ಇತ್ತೀಚಿಗಿನ ಕಾಲದಲ್ಲಿ ವಿಜ್ಞಾನ (Scientist) ಲೋಕವು ತುಂಬಾ ಮುಂದುವರೆದಿದೆ. ನಾನಾ ರೀತಿಯ ಸಂಶೋಧನೆಗಳನ್ನು ಮಾಡುವಲ್ಲಿ ವೈದ್ಯಲೋಕವು ಮುಂದುವರೆದಿದೆ. ಗಂಡಿನಿಂದ ಹೆಣ್ಣಿಗೆ ಅಥವಾ ಹೆಣ್ಣಿನಿಂದ ಗಂಡಿಗೆ ಲಿಂಗವನ್ನು ಬದಲಾಯಿಸಿಕೊಳ್ಳಬಹುದಾಗಿದೆ. ಹಾಗೆಯೇ ಮಂಗಳಮುಖಿಯರು (Transgender) ಕೂಡ ತನ್ನನ್ನು ತಾನು ಸರಿಯಾಗಿ ಮಾಡಿಕೊಳ್ಳುವ ಆಪ್ಷನ್ ಕೂಡ ಬಂದಿದೆ. ಹೀಗೇ ವೈದ್ಯಲೋಕಕ್ಕೇ ಶಾಕ್ ನೀಡುವ ಅದೆಷ್ಟೋ ಕೇಸ್ಗಳು (Case) ಇತ್ತೀಚಿಗಿನ ಕಾಲದಲ್ಲಿ ನಡೆಯುತ್ತಿವೆ. ಅದೇ ರೀತಿಯ ಕೇಸ್ ಇದೀಗ ಇಲ್ಲೊಂದು ನಡೆದಿದೆ. ಆದರೆ, ಇದಕ್ಕೆ ವೈದ್ಯರೇ ಸಾತ್ ನೀಡಿದ್ದಾರೆ.
ಸಾವು ಅನ್ನೋದು ಜೀವಿಗೆ ಕಟ್ಟಿಟ್ಟ ಬುತ್ತಿ. ಅದ್ರಲ್ಲೂ ಇತ್ತೀಚಿಗಿನ ಕಾಲದಲ್ಲಿ ಯಾರು ಯಾವ ವಯಸ್ಸಿಗೆ ಸಾಯುತ್ತಾರೆ ಅಂತ ಹೇಳಲು ಅಸಾಧ್ಯ. ಎಷ್ಟು ಸಣ್ಣ ವಯಸ್ಸಿಗೆಲ್ಲಾ ಹಾರ್ಟ್ ಅಟ್ಯಾಕ್ ಆಗಿ ಸಾಯೋದನ್ನು ಕೇಳಿರುತ್ತೇವೆ ಮತ್ತು ನೋಡಿರುತ್ತೇವೆ. ಕೇವಲ ಹಾರ್ಟ್ ಅಟ್ಯಾಕ್ ಮಾತ್ರವಲ್ಲ, ನಾನಾ ರೀತಿಯ ಕಾಯಿಲೆಗಳು ಅಟ್ಯಾಕ್ ಆಗುತ್ತಲೇ ಇರುತ್ತದೆ. ಮದುವೆ ಆಗಿ ಕೆಲವೇ ದಿನಗಳಲ್ಲಿ ಸತ್ತ ಗಂಡನಿಂದ ಮಗು ಬೇಕು ಅಂದ್ರೆ ಪಡೆಯೋದು ಕಷ್ಟ ಅಲ್ವಾ? ಆದರೆ, ಇದು ಈಸಿ ಎಂಬುದು ಸಾಬೀತು ಪಡಿಸಿ ತೋರಿಸಿದೆ ಇಲ್ಲೊಂದು ಕೇಸ್.
ಗಂಡ ಸತ್ತು 2 ವರ್ಷದ ಬಳಿಕ ಹೆಂಡತಿಗೆ ಮಗು ಆಗಿದ್ಯಂತೆ. ಇದು ಹೇಗೆ ಸಾಧ್ಯ? ಅಂತ ನಿಮಗೆ ಅನಿಸ್ಬೋದು. ಅಥವಾ ಈಕೆ ಇನ್ನೊಂದು ಮದುವೆ ಆದ್ಲಾ ಅಂತೆಲ್ಲಾ ನಿಮಗೆ ಡೌಟ್ ಬರ್ತಾ ಇರಬಹುದು.
ಇದನ್ನೂ ಓದಿ: ಈ ಮಾರ್ಕೆಟ್ನಲ್ಲಿ ನಿಮಗೆ ಬೇಕಾದ ಡಿಸೈನ್ ಬಟ್ಟೆಗಳನ್ನು ಸ್ಟಿಚ್ ಮಾಡಿ ಕೊಡ್ತಾರೆ, ಸಖತ್ ಚೀಪ್ ರೇಟ್!
ಹೇಗೆ ಇದು ಸಾಧ್ಯ?
ಲಾರೆನ್ ಮೆಕ್ಗ್ರೆಗರ್ ಎಂಬ ಮಹಿಳೆಯ ಪತಿ ಕ್ರಿಸ್ 2020ರ ಜುಲೈ ತಿಂಗಳಲ್ಲಿ ಟರ್ಮಿನಲ್ ಬ್ರೈನ್ ಟ್ಯೂಮರ್ನಿಂದ ಸಾವನ್ನಪ್ಪಿದ್ದರು. ಅವರಿಬ್ಬರೂ ತಮಗೊಂದು ಮಗು ಬೇಕೆಂದು ಮದುವೆಯಾದಾಗಿನಿಂದಲೂ ಕನಸು ಕಂಡಿದ್ದರು. ಆದರೆ, ಕ್ರಿಸ್ಗೆ ಬ್ರೈನ್ ಟ್ಯೂಮರ್ ಇರುವುದು ಗೊತ್ತಾದ ನಂತರ ಆತನ ಚಿಕಿತ್ಸೆಯ ಬಗ್ಗೆ ಹೆಚ್ಚು ಗಮನಹರಿಸಬೇಕಾಯಿತು. ಆತ ಗುಣವಾದ ನಂತರ ಮಗುವಿನ ಬಗ್ಗೆ ಯೋಚನೆ ಮಾಡಿದರಾಯಿತು ಎಂದುಕೊಂಡಿದ್ದ ಲಾರೆನ್ಗೆ ಕ್ರಿಸ್ನ ಸಾವು ಭಾರೀ ದೊಡ್ಡ ಆಘಾತ ನೀಡಿತ್ತು.
ಇದೀಗ ಕ್ರಿಸ್ ಸಾವನ್ನಪ್ಪಿ ಸುಮಾರು ಎರಡು ವರ್ಷಗಳ ನಂತರ ಲಾರೆನ್ ಆತನ ಮಗುವಿಗೆ ಜನ್ಮ ನೀಡಿದ್ದಾಳೆ. 2020ರ ಜುಲೈ ತಿಂಗಳಲ್ಲಿ ಸಾವನ್ನಪ್ಪಿದ್ದ ಕ್ರಿಸ್ನ ವೀರ್ಯವನ್ನು ಹೆಪ್ಪುಗಟ್ಟಿಸಿ, ಶೇಖರಿಸಿಟ್ಟಿದ್ದ ಲಾರೆನ್ ಆ ವೀರ್ಯವನ್ನು ಬಳಸಿಕೊಂಡು ಗರ್ಭಿಣಿಯಾಗಿದ್ದರು. ಇದೀಗ ಮುದ್ದಾದ ಮಗುವನ್ನು ಹೆರುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಈ ಮೂಲಕ ತನ್ನ ಮತ್ತು ಕ್ರಿಸ್ನ ಪ್ರೀತಿಯ ಸಂಕೇತವಾದ ಮಗುವನ್ನು ಪಡೆಯುವ ಆಕೆಯ ಕನಸು ನನಸಾಗಿದೆ.
ಇದನ್ನೂ ಓದಿ: 48,500 ವರ್ಷಗಳ ಹಳೆಯ ಜೋಂಬಿ ವೈರಸ್‌ಗೆ ಮರುಜೀವ ನೀಡಿದ ವಿಜ್ಞಾನಿಗಳು!
33 ವರ್ಷದ ಲಾರೆನ್ ಹೊಸ ತಂತ್ರಜ್ಞಾನದ ಸಹಾಯದಿಂದ ತನ್ನ ಮೃತಪಟ್ಟ ಗಂಡನ ಮಗುವಿಗೆ ಜನ್ಮ ನೀಡಿದ್ದಾಳೆ. ವರದಿಗಳ ಪ್ರಕಾರ, ಅವರು ಐವಿಎಫ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಆಕೆ ತನ್ನ ಗಂಡ ಸಾವನ್ನಪ್ಪಿ 9 ತಿಂಗಳಾಗುವವರೆಗೂ ಕಾದಿದ್ದರು. ಗಂಡನ ಸಾವಿನ 9 ತಿಂಗಳ ನಂತರ ಐವಿಎಫ್ ಮೂಲಕ ತನ್ನ ಗಂಡನ ವೀರ್ಯವನ್ನು (Sperm) ಬಳಸಿಕೊಂಡು ಲಾರೆನ್ ಗರ್ಭ ಧರಿಸಲು ನಿರ್ಧರಿಸಿದರು.
ಇದೀಗ ಮೇ 17ರಂದು ಲಾರೆನ್ ತನ್ನ ಮಗ ಸೆಬ್‌ಗೆ ಜನ್ಮ ನೀಡಿದ್ದಾಳೆ. ಸೆಬ್ ಪ್ರತಿದಿನ ಅವನ ತಂದೆಯಂತೆಯೇ ಕಾಣುತ್ತಾನೆ. ಅವನು ಜನಿಸಿದಾಗ ಅವನಿಗೆ ದಪ್ಪವಾದ ಕೂದಲಿತ್ತು. ಆತ ಆಗಲೇ ನೋಡಲು ಕ್ರಿಸ್ನಂತೆಯೇ ಕಾಣುತ್ತಿದ್ದ. ಕ್ರಿಸ್ ಮತ್ತೆ ನಮ್ಮ ಘನ ರೂಪದಲ್ಲಿ ಹುಟ್ಟಿ ಬಂದಿದ್ದಾನೆ ಎಂಬುದರಲ್ಲಿ ನನಗೆ ಯಾವ ಅನುಮಾನವೂ ಇಲ್ಲ ಎಂದು ಲಾರೆನ್ ಹೇಳಿದ್ದಾರೆ. ಹೀಗಾಗಿ ಸತ್ತ ಗಂಡನಿಂದಲೂ ಹೀಗೆ ಮಗುವನ್ನು ಪಡೆದುಕೊಳ್ಳಬಹುದು ಎಂದು ಈ ಸಂಶೋಧನೆಯಿಂದ ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ