ಸಾಮಾಜಿಕ ಜಾಲತಾಣಗಳಲ್ಲಿ (Social Media) ಹಲವು ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಕೆಲವು ಫೋಟೋಗಳು ಮತ್ತು ವೀಡಿಯೊಗಳು ಜನರನ್ನು ಗೊಂದಲಕ್ಕೀಡುಮಾಡುತ್ತವೆ. ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಅಂತಹದ್ದೇ ಒಂದು ವಿಷಯ ಬೆಳಕಿಗೆ ಬಂದಿದೆ. ಇದೀಗ ಬಂದಿರುವ ವಿಡಿಯೋದಲ್ಲಿ (Video) ಹಾವುಗಳು ಜನರನ್ನು ಕಂಗೆಡಿಸಿರುವುದು ಸ್ಪಷ್ಟವಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ. ಹೌದು. ಇತ್ತೀಚಿಗಿನ ಕಾಲದಲ್ಲಿ ಕೂತ್ರು, ನಿತ್ರು ವಿಡಿಯೋ ಮಾಡಿ ವೈರಲ್ ಮಾಡುವ ಜನರು ನಮ್ಮ ಸುತ್ತ ಮುತ್ತ ಇದ್ದಾರೆ. ಇದಕ್ಕಾಗಿಯೇ ಹುಷಾರಾಗಿರಬೇಕು ಅಂತ ಹೇಳೋದು. ಇನ್ನೂ ಪ್ರಾಣಿ ಪಕ್ಷಿಗಳದ್ದೂ ವಿಡಿಯೋ, ಫೋಟೋಗಳು ವೈರಲ್ ಆಗ್ತಾ ಇರುತ್ತದೆ. ಅಂತಹದ್ರಲ್ಲಿ ಹಾವಿನ (Snake) ವಿಡಿಯೋ ಕೂಡ ಒಂದು.
ಬಾಳೆಹಣ್ಣು ಎಷ್ಟು ಜನರಿಗೆ ಪ್ರಿಯ ಹೇಳಿ. ಇದರಿಂದ ಆರೋಗ್ಯದಲ್ಲಿ ಆಗುವ ಬದಲಾವಣೆಗಳು ನೂರಾರು. ಅದ್ರಲ್ಲೂ ಚುಕ್ಕಿ ಬಾಳೆಹಣ್ಣು ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳಿತಂತೆ. ಇದೀಗ ಈ ಬಾಳೆಹಣ್ಣು ವೈರಲ್ ಆಗ್ತಾ ಇದೆ. ಯಾಕೆ ಅಂತ ಕೇಳದೇ ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದು ನಿಮ್ಮನ್ನು ಬೆಚ್ಚಿ ಬೀಳಿಸುತ್ತದೆ. ಈ ವೀಡಿಯೋ ನಿಮ್ಮಲ್ಲೂ ಗೊಂದಲ ಮೂಡಿಸಬಹುದು. ಬಾಳೆಹಣ್ಣಿನ ಬಣ್ಣ ಹಳದಿ ಎಂದು ನೀವು ತಿಳಿದಿರಬೇಕು. ಆದರೆ ಬಾಳೆಹಣ್ಣಿನಂತಿರುವ ಹಾವು ಕೂಡ ಇದೆ ಎಂದು ನಿಮಗೆ ತಿಳಿದಿದೆಯೇ? ಇಲ್ಲದಿದ್ದರೆ ಈ ವೈರಲ್ ವಿಡಿಯೋ ನೋಡಿ. ವೀಡಿಯೊ ನೋಡಿದ ನಂತರ, ವೀಡಿಯೊ ನಿಜವಾಗಿಯೂ ಹಾವೇ ಅಥವಾ ಬಾಳೆಹಣ್ಣೇ ಎಂದು ನೀವು ಆಶ್ಚರ್ಯಪಡುತ್ತೀರಿ.
ಈ ವಿಡಿಯೋ ಹಾಕಿ ಕೆಲವೇ ಕ್ಷಣಗಳಲ್ಲಿ ಬಾರೀ ಲೈಕ್ಸ್ ಮತ್ತು ಕಮೆಂಟ್ಗಳು ಬಂದಿವೆ. ಹಲವಾರು ಕಡೆ ಶೇರ್ ಕೂಡ ಆಗಿದೆ.
ಇದನ್ನೂ ಓದಿ: 22 ವರ್ಷಗಳಿಂದ ಚರಂಡಿಯೊಳಗೆ ಜೀವನ ಮಾಡುತ್ತಿರುವ ದಂಪತಿ! ಕಾರಣ ವಿಚಿತ್ರವಾಗಿದೆ!
ViralHog ಎಂಬ ಯೂಟ್ಯೂಬರ್ ಈ ವಿಡಿಯೋವನ್ನು ಶೇರ್ ಮಾಡಿದ್ದು, 16 ಸೆಕೆಂಡ್ ನ ಈ ವಿಡಿಯೋ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದೆ. ವಿಡಿಯೋಗೆ ಸಾಕಷ್ಟು ಕಾಮೆಂಟ್ಗಳು ಮತ್ತು ಲೈಕ್ಗಳು ಹರಿದು ಬರುತ್ತಿವೆ. ಮೊದಮೊದಲು ಎರಡೂ ಹಾವು ಎಂದುಕೊಂಡಿದ್ದ ಹಲವರು ನಂತರ ಹಾವು ಎಂಬುದು ವಿಡಿಯೋದಲ್ಲಿ ಬಹಿರಂಗವಾಗಿದೆ. ಮೊಟ್ಟಮೊದಲ ಬಾರಿಗೆ ಬಾಳೆಹಣ್ಣಿನ ಪಕ್ಕದಲ್ಲಿದ್ದ ಹಾವನ್ನು ಗುರುತಿಸಲಾಗಲಿಲ್ಲ. ಅದನ್ನು ಎತ್ತಿಕೊಂಡು ನೋಡಿದಾಗ ಅದು ಹಾವು ಎಂದು ತಿಳಿದುಬಂದಿದೆ. ಯೂಟ್ಯೂಬರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಈ ಕ್ಲಿಪ್ ವೈರಲ್ ಆಗುತ್ತಿದೆ. ಇದು ಪ್ರಕೃತಿಯ ಪವಾಡ ಎಂದು ಹಲವರು ಹೇಳುತ್ತಿದ್ದಾರೆ.
ವೈರಲ್ ಆದ ವಿಡಿಯೋ ನೋಡಿ!
ನ್ಯಾಷನಲ್ ಜಿಯಾಗ್ರಫಿಕ್ ಸೊಸೈಟಿಯ ಪ್ರಕಾರ, ಸುಮಾರು 8.7 ಮಿಲಿಯನ್ ಜಾತಿಯ ಸಸ್ಯಗಳು ಮತ್ತು ಪ್ರಾಣಿಗಳಿವೆ. ಆದರೂ ಇಲ್ಲಿಯವರೆಗೆ ನಾವು 1.2 ಮಿಲಿಯನ್ ಜಾತಿಗಳನ್ನು ಮಾತ್ರ ಪತ್ತೆಹಚ್ಚಲು ಮತ್ತು ಗುರುತಿಸಲು ಸಾಧ್ಯವಾಯಿತು. ಆ 1.2 ಮಿಲಿಯನ್ ಜಾತಿಗಳಲ್ಲಿ ಒಂದನ್ನು ಬಾಲ್ ಪೈಥಾನ್ ಎಂದು ಕರೆಯಲಾಗುತ್ತದೆ. ಇದು ಬಾಳೆಹಣ್ಣಿನಂತೆಯೇ ಕಾಣುತ್ತದೆ. ಕಂದು ಬಣ್ಣದ ಚುಕ್ಕೆಗಳು ಮತ್ತು ಬಹುತೇಕ ಸಮಾನ ಗಾತ್ರದೊಂದಿಗೆ ಹಳದಿ ಚರ್ಮ ಇದು ಎಂದಿದ್ದಾರೆ.
ಒಟ್ಟಿನಲ್ಲಿ ಈ ಹಾವು ಮತ್ತು ಬಾಳೆಹಣ್ಣು ನೋಡಲು ಒಂದೇ ತೆರೆನಾಗಿದೆ. ಹಾಗೆಯೇ ಭಯ ಕೂಡ ಆಗುತ್ತೆ. ನೀವು ಇನ್ನು ಮುಂದೆ ಬಾಳೆಹಣ್ಣುಗಳನ್ನು ತೆಗೆದುಕೊಳ್ಳಬೇಕಾದ್ರೆ ಸ್ವಲ್ಪ ಜೋಪಾನವಾಗಿರಿ. ಈ ವಿಡಿಯೋ ನೋಡಿ ಆದ್ಮೇಲೆ ಬೆಚ್ಚಿಬಿದ್ದಿರಬಹುದು ನೀವು ಅಲ್ವಾ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ