Viral Photo: ಎಟಿಎಂ ಮಷಿನ್‌ ಬಳಿ ಓದಿನಲ್ಲಿ ಮಗ್ನನಾದ ಸೆಕ್ಯುರಿಟಿ ಗಾರ್ಡ್; ಫೋಟೋ ವೈರಲ್

ಎಟಿಎಂ ಮಷಿನ್‌ ಕೌಂಟರ್‌ನಲ್ಲಿ ಭದ್ರತಾ ಸಿಬ್ಬಂದಿ ನೆಲದ ಮೇಲೆ ಕುಳಿತು ಅಧ್ಯಯನ ಮಾಡುತ್ತಿರುವ ಫೋಟೋ ವೈರಲ್ ಆಗಿದೆ.

ಎಟಿಎಂ ಮಷಿನ್ ಬಳಿ ಓದಿನಲ್ಲಿ ಮಗ್ನರಾಗಿರುವ ಸೆಕ್ಯುರಿಟಿ ಗಾರ್ಡ್

ಎಟಿಎಂ ಮಷಿನ್ ಬಳಿ ಓದಿನಲ್ಲಿ ಮಗ್ನರಾಗಿರುವ ಸೆಕ್ಯುರಿಟಿ ಗಾರ್ಡ್

  • Share this:
ಭಾರತದಲ್ಲಿ ಸರ್ವರಿಗೂ ಶಿಕ್ಷಣದ ಹಕ್ಕು ಇದ್ದರೂ ಅನೇಕರು ಅದರಿಂದ ದೂರವೇ ಉಳಿದಿದ್ದಾರೆ. ಇನ್ನು ಅನೇಕರು ಓದಲು ಸಾಮಾನ್ಯ ಮಟ್ಟದ ಸೌಲಭ್ಯಗಳಿಲ್ಲದಿದ್ದರೂ ಓದುವ ಆಸೆ ಇರುತ್ತದೆ, ಹಾಗೇ ಕಷ್ಟಪಟ್ಟು ಓದುತ್ತಾರೆ. ಇದೇ ರೀತಿ, ವೈರಲ್ ಚಿತ್ರವೊಂದರಲ್ಲಿ ಅಂತಹ ಇತ್ತೀಚಿನ ಉದಾಹರಣೆಯನ್ನು ಹೈಲೈಟ್ ಮಾಡಲಾಗುತ್ತಿದ್ದು, ಎಟಿಎಂ ಮಷಿನ್‌ ಕೌಂಟರ್‌ನಲ್ಲಿ ಭದ್ರತಾ ಸಿಬ್ಬಂದಿ ನೆಲದ ಮೇಲೆ ಕುಳಿತು ಅಧ್ಯಯನ ಮಾಡುತ್ತಿರುವ ಫೋಟೋ ವೈರಲ್ ಆಗಿದೆ. ಈ ಚಿತ್ರವನ್ನು ಐಎಎಸ್ ಅಧಿಕಾರಿ ಅವನೀಶ್‌ ಶರಣ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಸೆಕ್ಯುರಿಟಿ ಗಾರ್ಡ್ ಹಾಸಿಗೆಯ ಮೇಲೆ ಕುಳಿತು ತನ್ನ ಓದಿನಲ್ಲಿ ತೊಡಗಿರುವುದನ್ನು ತೋರಿಸುತ್ತದೆ.

ಮೈಕ್ರೋ ಬ್ಲಾಗಿಂಗ್ ಸೈಟ್‌ ಟ್ವಿಟ್ಟರ್‌ನಲ್ಲಿ ಈ ಪೋಸ್ಟ್‌ ಹಂಚಿಕೊಂಡಿರುವ ಅವನೀಶ್‌ ಶರಣ್ ಅವರು ದುಶ್ಯಂತ್ ಕುಮಾರ್ ಅವರ ಹಿಂದಿ ಕವಿತೆಯ ಸಾಲು ''ಹೋ ಕಹಿನ್ ಭಿ ಆಗ್, ಆಗ್ ಜಲ್‌ನಿ ಚಾಹಿಯೇ'' ಎಂಬ ಕ್ಯಾಪ್ಷನ್‌ ಬರೆದುಕೊಂಡಿದ್ದಾರೆ. ಅಂದರೆ ಅದು ಎಲ್ಲಿದ್ದರೂ ಪರವಾಗಿಲ್ಲ, ಆದರೆ ಬೆಂಕಿ ಉರಿಯಬೇಕು ಎಂದರ್ಥ.

ಆದರೆ, ಆ ಫೋಟೋದಲ್ಲಿರುವ ವ್ಯಕ್ತಿಯ ಬಗ್ಗೆಯಾಗಲೀ, ಆ ಘಟನೆಯ ಸ್ಥಳದ ವಿವರಗಳು ವರದಿಯಾಗಿಲ್ಲ.

ಸೆಕ್ಯುರಿಟಿ ಗಾರ್ಡ್‌ನ ಆ ಫೋಟೋ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಅಲ್ಲದೆ, ಮೂಲಭೂತ ಶಿಕ್ಷಣದ ಹಕ್ಕಿಗಾಗಿ ತುಂಬಾ ಶ್ರಮವಹಿಸಬೇಕಾದ ದೀನದಲಿತ ಜನರನ್ನು ತೋರಿಸುವ ಇದೇ ರೀತಿಯ ಘಟನೆಗಳ ಸ್ನ್ಯಾಪ್‌ಗಳನ್ನು ನೆಟ್ಟಿಗರು ಕಾಮೆಂಟ್‌ನಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಅಪರಿಚಿತ ವ್ಯಕ್ತಿಯ ಬಗ್ಗೆ ಅನೇಕ ಜನರು ತಮ್ಮ ಪ್ರೀತಿ, ಬೆಂಬಲ ಮತ್ತು ಸಹಾನುಭೂತಿಯನ್ನು ತೋರಿಸಿದರು.


ಜನರು ತಮ್ಮ ಶಿಕ್ಷಣವನ್ನು ಮುಂದುವರಿಸಲು ಯಾವ ಗಂಭೀರ ಸನ್ನಿವೇಶಗಳನ್ನು ಎದುರಿಸುತ್ತಾರೆ ಎಂಬುದನ್ನು ಇಂಟರ್ನೆಟ್ ನಮಗೆ ತೋರಿಸಿರುವುದು ಇದೇ ಮೊದಲ ಬಾರಿಗೆ ಅಲ್ಲ. 2019 ರಲ್ಲಿ, ಜೆಎನ್‌ಯುನಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ತಮ್ಮ ಕರ್ತವ್ಯದ ಜತೆಗೆ ಅಧ್ಯಯನ ಮಾಡಿ ಪ್ರವೇಶ ಪರೀಕ್ಷೆಯನ್ನು ಪಾಸ್‌ ಮಾಡಿಕೊಂಡಿದ್ದರು.

2004 ರಲ್ಲಿ, ರಾಮ್ಜಾಲ್ ಮೀನಾ ತಮ್ಮ ಕುಟುಂಬಕ್ಕಾಗಿ ಪದವಿ ಸಮಯದಲ್ಲಿ ತನ್ನ ಅಧ್ಯಯನವನ್ನು ನಿಲ್ಲಿಸಬೇಕಾಯಿತು. ಅವರ ಮನೆಯ ಆರ್ಥಿಕ ಸ್ಥಿತಿ ಭೀಕರವಾಗಿತ್ತು ಮತ್ತು ಅವರು ಜನಿಸಿದ ರಾಜಸ್ಥಾನದ ಕರೌಲಿ ಎಂಬ ಹಳ್ಳಿಯಲ್ಲಿ ತಮ್ಮ ತಂದೆ ಮಾಡುತ್ತಿದ್ದ ಕೂಲಿ ಕೆಲಸದಲ್ಲಿ ತಾವೂ ಸೇರಿಕೊಂಡರು.

ನಂತರ 2014 ರಲ್ಲಿ ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಕ್ಕೆ (ಜೆಎನ್‌ಯು) ಭದ್ರತಾ ಸಿಬ್ಬಂದಿಯಾಗಿ ಸೇರಿದಾಗ ಮೀನಾ ಅಧ್ಯಯನ ಮುಂದುವರಿಸಿ, ಐದು ವರ್ಷಗಳ ನಂತರ ಅವರು ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿ ಅರ್ಹತೆ ಪಡೆದರು.

2004 ರಲ್ಲಿ, ನನ್ನ ಶಿಕ್ಷಣಕ್ಕೆ ವಿರಾಮ ತೆಗೆದುಕೊಳ್ಳಬೇಕಾಗಿತ್ತು. ಆದರೆ ಈಗ ನಾನು ಅದನ್ನು ಮತ್ತಷ್ಟು ಮುಂದುವರಿಸಬಹುದು ಎಂದು ಅವರು ಹೇಳಿದರು.

ಮೀನಾ ಕರೌಲಿಯ ಸರ್ಕಾರಿ ಶಾಲೆಯಲ್ಲಿ ಅಧ್ಯಯನ ಮಾಡಿದರು ಹಾಗೂ 2003 ರಲ್ಲಿ ವಿವಾಹವಾದರು ಮತ್ತು ಕಾಲೇಜಿನಲ್ಲಿ ಮೊದಲ ವರ್ಷದ ನಂತರ ಶಿಕ್ಷಣವನ್ನು ನಿಲ್ಲಿಸಬೇಕಾಯಿತು. ಇನ್ನು, ಅವರ ಕುಟುಂಬದ ಐದು ಒಡಹುಟ್ಟಿದವರಲ್ಲಿ ಹಿರಿಯ ಸಹೋದರ, ತನ್ನ ಕಿರಿಯ ಸಹೋದರ ಪ್ರತಿಷ್ಠಿತ ಪರೀಕ್ಷೆಯನ್ನು ಪಾಸ್‌ ಮಾಡಿದ್ದಕ್ಕೆ ಸಂತೋಷವನ್ನು ವ್ಯಕ್ತಪಡಿಸಿದರು.

“ನನ್ನ ಶಿಕ್ಷಣದ ಬಗ್ಗೆ ನಾನು ಮರುಚಿಂತನೆ ಮಾಡಬೇಕಾದ ಸಮಯ ಆಗ ಇತ್ತು. ನನ್ನ ತಂದೆ ಅವರ ಹೋರಾಟದಲ್ಲಿ ಒಬ್ಬಂಟಿಯಾಗಿದ್ದರು, ಹೀಗಾಗಿ ನಾನು ನನ್ನ ಅಧ್ಯಯನವನ್ನು ಸ್ಥಗಿತಗೊಳಿಸಿದೆ ಮತ್ತು ಮನೆಗೆ ಹಣ ಸಂಪಾದಿಸಲು ಅವರೊಂದಿಗೆ ಸೇರಿಕೊಂಡೆ, ” ಎಂದು ರಾಮ್ಜಾಲ್ ಮೀನಾ ಹೇಳಿದರು.
Published by:Sushma Chakre
First published: