ಕೆಲವೊಮ್ಮೆ ಈ ರಸ್ತೆಗಳಲ್ಲಿರುವ ಗುಂಡಿಗಳಲ್ಲಿ ಒಂದು ದೊಡ್ಡ ವಾಹನದ ಚಕ್ರಗಳು ಸಿಕ್ಕಿ ಹಾಕಿಕೊಳ್ಳುವ ತನಕ ಅದೆಷ್ಟು ಆಳದ ಗುಂಡಿಯಿದೆ ಅಂತ ಅಂದಾಜು ಸಿಗುವುದಿಲ್ಲ ನೋಡಿ. ಗುಂಡಿ ನಮಗೆ ಹೊರಗಡೆಯಿಂದ ನೋಡಲು ತುಂಬಾ ಚಿಕ್ಕದ್ದು ಅಂತ ಅನ್ನಿಸುತ್ತದೆ, ಆದರೆ ಆಳದ ಗುಂಡಿಯಲ್ಲಿ ಬೈಕ್ನ ಅಥವಾ ಕಾರಿನ ಟೈರ್ಗಳು ಸಿಕ್ಕಿ ಹಾಕಿಕೊಂಡರೆ ಆಗುವ ಅನಾಹುತಗಳು (Accident) ಅಷ್ಟಿಷ್ಟಲ್ಲ. ಅದರಲ್ಲೂ ಈ ಮಳೆಗಾಲದ (Rain season) ಸಮಯದಲ್ಲಂತೂ ಬಿಟ್ಟು ಬಿಡದೆ ಸುರಿಯುವ ಮಳೆಯಿಂದಾಗಿ ರಸ್ತೆಗಳು ವಾರಗಟ್ಟಲೆ ಒದ್ದೆಯಾಗಿ ಅವುಗಳ ಕಾಮಗಾರಿ ಚೆನ್ನಾಗಿ ಆಗಿರದೆ ಇದ್ದರೆ ಕೂಡಲೇ ಚಿಕ್ಕ ಪುಟ್ಟ ಗುಂಡಿಗಳು ಬೀಳುವುದನ್ನು ಮತ್ತು ಬಿರುಕು ಬಿಟ್ಟು ಕಂದಕಗಳಾಗುವುದನ್ನು ನಾವು ನೋಡಿರುತ್ತೇವೆ.
ಈ ಗುಂಡಿಗಳನ್ನು ನೋಡದೆ ವಾಹನ ಸವಾರರು ಮತ್ತು ಕೆಲವೊಮ್ಮೆ ಪಾದಚಾರಿಗಳು ನೋಡದೆ ಅದರಲ್ಲಿ ಸಿಕ್ಕಿ ಹಾಕಿಕೊಳ್ಳುವುದನ್ನು ಸಹ ನಾವು ನೋಡಿರುತ್ತೇವೆ. ಮಳೆ ಜೋರಾಗಿ ಬಂದು ರಸ್ತೆಯ ಮೇಲೆ ನೀರು ನಿಂತರೆ ಸಾಕು, ಗುಂಡಿ ಎಲ್ಲಿದೆ ಅಂತ ಸಹ ನಮಗೆ ಊಹಿಸುವುದಕ್ಕೂ ಸಾಧ್ಯವಾಗುವುದಿಲ್ಲ. ಹೀಗಾಗಿಯೇ ಅನೇಕ ಅನಾಹುತಗಳು ಮತ್ತು ರಸ್ತೆ ಅಪಘಾತಗಳು ಆಗುತ್ತಿರುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕೆಲವೊಮ್ಮೆ ಅಂತೂ ಈ ವಾಹನಗಳು ವೇಗದಲ್ಲಿ ಇದ್ದಾಗ ಅದರ ಚಕ್ರಗಳು ಹಠಾತ್ತಾಗಿ ಗುಂಡಿಯಲ್ಲಿ ಸಿಕ್ಕಿ ಹಾಕಿಕೊಂಡು ಬಿಡುತ್ತವೆ. ಹೀಗೆ ಆದಾಗ ವಾಹನ ಸವಾರರು ಕೆಳಕ್ಕೆ ಬಿದ್ದು ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಮತ್ತು ಕೆಲವೊಮ್ಮೆ ಇದು ಮಾರಣಾಂತಿಕ ಸಹ ಆಗಬಹುದು.
ಇಷ್ಟೆಲ್ಲಾ ಏಕೆ ಹೇಳುತ್ತಿದ್ದೇವೆ ಅಂತ ನಿಮಗೆ ಪ್ರಶ್ನೆ ಕಾಡುತ್ತಿರಬೇಕು. ಗುಜುರಾತ್ ರಾಜ್ಯದ ಅಹಮದಾಬಾದ್ನ ಜುಹಾಪುರ ಪ್ರದೇಶದ ಬಳಿ ಬುಧವಾರ ಮಧ್ಯಾಹ್ನ ರಸ್ತೆ ಕುಸಿದಿದ್ದು, ಅಹಮದಾಬಾದ್ ಮಹಾನಗರ ಪಾಲಿಕೆ (ಎಎಂಸಿ) ಗೆ ಸೇರಿದಂತಹ ಒಂದು ಕಸದ ಟ್ರಕ್ ಆ ಕಂದಕದಲ್ಲಿ ಸಿಕ್ಕಿ ಹಾಕಿಕೊಂಡು ಟ್ರಕ್ನ ಮುಂದಿನ ಟೈರ್ಗಳು ಮತ್ತು ಮುಂದಿನ ಭಾಗ ಮೇಲೆ ಎದ್ದು ನಿಂತಿದೆ.
ಇದನ್ನೂ ಓದಿ: ಮತ್ಸ್ಯಕನ್ಯೆಯಾಗಿ ಗುರುತಿಸಿಕೊಂಡು ತಿಂಗಳಿಗೆ 6 ಲಕ್ಷ ರೂಪಾಯಿ ದುಡಿಯುತ್ತಿದ್ದಾಳೆ ಈಕೆ!
ಆದರೆ ಆ ರಸ್ತೆಯಲ್ಲಿ ಬಿದ್ದಿರುವ ದೊಡ್ಡ ಕಂದಕವನ್ನು ಅಲ್ಲಿನ ಜನರು ನೋಡಿ ಭಯ ಪಡುವುದಕ್ಕೆ ಶುರು ಮಾಡಿದ್ದಾರೆ ನೋಡಿ. ಏಕೆಂದರೆ ಕಸದ ಟ್ರಕ್ ತುಂಬಾನೇ ದೊಡ್ಡ ಟ್ರಕ್ ಆಗಿದ್ದು, ಚಕ್ರಗಳು ಸಿಕ್ಕಿ ಹಾಕಿಕೊಂಡು ಪೂರ್ತಿಯಾಗಿ ಎದ್ದು ನಿಂತಿದೆ ಅಂತ ನೋಡಿದರೆ ನಿಜಕ್ಕೂ ಎಂತವರಿಗಾದರೂ ಭಯವಾಗುತ್ತದೆ. ಅಪಾಯದಿಂದ ಡ್ರೈವರ್ ಪಾರಾಗಿದ್ದಾರೆ.
ಈ ಕಂದಕದೊಳಗೆ ಸಿಲುಕಿರುವ ದೈತ್ಯ ಟ್ರಕ್ ನ ಫೋಟೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. "ನಮ್ಮ ರಸ್ತೆಯ ಸ್ಥಿತಿ ಎಷ್ಟು ಕೆಟ್ಟದಾಗಿದೆ. ಯಾರೂ ನೋಡಲು ಹೋಗುವುದಿಲ್ಲ" ಎಂದು ಟ್ವಿಟ್ಟರ್ ಪೋಸ್ಟ್ನಲ್ಲಿ ಶೀರ್ಷಿಕೆಯಲ್ಲಿ ಬರೆಯಲಾಗಿದೆ.
How bad is the condition of our road no one is going to see…@AmdavadAMC #ahmedabad #juhapura pic.twitter.com/TFAb9YgV5I
— Azaz_noor (@azaz_noor15) September 14, 2022
ಜುಲೈ 10ರ ನಂತರ ಅಹಮದಾಬಾದ್ನಲ್ಲಿ ವರದಿಯಾದ 92ನೇ ಕಂದಕ ಇದಾಗಿದೆ ಎಂದು ಪತ್ರಿಕೆಯ ವರದಿಯೊಂದು ತಿಳಿಸಿದೆ. ಎಎಂಸಿ ಅಧಿಕಾರಿಗಳು ಅವುಗಳಲ್ಲಿ 80ಕ್ಕೂ ಹೆಚ್ಚು ಕಂದಕಗಳನ್ನು ರಿಪೇರಿ ಮಾಡಿದ್ದಾರೆ, ಆದರೆ ಇನ್ನೂ ಎಂಟು ಕಂದಕಗಳ ಕೆಲಸ ಇನ್ನೂ ಪ್ರಕ್ರಿಯೆಯಲ್ಲಿದೆ ಎಂದು ಹೇಳಲಾಗುತ್ತಿದೆ.
ಭಾರಿ ಮಳೆಯಿಂದಾಗಿ ವಸ್ತ್ರಾಲ್ ಪ್ರದೇಶದ ಸುರಭಿ ಪಾರ್ಕ್ ಬಳಿ ಹೊಸದಾಗಿ ನಿರ್ಮಿಸಲಾದ ರಸ್ತೆಯಲ್ಲಿ ಸಹ ಇದೇ ರೀತಿಯ ಕಂದಕ ಕಂಡು ಬಂದಿದ್ದು, ಅದರಲ್ಲಿ ಇಡೀ ಕಾರು ಸಿಕ್ಕಿ ಹಾಕಿಕೊಂಡಿದೆ.
ಇದನ್ನೂ ಓದಿ: ಮಹಿಳೆಗೆ ರೈಲಿನಲ್ಲೇ ಹೆರಿಗೆ! ವೈದ್ಯಕೀಯ ವಿದ್ಯಾರ್ಥಿನಿಗೆ ಭೇಷ್ ಅನ್ನಲೇಬೇಕು!
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ರಾಜ್ಯ ಸರ್ಕಾರವು ನಗರದ ಎಲ್ಲಾ ಪ್ರಮುಖ ರಸ್ತೆಗಳನ್ನು ಯುದ್ಧೋಪಾದಿಯಲ್ಲಿ ತಕ್ಷಣವೇ ದುರಸ್ತಿಗೊಳಿಸುವಂತೆ ಎಎಂಸಿಗೆ ಆದೇಶಿಸಿದೆ. ರಾಷ್ಟ್ರೀಯ ಕ್ರೀಡಾಕೂಟವು ಈ ತಿಂಗಳ ಕೊನೆಯಲ್ಲಿ ಇದೇ ನಗರದಿಂದ ಪ್ರಾರಂಭವಾಗಲಿರುವುದರಿಂದ ಅಧಿಕೃತ ನಿರ್ದೇಶನ ಬಂದಿದೆ. ವಿಮಾನ ನಿಲ್ದಾಣ, ನರೇಂದ್ರ ಮೋದಿ ಸ್ಟೇಡಿಯಂ, ಕಲುಪುರ ರೈಲ್ವೆ ನಿಲ್ದಾಣ ಮತ್ತು ಸಬರಮತಿ ರಿವರ್ ಫ್ರಂಟ್ ಗೆ ಹೋಗುವ ರಸ್ತೆಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ