Love Story: ಇದು ಮಾತಿಲ್ಲದ 'ವಿಶೇಷ' ಪ್ರೀತಿ! ಗುಜರಾತ್-ಕರ್ನಾಟಕ ನಡುವಿನ ಪ್ರೇಮಕಥೆಯನ್ನು ನೀವೂ ಓದಿ

ಮೈಸೂರು ಮೂಲದ ಮಹಿಳೆಯೊಬ್ಬರಿಗೆ ವಿಶೇಷ ಚೇತನನಾದ ಪಾಲಂಪುರದ ವ್ಯಕ್ತಿಯೊಬ್ಬನ ಪರಿಚಯ ಸಾಮಾಜಿಕ ಮಾಧ್ಯಮದಲ್ಲಿ ಆಗಿತ್ತು. ಅವರಿಬ್ಬರ ಪರಿಚಯ ಆಗಿ ಕೊನೆಗೆ ಇಬ್ಬರಲ್ಲೂ ಪ್ರೇಮಾಂಕುರವಾಗಿತ್ತು. ಆಗ ಇಬ್ಬರೂ ಒಪ್ಪಿಕೊಂಡು ಈ ವರ್ಷದ ಫೆಬ್ರವರಿಯಲ್ಲಿ ಮದುವೆಯಾಗಲು ನಿರ್ಧರಿಸಿದ್ದರು. ಆದರೆ...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಆರೋಗ್ಯದ (Health) ದೃಷ್ಟಿಯಿಂದ ಸಹಜವಾಗಿರುವವರೇ ಒಮ್ಮೊಮ್ಮೆ ಪಡಬಾರದ ಕಷ್ಟಪಡುವ ಇಂದಿನ ಪರಿಸ್ಥಿತಿಯಲ್ಲಿ ಕಿವಿ ಕೇಳದ (Deaf) ಹಾಗೂ ಮಾತನಾಡಲೂ ಸಹ ಸ್ಪಷ್ಟವಾಗಿ ಬಾರದ (Dumb) ವಿಶೇಷ ಚೇತನ ದಂಪತಿಯೊಂದರ (Special Challenged Couple) ಕಥೆ ಕೇಳಿದಾಗ ಮನ ಕರಗದೆ ಇರಲಾರದು. ಇದು ದೂರದ ಗುಜರಾತ್‌ನಲ್ಲಿ (Gujarat) ನಡೆದ ಘಟನೆಯಾದರೂ ಇದಕ್ಕೆ ಕರ್ನಾಟಕದ (Karnataka) ನಂಟು ಇರುವುದು. ಈ ಕಥೆಯಲ್ಲಿ ಗಂಡ (Husband) ಹಾಗೂ ಹೆಂಡತಿ (Wife) ಇಬ್ಬರೂ ವಿಶೇಷ ಚೇತನರು. ಕಿವಿ ಕೇಳದು ಹಾಗೂ ಮಾತುಗಳನ್ನೂ ಸಹ ಸ್ಪಷ್ಟವಾಗಿ ಮಾತನಾಡಲಾಗದು. ಆದರೂ ಪ್ರೀತಿಗೆ (Love) ಅದ್ಯಾವುದೂ ಅಡ್ಡಿ ಇಲ್ಲ ಅಂತ ತೋರಿಸಿಕೊಟ್ಟಿದ್ದಾರೆ.

   ಸೋಶಿಯಲ್ ಮೀಡಿಯಾದಲ್ಲಿ ಪ್ರೀತಿ

  ಕಳೆದ ವರ್ಷ 29 ವರ್ಷ ಪ್ರಾಯದ ಕರ್ನಾಟಕದ ಮೈಸೂರು ಮೂಲದ ಮಹಿಳೆಯೊಬ್ಬರಿಗೆ ವಿಶೇಷ ಚೇತನನಾದ ಪಾಲಂಪುರದ ವ್ಯಕ್ತಿಯೊಬ್ಬನ ಪರಿಚಯ ಸಾಮಾಜಿಕ ಮಾಧ್ಯಮದಲ್ಲಿ ಆಗಿತ್ತು. ಅವರಿಬ್ಬರ ಪರಿಚಯ ಆಗಿ ಕೊನೆಗೆ ಇಬ್ಬರಲ್ಲೂ ಪ್ರೇಮಾಂಕುರವಾಗಿತ್ತು. ಆಗ ಇಬ್ಬರೂ ಒಪ್ಪಿಕೊಂಡು ಈ ವರ್ಷದ ಫೆಬ್ರವರಿಯಲ್ಲಿ ಮದುವೆಯಾಗಲು ನಿರ್ಧರಿಸಿದ್ದರು.

  ಆಕೆಗೆ ಎರಡನೇ ಮದುವೆ, ಅವನಿಗೆ ಒಂದನೇ ಮದುವೆ!

  ಇದು ಮಹಿಳೆಗೆ ಎರಡನೇ ಮದುವೆಯಾದರೆ, ಇವಳನ್ನು ಮದುವೆಯಾಗಲು ಬಯಸಿದ್ದ ವ್ಯಕ್ತಿಗೆ ಇದು ಮೊದಲ ಮದುವೆಯಾಗಿತ್ತು. ಅದಾಗಲೇ ಮಹಿಳೆಗೆ ನಾಲ್ಕು ವರ್ಷದ ಮಗಳು ಸಹ ಇದ್ದಳು. ಇದೆಲ್ಲವನ್ನು ಒಪ್ಪಿ ಆತ ಇವಳನ್ನು ಮದುವೆಯಾಗಲು ಬಯಸಿದ್ದ.

  ಇದನ್ನೂ ಓದಿ: Viral News: 12 ವರ್ಷ ಮಗನ ತಿಥಿ ಮಾಡಿದ್ದಳು ತಾಯಿ! ಈಗ ಅದೇ ಯುವಕ ಮನೆಗೆ ಬರುತ್ತಿದ್ದಾನೆ!

  ಕುಟುಂಬಸ್ಥರ ನಡುವೆ ಗಲಾಟೆ

  ತದನಂತರ ಪಾಲನ್‌ಪುರದ ಆ ವ್ಯಕ್ತಿ ತನ್ನ ಸ್ನೇಹಿತನೊಂದಿಗೆ ಮೈಸೂರಿಗೆ ಬಂದು ಅಲ್ಲಿಂದ ಈ ಮಹಿಳೆಯನ್ನು ತನ್ನ ಜೊತೆ ಕರೆದುಕೊಂಡು ಪಾಲನ್‌ಪುರಕ್ಕೆ ತೆರಳಿದ್ದ. ಅಲ್ಲಿ ಈ ಜೋಡಿಯು ಮದುವೆಯಾಗಿತ್ತು. ಕಳೆದ ಸೋಮವಾರದಂದು ಈ ವಿಶೇಷ ಚೇತನ ದಂಪತಿಯು ತಮ್ಮ ಒಬ್ಬ ಪರಿಚಯಸ್ಥರ ಮನೆಗೆ ಭೇಟಿ ನೀಡಲು ತೆರಳಿತ್ತು. ಯಾವುದೋ ಒಂದು ಕಾರಣಕ್ಕೆ ಗಂಡನ ಪರಿಚಯಸ್ಥರು ಹಾಗೂ ಮಹಿಳೆ ನಡುವೆ ವಾಗ್ವಾದ ಉಂಟಾಗಿದೆ. ಕೊನೆಗೆ ಮಾತಿಗೆ ಮಾತು ಬೆಳೆದು ಮೈಸೂರು ಮೂಲದ ಮಹಿಳೆಯು ಬೇಸರಿಸಿಕೊಂಡು ಅಲ್ಲಿಂದ ನೇರವಾಗಿ ರೈಲು ನಿಲ್ದಾಣಕ್ಕೆ ಬಂದಿದ್ದಾರೆ.

  ದಿಕ್ಕು ತೋಚದೇ ರೈಲ್ವೆ ನಿಲ್ದಾಣದಲ್ಲಿ ಕುಳಿತ ಮಹಿಳೆ

  ಈ ಸಂದರ್ಭದಲ್ಲಿ ಮಹಿಳೆಗೆ ಏನು ಮಾಡಬೇಕೆಂದು ತೋಚಿಲ್ಲ. ಏಕೆಂದರೆ, ಊರು ಹೊಸದು, ಭಾಷೆಯೂ ಬಾರದು. ಅಂಥದ್ದರಲ್ಲಿ ಅವಳಿಗೆ ಕಿವಿಯೂ ಕೇಳದು ಹಾಗೂ ಮಾತುಗಳೂ ಬಾರದು. ಇದರಿಂದ ಸಾಕಷ್ಟು ದುಖಿತಳಾಗಿದ್ದ ಮಹಿಳೆ ಪ್ಲಾಟ್‌ಫಾರ್ಮ್‌ನಲ್ಲಿ ಬೇಸರದಿಂದ ಕುಳಿತಿದ್ದರು. ಇದನ್ನು ಗಮನಿಸಿದ್ದ ರೈಲು ನಿಲ್ದಾಣದಲ್ಲಿದ್ದ ಒಬ್ಬ ಪ್ರಯಾಣಿಕರು ಅಭಯಂ ಎಂಬ ಸಹಾಯವಾಣಿಗೆ ಕರೆ ಮಾಡಿ ಮಹಿಳೆ ಬಗ್ಗೆ ತಿಳಿಸಿದರು. ಕೂಡಲೇ ಅಭಯಂ ಸಂಸ್ಥೆಯ ಕೌನ್ಸೆಲರ್‌ಗಳು ರೈಲು ನಿಲ್ದಾಣಕ್ಕೆ ಬಂದು ಮಹಿಳೆ ಇರುವ ಸ್ಥಳವನ್ನು ಪತ್ತೆಹಚ್ಚಿದರು.

  ಅಭಯಂ ಕೌನ್ಸೆಲರ್‌ಗಳಿಗೆ ಈಗ ನಿಜವಾದ ಸವಾಲು ಎದುರಾಗಿತ್ತು. ಏಕೆಂದರೆ ಅವಳಿಗೆ ಅಲ್ಲಿನ ಭಾಷೆಯ ಅರಿವಿಲ್ಲ ಹಾಗೂ ಮಾತನಾಡಲೂ ಆಗುತ್ತಿಲ್ಲ. ಮತ್ತೊಂದು ವಿಷಯವೆಂದರೆ ಅವಳು ಬೇಸರಿಸಿಕೊಂಡು ಮನೆ ಬಿಟ್ಟು ಬರುವಾಗ ತನ್ನ ಮೊಬೈಲ್ ಅನ್ನು ಸಹ ತನ್ನೊಡನೆ ತಂದಿರಲಿಲ್ಲ.

  ಹರಸಾಹಸ ಪಟ್ಟು ಗಂಡನನ್ನು ಹುಡುಕಿದ ಅಧಿಕಾರಿಗಳು

  ಕೊನೆಗೆ ಅವರು ಹಾಳೆಯೊಂದರ ಮೇಲೆ ಕೆಲವು ಸಂಕೇತಗಳನ್ನು ಬರೆದು ತನ್ನ ಪತಿಯ ಮೊಬೈಲ್ ನಂಬರ್ ಸಹ ಬರೆದರು. ಆ ಹಾಳೆಯ ಬರಹವನ್ನು ಅರ್ಥಮಾಡಿಕೊಳ್ಳಲು ಕೌನ್ಸೆಲರ್‌ಗಳು ಹರಸಾಹಸ ಪಟ್ಟು ಕೊನೆಗೆ ನಾಲ್ಕು ಗಂಟೆಗಳ ನಂತರ ಅದನ್ನು ಆನ್ಲೈನ್‌ನಲ್ಲಿ ಅನುವಾದಿಸಿ ಅಲ್ಲಿ ಅವರು ಬರೆದಿದ್ದ ಪತಿಯ ಮೊಬೈಲ್ ಸಂಖ್ಯೆಗೆ ವಿಡಿಯೋ ಕರೆ ಮಾಡಿದಾಗ ಎಲ್ಲ ವಿಚಾರವು ತಿಳಿಯಿತು.

  ಇದನ್ನೂ ಓದಿ: OMG... ಇದಪ್ಪಾ ಅದೃಷ್ಟ ಅಂದ್ರೆ, ಆಕಸ್ಮಿಕವಾಗಿ ಲಾಟರಿ ಬಟನ್ ಒತ್ತಿ 75 ಕೋಟಿ ಗೆದ್ದ ಮಹಿಳೆ!

  ಆ ಕೂಡಲೇ ಅವರ ಪತಿ ರೈಲು ನಿಲ್ದಾಣಕ್ಕೆ ಬಂದ. ಈ ಸಂದರ್ಭದಲ್ಲಿ ತನ್ನ ಪತಿಯನ್ನು ನೋಡಿದ ಮಹಿಳೆ ದೀರ್ಘವಾದ ನಿಟ್ಟುಸಿರು ಬಿಟ್ಟರು. ಆಗ ಕೌನ್ಸೆಲರ್ ಇಬ್ಬರೂ ದಂಪತಿಗಳಿಗೆ ಕಿವಿ ಮಾತುಗಳನ್ನು ಹೇಳಿದರು. ಕೊನೆಗೆ ಆ ಮಹಿಳೆಯು ತನ್ನ ಪತಿಯೊಡನೆ ಮರಳುವುದಾಗಿ ಹೇಳಿ ಮತ್ತೆ ಗಂಡನ ಜೊತೆ ಸಂಸಾರ ಮಾಡಲು ಹೆಜ್ಜೆ ಇಟ್ಟಿದ್ದಾರೆ.
  Published by:Annappa Achari
  First published: