ಮೇರೆಗೆ ಯೋಹಾನಿ ಅವರಿಂದಲೇ ತಮಿಳು ವರ್ಷನ್​ ಹಾಡನ್ನೂ ಹಾಡಿಸಲಾಯಿತು. ಇನ್ನು ಯೋಹಾನಿ ಹಾಡಿರುವ ಈ ಹಾಡು ಒರಿಜಿನಲ್​, ಇದರಿಂದಲೇ ಇತರೆ ವರ್ಷನ್​ಗಳು ಸಹ ರಿಲೀಸ್ ಆಗುತ್ತಿವೆ ಎಂದು ತುಂಬಾ ಜನರು ತಿಳಿದಿದ್ದಾರೆ.

ಮನಿಕೆ ಮಗೆ ಹಿತೆ ಹಾಡಿನ ಗಾಯಕಿ ಯೋಹಾನಿ ಡಿ ಸಿಲ್ವಾ

ಮನಿಕೆ ಮಗೆ ಹಿತೆ ಹಾಡಿನ ಗಾಯಕಿ ಯೋಹಾನಿ ಡಿ ಸಿಲ್ವಾ

  • Share this:
ಮನಿಕೆ ಮಗೆ ಹಿತೆ (Manike Mage Hithe) ಎನ್ನುವ ಆ ಒಂದು ಹಾಡು ಸಖತ್ ವೈರಲ್​ ಆಗುತ್ತಿದೆ. ಅದು ಯಾವ ಹಾಡು, ಯಾವ ಭಾಷೆಯದ್ದು ಅಂತ ಹುಡುಕುವ ಯತ್ನ ಮಾಡದೇ ಇರುವ ಸಾವಿರಾರು ಮಂದಿ ಈ ಹಾಡಿಗೆ ಫಿದಾ ಆಗಿದ್ದಾರೆ. ಅಲ್ಲದೆ ಈ ಹಾಡು ಬಾಲಿವುಡ್​ನ ದೊಡ್ಡ ದೊಡ್ಡ ಸಲೆಬ್ರಿಟಿಗಳನ್ನೂ ಬಿಟ್ಟಿಲ್ಲ. ಯೊಹಾನಿ ಡಿ ಸಿಲ್ವಾ (yohani de silva) ಎಂಬ ಶ್ರೀಲಂಕಾ ಮೂಲದ ಗಾಯಕಿ ಹಾಡಿದ್ದಾರೆ. ಕಳೆದ 8 ವಾರಗಳಿಂದ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಸುನಾಮಿಯನ್ನೇ ಎಬ್ಬಿಸಿದೆ. ಇನ್​ಸ್ಟಾಗ್ರಾಂ ರೀಲ್ಸ್​, ಫೇಸ್​ಬುಕ್​ ರೀಲ್ಸ್​, ಜೋಶ್​, ಮೋಜ್​ ಹೀಗೆ ಎಲ್ಲಿ ನೋಡಿದರೂ ಯೋಹಾನಿ ಹಾಡಿರುವ ಹಾಡಿನದ್ದೇ ಹವಾ. ಈ ಹಾಡಿಗೆ ಕೇಲವ ಯುವಜನತೆ ಮಾತ್ರವಲ್ಲದೆ ವಯಸ್ಸಿನ ಭೇದವಿಲ್ಲದೆ ಎಲ್ಲರೂ ಇಷ್ಟಪಟ್ಟು ಕೇಳುತ್ತಾ ಹಾಡುತ್ತಿದ್ದಾರೆ. ಅಲ್ಲದೆ ಆ ಗಾಯಕಿಯನ್ನೂ ಸಹ ಹೊಗಳುತ್ತಿದ್ದಾರೆ.ಈ ಹಾಡು ಹಾಗೂ ಗಾಯಕಿಯ ಹೆಸರನ್ನು ಗೂಗಲ್​ ಹಾಗೂ ಯೂಟ್ಯೂಬ್​ನಲ್ಲಿ ಹುಡುಕಾಟ ಸಹ ಜೋರಾಗಿ ನಡೆಯುತ್ತಿದೆ.

ಯೋಹಾನಿ ಹಾಡಿರುವ ಹಾಡು ವೈರಲ್​ ಆಗುತ್ತಿದ್ದಂತೆಯೇ ಈ ಹಾಡಿನ ಇಂಗ್ಲಿಷ್​, ಹಿಂದಿ, ತಮಿಳು ವರ್ಷನ್​ಗಳು ಸಹ ರಿಲೀಸ್ ಆದವು. ಅದರಲ್ಲೂ ಭಾರಿ ಬೇಡಿಕೆ ಮೇರೆಗೆ ಯೋಹಾನಿ ಅವರಿಂದಲೇ ತಮಿಳು ವರ್ಷನ್​ ಹಾಡನ್ನೂ ಹಾಡಿಸಲಾಯಿತು. ಇನ್ನು ಯೋಹಾನಿ ಹಾಡಿರುವ ಈ ಹಾಡು ಒರಿಜಿನಲ್​, ಇದರಿಂದಲೇ ಇತರೆ ವರ್ಷನ್​ಗಳು ಸಹ ರಿಲೀಸ್ ಆಗುತ್ತಿವೆ ಎಂದು ತುಂಬಾ ಜನರು ತಿಳಿದಿದ್ದಾರೆ.ಆದರೆ, ಯೋಹಾನಿ ಹಾಡಿರುವ ಹಾರು ಒರಿಜಿನಲ್​ ಅಲ್ಲ. ಯೋಹಾನಿಗಿಂತ ಮೊದಲು ಈ ಹಾಡನ್ನು ಬೇರೆಯವರು ಹಾಡಿದ್ದಾರೆ. ಈ ವರ್ಷ ಉಓಹಾನಿ ಹಾಡಿರುವ ಹಾಡನ್ನು ಯೂಟ್ಯೂಬ್​ನಲ್ಲಿ ಅಪ್​ಲೋಡ್ ಮಾಡಲಾಗಿದೆ. ಆದರೆ ಒರಿಜಿನಲ್ ಹಾಡನ್ನು ಕಳೆದ ವರ್ಷವೇ ಯೂಟ್ಯೂಬ್​ನಲ್ಲಿ ಸ್ಟ್ರೀಮ್​ ಮಾಡಲಾಗಿತ್ತು.

ಇದನ್ನೂ ಓದಿ: ಮಗಳನ್ನು ನೆಟ್ಟಿಗರಿಗೆ ಪರಿಚಯಿಸಿದ ರಾಧಾ ಕಲ್ಯಾಣ ಧಾರಾವಾಹಿ ನಟಿ ಚೈತ್ರಾ ರೈ

ಇನ್ನು ಶ್ರೀಲಂಕಾದ ಭಾಷೆಯಲ್ಲಿ ಹಾಡಿರುವ ಈ ಮನಿಕೆ ಮಗೆ ಹಿತೆ ಹಾಡಿನ ಅರ್ಥ ಏನೆಂದು ತುಂಬಾ ಜನರು ಹುಡಕಾಡುತ್ತಿದ್ದಾರೆ. ಈ ಹಾಡು ಪ್ರೇಮಿಯೊಬ್ಬ ತನ್ನ ಪ್ರೇಯಸಿಗೆ ತನ್ನ ಪ್ರೀತಿ ತುಂಬಿದ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ. ಈ ಹಾಡನ್ನು ಒರಿಜಿನಲ್​ ಹಾಡಿನಲ್ಲಿ ಹುಡುಗನೊಬ್ಬ ಹುಡುಗಿಗಾಗಿ ಹಾಡುತ್ತಾನೆ. ಈ ಹಾಡು ಅರ್ಥವಾಗದಿದ್ದರೂ ವಿಭಿನ್ನವಾಗಿರುವ ಕಾರಣಕ್ಕೆ ಸಂಗೀತ ಪ್ರಿಯರ ಮನ ಗೆದ್ದಿದೆ.

ಇದನ್ನೂ ಓದಿ: ಕಡಲ ತೀರದಲ್ಲಿ ತುಂಡುಡುಗೆಯಲ್ಲಿ Shwetha Srivatsav: ಟೀಕಿಸಿದವರ ಕಿವಿ ಹಿಂಡಿದ ಅಭಿಮಾನಿಗಳು..!

ಮನಿಕೆ ಮಗೆ ಹಿತೆ ಒರಿಜಿನಲ್​ ಹಾಡನ್ನು ಹಾಡಿರುವ, ಗಾಯಕ ಶ್ರೀಲಂಕಾದ ಸತೀಷನ್​, ಈ ಹಾಡಿಗೆ ಸಾಹಿತ್ಯ ಹಾಗೂ ಸಂಗೀತ ನೀಡಿರುವುದು ದುಲ್ಹನ್ ಎಆರ್​ಎಕ್ಸ್​ ಹಾಗೂ ಹಾಡಿನ ನಿರ್ದೇಶನ ಮಾಡಿರುವುದು ಹಸಿತ್ ಆಯರ್ನ್​. ಈ ಹಾಡನ್ನು 2020ರ ಜುಲೈ 31ರಂದು ಅಪ್​ಲೋಡ್​ ಮಾಡಲಾಗಿದೆ. ಆದರೆ, ಯೋಹಾನಿ ಈ ಹಾಡನ್ನು ಹಾಡಿನ ನಂತರ ವೈರಲ್​ ಆಯಿತು.


ಬಾಲಿವುಡ್​ನ ಬಿಗ್​ ಬಿ ಅಮಿತಾಭ್​ ಬಚ್ಚನ್ ಅವರು ಈಗಾಗಲೇ ತಮ್ಮ ಸಿನಿಮಾದ ವಿಡಿಯೋ ತುಣುಕಿಗೆ ಈ ಹಾಡನ್ನು ಸೇರಿಸಿ ಪೋಸ್ಟ್​ ಮಾಡಿದ್ದು ಸುದ್ದಿಯಾಗಿತ್ತು. ಇಷ್ಟರ ಮಟ್ಟಿಗೆ ಈ ಹಾಡು ವೈರಲ್ ಆಗಿತ್ತು. ಇನ್ನು ಯೋಹಾನಿ ಅವರ ಕಂಠಕ್ಕೆ ಕೇಳುಗರು ಫಿದಾ ಆಗಿದ್ದಾರೆ.

ಇದನ್ನೂ ಓದಿ: ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡಲಿದ್ದಾರೆ ಬಾಲಿವುಡ್​ ನಟ ಗೋವಿಂದಈಗ ಹಾಡನ್ನು ಸಾಕಷ್ಟು ಮಂದಿ ಗಾಯಕರು ಹಾಡುತ್ತಾ ತಮ್ಮ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಯೋಹಾನಿ ಹಾಡಿರುವ ಹಾಡು ವೈರಲ್ ಆಗುತ್ತಿರುವುದನ್ನು ನೋಡಿದರೆ, ಯಾವುದಾದರೂ ಸಿನಿಮಾದಲ್ಲಿ ಅವರು ಹಾಡು ಹಾಡಿದರೂ ಆಶ್ಚರ್ಯ ಪಡಬೇಕಿಲ್ಲ.
Published by:Anitha E
First published: