ಸಾಮಾನ್ಯವಾಗಿ ಜನರಿಗೆ ಈ ಬಸ್ (Bus) ನಲ್ಲಿ ಅಥವಾ ಕಾರಿನಲ್ಲಿ ಹೋಗುವುದು ಎಂದರೆ ಅಷ್ಟೊಂದು ಭಯವಾಗುವುದಿಲ್ಲ. ಆದರೆ ಅದೇ ಈ ರೈಲಿನಲ್ಲಿ ಮತ್ತು ವಿಮಾನದಲ್ಲಿ ಪ್ರಯಾಣಿಸಬೇಕಾದರೆ ಒಂದು ರೀತಿಯ ಭಯ ಮತ್ತು ಆತಂಕ ಇದ್ದೆ ಇರುತ್ತದೆ. ಈ ಭಯ ಮತ್ತು ಆತಂಕ ಎಲ್ಲರಲ್ಲೂ ಇರಲಿಕ್ಕಿಲ್ಲ, ಆದರೆ ಯಾರು ಮೊದಲ ಬಾರಿಗೆ ಇವುಗಳಲ್ಲಿ ಕುಳಿತುಕೊಳ್ಳುತ್ತಿರುತ್ತಾರೋ ಅವರಲ್ಲಿ ಇವೆರಡೂ ಗ್ಯಾರೆಂಟಿ ಇದ್ದೆ ಇರುತ್ತವೆ. ಅದರಲ್ಲೂ ಎಷ್ಟೋ ಬಾರಿ ಕೆಲವು ಪ್ರಯಾಣಿಕರು ವಿಮಾನದ ಪ್ರಯಾಣದ ಮುಂಚೆ ಮತ್ತು ರೈಲಿನಲ್ಲಿ (Rail) ಪ್ರಯಾಣಿಸುವ ಮುಂಚೆ ಯಾವುದಾದರೂ ಅಪಘಾತದ ಸುದ್ದಿಯನ್ನು ನೋಡಿದ್ದರಂತೂ ಮುಗಿದೇ ಹೋಯಿತು. ಅವರಲ್ಲಿದ್ದ ಆ ಭಯ ಮತ್ತು ಆತಂಕ ಪ್ರಯಾಣದ (Travelling) ಸಮಯದಲ್ಲಿ ಎರಡು ದುಪ್ಪಟ್ಟಾಗಿರುತ್ತವೆ.
ವಿಮಾನದಲ್ಲಿ ಪ್ರಯಾಣಿಸುವ ಮೊದಲು ಭಯ ಇದ್ದೆ ಇರುತ್ತೆ
ಇನ್ನೂ ಕೆಲವು ಸಂದರ್ಭಗಳಲ್ಲಿ ವಿಮಾನದಲ್ಲಿ ಅಥವಾ ರೈಲಿನಲ್ಲಿ ಕುಳಿತುಕೊಳ್ಳಲು ಹೋದಾಗ, ಅಲ್ಲಿ ಏನಾದರೂ ಒಂದು ಸಣ್ಣ ರಿಪೇರಿ ಕೆಲಸ ನಡೆಯುತ್ತಿದ್ದು, ಅದು ಭಯ ಪಡುವ ಪ್ರಯಾಣಿಕರ ಕಣ್ಣಿಗೆ ಬಿದ್ದರಂತೂ ಅವರ ಹೃದಯ ಇನ್ನೂ ವೇಗವಾಗಿ ಬಡಿದುಕೊಳ್ಳಲು ಶುರು ಮಾಡುತ್ತದೆ.
ಅಷ್ಟೇ ಅಲ್ಲದೆ ಪ್ರಯಾಣದ ಸಮಯದಲ್ಲಿ ಏನಾದರೂ ವಿಚಿತ್ರ ಶಬ್ದ ಕೇಳಿ ಬಂದರೆ ಮತ್ತು ಕುಳಿತಂತಹ ವಿಮಾನ ತುಂಬಾನೇ ಅಲುಗಾಡಲು ಶುರು ಮಾಡಿದಾಗ ಪ್ರಯಾಣಿಕರಲ್ಲಿದ್ದ ಆತಂಕ ಇನ್ನೂ ಜಾಸ್ತಿಯಾಗುತ್ತದೆ.
ಇದನ್ನೂ ಓದಿ: ಇಂಥ ಚಿತ್ರ-ವಿಚಿತ್ರ ಮನೆಗಳನ್ನು ನೀವ್ ನೋಡಿರೋದಕ್ಕೆ ಸಾಧ್ಯನೇ ಇಲ್ಲ, ಏನ್ ಡಿಸೈನ್ ಅಂತೀರಾ!
ಹೀಗೆ ಇಲ್ಲಿಯೂ ಸಹ ವಿಮಾನವನ್ನು ಹತ್ತಿ ಕುಳಿತ್ತಿದ್ದ ವ್ಯಕ್ತಿಯ ಕಣ್ಣಿಗೆ ಹೀಗೆ ಒಂದು ರಿಪೇರಿ ಮಾಡುವ ದೃಶ್ಯ ಕಣ್ಣಿಗೆ ಬಿದ್ದಿದೆ. ಅದನ್ನು ನೋಡಿ ವಿಮಾನದಲ್ಲಿ ಕುಳಿತ ಆ ಪ್ರಯಾಣಿಕನ ಭಯ ಇನ್ನಷ್ಟು ಹೆಚ್ಚಾಗಿದೆ ನೋಡಿ.
ವಿಮಾನ ಹತ್ತಿ ಕುಳಿತ್ತಿದ್ದ ಟಿಕ್‌ಟಾಕರ್ ಕಿಟಕಿಯ ಹೊರಗೆ ಕಂಡ ದೃಶ್ಯವೇನು?
ಇಲ್ಲೊಂದು ಘಟನೆ ನಡೆದಿದೆ ನೋಡಿ, ಇದನ್ನು ಯಾರೊಬ್ಬ ಪ್ರಯಾಣಿಕ ನೋಡಿದರೂ ಭಯ ಬೀಳುವುದು ಗ್ಯಾರೆಂಟಿ. ನ್ಯಾಶ್ವಿಲ್ಲೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ಮೊದಲು ವಿಮಾನ ಹತ್ತಿ ಕುಳಿತ್ತಿದ್ದ ಟಿಕ್‌ಟಾಕರ್ ಒಬ್ಬರು ತಮ್ಮ ಕಿಟಕಿಯ ಹೊರಗೆ ನೋಡಿದ ಒಂದು ದೃಶ್ಯದಿಂದ ಒಂದು ಕ್ಷಣ ಗಾಬರಿ ಗೊಂಡಿದ್ದಾರೆ.
ಟೇಕಾಫ್ ಆಗುವ ಕೆಲವೇ ಕ್ಷಣಗಳ ಮೊದಲು ಸ್ಪಿರಿಟ್ ಏರ್‌ಲೈನ್ಸ್ ಉದ್ಯೋಗಿಯೊಬ್ಬರು ವಿಮಾನದ ಒಂದು ರೆಕ್ಕೆಗೆ ಟೇಪ್ ಅಂಟಿಸುತ್ತಿರುವ ದೃಶ್ಯವನ್ನು ವೀಡಿಯೋ ಮಾಡಿ ಪೋಸ್ಟ್ ಮಾಡಿದ ನಂತರ ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ವೀಡಿಯೋ ನೋಡಿದ ನೆಟ್ಟಿಗರು ಹೇಗೆಲ್ಲಾ ಪ್ರತಿಕ್ರಿಯಿಸಿದ್ದಾರೆ ನೋಡಿ..
ಅಲಬಾಮಾ ಮೂಲದ ಈ ಟಿಕ್‌ಟಾಕ್ ಬಳಕೆದಾರರು ತಮ್ಮ ವಿಮಾನದ ಸೀಟಿನ ಕಿಟಕಿಯಿಂದ ಆ ರಿಪೇರಿ ಕೆಲಸವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
"ಇದು ವಾಯುಯಾನ ವಿಮಾನದ ಟೇಪ್ ಅಥವಾ ಬೇರೆ ಏನೂ ಇರಬೇಕು ಎಂಬುದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ, ನೀವು ವಿಮಾನದ ರಿಪೇರಿ ಕೆಲಸಗಳನ್ನು ಜನರು ನಿಮ್ಮನ್ನು ನೋಡಲು ಸಾಧ್ಯವಿಲ್ಲದಂತೆ ಮಾಡಬೇಕು.
ವಿಮಾನದಲ್ಲಿರುವ ಜನರಿಗೆ ಕಾಣುವಂತೆ ರಿಪೇರಿ ಮಾಡುತ್ತೀರಿ. ಆದ್ದರಿಂದಲೇ ನಾನು ಸ್ಪಿರಿಟ್ ಏರ್‌ಲೈನ್ಸ್ ನಲ್ಲಿ ಪ್ರಯಾಣ ಬೆಳೆಸುವುದಿಲ್ಲ" ಎಂದು ಟಿಕ್‌ಟಾಕರ್ ತಮ್ಮ 37 ಸೆಕೆಂಡುಗಳ ವೀಡಿಯೋದಲ್ಲಿ ಹೇಳಿದ್ದಾರೆ.
ಅನೇಕರು ಈ ಕ್ಲಿಪ್ ಅನ್ನು ನೋಡಿ ಆಘಾತಕ್ಕೊಳಗಾಗಿದ್ದರೆ, ಇತರರು ರಿಪೇರಿ ಮಾಡುವವರು ಬಳಸಿದ ಟೇಪ್ ಸಾಮಾನ್ಯವಲ್ಲ ಎಂದು ಹೇಳುವ ಮೂಲಕ ಅಪ್ಲೋಡ್ ಮಾಡಿದವರಿಗೆ ಭರವಸೆ ನೀಡಿದರು.
ಇದು ಸ್ಪೀಡ್ ಟೇಪ್ ಆಗಿದ್ದು, ತಾತ್ಕಾಲಿಕ ಮತ್ತು ಸಣ್ಣ ವಿಮಾನ ದುರಸ್ತಿಗಾಗಿ ವಿನ್ಯಾಸಗೊಳಿಸಲಾದ ಅಲ್ಯೂಮಿನಿಯಂ ಆಧಾರಿತ ಟೇಪ್ ಆಗಿದೆ. ಕೆಲವೊಮ್ಮೆ ಸಾಮಾನ್ಯ ಡಕ್ಟ್ ಟೇಪ್ ಗಳು ಎಂದು ತಪ್ಪಾಗಿ ಭಾವಿಸಬಹುದಾದರೂ, ವಿಮಾನಗಳಲ್ಲಿ ಅವುಗಳ ಬಳಕೆ ಬಹಳ ಸಾಮಾನ್ಯವಾಗಿದೆ. ವಾಯುಯಾನ ತಜ್ಞರ ಪ್ರಕಾರ, ಸ್ಪೀಡ್ ಟೇಪ್ ಗಳು 600 ಮೈಲಿ ವೇಗದ ಗಾಳಿ ಮತ್ತು ತೀವ್ರ ಪರಿಸರ ಬದಲಾವಣೆಗಳನ್ನು ಸಮರ್ಥವಾಗಿ ತಡೆದುಕೊಳ್ಳುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ