ಕೋಳಿ ಮೊಟ್ಟೆ ಇಟ್ಟರೆ ಏನು ಸುದ್ದಿ ಅಂತ ನೀವು ಕೇಳಬಹುದು! ಆದರೆ ಕೋಳಿ ಮೊಟ್ಟೆ ಇಡುವುದೂ ದೊಡ್ಡ ಸುದ್ದಿಯಾಗಿದೆ ಈಗ. ಕೋಳಿಯೊಂದು ಬರೋಬ್ಬರಿ ಆರು ಗಂಟೆಗಳ ಕಾಲ ಮೊಟ್ಟೆ ಇಟ್ಟಿದೆ! ಈ ಘಟನೆ ಪಶುವೈದ್ಯಕೀಯ ತಜ್ಞರು ಸೇರಿದಂತೆ ಕೋಳಿ ಸಾಕಿಸದವರನ್ನು ದಂಗಾಗುವಂತೆ ಮಾಡಿದೆ. ಕೇರಳದ (Kerala) ಆಲಪ್ಪುಳ ಜಿಲ್ಲೆಯ ದಕ್ಷಿಣ ಪಂಚಾಯತ್ನ ಚೆರ್ಕಟ್ಟಿಲ್ ಹೌಸ್ನ ಸಿ ಎನ್ ಬಿಜುಕುಮಾರ್ ಎಂಬುವವರಿಗೆ ಒಂದು ಕೋಳಿ ಸಾಕಿದ್ದರು. ಆ ಕೋಳಿಗೆ ಅವರು ಇಟ್ಟ ಹೆಸರೇ ಚಿನ್ನು. ಸಿ ಎನ್ ಬಿಜುಕುಮಾರ್ ಅವರ ಚಿನ್ನು ಎಂಬ ಕೋಳಿ ಭಾನುವಾರ ಬೆಳಗ್ಗೆ 8.30 ರಿಂದ ಮಧ್ಯಾಹ್ನ 2.30 ರ ನಡುವೆ 24 ಮೊಟ್ಟೆಗಳನ್ನು ಇಟ್ಟಿದೆ! ಅಂದರೆ ಬರೋಬ್ಬರಿ 6 ತಾಸು ಮೊಟ್ಟೆ ಇಟ್ಟಿದೆ (Hen Lays 24 Eggs) ಕೋಳಿ!
ಹೀಗೆ ಸುದೀರ್ಘವಾಗಿ ಮೊಟ್ಟೆ ಇಟ್ಟ ಕೋಳಿ ಪಶು ವೈದ್ಯಕೀಯ ಪರಿಣಿತರನ್ನು ಸಹ ಅಚ್ಚರಿ ಪಡುವಂತೆ ಮಾಡಿದೆ. ಅದಕ್ಕೇ ಹೇಳಿದ್ದು ಈಗ ಕೋಳಿ ಮೊಟ್ಟೆ ಇಟ್ಟಿದ್ದೂ ದೊಡ್ಡ ಸುದ್ದಿ ಅಂತ!
ಫುಲ್ ವೈರಲ್ ಆಯ್ತು! ಅಂದಹಾಗೆ ಚಿನ್ನು ಕೋಳಿ BV380 ಹೈಬ್ರಿಡ್ ವಿಧಕ್ಕೆ ಸೇರಿದೆ. ಭಾನುವಾರ ಬೆಳಗ್ಗೆ ಚಿನ್ನು ಕೋಳಿ ಕುಂಟುತ್ತಿರುವುದನ್ನು ಕಂಡು ಬಿಜು ಅವರು ಕೋಳಿಯ ಕಾಲಿಗೆ ಎಣ್ಣೆ ಹಚ್ಚಿದ್ದರಂತೆ. ಇದರ ನಂತರ ಶೀಘ್ರದಲ್ಲೇ, ಕೋಳಿ ಮೊಟ್ಟೆಗಳನ್ನು ಇಡಲು ಪ್ರಾರಂಭಿಸಿದೆ. ಎಷ್ಟು ಹೊತ್ತಾದರೂ ಮೊಟ್ಟೆ ಇಡುವುದನ್ನು ನಿಲ್ಲಿಸುತ್ತಲೆ ಇಲ್ಲ! ಈ ಸುದ್ದಿ ಬಹಳ ವೇಗವಾಗಿಯೇ ಸುತ್ತಮುತ್ತಲ ಏರಿಯಾಗಳಲ್ಲಿ ವೈರಲ್ ಆಯಿತು. ಜನ ಚಿನ್ನು ಕೋಳಿಯ ಪ್ರಸವ ಪ್ರಕ್ರಿಯೆ ವೀಕ್ಷಿಸಲು ತಂಡೋಪತಂಡವಾಗಿ ಬಿಜುಕುಮಾರ್ ಅವರ ಮನೆಯತ್ತ ಧಾವಿಸಿ ಬಂದರು.
ಹರಡಿದ ನಂತರ ಮನೆಗೆ ಧಾವಿಸಿದ ಕುತೂಹಲದಿಂದ ಸ್ಥಳೀಯರ ಮುಂದೆ ಅದು ಮೊಟ್ಟೆ ಇಡುವುದನ್ನು ಮುಂದುವರೆಸಿತು.
ಏಳು ತಿಂಗಳ ಹಿಂದೆ ಬ್ಯಾಂಕ್ ಸಾಲ ಪಡೆದು ಬಿಜು ಮತ್ತು ಅವರ ಪತ್ನಿ ಮಿನಿ ಒಟ್ಟು 23 ಕೋಳಿಗಳನ್ನು ಖರೀದಿ ಮಾಡಿದ್ದರಂತೆ. ಈ ಕೋಳಿಗಳ ಪೈಕಿ ಚಿನ್ನು ಕೋಳಿಯ ಒಂದಾಗಿತ್ತು. ಖರೀದಿ ಮಾಡುವಾಗ ಚಿನ್ನು ಕೋಳಿ ಇನ್ನೂ 8 ತಿಂಗಳ ಮರಿಕೋಳಿ ಆಗಿತ್ತಂತೆ.
ಪಶು ವೈದ್ಯಕೀಯ ಪರಿಣಿತರಿಗೂ ಸಿಕ್ಕಿಲ್ಲ ಕಾರಣ! ಪಶು ವೈದ್ಯಕೀಯ ಪರಿಣಿತರ ಪ್ರಕಾರ ಕೋಳಿಯೊಂದು ಬರೋಬ್ಬರಿ 6 ಗಂಟೆಗಳ ಕಾಲ ಮೊಟ್ಟೆ ಇಟ್ಟಿರುವುದು ಈ ಘಟನೆಯು ಅಪರೂಪದ ಘಟನೆಯಾಗಿದೆ. ಕೋಳಿ ಇಷ್ಟೊಂದು ಸಮಯ ಮೊಟ್ಟೆ ಇಡಲು ಏನು ಕಾರಣ? ಈಗಲೇ ಹೇಳಿ ಅಂದರೆ ಪಶು ವೈದ್ಯಕೀಯ ಪರಿಣಿತರಿಗೂ ತಿಳಿದಿಲ್ಲವಂತೆ. ವೈಜ್ಞಾನಿಕವಾಗಿ ಅಧ್ಯಯನ ಮಾಡಿದ ನಂತರವೇ ಚಿನ್ನು ಕೋಳಿಯ ಈ ವಿಚಿತ್ರ ವಿದ್ಯಮಾನಕ್ಕೆ ಕಾರಣ ಕಂಡುಹಿಡಿಯಬಹುದು ಎನ್ನುತ್ತಾರೆ ಪಶು ವೈದ್ಯಕೀಯ ಪರಿಣಿತರು.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ