ವಿಮಾನದಲ್ಲಿ (Flight) ಚಲಿಸುವುದು ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಹಕ್ಕಿಯಂತೆ ಬಾನಿನಲ್ಲಿ ಹಾರಾಡುವುದು ಅಂದ್ರೆ ಅದೇನೋ ಒಂದು ರೀತಿಯ ಸಂತೋಷ ಅಂತಾನೇ ಹೇಳಬಹುದು ಬಿಡಿ. ಇದರ ಜೊತೆಗೆ ವಿಮಾನಮದಲ್ಲಿ ಇರುವ ಗಗನಸಖಿಯರನ್ನು ನೋಡುವುದೇ ಚೆಂದ, ಖುಷಿ ಅಲ್ವಾ? ಒಂದೇ ರೀತಿಯಾಗಿ ಕಣ್ಣಿಗೆ ಕುಕ್ಕುವ ರೀತಿ ಸಮವಸ್ತ್ರಗಳನ್ನು (Uniform) ಧರಿಸಿ, ಮೇಕಪ್ (Makeup) ಮಾಡಿಕೊಂಡು, ಪ್ರಯಾಣಿಕರಿಗೆ ವಿಮಾನದ ನೀತಿ ನಿಯಮ, ರಕ್ಷಣೆಯ ಬಗ್ಗೆ ಹೇಳುತ್ತಾರೆ. ಹಾಗೆಯೇ ಈ ವಿಮಾನದಲ್ಲಿ ನಾನಾ ಬಗೆಯ ತಿಂಡಿ ತಿನುಸುಗಳು ಕೂಡ ಮಾರಾಟ ಮಾಡಲಾಗುತ್ತದೆ. ಆದರೆ ಎಲ್ಲವೂ ಅತಿಯಾದ ಬೆಲೆಯಲ್ಲಿ ಇರುತ್ತದೆ. ಆದರೆ ಇದನ್ನು ನಿರಾಕರಿಸಲೂ ಸಾಧ್ಯವಾಗದು. ನೋಡುತ್ತಲೇ ಬಾಯಲ್ಲಿ ನೀರೂರಿಸುತ್ತದೆ. ಹಾಗಂತ ಇಲ್ಲಿ ಕೊಡುವ ತಿಂಡಿ ತಿನಿಸು, ಜ್ಯೂಸ್ಗಳೆಲ್ಲಾ ಒಳಿತಾ? ಚೆನ್ನಾಗಿ ಇರುತ್ತಾ? ಇದೀಗ ಇಂತದ್ದೇ ಒಂದು ಫೊಟೋ ವೈರಲ್ ಆಗ್ತಾ ಇದೆ.
ಕಳೆದ ಕೆಲವು ದಿನಗಳಿಂದ ವಿಮಾನಗಳಲ್ಲಿ ಹಲವು ಆಘಾತಕಾರಿ ಸಂಗತಿಗಳು ನಡೆಯುತ್ತಿವೆ. ಕಳೆದ ಕೆಲವು ದಿನಗಳಲ್ಲಿ ಹಲವು ಆಘಾತಕಾರಿ ಘಟನೆಗಳು ಬೆಳಕಿಗೆ ಬಂದಿವೆ. ಇದರಲ್ಲಿ ಕೆಲವು ಒಳ್ಳೆಯ ಘಟನೆಗಳು ಮತ್ತು ಕೆಲವು ಕೆಟ್ಟ ಘಟನೆಗಳು ಕಂಡುಬಂದವು. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಜನರು ವಿಮಾನದಲ್ಲಿ ಪ್ರಯಾಣಿಸಲು ಯೋಚಿಸುತ್ತಿದ್ದಾರೆ. ಈ ಮೂಲಕ ವಿಮಾನದಲ್ಲಿ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಸರ್ವಪ್ರಿಯಾ ಸಂಗ್ವಾನ್ ಎಂಬ ಮಹಿಳೆ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿ ಏರ್ ಇಂಡಿಯಾ ವಿರುದ್ಧ ಆರೋಪ ಮಾಡಿದ್ದಾರೆ. ಈ ಪೋಸ್ಟ್ ಮೂಲಕ ಸರ್ವಪ್ರಿಯಾ ಅವರು ಏರ್ ಇಂಡಿಯಾದಲ್ಲಿ ಪ್ರಯಾಣಿಸುವಾಗ ತನಗೆ ಬಡಿಸಿದ ಆಹಾರದಲ್ಲಿ ಕಲ್ಲಿನ ತುಂಡು ಕಂಡುಬಂದಿದೆ ಎಂದು ಹೇಳಿದ್ದಾರೆ. ಇದು ಅವಳನ್ನು ಆಶ್ಚರ್ಯಗೊಳಿಸಿತು. ಈ ಬಗ್ಗೆ ವಿಮಾನದ ಸಿಬ್ಬಂದಿಗೂ ದೂರು ನೀಡಿದ್ದಾಳೆ.
ಅದೇ ಸಮಯದಲ್ಲಿ, ವಿಮಾನದಲ್ಲಿ ನೀಡಲಾದ ಆಹಾರದ ಅಜಾಗರೂಕತೆಯ ಬಗ್ಗೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಮಾಹಿತಿಯನ್ನು ಸರ್ವಪ್ರಿಯಾ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಅಂಗಡಿ ಮುಂದೆ ಕುಳಿತಿದ್ದ ನಿರಾಶ್ರಿತೆಯ ಮೇಲೆ ಮಾಲೀಕನ ದರ್ಪ, ಆಕೆಗೆ ಮಾಡಿದ್ದೇನು ನೋಡಿ
ಸರ್ವಪ್ರಿಯಾ ಅವರ ದೂರಿನ ನಂತರ ಏರ್ ಇಂಡಿಯಾ ಇದನ್ನು ಅರಿತುಕೊಂಡಿತು. ಇದನ್ನು ಗಮನಿಸಿದ ಏರ್ ಇಂಡಿಯಾ ಶೀಘ್ರದಲ್ಲೇ ಉತ್ತರ ನೀಡಿದೆ. ಇದು ಆತಂಕಕಾರಿ ಎಂದು ಏರ್ ಇಂಡಿಯಾ ಹೇಳಿದೆ. ಅವರು ತಮ್ಮ ಅಡುಗೆ ತಂಡದೊಂದಿಗೆ ವಿಷಯವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಇದರೊಂದಿಗೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರವೇ ಅಡುಗೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ವಿಷಯವನ್ನು ತಮ್ಮ ಮುಂದೆ ತಂದಿದ್ದಕ್ಕಾಗಿ ಏರ್ ಇಂಡಿಯಾ ಸರ್ವಪ್ರಿಯ ಸಾಂಗ್ವಾನ್ ಅವರಿಗೆ ಧನ್ಯವಾದ ಸಲ್ಲಿಸಿದೆ.
You don’t need resources and money to ensure stone-free food Air India (@airindiain). This is what I received in my food served in the flight AI 215 today. Crew member Ms. Jadon was informed.
This kind of negligence is unacceptable. #airIndia pic.twitter.com/L3lGxgrVbz
— Sarvapriya Sangwan (@DrSarvapriya) January 8, 2023
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ