• Home
  • »
  • News
  • »
  • trend
  • »
  • Viral News: ಮೊದಲ ವಿಮಾನ ಪ್ರಯಾಣದಲ್ಲಿ ಜೀವನಪೂರ್ತಿ ಮರೆಯದ ಸಹಾಯ!

Viral News: ಮೊದಲ ವಿಮಾನ ಪ್ರಯಾಣದಲ್ಲಿ ಜೀವನಪೂರ್ತಿ ಮರೆಯದ ಸಹಾಯ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಷಾ ಅವರು ಈ ಹೃದಯಸ್ಪರ್ಶಿ ಘಟನೆಯನ್ನು ತಮ್ಮ ಲಿಂಕ್ಡಿನ್ ಪ್ರೊಫೈಲ್ ನಲ್ಲಿ ಹಂಚಿಕೊಂಡಿದ್ದಾರೆ. ಅದು ಈಗ ಸಿಕ್ಕಾಪಟ್ಟೆ ವೈರಲ್ ಸಹ ಆಗಿದೆ.

  • News18 Kannada
  • Last Updated :
  • New Delhi, India
  • Share this:

ಆಧುನಿಕ ಯುಗದಲ್ಲಿ ಸಹಾಯ ಅಗತ್ಯವಿರುವವರು ನಮ್ಮ ಕಣ್ಮುಂದೆ ಇದ್ದರೂ ಸಹ ನಾವೆಷ್ಟು ಜನ ಅವರಿಗೆ ಸಹಾಯ ಮಾಡಲು ಮುಂದಾಗುತ್ತೇವೆ ಹೇಳಿ? ತುಂಬಾ ಕಡಿಮೆ ಜನರು ತಮ್ಮ ಕೆಲಸವನ್ನು ಒಂದು ಕ್ಷಣ ಬದಿಗಿಟ್ಟು ಕಣ್ಮುಂದೆ ಇರುವ ಜನರಿಗೆ ಸಹಾಯ (Helping Nature) ಮಾಡುವವರು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಸಹಾಯ ಅವಶ್ಯಕತೆಯಿರುವ ಜನರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡಿದರೆ, ಅವರಿಗೆ ಆಗುವ ಸಂತೋಷ ಮತ್ತು ಅವರ ಮುಖದಲ್ಲಿ ಸಂತೋಷ ನೋಡಿ ನಮಗಾಗುವ ಆ ಆನಂದವನ್ನು ಪದಗಳಲ್ಲಿ ಹೇಳಲು ಸಾಧ್ಯವಾಗುವುದೇ ಇಲ್ಲ. ಇದೇ ರೀತಿಯಾಗಿ ಕಣ್ಮುಂದೆ ಇರುವ ವೃದ್ಧ ದಂಪತಿಗಳಿಗೆ ವಿಮಾನ ನಿಲ್ದಾಣದಲ್ಲಿ ಸಹಾಯ ಮಾಡಿದ್ದಾರೆ ಯುವ ಅನ್ ಸ್ಟಾಪಬಲ್​ ಮುಖ್ಯ ಅಧಿಕಾರಿ ಅಮಿತಾಭ್ ಷಾ (Amitabh Shah).


ವಿಮಾನ ನಿಲ್ದಾಣದಲ್ಲಿ ದಂಪತಿಗಳಿಗೆ ನೆರವಾದ ಅಮಿತಾಭ್ ಷಾ
ಅಮಿತಾಭ್ ಅವರು ವಯಸ್ಸಾದ ದಂಪತಿಗಳಿಗೆ ತಮ್ಮ ಮೊದಲ ವಿಮಾನ ಪ್ರಯಾಣ ಮಾಡಲು ಸಹಾಯ ಮಾಡಿದರು. ಅಷ್ಟೇ ಅಲ್ಲದೇ, ದಂಪತಿಗಳಿಗೆ ತಿಳಿಯದಂತೆ ಅವರಿಗಾಗಿ ಆಹಾರವನ್ನು ಸಹ ಖರೀದಿಸಿದರು. ಷಾ ಅವರು ಈ ಹೃದಯಸ್ಪರ್ಶಿ ಘಟನೆಯನ್ನು ತಮ್ಮ ಲಿಂಕ್ಡಿನ್ ಪ್ರೊಫೈಲ್ ನಲ್ಲಿ ಹಂಚಿಕೊಂಡಿದ್ದಾರೆ. ಅದು ಈಗ ಸಿಕ್ಕಾಪಟ್ಟೆ ವೈರಲ್ ಸಹ ಆಗಿದೆ.


ಸುಸ್ತಾಗಿದ್ದ ದಂಪತಿ
ಅಮಿತಾಭ್ ಷಾ ಅವರು ದಂಪತಿಗಳ ಫೋಟೋವನ್ನು ಪೋಸ್ಟ್ ಮಾಡಿ, ಅವರು ದೆಹಲಿಯಿಂದ ಕಾನ್ಪುರಕ್ಕೆ ಹೋಗುತ್ತಿದ್ದರು. ಉತ್ತರ ಪ್ರದೇಶದ ಕುಗ್ರಾಮದ ವೃದ್ಧ ದಂಪತಿಗಳು ವಿಮಾನ ನಿಲ್ದಾಣದಲ್ಲಿ ಹೆಣಗಾಡುತ್ತಿರುವುದನ್ನು ಗಮನಿಸಿದ್ದಾರೆ. ಕಾನ್ಪುರಕ್ಕೆ ವಿಮಾನ ಹತ್ತುವ ಮೊದಲು ದೆಹಲಿ ವಿಮಾನ ನಿಲ್ದಾಣಕ್ಕೆ ಎಂಟು ಗಂಟೆಗಳ ಬಸ್ ಪ್ರಯಾಣವನ್ನು ಮಾಡಿ ದಂಪತಿಗಳು ಸುಸ್ತಾಗಿದ್ದರು ಎಂದು ಷಾ ಬಹಿರಂಗಪಡಿಸಿದರು.


ಇಂಗ್ಲೀಷ್ ಬರ್ತಿರಲಿಲ್ಲ
"ಬೋರ್ಡಿಂಗ್ ಏರಿಯಾದಲ್ಲಿ ಅವರನ್ನು ನಾನು ಸಂಪೂರ್ಣವಾಗಿ ಅಸಹಾಯಕ ಸ್ಥಿತಿಯಲ್ಲಿರುವುದನ್ನು ನೋಡಿದೆ ಮತ್ತು ಇದು ಅವರ ಮೊದಲ ಬಾರಿಯ ವಿಮಾನ ಪ್ರಯಾಣವಾಗಿತ್ತು ಮತ್ತು ಅವರಿಗೆ ಇಂಗ್ಲಿಷ್ ಅರ್ಥವಾಗುತ್ತಿರಲಿಲ್ಲ. ನಾನು ಅವರ ಬಳಿ ಹೋಗಿ ನನ್ನನ್ನು ಹಿಂಬಾಲಿಸುವಂತೆ ಕೇಳಿಕೊಂಡೆ. ನಾನು ವಿಮಾನಯಾನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಅವರು ಭಾವಿಸಿದ್ದರು" ಎಂದು ಅಮಿತಾಭ್ ಹೇಳಿದ್ದಾರೆ.


ಇದನ್ನೂ ಓದಿ: Positive Story: ಸರ್ಕಾರಿ ಶಾಲೆ ಕಟ್ಟಲು 21 ದಿನಗಳಲ್ಲಿ 60 ಲಕ್ಷ ಸಂಗ್ರಹಿಸಿದ ಸ್ವಾಮೀಜಿ


"ವಿಮಾನದ ಒಳಗೆ, ಅವರು ನನ್ನ ಮುಂದೆ ಕುಳಿತಿದ್ದರು. ಆಂಟಿ ನನ್ನನ್ನು 'ದಯವಿಟ್ಟು ನೀವು ನಮ್ಮ ಫೋಟೋವನ್ನು ತೆಗೆದು ವಾಟ್ಸಾಪ್​ನಲ್ಲಿ ನಮ್ಮ ಮಗಳಿಗೆ ಕಳುಹಿಸಬಹುದೇ, ಆದ್ದರಿಂದ ನಾವು ಸುರಕ್ಷಿತವಾಗಿದ್ದೇವೆ ಎಂದು ಅವಳಿಗೆ ತಿಳಿಯುತ್ತದೆ' ಎಂದಾಗ ನಾನು ಅವರ ಫೋಟೋವನ್ನು ತೆಗೆದುಕೊಂಡು ಅದನ್ನು ಕಳುಹಿಸಿದೆ" ಎಂದು ಹೇಳಿದರು.


ದಂಪತಿಗಳಿಗೆ ಗೊತ್ತಾಗದಂತೆ ಅವರಿಗೆ ಊಟ ನೀಡಿದ ಅಮಿತಾಭ್
ಷಾ ಅವರು ಹಸಿದ ಮತ್ತು ಬಾಯಾರಿದ ಕಾರಣ ಅವರಿಗೆ ಹೇಳದೆ ಜೋಡಿ ಸ್ಯಾಂಡ್ವಿಚ್ ಮತ್ತು ಜ್ಯೂಸ್ ಆನ್ನು ಖರೀದಿಸಿದ್ದರು. "ಗಗನಸಖಿಯು ಆಹಾರವನ್ನು ಬಡಿಸಲು ಬಂದಾಗ, ಅವರು ನಿರಾಕರಿಸಿದರು. ಆದರೆ ಸ್ಪಷ್ಟವಾಗಿ ಅನೇಕ ಗಂಟೆಗಳ ಕಾಲ ಪ್ರಯಾಣಿಸಿದ್ದರಿಂದ ಹಸಿವು ಮತ್ತು ಬಾಯಾರಿಕೆ ಅವರಿಗೆ ಕಾಡುತ್ತಿದ್ದವು. ನಾನು ಗಗನಸಖಿಗೆ ಪನೀರ್ ಸ್ಯಾಂಡ್ವಿಚ್​ಗಳು ಮತ್ತು ಜ್ಯೂಸ್ ಗಳನ್ನು ನೀಡುವಂತೆ ಹೇಳಿದೆ. ಉಚಿತವಾಗಿ ಊಟವನ್ನು ಗೆದ್ದಿದ್ದಾರೆ ಎಂದು ಅವರಿಗೆ ಹೇಳಲು ಹೇಳಿದೆ. ಅವರು ನೋಡದಿದ್ದಾಗ ಖಂಡಿತವಾಗಿಯೂ ಅದಕ್ಕೆ ನಾನು ಹಣವನ್ನು ಪಾವತಿಸಿದೆ" ಎಂದು ಅವರು ಪೋಸ್ಟ್​ನಲ್ಲಿ ಬರೆದಿದ್ದಾರೆ.


ದಯೆ ತೋರಿಸಬೇಕು ಎಂದ ಷಾ
"ನಾವು ವಿಮಾನದಿಂದ ಇಳಿದು ಹೋಗುವಾಗ ಅವರು ಸುಮ್ಮನೆ ನನ್ನನ್ನು ನೋಡಿ ಮುಗುಳ್ನಕ್ಕರು. ನಮಗೆ ಸಿಗುವ ಪ್ರತಿಯೊಂದು ಅವಕಾಶದಲ್ಲೂ ನಾವು ಯಾವಾಗಲೂ ಸಹಾಯ ಮಾಡಬೇಕು. ಜನರ ಮೇಲೆ ದಯೆಯನ್ನು ತೋರಿಸಬೇಕು" ಎಂದು ಷಾ ಅವರು ಹೇಳಿದ್ದಾರೆ.


ಹೃದಯಸ್ಪರ್ಶಿ ವೀಡಿಯೋ ನೋಡಿ ಹೇಳಿದ್ದೇನು ನೆಟ್ಟಿಗರು?
ಈ ಪೋಸ್ಟ್ ನೋಡಿದ ನಂತರ, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಅಮಿತಾಭ್ ಅವರ ದಯೆಯ ಕೃತ್ಯವನ್ನು ಶ್ಲಾಘಿಸಿದ್ದಾರೆ. ಬಳಕೆದಾರರಲ್ಲಿ ಒಬ್ಬರು "ಅಮಿತಾಭ್ ಅವರ ಸಹಾಯ ಒಂದು ಅದ್ಭುತ ಸನ್ನೆ. ನಿಮ್ಮ ಬಗ್ಗೆ ಹೆಮ್ಮೆಯಿದೆ! ಯುವ ಭಾರತೀಯ ಪೀಳಿಗೆಯ ಇಂತಹ ಕೆಲಸಗಳೇ ಹಿರಿಯರನ್ನು ಗೌರವಿಸುವ ನಮ್ಮ ಸಂಸ್ಕೃತಿಯನ್ನು ಬಹಳ ಎತ್ತರಕ್ಕೆ ಕೊಂಡೊಯ್ಯುತ್ತದೆ" ಎಂದು ಹೇಳಿದ್ದಾರೆ.


ಇದನ್ನೂ ಓದಿ: Subsidy For Taxi Car: ಟ್ಯಾಕ್ಸಿ ಕಾರ್ ಖರೀದಿ ಮಾಡೋಕೆ ಸಿಗುತ್ತೆ ಸಹಾಯಧನ! ಹೀಗೆ ಮಾಡಿ ಸಾಕು


ಇನ್ನೊಬ್ಬ ಬಳಕೆದಾರರು "ಅಮಿತಾಭ್ ನೀವು ಒಳ್ಳೆಯ ಕೆಲಸವನ್ನು ಮಾಡಿದ್ದೀರಿ ಮತ್ತು ಅವರ ಮುಖದ ಮೇಲಿನ ಆ ನಗುವಿನಿಂದಲೇ ನಾವು ಅದನ್ನು ನೋಡಬಹುದು" ಎಂದು ಹೇಳಿದ್ದಾರೆ. ಲಿಂಕ್ಡ್ಇನ್ ನಲ್ಲಿ ಈ ಪೋಸ್ಟ್ ಗೆ 24,000 ಕ್ಕೂ ಹೆಚ್ಚು ಲೈಕ್​ಗಳು ಬಂದಿವೆ.

Published by:ಗುರುಗಣೇಶ ಡಬ್ಗುಳಿ
First published: