ಒಮ್ಮೊಮ್ಮೆ ನಿತ್ಯಜೀವನದಲ್ಲಿ (Daily Routine Life) ನಡೆಯುವಂತಹ ಚಿತ್ರ ವಿಚಿತ್ರ ಘಟನೆಗಳಿಗೆ ಮನುಷ್ಯರೇ ಕಾರಣವೇ ಅಥವಾ ಮನುಷ್ಯರನ್ನು ಪ್ರೇರೇಪಿಸುವ ಅಗೋಚರ ಶಕ್ತಿಗಳು ಕಾರಣವೇ ಎಂಬ ಅನುಮಾನ ಕಾಡುತ್ತದೆ. ಪ್ರಪಂಚದಲ್ಲಿ ನಡೆಯುತ್ತಿರುವ ಕೆಲವೊಂದು ವಿದ್ಯಮಾನಗಳು ಇಂತಹ ಆಲೋಚನೆಗಳನ್ನು ನಮ್ಮ ತಲೆಯಲ್ಲಿ ಹುಟ್ಟುಹಾಕುತ್ತದೆ. ಏಕೆಂದರೆ ಇಲ್ಲಿ ವರದಿಯಾಗಿರುವ ವಿಚಿತ್ರ ಘಟನೆ (Offbeat) ಇದಕ್ಕೆ ಸಾಕ್ಷಿಯಾಗಿದೆ. 34 ರ ಹರೆಯದ ಎಲೋಮ್ ಅಗ್ಬೆಗ್ನಿನೌ ಎಂಬವರು 37,000 ಅಡಿ ಎತ್ತರದಲ್ಲಿ ವಿಮಾನ (Aero plane) ಹಾರಾಟ ನಡೆಸುತ್ತಿದ್ದಾಗ ಅದರ ಬಾಗಿಲು ತೆರೆಯಲು ಯತ್ನಿಸಿದರು ಎಂಬ ಕಾರಣಕ್ಕೆ ಇದೀಗ ಆಕೆಯನ್ನು ಬಂಧಿಸಲಾಗಿದೆ (Woman Arrest) ಎಂದು ವರದಿಯಾಗಿದೆ.
ಈಕೆಯ ಹುಚ್ಚಾಟಕ್ಕೆ ತುರ್ತಾಗಿ ವಿಮಾನವನ್ನು ಭೂಸ್ಪರ್ಶ ಮಾಡಬೇಕಾಗಿ ಬಂದಿದ್ದರಿಂದ ಆಕೆ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಯುಎಸ್ ನ್ಯಾಯಾಲಯ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಎಲೋಮ್ ಇದ್ದಕ್ಕಿದ್ದಂತೆ ಯೇಸುವೇ ನನಗೆ ವಿಮಾನದ ಬಾಗಿಲು ತೆರೆಯುವಂತೆ ಪ್ರೇರೇಪಣೆ ನೀಡಿದ್ದಾರೆ ಎಂದು ತಿಳಿಸಿದ್ದಾಳೆ.
ಟೆಕ್ಸಾಸ್ನ ಹೂಸ್ಟನ್ನಿಂದ ಓಹಿಯೋದ ಕೊಲಂಬಸ್ಗೆ ಪ್ರಯಾಣಿಸುತ್ತಿದ್ದ ನೈಋತ್ಯ ಫ್ಲೈಟ್ 192 ನಲ್ಲಿ ಈ ಘಟನೆ ಸಂಭವಿಸಿದೆ.
ಸಹ ಪ್ರಯಾಣಿಕನಿಗೆ ಹಾನಿ
ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಲೋಮ್ ಇದ್ದಕ್ಕಿದ್ದಂತೆ ಆಸನದಿಂದ ಹಠಾತ್ ಆಗಿ ಎದ್ದುಬಂದು ವಿಮಾನದ ಬಾಗಿಲನ್ನು ತೆರೆಯಲು ಪ್ರಯತ್ನಿಸಿದ್ದಾರೆ. ಇದರಿಂದ ಹತಾಶರಾದ ಆಕೆ ವಿಮಾನದ ತುರ್ತು ಪ್ರವೇಶದ ಬಾಗಿಲನ್ನು ತೆರೆಯುವ ಪ್ರಯತ್ನವನ್ನು ಮಾಡಿದ್ದು ವಿಮಾನದ ಅಧಿಕಾರಿಗಳು, ಪರಿಚಾರಕರು ಆಕೆಯನ್ನು ತಡೆದಿದ್ದಾರೆ.
ಇನ್ನು ಎಲೋಮ್ ಅವರ ಹಠಾತ್ ಕೃತ್ಯದಿಂದ ಬೆದರಿದ ಸಹಪ್ರಯಾಣಿಕನೊಬ್ಬ ಆಕೆ ಬಾಗಿಲು ತೆರೆಯದಂತೆ ತಡೆದಿದ್ದನು. ಆದರೆ ಎಲೋಮ್ ಈತನ ತೊಡೆಯನ್ನು ಕಚ್ಚಿದ್ದಾರೆ ಎಂದು ವರದಿಯಾಗಿದೆ.
ಈ ಸಮಯದಲ್ಲಿ ಎಲೋಮ್ರ ಕೃತ್ಯವನ್ನು ತಡೆಯಲು ಆಕೆಯ ದವಡೆಯನ್ನು ಬೆರಳುಗಳಿಂದ ತಡೆದನು ಎಂದು ವರದಿಯಾಗಿದೆ.
ವಿಮಾನದ ಬಾಗಿಲು ತೆರೆಯಲು ಹರಸಾಹಸ
ನ್ಯಾಯಾಲಯದಲ್ಲಿ ದಾಖಲಾಗಿರುವ ವರದಿಗಳ ಪ್ರಕಾರ ಎಲೋಮ್ ವಿಮಾನದ ಹಿಂಭಾಗಕ್ಕೆ ತೆರಳಿ ಅಲ್ಲಿನ ನಿರ್ಗಮನ ಬಾಗಿಲನ್ನು ದಿಟ್ಟಿಸಿ ನೋಡಿದ್ದು ಈ ಸಮಯದಲ್ಲಿ ವಿಮಾನದಲ್ಲಿದ್ದ ಪರಿಚಾರಕರು ಆಕೆಯನ್ನು ಹಿಡಿದುಕೊಂಡು ಬೇಕಾದರೆ ಶೌಚಾಲಯ ಬಳಸಿ ಇಲ್ಲದಿದ್ದರೆ ಸೀಟಿನ ಮೇಲೆ ಆಸೀನರಾಗಿ ಎಂದು ಎಲೋಮ್ ಅವರಿಗೆ ಸೂಚಿಸಲಾಯಿತು ಎಂದು ವರದಿ ತಿಳಿಸಿದೆ.
ಕಿಟಕಿಯಿಂದ ಹೊರಗಡೆ ನೋಡಬಹುದೇ ಎಂದು ವಿಮಾನದ ಪರಿಚಾರಕಿಯ ಬಳಿ ಎಲೋಮ್ ಕೇಳಿದ್ದು, ಪರಿಚಾರಕಿಯರು ಅದಕ್ಕೆ ಒಪ್ಪಿಗೆ ನೀಡದೇ ಇದ್ದ ಸಂದರ್ಭದಲ್ಲಿ ಎಲೋಮ್ ವಿಮಾನದ ನಿರ್ಗಮನ ಬಾಗಿಲಿನ ಹಿಡಿಕೆಯನ್ನು ಎಳೆಯಲು ಪ್ರಯತ್ನಿಸಿದ್ದಾರೆ ಎಂದು ವರದಿಯಾಗಿದೆ.
ವಿಮಾನದಲ್ಲಿದ್ದ ಪ್ರಯಾಣಿಕರು ಎಲೋಮ್ರ ಕೃತ್ಯವನ್ನು ಗಮನಿಸಿ ತೀವ್ರ ಆಘಾತಕ್ಕೆ ಒಳಗಾದರು ಹಾಗೂ ಸಹ ಪ್ರಯಾಣಿಕನೊಬ್ಬ ಎಲೋಮ್ ಬಾಗಿಲಿನ ಹಿಡಿಕೆಯನ್ನು ಹಿಡಿದುಕೊಂಡು ಬಾಗಿಲು ತೆರೆಯಲು ಪ್ರಯತ್ನಿಸುತ್ತಿರುವುದನ್ನು ತಿಳಿಸಿದನು.
ಈ ಸಮಯದಲ್ಲಿ ಆಕೆಯನ್ನು ತಡೆಯಲು ಪ್ರಯತ್ನಿಸಿದ ಇನ್ನೊಬ್ಬ ಪ್ರಯಾಣಿಕನ ತೊಡೆಗೆ ಎಲೋಮ್ ಕಚ್ಚಿರುವುದಾಗಿ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: Viral News: ಈ ಚೀನಿ ಹುಡುಗಿ ಹೊಟ್ಟೆಯಲ್ಲಿತ್ತು 3 ಕೆಜಿ ಕೂದಲು! ಆಹಾರಕ್ಕಾಗಿ ಹೊಟ್ಟೆಯಲ್ಲಿ ಜಾಗವೇ ಇರಲಿಲ್ವಂತೆ
ಜೀಸಸ್ ವಿಮಾನದ ಬಾಗಿಲು ತೆರೆಯಲು ತಿಳಿಸಿದರು
ತನ್ನ ಪ್ರಯತ್ನಗಳಿಗೆ ತಡೆಯೊಡ್ಡುತ್ತಿರುವುದನ್ನು ನೋಡಿ ಕ್ರೋಧ ಹಾಗೂ ಹತಾಶೆಗೊಳಗಾದ ಎಲೋಮ್ ತಲೆಯನ್ನು ಚಚ್ಚಿಕೊಳ್ಳುತ್ತಾ ದುಃಖಿತಗೊಂಡರು ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ತನ್ನನ್ನು ಜೀಸಸ್ ಓಹಿಯೋಗೆ ಪ್ರಯಾಣಿಸಲು ತಿಳಿಸಿದ್ದು, ವಿಮಾನದ ಬಾಗಿಲನ್ನು ತೆರೆಯಲು ಯೇಸುವೇ ತಿಳಿಸಿದ್ದರು ಎಂಬುದಾಗಿ ಎಲೋಮ್ ಹೇಳಿಕೆ ನೀಡಿದ್ದಾರೆ.
ವಿಮಾನವು ಸುರಕ್ಷಿತವಾಗಿ ಭೂಸ್ಪರ್ಶ
ವಿಮಾನದಲ್ಲಿ ಸಂಭವಿಸಿದ ದಿಢೀರ್ ಅಡಚಣೆಯಿಂದಾಗಿ ವಿಮಾನವು ಲಿಟಲ್ ರಾಕ್ನಲ್ಲಿರುವ ಬಿಲ್ ಮತ್ತು ಹಿಲರಿ ಕ್ಲಿಂಟನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನವು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದ ನಂತರ ಪೊಲೀಸ್ ಅಧಿಕಾರಿಗಳು ಎಲೋಮ್ ಅಗ್ಬೆಗ್ನಿನೌ ಅವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: United Airlines: ಯುನೈಟೆಡ್ ಏರ್ಲೈನ್ಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಮಹಿಳೆ!
ಇನ್ನು ಎಲೋಮ್ ಅವರ ದಾಳಿಗೆ ಒಳಗಾದ ಪ್ರಯಾಣಿಕನಿಗೆ ತುರ್ತು ಚಿಕಿತ್ಸೆಯನ್ನು ನೀಡಲಾಯಿತು. ಎಲೋಮ್ ಪತಿ ಹಾಗೂ ಕುಟುಂಬಸ್ಥರಿಗೆ ತಿಳಿಸದೆಯೇ ಮನೆಯನ್ನು ತೊರೆದು ಮೇರಿಲ್ಯಾಂಡ್ನಲ್ಲಿರುವ ಕುಟುಂಬ ಸ್ನೇಹಿತನನ್ನು ಭೇಟಿಮಾಡಲು ಆಶಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ