ನಾವೆಲ್ಲಾ ಚಿಕ್ಕವರಾಗಿದ್ದಾಗ ನಮ್ಮ ಶಾಲೆಯಲ್ಲಿ (School) ಇರುವ ಗ್ರಂಥಾಲಯ (Library) ನಮಗೆ ಚೆನ್ನಾಗಿಯೇ ನೆನಪಿನಲ್ಲಿರುತ್ತದೆ. ಏಕೆಂದರೆ ಪುಸ್ತಕ (Book Purchase) ಕೊಳ್ಳೋದಕ್ಕೆ ದುಡ್ಡಿಲ್ಲದೇ ಇದ್ದಾಗ, ಗ್ರಂಥಾಲಯಕ್ಕೆ ಹೋಗಿ ಅಲ್ಲಿರುವ ಪುಸ್ತಕವನ್ನು ಅನೇಕ ಬಾರಿ ಎರವಲು ಪಡೆದಿರುತ್ತೇವೆ. ಅಲ್ಲಿ ನಮಗೆ ಇಂತಿಷ್ಟು ದಿನಗಳವರೆಗೆ ಮಾತ್ರ ಪುಸ್ತಕವನ್ನು ಬಳಸಿಕೊಳ್ಳಬಹುದು ಮತ್ತು ನಂತರ ಅದನ್ನು ಹಿಂತಿರುಗಿ ಲೈಬ್ರರಿಗೆ ಒಪ್ಪಿಸಬೇಕಾಗಿ ನಿಯಮ ಇರುತ್ತಿತ್ತು. ಯಾವ ಪುಸ್ತಕ ಯಾವ ವಿದ್ಯಾರ್ಥಿ (Students) ತೆಗೆದುಕೊಂಡು ಹೋಗಿದ್ದಾರೆ ಅಂತ ಲೈಬ್ರರಿಯಲ್ಲಿರುವ ಸಿಬ್ಬಂದಿಗಳಿಗೆ ತಿಳಿಯಲು ಒಂದು ಪುಸ್ತಕ ವಿತರಣಾ ಕಾರ್ಡ್ ಅಂತ ನೀಡುತ್ತಿದ್ದರು.
ನಾವು ಆ ಕಾರ್ಡ್ ಅನ್ನು ಲೈಬ್ರರಿಯವರಿಗೆ ನೀಡಿ, ಯಾವ ಪುಸ್ತಕವನ್ನು ಎರವಲು ಪಡೆಯುತ್ತಿದ್ದೇವೆ ಮತ್ತು ಯಾವಾಗ ಅದನ್ನು ಹಿಂದಿರುಗಿಸಬೇಕು ಅಂತ ದಿನಾಂಕವನ್ನು ಸಹ ಅವರು ನಮೂದಿಸಿಕೊಳ್ಳುತ್ತಿದ್ದರು. ಆ ದಿನಾಂಕದಂದು ಅಥವಾ ಅದಕ್ಕಿಂತ ಮೊದಲೇ ಹೋಗಿ ಆ ಪುಸ್ತಕವನ್ನು ನೀಡಿ ನಮ್ಮ ಲೈಬ್ರರಿ ಕಾರ್ಡ್ ಅನ್ನು ಹಿಂಪಡೆಯಬೇಕಾಗಿತ್ತು.
ಈ ವ್ಯವಸ್ಥೆ ಒಂದು ರೀತಿಯಲ್ಲಿ ತುಂಬಾನೇ ಮಜವಾಗಿತ್ತು ಅಂತ ಹೇಳಬಹುದು. ಏಕೆಂದರೆ ಆ ಪುಸ್ತಕವನ್ನು ಬೇರೆ ಯಾರೆಲ್ಲಾ ಸ್ನೇಹಿತರು ಎರವಲು ಪಡೆದಿದ್ದಾರೆ ಮತ್ತು ಎಷ್ಟು ದಿನಗಳ ಕಾಲ ಆ ಪುಸ್ತಕವನ್ನು ತಮ್ಮ ಬಳಿ ಇರಿಸಿಕೊಂಡಿದ್ದಾರೆ ಅಂತ ನಮಗೆ ತಿಳಿಯುತ್ತಿತ್ತು.
16 ವರ್ಷಗಳ ಹಿಂದೆ ಅಕ್ಕ ಓದಿದ್ದ ಪುಸ್ತಕವನ್ನೇ ಈಗ ತಮ್ಮ ಎರವಲು ಪಡೆದದ್ದು
ಇಂತಹದೇ ಒಂದು ಮಜವಾದ ಘಟನೆ ಇಲ್ಲಿ ನಡೆದಿದೆ ನೋಡಿ. 16 ವರ್ಷಗಳ ಹಿಂದೆ ಅಕ್ಕ ಎರವಲು ಪಡೆದ ಪುಸ್ತಕವನ್ನೇ ಆಕೆಯ ತಮ್ಮ ಎರವಲು ಪಡೆದಿದ್ದಾನೆ.
ಆ ಪುಸ್ತಕವನ್ನು ಸಹೋದರ ತೆರೆದು ನೋಡಿದಾಗ ಅಲ್ಲಿ ಅವನ ಅಕ್ಕ ಸಹ ಅದೇ ಶಾಲೆಯಲ್ಲಿ ಓದಿದ್ದು, ಅದೇ ಪುಸ್ತಕವನ್ನು ಎರವಲು ಪಡೆದದ್ದು ಅಂತ ತಿಳಿದು ಖುಷಿಯಾಗಿದೆ.
ಟ್ವಿಟ್ಟರ್ ಬಳಕೆದಾರರೊಬ್ಬರು ತಮ್ಮ ಕಿರಿಯ ಸಹೋದರನೊಂದಿಗೆ ನಡೆದ ಈ "ಪೂರ್ಣ ವೃತ್ತ" ಘಟನೆಯನ್ನು ವಿವರಿಸಿದ್ದಾರೆ ನೋಡಿ. “ಸನಾ 2006 ರಲ್ಲಿ ತನ್ನ ಶಾಲಾ ಗ್ರಂಥಾಲಯದಿಂದ ಪುಸ್ತಕವನ್ನು ಎರವಲು ಪಡೆದರು, ಮತ್ತು 2022 ರವರೆಗೆ ಬೇರೆ ಯಾರೂ ಹೆಚ್ಚು ವಿದ್ಯಾರ್ಥಿಗಳು ಅದನ್ನು ಎರವಲು ಪಡೆದಂತೆ ಕಾಣುವುದಿಲ್ಲ” ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಈ ಪೋಸ್ಟ್ ಅನೇಕರಿಗೆ ತಮ್ಮ ಹಳೆಯ ಲೈಬ್ರರಿ ದಿನಗಳನ್ನು ನೆನಪಿಸಿತು
ಅವಳ ಕಿರಿಯ ಸಹೋದರ ಹಿಂದಿನ ವರ್ಷ ಇದೇ ರೀತಿಯ ಪುಸ್ತಕವನ್ನು ಎರವಲು ಪಡೆದಿದ್ದರು. ಪುಸ್ತಕದ ರಸೀದಿಯಲ್ಲಿ, ಅವರ ಹೆಸರುಗಳು ಬಹುತೇಕವಾಗಿ ಹತ್ತಿರದಲ್ಲಿಯೇ ಇದ್ದವು.
ಅವನು ಈ ವರ್ಷ ಮತ್ತೊಮ್ಮೆ ಪುಸ್ತಕವನ್ನು ಎರವಲು ಪಡೆದಂತೆ ತೋರುತ್ತದೆ. ಜನರು ಗ್ರಂಥಾಲಯಗಳಿಗೆ ಭೇಟಿ ನೀಡುವುದು ತುಂಬಾನೇ ವಿರಳವಾಗಿರುವ ಯುಗದಲ್ಲಿ ಇನ್ನೂ ಪುಸ್ತಕವನ್ನು ಓದಿ ಆನಂದಿಸುವ ವಿದ್ಯಾರ್ಥಿಗಳು ಇದ್ದಾರೆ ಮತ್ತು ಒಡಹುಟ್ಟಿದವರು ಒಂದೇ ಪುಸ್ತಕವನ್ನು ಎರವಲು ಪಡೆದದ್ದು ನಿಜಕ್ಕೂ ಹಿಂದಿನ ದಿನಗಳನ್ನು ನೆನಪಿಸುವಂತವು ಆಗಿವೆ.
ಈ ಪೋಸ್ಟ್ ನೋಡಿದ ನೆಟ್ಟಿಗರು ಅನೇಕರು ತಮ್ಮ ಶಾಲಾ ಗ್ರಂಥಾಲಯಗಳ ಹಳೆಯ ನೆನಪುಗಳನ್ನು ಮತ್ತೆ ಮೆಲುಕು ಹಾಕಿದರು.
ಈ ಪೋಸ್ಟ್ ನೋಡಿ ಏನಂತ ಕಾಮೆಂಟ್ ಮಾಡಿದ್ದಾರೆ ಗೊತ್ತೇ ನೆಟ್ಟಿಗರು?
ಟ್ವಿಟ್ಟರ್ ನಲ್ಲಿ ಅನೇಕ ಜನರು ಈ ಪೋಸ್ಟ್ ಅನ್ನು ನೋಡಿ ಭಾವುಕರಾದರು. ಒಬ್ಬ ಮಹಿಳೆ "ಇದು ತುಂಬಾ ಹೃದಯಸ್ಪರ್ಶಿಯಾಗಿದೆ. ಇಬ್ಬರೂ ಒಡಹುಟ್ಟಿದವರು ಒಂದೇ ಪುಸ್ತಕವನ್ನು ಆಯ್ಕೆ ಮಾಡಿಕೊಂಡಿದ್ದಾರೆ" ಎಂದು ಬರೆದಿದ್ದಾರೆ.
In 2006 I borrowed this book from my school library and my lil brother happened to borrow the same in 2022 🤗 And not many people wanted this book in between it seems. pic.twitter.com/BQhh6Ios2u
— SRG (@SanaRGondal) January 22, 2023
ಇದನ್ನೂ ಓದಿ: White Bat: ಅಚ್ಚರಿ ಎನಿಸುವ ಅಪರೂಪದ ಬಿಳಿ ಬಾವಲಿಗಳ ಫೋಟೋಸ್ ಇಲ್ಲಿದೆ ನೋಡಿ
ಗ್ರಂಥಾಲಯದಲ್ಲಿ ಈ ರೀತಿಯ ಕಾರ್ಡ್ ಗಳನ್ನು ಇನ್ನೂ ಬಳಸಲಾಗುತ್ತಿದೆಯೇ?
ಈಗೆಲ್ಲಾ ಕಂಪ್ಯೂಟರ್ ಬಂದಾಗಿದೆ, ಎರವಲು ಪಡೆದ ಪುಸ್ತಕಗಳ ವಿವರವನ್ನು ದಾಖಲಿಸಲು ಗ್ರಂಥಾಲಯಗಳು ಗಣಕೀಕೃತ ವ್ಯವಸ್ಥೆಗಳನ್ನು ಬಳಸುತ್ತಿವೆ.
This reminded me of a story, I was the elder sis n little sis ws always annoyed at the fact that she was the 'hand me down the big sisys school books', untill she started noticing lil scribbles on my books wer like guilding light just like harry recieving Snape's book in HP 6 😭
— Hudda (@hudda1973) January 22, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ