Viral News: 13,500 ಅಡಿ ಎತ್ತರದಿಂದ 201 kmh ವೇಗದಲ್ಲಿ ನೆಲಕ್ಕೆ ಬಿದ್ದ ಮಹಿಳೆ: ಬದುಕಿದ್ದು ಹೇಗೆ ಗೊತ್ತಾ?

ಅದೃಷ್ಟವಷಾತ್ ಪ್ರಾಣಕ್ಕೆ ಯಾವುದೇ ಅಪಾಯ ಆಗಿರಲಿಲ್ಲ. ಕೂಡಲೇ ಜೋರ್ಡಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಭಯಾನಕ ಘಟನೆಯಿಂದ ಹೊರ ಬರಲು ಜೋರ್ಡಾನ್ ಅವರಿಗೆ 25 ದಿನಗಳೇ ಬೇಕಾದವು.

ಬದುಕುಳಿದ ಮಹಿಳೆ

ಬದುಕುಳಿದ ಮಹಿಳೆ

  • Share this:
ದೇವರು ಆಯುಷ್ಯ (Life) ನೀಡಿದ್ದರೆ ಆಂತಹ ವ್ಯಕ್ತಿ ಯಾವುದೇ ಅಪಾಯದಲ್ಲಿ ಸಿಲುಕಿದರೂ ಬದುಕಿ ಬರುತ್ತಾರೆ. ಕೆಲವೊಮ್ಮೆ ದುರ್ಘಟನೆಯಲ್ಲಿ  ಪವಾಡದಂತೆ ಜನರು ಬದುಕಿ ಬಂದಿರುವ ಉದಾಹರಣೆಗಳು ನಮ್ಮ ಮುಂದಿದೆ. ಇಂತಹ ಅದೃಷ್ಟವಂತರ (Lucky Persons) ಕಥೆಯನ್ನಾಧರಿಸಿ ಹಲವು ಸಿನಿಮಾ(Cinemas)ಗಳು ತೆರೆಯ ಮೇಲೆ ಬಂದಿದೆ. ಈ ತರಹದ ಚಿತ್ರಗಳಲ್ಲಿ ವ್ಯಕ್ತಿ ಸಾಯಲು ಪ್ರಯತ್ನಿಸಿದರೂ ಆತನಿಗೆ ಸಾವು (Death) ಬರಲ್ಲ. ಇಂದು ನಾವು ನಿಮಗೆ ದೊಡ್ಡ ಅವಘಡದಲ್ಲಿ ಪವಾದ ಸದೃಶ್ಯವಾಗಿ ಮಹಿಳೆ ಬದುಕಿ ಬಂದಿರುವ ಸುದ್ದಿಯನ್ನು ಹೇಳುತ್ತಿದ್ದೇವೆ. ಅಮೆರಿಕಾದ ವರ್ಜೀನಿ (Virginia, US)ಯಾದ ಮಹಿಳೆ 13,500 ಅಡಿ ಎತ್ತರದಿಂದ 201 kmh  ವೇಗದಲ್ಲಿ ಬಿದ್ದ ಮಹಿಳೆ ಬದುಕುಳಿದಿರುವ ಘಟನೆ ನಡೆದಿದೆ. ಸ್ಕೈ ಡೈವಿಂಗ್ (Skydiving) ವೇಳೆ ಪ್ಯಾರಾಚೂಟ್ ಕಾಲಿಗೆ ಸಿಲುಕಿಕೊಂಡಿದ್ದರಿಂದ ಮಹಿಳೆ ಬದುಕುಳಿದಿದ್ದಾರೆ. ಕಳೆದ ವರ್ಷ ನವೆಂಬರ್ ನಂದು ಈ ಘಟನೆ ನಡೆದಿದ್ದು, 35 ವರ್ಷದ ಮಹಿಳೆ ಜೋರ್ಡಾನ್ ಹ್ಯಾಟ್ ಮೇಕರ್ (Jordan Hatmaker) ಸದ್ಯ ಜೀವಂತವಾಗಿದ್ದಾರೆ ಎಂದ್ರೆ ನೀವು ನಂಬಲೇಬೇಕು.

13,500 ಅಡಿ ಎತ್ತರರದಿಂದ ಕೇವಲ 20 ಸೆಕೆಂಡುಗಳಲ್ಲಿ ಮಹಿಳೆ ನೆಲಕ್ಕೆ ಅಪ್ಪಳಿಸಿದ್ದರು. ಎಷ್ಟು ಎತ್ತರರಿಂದ ಕೆಳಗೆ ಬಿದ್ದ ಪರಿಣಾಮ ಜೋರ್ಡಾನ್ ಅವರ ಬೆನ್ನು. ಕಾಲು ಮತ್ತು ಪಾದದ ಭಾಗದಲ್ಲಿ ಮೂಳೆ ಮುರಿತಕ್ಕೆ ಒಳಗಾಗಿದ್ರು. ಇದೀಗ ಸುದೀರ್ಘ ಒಂದು ವರ್ಷದ ಚಿಕಿತ್ಸೆ ಬಳಿಕ ಜೋರ್ಡಾನ್ ಗುಣಮುಖರಾಗಿದ್ದಾರೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿದೆ.

ನೆಲಕ್ಕೆ ಬಿದ್ದಿದ್ದು ಹೇಗೆ ಜೋರ್ಡನ್?

ಸ್ಕೈ ಡೈವಿಂಗ್ ಮಾಡಲು ಜೋರ್ಡಾನ್ ಮುಂದಾಗಿದ್ದರು. ಈ ವೇಳೆ ಅವರು ಬಳಸಿದ್ದ ಪ್ಯಾರಾಚೂಟ್ ಹಗ್ಗ ಕಾಲಲ್ಲಿ ಸಿಲುಕಿಕೊಂಡಿತ್ತು. ಆದ್ದರಿಂದ ಜೋರ್ಡಾನ್ ಅವರಿಗೆ ಪ್ಯಾರಾಚೂಟ್ ಬಿಡಿಸಿಕೊಳ್ಳಲು ವಿಫಲರಾಗಿದ್ರು. ಮತ್ತೆ ಪ್ಯಾರಾಚೂಟ್ ವಿರುದ್ಧ ದಿಕ್ಕು ಅಂದ್ರೆ ಕೆಳಭಾಗದಲ್ಲಿ ಹಾರಲು ಆರಂಭಿಸಿದ್ದರಿದ ಜೋರ್ಡಾನಾ ನೆಲಕ್ಕೆ ಅಪ್ಪಳಿಸಿದ್ದರು.

ಇದನ್ನೂ ಓದಿ: Love Story: ಇದು ಮಾತಿಲ್ಲದ 'ವಿಶೇಷ' ಪ್ರೀತಿ! ಗುಜರಾತ್-ಕರ್ನಾಟಕ ನಡುವಿನ ಪ್ರೇಮಕಥೆಯನ್ನು ನೀವೂ ಓದಿ

ಅದೃಷ್ಟವಷಾತ್ ಪ್ರಾಣಕ್ಕೆ ಯಾವುದೇ ಅಪಾಯ ಆಗಿರಲಿಲ್ಲ. ಕೂಡಲೇ ಜೋರ್ಡಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಭಯಾನಕ ಘಟನೆಯಿಂದ ಹೊರ ಬರಲು ಜೋರ್ಡಾನ್ ಅವರಿಗೆ 25 ದಿನಗಳೇ ಬೇಕಾದವು.

ಗುಣಮುಖಳಾಗಿರುವ ಜೋರ್ಡಾನ್ ಹೇಳೋದೇನು?

ಅಂದು ಎಲ್ಲವೂ ತ್ವರಿತವಾಗಿ ನಡೆಯಿತು. ನಾನು ಅಲ್ಲಿ ಸುತ್ತುತ್ತಾ ಕೆಳಗೆ ಬೀಳುತ್ತಿರುವಾಗ ನನಗೆ ಏನು ಮಾಡಬೇಕು ಎಂಬುವುದು ತೋಚಲಿಲ್ಲ. ನನ್ನ ಜೊತೆ ಏನಾಗುತ್ತಿದೆ ತಿಳಿಯಲಿಲ್ಲ. ಒಂದು ರೀತಿ ಭಯದಲ್ಲಿ ನಾನು ಸಿಲುಕಿದ್ದೆ ಎಂದು ಜೋರ್ಡಾನ್ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

ಮತ್ತೊಮ್ಮೆ  ಸ್ಕೈ ಡೈವ್ ಮಾಡಬೇಕೆಂದ ಜೋರ್ಡಾನ್

ಮೇಲಿಂದ ಕೆಳಗೆ ಬಿದ್ದ ಪರಿಣಾಮ ಜೋರ್ಡಾನ್ ಮೂಳೆಗಳಲ್ಲಿ ಮುರಿತ ಉಂಟಾಗಿತ್ತು. ನಡೆದಾಡಲು ಜೋರ್ಡಾನ್ ಮೂರು ತಿಂಗಳು ಸಮಯ ತೆಗೆದುಕೊಂಡರು. ಇದೀಗ ಗುಣಮುಖರಾಗಿರುವ ಜೋರ್ಡಾನ್ ಮತ್ತೊಮ್ಮೆ ಸ್ಕೈ ಡೈವ್ ಮಾಡುವ ಆಸೆಯನ್ನು ಹೊರ ಹಾಕಿದ್ದಾರೆ.

ಹೆಲಿಕಾಪ್ಟರ್ ಮೂಲಕ ರಕ್ಷಿಸುವ ವೇಳೆ ಜಾರಿ ಬಿದ್ದು ವ್ಯಕ್ತಿ ಸಾವು: ಭಯಾನಕ ದೃಶ್ಯ ಸೆರೆ

ಕೇಬಲ್ ಕಾರ್​ ನಲ್ಲಿ ಸಿಲುಕಿದ್ದ ಪ್ರವಾಸಿಗರನ್ನು ರಕ್ಷಿಸುವ ವೇಳೆ ಮತ್ತೊಬ್ಬರು ಮೃತಪಟ್ಟಿದ್ದಾರೆ. ಹೆಲಿಕಾಪ್ಟರ್​ ಮೂಲಕ ರಕ್ಷಿಸುತ್ತಿದ್ದ ವೇಳೆ ಜಾರಿ ಕೆಳಗೆ ಬಿದ್ದು ಪ್ರಾಣ (Man falls from Helicopter) ಕಳೆದುಕೊಂಡಿದ್ದಾರೆ.

ಇದನ್ನೂ ಓದಿ:  Pakistan: ಕಚ್ಚಾ ಬಾದಾಮ್ ಟ್ಯೂನ್‍ನಲ್ಲಿ ರಂಜಾನ್ ಹಾಡು, ನೆಟ್ಟಿಗರಿಂದ ಟ್ರೋಲ್‌

ವ್ಯಕ್ತಿಯನ್ನು ಐಎಎಫ್ ಎಂಐ17 ಹೆಲಿಕಾಪ್ಟರ್ ಬಳಸಿ ರಕ್ಷಿಸುತ್ತಿದ್ದಾಗ ಹಠಾತ್ ಹಿಡಿತ ತಪ್ಪಿ ಕೆಳಗಿರುವ ಕಲ್ಲಿನ ಮೇಲೆ ವ್ಯಕ್ತಿ ಬಿದ್ದಿದ್ದಾನೆ. ಬಾಬಾ ಬೈದ್ಯನಾಥ ದೇವಾಲಯದ ಸಮೀಪವಿರುವ ತ್ರಿಕುಟ್ ಬೆಟ್ಟಗಳಲ್ಲಿ ರೋಪ್‌ವೇಯಲ್ಲಿ ಕೆಲವು ಕೇಬಲ್ ಕಾರುಗಳು ಪರಸ್ಪರ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟು, ಸುಮಾರು 50 ಜನರು ಸಿಲುಕಿದ್ದರು. ಇವರನ್ನು ರಕ್ಷಿಸುತ್ತಿದ್ದ ವೇಳೆ 3ನೇ ಸಾವಾಗಿದೆ.
Published by:Mahmadrafik K
First published: