ಯಾವುದೇ ಕಂಪನಿ (Company) ಇರಲಿ, ಅದರ ಬೆನ್ನೆಲುಬು ಅಂದರೆ ಅದರ ಕಾರ್ಮಿಕರು (Workers) ಅಥವಾ ಕೆಲಸಗಾರರು. ಕಂಪನಿ ಚೆನ್ನಾಗಿ ಲಾಭವನ್ನು ಸಂಪಾದಿಸುತ್ತಾ ಮುಂದಕ್ಕೆ ಯಶಸ್ವಿಯಾಗಿ ಸಾಗಬೇಕು ಎಂದರೆ ಆ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು (Employs) ತುಂಬಾನೇ ನಿಯತ್ತಾಗಿ ಕೆಲಸ ಮಾಡಬೇಕಾಗುತ್ತದೆ ಮತ್ತು ಆ ಕಂಪನಿಯ ಮಾಲೀಕರು (Owners) ಸಹ ಅವರ ಉದ್ಯೋಗಿಗಳನ್ನು ತುಂಬಾನೇ ಚೆನ್ನಾಗಿ ನೋಡಿಕೊಳ್ಳಬೇಕಾಗುತ್ತದೆ. ಕೆಲವೊಬ್ಬರು ಕಂಪನಿ ಹೇಗಿದ್ದರೂ ಅದಕ್ಕೆ ನಿಷ್ಠರಾಗಿಯೇ ಇರುತ್ತಾರೆ. "ಅನ್ನ ಕೊಟ್ಟ ಸಂಸ್ಥೆ" ಅಂತಾ ಸದಾ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಹೀಗಿದ್ದಾಗಲೂ ಒಂದು ದಿನವೂ ರಜೆ (Leave) ಹಾಕದೇ ಕೆಲಸ ಮಾಡುವವರಂತೂ ಇಲ್ಲವೇ ಇಲ್ಲವೇನೋ? ಆದ್ರೆ ಅಂತಹವರೂ ಇರುತ್ತಾರೆ ಅನ್ನೋದಕ್ಕೆ ಈ ಅಜ್ಜನೇ ಸಾಕ್ಷಿ
ಇಲ್ಲೊಬ್ಬ ಉದ್ಯೋಗಿ ತನ್ನ 70 ವರ್ಷದ ಸುದೀರ್ಘವಾದ ವೃತ್ತಿ ಜೀವನದಲ್ಲಿ ಒಂದು ದಿನವಾದರೂ ತನಗೆ ಹುಷಾರಿಲ್ಲದ ಕಾರಣ ರಜೆ ತೆಗೆದುಕೊಂಡಿಲ್ಲವಂತೆ, ಇದನ್ನು ನೀವು ನಂಬುವುದು ಸ್ವಲ್ಪ ಕಷ್ಟವೇ..? ಏಕೆಂದರೆ ಇತ್ತೀಚಿನ ದಿನಗಳಲ್ಲಿ ಸ್ವಲ್ಪ ನೆಗಡಿ, ಕೆಮ್ಮು ಬಂದರೆ ಸಾಕು ಕೆಲಸಕ್ಕೆ ರಜೆ ಹಾಕಿ ಮನೆಯಲ್ಲಿ ಮಲಗುವ ಜನರು ಇದ್ದಾರೆ. ಕೆಲವರಂತೂ ಆರೋಗ್ಯ ಸರಿ ಇಲ್ಲ ಅಂತಾ ಸುಳ್ಳು ಹೇಳಿ ಕೆಲಸಕ್ಕೆ ರಜೆ ಹಾಕುತ್ತಾರೆ. ಆದ್ರೆ ಇದಕ್ಕೆ ಈ ಅಜ್ಜ ಅಪವಾದ.
ಬ್ರಿಟನ್ನಲ್ಲಿರುವ ಶೂ ತಯಾರಕ ಕಂಪನಿಯು 70 ವರ್ಷಗಳ ಹಿಂದೆ ಒಬ್ಬ ಉದ್ಯೋಗಿಯನ್ನು ಕೆಲಸಕ್ಕೆ ಸೇರಿಸಿಕೊಂಡಿತ್ತು. ಆ ವ್ಯಕ್ತಿ ತನ್ನ ಇಡೀ ಜೀವನವನ್ನೇ ಕಂಪನಿಯ ಕೆಲಸಕ್ಕೆ ಎಂದು ಮೀಸಲಿಟ್ಟು, ಒಂದು ದಿನವೂ ತನಗೆ ಆರೋಗ್ಯ ಸರಿ ಇಲ್ಲ ಅಂತ ರಜೆ ತೆಗೆದುಕೊಂಡಿಲ್ಲವಂತೆ. ಆ ವ್ಯಕ್ತಿಯೇ ಬ್ರೈನ್ ಚೋರ್ಲೆ.
1953ರಲ್ಲಿ ಬ್ರೈನ್ ಚೋರ್ಲೆ ಅವರು ಕ್ಲರ್ಕ್ಸ್ ಶೂಸ್ ಫ್ಯಾಕ್ಟರಿಯಲ್ಲಿ ಕೆಲಸ ಪ್ರಾರಂಭಿಸಿದರು ಮತ್ತು ಅವರು ಆಗ ಕೇವಲ 15 ವರ್ಷ ವಯಸ್ಸಿನ ಹುಡುಗನಾಗಿದ್ದರಂತೆ. ಅವರ ಕೆಲಸದ ಬಗ್ಗೆ ಇದ್ದ ನಿಯತ್ತು ಅವರಿಗೆ ಅದೇ ಕಂಪನಿಯಲ್ಲಿ ದೀರ್ಘಾವಧಿಯವರೆಗೆ ಕೆಲಸ ಮಾಡುವಂತೆ ಮಾಡಿತು. ಈ ವ್ಯಕ್ತಿಯು 15 ವರ್ಷ ವಯಸ್ಸಾಗಿದ್ದಾಗ ಸೌತ್ ವೆಸ್ಟ್ ಇಂಗ್ಲೆಂಡ್ನಲ್ಲಿರುವ ಸೋಮರ್ ಸೆಟ್ನಲ್ಲಿರುವ ಫ್ಯಾಕ್ಟರಿವೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಬ್ರೈನ್ ತಮ್ಮ ಶಾಲೆಯ ಬೇಸಿಗೆ ರಜೆಯ ಸಮಯದಲ್ಲಿ ತಮಗೆ ಒಂದು ಆದಾಯವಿರಲಿ ಎಂದು ಈ ಕೆಲಸವನ್ನು ಶುರು ಮಾಡಿದ್ರಂತೆ. ಆಗ ಬ್ರೈನ್ ತನ್ನ ದುಡಿಮೆಯ ಅರ್ಧದಷ್ಟು ಹಣವನ್ನು ಅವನ ತಾಯಿಗೆ ಮನೆಯ ಖರ್ಚಿಗಾಗಿ ನೀಡುತ್ತಿದ್ದನು. ಇವರು ಕೆಲಸ ಮಾಡುತ್ತಿದ್ದ ಮೊದಲ ಕಂಪನಿ 1980ರಲ್ಲಿ ಕಾರಣಾಂತರಗಳಿಂದ ಮುಚ್ಚಿತು, ಆಗ ಬ್ರೈನ್ಗೆ 50 ವರ್ಷ ಮೇಲ್ಪಟ್ಟು ವಯಸ್ಸಾಗಿತ್ತು.
ಮತ್ತೆ ಅದೇ ಕಂಪನಿ ಸೇರಿದ ಬ್ರೈನ್
1993ರಲ್ಲಿ ಕಂಪನಿಯು ಒಂದು ಶಾಪಿಂಗ್ ಔಟ್ಲೆಟ್ ಅನ್ನು ಶುರು ಮಾಡಿತು, ಆಗ ಬ್ರೈನ್ ಅಲ್ಲಿ ಕೆಲಸ ಮಾಡಲು ಹಿಂತಿರುಗಿದರು . “ನನ್ನ ಕೆಲಸದ ಪ್ರತಿ ಇರುವ ನಿಯತ್ತು ಮತ್ತು ಕಾಳಜಿಯನ್ನು ನೋಡಿ ನನ್ನ ಕಂಪನಿಯ ಮಾಲೀಕರು ಸಹ ನನ್ನ ಕೆಲಸದ ಬಗ್ಗೆ ತುಂಬಾನೇ ಖುಷಿ ಪಡುತ್ತಾರೆ, ನನಗೆ ಇನ್ನೂ ಹೆಚ್ಚು ವರ್ಷಗಳ ಕಾಲ ಇದೇ ಕಂಪನಿಗೆ ಹೀಗೆ ದುಡಿಯಬೇಕೆಂಬ ತುಡಿತ ಇದೆ” ಎಂದು ಬ್ರೈನ್ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ