Kidd Pose: ಶಾಲೆಯ ಇಯರ್ ಬುಕ್ ‌ಗಾಗಿ ಈ ಮಕ್ಕಳು ಹೇಗೆ ಪೋಸ್ ನೀಡಿದ್ದಾರೆ ನೋಡಿ..!

ಈ ಪೋಸ್ಟ್ ಅನ್ನು ಕೆಲವು ದಿನಗಳ ಹಿಂದೆ ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದ ನಂತರ, ಈ ಕ್ಲಿಪ್ ಸುಮಾರು 4 ಲಕ್ಷ ಲೈಕ್‌ಗಳನ್ನು ಗಳಿಸಿದೆ. ಈ ಪೋಸ್ಟ್ ವಿವಿಧ ಕಾಮೆಂಟ್‌ಗಳನ್ನು ಹಂಚಿಕೊಳ್ಳಲು ಜನರನ್ನು ಪ್ರೇರೇಪಿಸಿದೆ.

ಮಕ್ಕಳ ಪೋಸ್

ಮಕ್ಕಳ ಪೋಸ್

  • Share this:
ನಾವೆಲ್ಲ ಶಾಲೆ(School)ಯಲ್ಲಿ ಇರಬೇಕಾದರೆ ವರ್ಷದ ಕೊನೆಯಲ್ಲಿ ಎಂದರೆ ಇನ್ನೇನು ಎಲ್ಲಾ ತರಗತಿ(Class)ಗಳು ಮುಗಿದು ಪರೀಕ್ಷೆ(Exams)ಗಳು ಶುರುವಾಗುತ್ತವೆ ಎಂದು ಹೇಳುವಾಗ ಒಂದು ತರಗತಿಯನ್ನು ಬಿಟ್ಟು ಮುಂದಿನ ತರಗತಿಗೆ ಮಕ್ಕಳು (Children) ಹೋಗುತ್ತಾರೆ ಎಂದು ಶಾಲೆಯ ಮುಖ್ಯಸ್ಥರು (School Chief) ಮತ್ತು ತರಗತಿಯ ಶಿಕ್ಷಕರು (Teachers) ಸೇರಿ ಎಲ್ಲಾ ವಿದ್ಯಾರ್ಥಿ (Students)ಗಳೊಂದಿಗೆ ಒಂದು ಫೋಟೋ (Photos) ತೆಗೆಸಿಕೊಳ್ಳುತ್ತಿದ್ದರು. ಆ ಫೋಟೋದಲ್ಲಿ ನಾವೆಲ್ಲಾ ತುಂಬಾನೇ ಶಿಸ್ತಿನಿಂದ ನೇರವಾಗಿ ನಿಂತುಕೊಂಡು ಕ್ಯಾಮೆರಾಗೆ ಪೋಸ್ ನೀಡಿರುತ್ತಿದ್ದೆವು. ಆದರೆ ಈಗೆಲ್ಲಾ ತರಗತಿಯ ಫೋಟೋಗಳ ಜೊತೆಗೆ ಇಯರ್ ಬುಕ್ (Year Book) ಅಂತ ಸಹ ಬಂದಿದೆ, ಈಗಿನ ಮಕ್ಕಳು ಕೇಳಬೇಕೆ..? ಅದರಲ್ಲಿ ಅವರು ನೀಡಿದ್ದೇ ಪೋಸ್. ತುಂಬಾನೇ ವಿಭಿನ್ನವಾಗಿ ಈಗಿನ ಇಯರ್ ಬುಕ್‌ಗಳಿರುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಶಾಲೆಯ ವರ್ಷದ ಪುಸ್ತಕಕ್ಕಾಗಿ ತಮ್ಮ ಛಾಯಾಚಿತ್ರಗಳನ್ನು ಕ್ಲಿಕ್ಕಿಸುವಾಗ ಫೋಟೋ ದಿನದಂದು ಮಕ್ಕಳು ಹೇಗೆ ಪೋಸ್ ನೀಡಿದ್ದಾರೆ ಎಂಬುದರ ಬಗ್ಗೆ ಒಂದು ಪೋಸ್ಟ್ ಜನರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ. ಅಷ್ಟೇ ಅಲ್ಲದೇ ಈ ಪೋಸ್ಟ್ ಟ್ವಿಟ್ಟರ್‌ ನಲ್ಲಿ ಒಂದು ಆರೋಗ್ಯಕರವಾದ ಸಂದೇಶಗಳ ಮತ್ತು ಪ್ರತಿಕ್ರಿಯೆಗಳ ಎಳೆಯನ್ನೇ ಹುಟ್ಟು ಹಾಕಿದೆ ಎಂದು ಹೇಳಬಹುದು.

ಇದನ್ನೂ ಓದಿ:  Viral Video: ನನ್ನ ತಂಗಿಯಾ ಮದುವೆ ಜೋರು ಜೋರು ಜೋರು! ಸಹೋದರಿ ವಿವಾಹದಲ್ಲಿ ಅಣ್ಣನ ಸಂಭ್ರಮ ನೋಡಿ ಕಣ್ತುಂಬಿಕೊಳ್ಳಿ

ಫೋಟೋ ಹಂಚಿಕೊಂಡ ಡೋರಾ ಮಿಲಾ ಜೆ

ಟ್ವಿಟ್ಟರ್‌ ಬಳಕೆದಾರರಾದ ಡೋರಾ ಮಿಲಾ ಜೆ ತನ್ನ ಸೋದರ ಸೊಸೆಯ ಬಗ್ಗೆ ತನ್ನ ವೈಯಕ್ತಿಕ ಟ್ವಿಟ್ಟರ್‌ ಹ್ಯಾಂಡಲ್‌ನಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ. "ನನ್ನ ಸೋದರ ಸೊಸೆ ಮೆಲೋಡಿ ಮನೆಗೆ ಬಂದು "ಅವಳ ತಾಯಿ ಫೋಟೋ ತೆಗೆಸಿಕೊಳ್ಳುವ ದಿನ ಹೇಗೆ ಕಳೆದಿರಿ ಎಂದು ಕೇಳಿದಾಗ, ಮೆಲೋಡಿ ನೀವು ನೋಡುತ್ತೀರಿ ನನ್ನ ಫೋಟೋ ಹೇಗೆ ಬಂದಿರುತ್ತೆ ಅಂತ" ಎಂದು ಹೇಳಿದಳು. ತನ್ನ ಶಾಲೆಯ ಇಯರ್ ಬುಕ್‌ಗಾಗಿ ಫೋಟೋಗೆ ಹೇಗೆ ಪೋಸ್ ನೀಡಿದ್ದಾಳೆ ನೋಡಿ ಎಂದು ಹೇಳಿ ಆ ಫೋಟೋವನ್ನು ಈಗ ಇವರು ಹಂಚಿಕೊಂಡಿದ್ದಾರೆ.

ನಂತರ ಈ ಫೋಟೋಗೆ ತುಂಬಾ ಜನರು ತಮ್ಮ ಪ್ರತಿಕ್ರಿಯೆ ನೀಡಿದ್ದು, ನಂತರ ತಮ್ಮ ಪೋಸ್ಟ್‌ಗೆ ಉತ್ತರಿಸಿದ ಮಿಲಾ ಜೆ ಅವರು "ಎಲ್ಲರಿಗೂ ಧನ್ಯವಾದಗಳು.. ಮೆಲೋಡಿಗೆ 7 ವರ್ಷ ತುಂಬಿದವು ಮತ್ತು ಈ ಫೋಟೋ ಎಲ್ಲವನ್ನೂ ಹೇಳುತ್ತದೆ. ಅವಳು ಯಾರೆಂದು ಅವಳಿಗೆ ತಿಳಿದಿದೆ ಮತ್ತು ನಾನು ಅವಳನ್ನು ತುಂಬಾ ಪ್ರೀತಿಸುತ್ತೇನೆ" ಎಂದು ಬರೆದಿದ್ದಾರೆ.

ಈ ಫೋಟೋಗೆ 4 ಲಕ್ಷಕ್ಕೂ ಅಧಿಕ ಲೈಕ್ಸ್

ಈ ಪೋಸ್ಟ್ ಅನ್ನು ಕೆಲವು ದಿನಗಳ ಹಿಂದೆ ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದ ನಂತರ, ಈ ಕ್ಲಿಪ್ ಸುಮಾರು 4 ಲಕ್ಷ ಲೈಕ್‌ಗಳನ್ನು ಗಳಿಸಿದೆ. ಈ ಪೋಸ್ಟ್ ವಿವಿಧ ಕಾಮೆಂಟ್‌ಗಳನ್ನು ಹಂಚಿಕೊಳ್ಳಲು ಜನರನ್ನು ಪ್ರೇರೇಪಿಸಿದೆ. ಅಷ್ಟೇ ಅಲ್ಲ, ಜನರು ಟ್ವೀಟ್‌ಗೆ ಉತ್ತರಿಸುವಾಗ ವಿಭಿನ್ನ ಇಯರ್ ಬುಕ್‌ನ ಫೋಟೋಗಳನ್ನು ಸಹ ಟ್ವೀಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ:  Viral News: ಹೆತ್ತವರನ್ನು ಅರಸಿ ಅಮೆರಿಕಾದಿಂದ ಭಾರತಕ್ಕೆ ಬಂದ ಯುವಕ! ಆತನಿಗೆ ಸಿಕ್ಕಿದರಾ ಅಪ್ಪ-ಅಮ್ಮ?



"ಇಲ್ಲ, ಇದರಲ್ಲಿ ಮಕ್ಕಳು ನಿಜವಾಗಿಯೂ ವಿಭಿನ್ನವಾಗಿ ಕಾಣುತ್ತಿದ್ದಾರೆ ಮತ್ತು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ " ಎಂದು ಕೈಶ್ ಎಂಬ ಹೆಸರಿನವರು ತಮ್ಮ ಟ್ವೀಟ್ ಜೊತೆಗೆ, ಅವರು ಒಂದು ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ.



ಜೋಶ್ ಎಂಬ ಇನ್ನೊಬ್ಬ ತಂದೆ ಸಹ "ನನ್ನ ಮಗನೂ ಸಹ ಇಯರ್ ಬುಕ್‌ಗಾಗಿ ಪೋಸ್ ನೀಡಿದ್ದಾನೆ, ನಂತರ ಅಜ್ಜಿಯ 90ನೇ ಹುಟ್ಟುಹಬ್ಬದ ಪಾರ್ಟಿಯಲ್ಲಿ ತಮ್ಮ ಚಿಕ್ಕಪ್ಪಂದಿರಿಗೆ ಆ ಫೋಟೋ ಪ್ರತಿಗಳನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದಾನೆ" ಎಂದು ಪೋಸ್ಟ್ ಮಾಡಿದ್ದಾರೆ.



"ಇದು ಅದೇ ವಯಸ್ಸಿನ ನನ್ನ ಶಾಲೆಯ ಫೋಟೋವಾಗಿತ್ತು. ನನ್ನ ಮಗಳು ನನಗಿಂತಲೂ ಉತ್ತಮ ಜೀವನವನ್ನು ಹೊಂದಿದ್ದಾಳೆ" ಎಂದು ಜೋ ಎಂಬ ಹೆಸರಿನ ಮಹಿಳೆಯೊಬ್ಬರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಹಂಚಿಕೊಂಡರು.



"ನಾವೆಲ್ಲರೂ 2022 ರಲ್ಲಿ ಆತ್ಮವಿಶ್ವಾಸದೊಂದಿಗೆ ಮುಂದುವರಿಯಬೇಕು.. ಗೋ ಮೆಲೋಡಿ" ಎಂದು ಟ್ವಿಟ್ಟರ್‌ ಬಳಕೆದಾರರೊಬ್ಬರು ಮೆಲೋಡಿಯ ಫೋಟೋಗೆ ಪ್ರತಿಕ್ರಿಯಿಸಿದ್ದಾರೆ.
Published by:Mahmadrafik K
First published: