ಟಾಯ್ಲೆಟ್​ನಲ್ಲಿ ಮೂತ್ರ ಮಾಡುವಾಗ ಗುಪ್ತಾಂಗಕ್ಕೆ ಕಚ್ಚಿದ ಹಾವು!; ಮುಂದೇನಾಯ್ತು?

ಸಿರಾಪೋಪ್ ಎಂಬುದು ಆತನ ಹೆಸರು. ಸಂಜೆ ವೇಳೆಗೆ ಮನೆಯ ಶೌಚಾಲಯದಲ್ಲಿ ಮೂತ್ರಕ್ಕೆಂದು ತೆರಳಿದ್ದ. ಸ್ವಲ್ಪ ಕತ್ತಲಿತ್ತು. ಲೈಟ್ ಹಾಕೋಣವೆಂದರೆ ಕರೆಂಟ್ ಹೋಗಿತ್ತು. ಹೀಗಾಗಿ, ಆತ ಹಾಗೆಯೇ ಶೌಚಾಲಯಕ್ಕೆ ತೆರಳಿದ್ದ.

news18-kannada
Updated:September 10, 2020, 12:32 PM IST
ಟಾಯ್ಲೆಟ್​ನಲ್ಲಿ ಮೂತ್ರ ಮಾಡುವಾಗ ಗುಪ್ತಾಂಗಕ್ಕೆ ಕಚ್ಚಿದ ಹಾವು!; ಮುಂದೇನಾಯ್ತು?
ಹಾವು ಕಚ್ಚಿದ ವ್ಯಕ್ತಿ
  • Share this:
ರಾತ್ರಿ ವೇಳೆ ಕರೆಂಟ್​ ಹೋದಾಗ ಕತ್ತಲಲ್ಲಿ ಶೌಚಾಲಯಕ್ಕೆ ಹೋಗೋಕೆ ಅನೇಕರಿಗೆ ಭಯವಾಗುತ್ತದೆ. ಇದಕ್ಕೆ ಕಾರಣ ದೆವ್ವ-ಭೂತ ಇರುತ್ತದೆ ಎಂದಲ್ಲ. ಯಾವುದಾದರೂ ಪ್ರಾಣಿ ಇದ್ದು ಬಿಟ್ಟರೆ ಎನ್ನುವ ಕಾರಣಕ್ಕೆ. ಮಳೆಗಾಲದ ಸಂದರ್ಭವಾದರೆ, ಜಿರಲೆ, ಇಲಿ, ಹಾವು, ಚೋಳು ಸೇರಿ ಸಾಕಷ್ಟು ಪ್ರಾಣಿಗಳು ಮನೆ ಸೇರಿ ಬಿಡುತ್ತವೆ. ಕತ್ತಲಲ್ಲಿ ಹೋದರೆ ಅವನ್ನು ನಾವು ಮೆಟ್ಟೋದು ಗ್ಯಾರಂಟಿ. ಇಲಿ ಮತ್ತಿತ್ಯಾದಿ ಪ್ರಾಣಿಗಳಾದರೆ ಹಾಗೆಯೇ ಓಡಿ ಹೋಗುತ್ತವೆ. ಆದರೆ, ಹಾವು-ಚೋಳುಗಳಾದರೆ ನಮಗೆ ಕಚ್ಚಿ ಬಿಡುತ್ತವೆ. ಈಗ ಇಂಗ್ಲೆಂಡ್​ನಲ್ಲೂ ಇದೇ ರೀತಿ ಆಗಿದೆ. ವ್ಯಕ್ತಿಯೋರ್ವ ಶೌಚಕ್ಕೆಂದು ತೆರಳಿದಾಗ ಹಾವು ಕಚ್ಚಿ ಬಿಟ್ಟಿದೆ!

ಸಿರಾಪೋಪ್​ ಎಂಬುದು ಆತನ ಹೆಸರು. ಸಂಜೆ ವೇಳೆಗೆ ಮನೆಯ ಶೌಚಾಲಯದಲ್ಲಿ ಮೂತ್ರಕ್ಕೆಂದು ತೆರಳಿದ್ದ. ಸ್ವಲ್ಪ ಕತ್ತಲಿತ್ತು. ಲೈಟ್​ ಹಾಕೋಣವೆಂದರೆ ಕರೆಂಟ್​ ಹೋಗಿತ್ತು. ಹೀಗಾಗಿ, ಆತ ಹಾಗೆಯೇ ಶೌಚಾಲಯಕ್ಕೆ ತೆರಳಿದ್ದ. ಇನ್ನು, ಗೇಮ್​ ಆಡುತ್ತಾ ಆತ ತನ್ನದೇ ಲೋಕದಲ್ಲಿ ಮುಳುಗಿ ಹೋಗಿದ್ದ.

ಮೂತ್ರ ಮಾಡಲೆಂದಯ ಗುಪ್ತಾಂಗವನ್ನು ಹೊರ ತೆಗೆಯುತ್ತಿದ್ದಂತೆ ನೋವು ಕಾಣಿಸಿಕೊಳ್ಳಲು ಆರಂಭಿಸಿದೆ. ಬಗ್ಗಿ ನೋಡಿದಾಗ ಹಾವು ಆತನ ಮೂತ್ರಾಂಗಕ್ಕೆ ಕಚ್ಚಿ ಬಿಟ್ಟಿತ್ತು. ಈತ ಕಿರುಚುತ್ತ ಓಡಿ ಹೋಗಿದ್ದ. ನಂತರ ಈತನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ನೀಡಿದ ನಂತರದಲ್ಲಿ ಆತನಿಗೆ ಮೂತ್ರಾಂಗದ ಉರಿ ಕೊಂಚ ಕಡಿಮೆ ಆಗಿದೆ.

ಇನ್ನೂ ಈತನಿಗೆ ಕಚ್ಚಿದ ಹಾವು ಟಾಯ್ಲೆಟ್​ನಲ್ಲಿಯೇ ಬಿದ್ದಿತ್ತು. ನಂತರ ಹಾವು ತಜ್ಞರು ಬಂದು ಅದನ್ನು ಹಿಡಿದಿದ್ದಾರೆ. ಕಾಡು ಜಾತಿಯ ಹಾವು ಇದಾಗಿದ್ದು, ತೊಂದರೆ ಏನು ಇಲ್ಲ ಎಂದು ಉರಗ ತಜ್ಞರು ತಿಳಿಸಿದ್ದಾರೆ.
Published by: Rajesh Duggumane
First published: September 10, 2020, 12:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading