Viral News: ಕೋವಿಡ್ ಲಸಿಕೆಗೆ ಹೆದರಿ ಹೆಂಡತಿಯ ಆಧಾರ್ ಕಾರ್ಡ್ ಹಿಡಿದು ಮರವೇರಿದ ಭೂಪ!

ತನಗೆ ಕೊರೋನಾ ಲಸಿಕೆ ಹಾಕುತ್ತಾರೆಂಬ ಭಯದಿಂದ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಆಧಾರ್ ಕಾರ್ಡ್​ ಜೊತೆ ಮರ ಹತ್ತಿ ಕುಳಿತ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಹೆಂಡತಿಯ ಆಧಾರ್ ಕಾರ್ಡ್​ ಹಿಡಿದಿದ್ದೇಕೆ? ಎಂದು ಯೋಚಿಸ್ತಿದ್ದೀರಾ?

ಮರ ಹತ್ತಿರುವ ಗಂಡ

ಮರ ಹತ್ತಿರುವ ಗಂಡ

  • Share this:
ಕೊರೋನಾ ಲಸಿಕೆಗೆ ಹೆದರಿ ಮನೆಯನ್ನೇ ಖಾಲಿ ಮಾಡಿ ಓಡಿಹೋದವರಿದ್ದಾರೆ. ಆದರೆ, ಇಲ್ಲೊಬ್ಬ ಇನ್ನೂ ಮುಂದಕ್ಕೆ ಹೋಗಿ ಮರವೇರಿ ಕುಳಿತಿದ್ದಾನೆ. ತಾನೇನೋ ಮರವೇರಿದ , ಸುಮ್ಮನೆ ಮರವೇರಿದನೇ ? ಇಲ್ಲ ಜೊತೆಗೆ ಪತ್ನಿಯ ಆಧಾರ್ ಕಾರ್ಡನ್ನು ಕೂಡ ಇಟ್ಟುಕೊಂಡಿದ್ದ. ತಾನು ಲಸಿಕೆ ಹಾಕಿಸಿಕೊಳ್ಳದಿದ್ದರೆ, ಪತ್ನಿಯೂ ಲಸಿಕೆ ಹಾಕಿಸಿಕೊಳ್ಳಬಾರದು ಎಂಬುವುದು ಅವನ ಹಠ!

ಮಕ್ಕಳಿಗೆ ಚುಚ್ಚುಮದ್ದು ಎಂದರೆ ಭಯವಾಗುವುದು ಸಹಜ. ಮಕ್ಕಳೇನೋ ಸೂಜಿ ಚುಚ್ಚಿಸಿಕೊಳ್ಳಲು ಭಯವಾದರೆ ಅಳುತ್ತಾರೆ, ಕೈಕಾಲು ಬಡಿಯುತ್ತಾರೆ, ತಪ್ಪಿಸಿಕೊಳ್ಳಲು ಅಲ್ಲಲ್ಲಿ ಓಡಾಡುತ್ತಾರೆ. ಹಾಗಾದರೆ ದೊಡ್ಡವರಿಗೆ ಭಯವಾದರೆ ಏನು ಮಾಡುತ್ತಾರೆ? ಒಳಗೊಳಗೆ ಭಯವಾದರೂ, ಅದನ್ನು ತೋರಿಸಿಕೊಳ್ಳದೆ ಕಣ್ಣುಮುಚ್ಚಿ ಸೂಜಿ ಚುಚ್ಚಿಸಿಕೊಳ್ಳುತ್ತಾರೆ ಎನ್ನುತ್ತೀರಾ? ಎಲ್ಲರೂ ಹಾಗಿರುವುದಿಲ್ಲ. ಸೂಜಿಗೆ ಭಯಪಟ್ಟು ಮರವೇರುವ ಭೂಪರೂ ಇರುತ್ತಾರೆ!


ಇದನ್ನೂ ಓದಿ: Hassan Murder: ಹಾಸನದ ಕಾಫಿತೋಟದ ಕೊಲೆ ರಹಸ್ಯ; ಅತ್ತಿದ್ದಕ್ಕೆ ಮಣ್ಣು ಸೇರಿತಾ ಹಸುಗೂಸು?


ಮಧ್ಯಪ್ರದೇಶದ ರಾಜ್‍ಘಡ್ ಜಿಲ್ಲೆಯ ಪಟಂಕಲಾನ್ ಎಂಬ ಹಳ್ಳಿಯಲ್ಲಿ ಅಂತಹ ಘಟನೆ ನಡೆದಿದೆ. ಆ ಹಳ್ಳಿಯಲ್ಲಿ ಒಂದು ದಿನದ ಕೋವಿಡ್ ಲಸಿಕಾ ಶಿಬಿರ ಏರ್ಪಡಿಸಲಾಗಿತ್ತು. ಅಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ವ್ಯಕ್ತಿಯೊಬ್ಬನಿಗೆ ಭಯವಾಗಿ ಮರ ಏರಿಬಿಟ್ಟನಂತೆ.


ತಾನೇನೋ ಮರವೇರಿದ , ಸುಮ್ಮನೆ ಮರವೇರಿದನೇ ? ಇಲ್ಲ ಜೊತೆಗೆ ಪತ್ನಿಯ ಆಧಾರ್ ಕಾರ್ಡನ್ನು ಕೂಡ ಇಟ್ಟುಕೊಂಡಿದ್ದ. ತಾನು ಲಸಿಕೆ ಹಾಕಿಸಿಕೊಳ್ಳದಿದ್ದರೆ, ಪತ್ನಿಯೂ ಲಸಿಕೆ ಹಾಕಿಸಿಕೊಳ್ಳಬಾರದು ಎಂಬುವುದು ಅವನ ಹಠ. ಇಂತಹ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.


ಘಟನೆ ನಡೆದಿದ್ದು ಹೀಗೆ;


ಆರೋಗ್ಯ ಇಲಾಖೆ ಕೋವಿಡ್ ಲಸಿಕೆ ಹಾಕುವ ಶಿಬಿರವನ್ನು ಆ ಹಳ್ಳಿಯಲ್ಲಿ ಆಯೋಜಿಸಿತ್ತು. ಎಲ್ಲಾ ಗ್ರಾಮಸ್ಥರನ್ನು ಲಸಿಕೆ ಹಾಕಿಸಿಕೊಳ್ಳಲು ಶಿಬಿರಕ್ಕೆ ಕರೆಯಲಾಯಿತು. ಅದೇ ಹಳ್ಳಿಯ ಕನ್ವರ್‍ಲಾಲ್ ಎಂಬ ವ್ಯಕ್ತಿಯು ಕೂಡ ತನ್ನ ಪತ್ನಿಯ ಜೊತೆ ಆ ಶಿಬಿರಕ್ಕೆ ಬಂದ. ಆದರೆ ಲಸಿಕೆ ನೀಡುವ ಪ್ರಕ್ರಿಯೆಯನ್ನು ಗಮನಿಸಿದ ಆ ಭೂಪ, ಭಯಗೊಂಡು ತಾನು ಹಾಕಿಸಿಕೊಳ್ಳಲಾರೆ ಎಂದು ಪಟ್ಟು ಹಿಡಿದ. ಬೆದರಿ ಮರವೇರಿದವನು, ಆ ದಿನದ ಶಿಬಿರ ಮುಗಿಯುವ ವರೆಗೂ ಕೆಳಗಿಳಿಯಲೇ ಇಲ್ಲ. ಆತನ ಪತ್ನಿ ಲಸಿಕೆ ಹಾಕಿಸಿಕೊಳ್ಳಲು ಒಪ್ಪಿದ್ದರೂ, ‘ನಾನು ಹಾಕಿಸಿಕೊಳ್ಳದಿರುವಾಗ ನೀನು ಅದು ಹೇಗೆ ಲಸಿಕೆ ಹಾಕಿಸಿಕೊಳ್ಳುತ್ತೀಯೋ ನೋಡೇ ಬಿಡುವೆ’ ಎಂಬಂತೆ, ಮರವೇರುವಾಗ ಆಕೆಯ ಆಧಾರ್ ಕಾರ್ಡನ್ನೂ ಕಿತ್ತೊಯ್ದ.


ಈ ಘಟನೆಯ ಬಗ್ಗೆ ತಿಳಿದ , ಕುಜ್ನೇರ್ ಬ್ಲಾಕ್ ಆರೋಗ್ಯಾಧಿಕಾರಿ ಡಾ. ರಾಜೀವ್ ಆ ಹಳ್ಳಿಗೆ ಭೇಟಿ ನೀಡಿ, ಲಸಿಕೆ ತೆಗೆದುಕೊಳ್ಳುವಂತೆ ಮನವೊಲಿಸಿದ್ದಾರೆ. “ ಆಪ್ತ ಸಮಾಲೋಚನೆಯ ಬಳಿಕ ಲಸಿಕೆಯ ಕುರಿತು ಅವನಲ್ಲಿದ್ದ ಭಯ ದೂರವಾಗಿದೆ. ಹಳ್ಳಿಯಲ್ಲಿ ನಡೆಯಲಿರುವ ಮುಂದಿನ ಲಸಿಕೆ ಶಿಬಿರದಲ್ಲಿ ಕನ್ವರ್‍ಲಾಲ್ ಮತ್ತು ಅವನ ಪತ್ನಿಗೆ ಲಸಿಕೆ ಹಾಕಿಸಲಾಗುವುದು” ಎಂದು ಡಾ. ರಾಜೀವ್ ಇಂಡಿಯಾ ಟುಡೆಗೆ ತಿಳಿಸಿದ್ದಾರೆ.




ಜೂನ್ 21ರಂದು ಭಾರತದಲ್ಲಿ ಒಂದೇ ದಿನ 84 ಲಕ್ಷ ಡೋಸ್ ಲಸಿಕೆಗಳನ್ನು ನೀಡಲಾಯಿತು, ಅಂದು 16.93 ಲಕ್ಷ ಲಸಿಕೆಗಳನ್ನು ನೀಡುವ ಮೂಲಕ ದೇಶದಲ್ಲೇ ಮಧ್ಯ ಪ್ರದೇಶ ಪ್ರಥಮ ಸ್ಥಾನದಲ್ಲಿದೆ. ಆದರೂ ಮಧ್ಯ ಪ್ರದೇಶದಲ್ಲಿ ಲಸಿಕೆ ಅಂಕಿ ಅಂಶಗಳು ನಿರಂತರವಾಗಿ ಹೆಚ್ಚಿಲ್ಲ. ಜೂನ್ 20ರಂದು ಕೇವಲ 692 ಮಂದಿಗೆ ಲಸಿಕೆ ಹಾಕಲಾಯಿತು, ಜೂನ್ 23 ರಂದು 4,842 ಮಂದಿಗೆ ಲಸಿಕೆ ಹಾಕಲಾಯಿತು. ಕನ್ವರ್​ಲಾಲ್ ಪ್ರಕರಣದಿಂದ, ಲಸಿಕೆ ಹಿಂಜರಿಕೆ ಮಧ್ಯಪ್ರದೇಶ ರಾಜ್ಯದಲ್ಲಿ ಇನ್ನೂ ನಿಭಾಯಿಸಬೇಕಾಗಿರುವ ಪ್ರಮುಖ ವಿಷಯ ಎಂಬುದು ಸ್ಪಷ್ಟವಾಗಿದೆ.

Published by:Sushma Chakre
First published: