• Home
  • »
  • News
  • »
  • trend
  • »
  • Viral News: ತಾಳಿ ಕಟ್ಟುವ ವೇಳೆ ಬಯಲಾಯ್ತು ವರನ ಅಸಲಿ ಬಣ್ಣ; ರದ್ದಾಯ್ತು ಮದುವೆ

Viral News: ತಾಳಿ ಕಟ್ಟುವ ವೇಳೆ ಬಯಲಾಯ್ತು ವರನ ಅಸಲಿ ಬಣ್ಣ; ರದ್ದಾಯ್ತು ಮದುವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಕೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಸಹ ನೀಡಿದಳು, ಅವರು ಸ್ಥಳಕ್ಕೆ ಬಂದು ಸಿರ್ಹಿಂದ್ ನಿವಾಸಿ ವರನನ್ನು ಮತೌರ್ ಪೊಲೀಸ್ ಠಾಣೆಗೆ ಕರೆದೊಯ್ದರು.

  • Trending Desk
  • 5-MIN READ
  • Last Updated :
  • Share this:

ಸಾಮಾನ್ಯವಾಗಿ ನಾವು ಈ ಹಳೆಯ ಚಲನಚಿತ್ರಗಳಲ್ಲಿ (old Cinema) ನಟನ ಅಥವಾ ನಟಿಯ ಮದುವೆ (Actress Marriage) ನಡೆಯಬೇಕಾದರೆ, ‘ಈ ಮದುವೆ ನಡೆಯಲ್ಲ, ನಿಲ್ಲಿಸಿ’ ಅಂತ ಒಂದು ಧ್ವನಿ ಜೋರಾಗಿ ಕೇಳಿ ಬಂದು ಅಲ್ಲಿರುವ ಎಲ್ಲಾ ಜನರನ್ನು ಒಂದು ಕ್ಷಣ ಮೂಕರನ್ನಾಗಿ ಮತ್ತು ಆಶ್ಚರ್ಯಪಡುವಂತೆ ಮಾಡುವ ದೃಶ್ಯಗಳನ್ನು ತುಂಬಾನೇ ನೋಡಿರುತ್ತೇವೆ. ಹೌದು, ವರನು ಮೊದಲೇ ಯಾರನ್ನೋ ಪ್ರೀತಿಸಿ, ಅವರನ್ನು ಮದುವೆ (Marriage) ಆಗುತ್ತೇನೆ ಅಂತ ಹೇಳಿ ಮೋಸ ಮಾಡಿ ಇನ್ನೊಬ್ಬಳ ಕುತ್ತಿಗೆಗೆ ತಾಳಿ ಕಟ್ಟುವಾಗ ಆ ಮೋಸಕ್ಕೆ ಒಳಗಾದ ಮಹಿಳೆ ಬಂದು ಮದುವೆ ನಿಲ್ಲಿಸುವಂತಹ ಘಟನೆಗಳು ಸಂಭವಿಸಿರುವಂತಹ ದೃಶ್ಯಗಳು ಸಾಕಷ್ಟಿವೆ. ಹಾಗೆಯೇ ವಧುವಿನ (Bride) ಪ್ರಿಯಕರ ಮದುವೆ ಮಂಟಪಕ್ಕೆ ಬಂದು ‘ಈಕೆಯನ್ನ ನಾನು ಪ್ರೀತಿಸಿದ್ದು, ನಾನು ಮದುವೆಯಾಗುತ್ತೇನೆ’ ಅಂತ ಹೇಳಿಕೊಂಡು ಮದುವೆಯನ್ನೇ ರದ್ದು ಮಾಡಿರುವುದನ್ನು ನಾವೆಲ್ಲಾ ನೋಡಿರುತ್ತೇವೆ.


ಇಂತಹ ಘಟನೆಗಳು ಬರೀ ಸಿನೆಮಾಗಳಲ್ಲಿ ಅಷ್ಟೇ ಸೀಮಿತವಾಗಿರದೆ, ನಿಜ ಜೀವನದಲ್ಲಿಯೂ ಹೀಗೆ ಆಗುತ್ತಿವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಹೀಗೆ ಕೆಲವೊಮ್ಮೆ ಮದುವೆಗಳು ನಡೆಯಬಾರದು ಎಂಬ ಹೊಟ್ಟೆಕಿಚ್ಚಿಗಾಗಿ ಸಹ ದುಡ್ಡು ಕೊಟ್ಟು ಜನರನ್ನು ಕರೆಯಿಸಿ ಈ ರೀತಿಯಾಗಿ ಸುಸೂತ್ರವಾಗಿ ನಡೆಯಬೇಕಿದ್ದ ಮದುವೆಗಳನ್ನು ಹಾಳು ಮಾಡುತ್ತಾರೆ.


ಇತ್ತೀಚೆಗೆ ಮದುವೆಗಳು ಮದುವೆ ಮಂಟಪದಲ್ಲಿಯೇ ಅನೇಕ ರೀತಿಯ ಕಾರಣಗಳಿಗೆ ಮುರಿದು ಬೀಳುತ್ತಿರುವುದನ್ನು ನಾವು ನೋಡುತ್ತಿದ್ದೇವೆ ಅಂತ ಹೇಳಬಹುದು.


viral news groom lover reaches marriage venue stg mrq
ಸಾಂದರ್ಭಿಕ ಚಿತ್ರ


ಮದುವೆ ನಿಲ್ಲಿಸಿದ ವರನ ಪ್ರಿಯತಮೆ


ವರನ ಪ್ರಿಯತಮೆ ಎಂದು ಹೇಳಿಕೊಳ್ಳುವ ಮಹಿಳೆಯೊಬ್ಬಳು ಮೊಹಾಲಿಯಲ್ಲಿ ಅವರ ಮದುವೆ ನಡೆಯುವ ಸ್ಥಳಕ್ಕೆ ಬಂದು ದೊಡ್ಡ ರಾದ್ದಾಂತವನ್ನೇ ಮಾಡಿದ್ದಾಳೆ. ಆನಂತರ ಆ ವರನನ್ನು ಮದುವೆಯಾಗಬೇಕಿದ್ದ ವಧು ಈ ಮದುವೆ ತನಗೆ ಬೇಡ ಅಂತ ಹೇಳಿ ತನ್ನ ಮದುವೆಯನ್ನೆ ರದ್ದುಗೊಳಿಸಿದ ಘಟನೆಯೊಂದು ನಡೆದಿದೆ ನೋಡಿ.


ಪಟಿಯಾಲ ಮೂಲದ ಮಹಿಳೆ ಮತ್ತು ಇಬ್ಬರು ಮಕ್ಕಳ ತಾಯಿಯೊಬ್ಬಳು ಬೇರೆ ಹುಡುಗಿಯೊಂದಿಗೆ ಮದುವೆ ಮಾಡಿಕೊಳ್ಳುತ್ತಿರುವ ವರನು ತನಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ ಮತ್ತು ಅವನು ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದಾನೆ ಎಂದು ಹೇಳಿಕೊಂಡಿದ್ದಾಳೆ.


ಅವರಿಬ್ಬರು ಕಳೆದ ಎಂಟು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ಸಹ ಆ ಮಹಿಳೆ ಹೇಳಿಕೊಂಡಿದ್ದಾಳೆ.


ಇದನ್ನೂ ಓದಿ:  Chinese Students: ಚೀನಾದಲ್ಲಿ ನೆಲದ ಮೇಲೆ ತೆವಳುತ್ತಿರುವ ಕಾಲೇಜು ವಿದ್ಯಾರ್ಥಿಗಳು: ಏನಿದು ವಿಚಿತ್ರ?


ವರನನ್ನು ಠಾಣೆಗೆ ಕರೆದೊಯ್ದ ಪೊಲೀಸರು


ಇದರ ಬಗ್ಗೆ ಆಕೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಸಹ ನೀಡಿದಳು, ಅವರು ಸ್ಥಳಕ್ಕೆ ಬಂದು ಸಿರ್ಹಿಂದ್ ನಿವಾಸಿ ವರನನ್ನು ಮತೌರ್ ಪೊಲೀಸ್ ಠಾಣೆಗೆ ಕರೆದೊಯ್ದರು.


"ನಾನು ಈಗಾಗಲೇ ನನ್ನ ಪತಿಯೊಂದಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ ಮತ್ತು ಇಲ್ಲಿ ಮದುವೆಯಾಗುತ್ತಿರುವ ವರ ಬಹಳ ಸಮಯದಿಂದ ನನ್ನೊಟ್ಟಿಗೆ ವಾಸಿಸುತ್ತಿದ್ದಾನೆ. ಅವರು ನನ್ನ ಮಕ್ಕಳೊಂದಿಗೆ ಸೌಹಾರ್ದಯುತ ಸಂಬಂಧವನ್ನು ಸಹ ಬೆಳೆಸಿಕೊಂಡಿದ್ದಾರೆ. ಆದಾಗ್ಯೂ, ಅವರು ತಾವು ಬೇರೆ ಹುಡುಗಿಯನ್ನು ಮದುವೆಯಾಗುತ್ತಿರುವ ವಿಚಾರಗಳ ಬಗ್ಗೆ ನನಗೆ ಏನೂ ಹೇಳಲಿಲ್ಲ" ಎಂದು ಮಹಿಳೆ ಹೇಳಿದರು.


viral news groom lover reaches marriage venue stg mrq
ಸಾಂದರ್ಭಿಕ ಚಿತ್ರ


ಆ ಮಹಿಳೆಯ ಬಗ್ಗೆ ವರ ಮಾಡಿದ ಆರೋಪಗಳೇನು?


ಏತನ್ಮಧ್ಯೆ, ಮಹಿಳೆ ತನ್ನ ವೈವಾಹಿಕ ಜೀವನದ ಕೆಲವು ಸತ್ಯಗಳನ್ನು ಅವನಿಂದ ಮರೆಮಾಚಿದ್ದಾಳೆ ಎಂದು ವರನು ಸಹ ಆರೋಪಿಸಿದ್ದಾನೆ. "ಅವಳು ಇನ್ನೂ ತನ್ನ ಮೊದಲನೇ ಗಂಡನಿಗೆ ವಿಚ್ಛೇದನ ನೀಡಿಲ್ಲ ಎಂದು ಅವಳು ನನಗೆ ಹೇಳಲಿಲ್ಲ. ಅವಳು ನನಗೆ ಸುಳ್ಳು ಹೇಳಿದಳು ಮತ್ತು ಹೀಗಾಗಿ ನಾನು ಬೇರೊಬ್ಬರನ್ನು ಮದುವೆಯಾಗಲು ನಿರ್ಧರಿಸಿದೆ" ಎಂದು ಅವನು ಪೊಲೀಸರಿಗೆ ತಿಳಿಸಿದನು.


ಇದನ್ನೂ ಓದಿ:  Marriage Cancel: ಮದುವೆ ಮನೆಯಲ್ಲಿ 'ಕೋಳಿ' ಜಗಳ! ಸ್ನೇಹಿತರಿಗೆ ಚಿಕನ್ ಬಡಿಸಿಲ್ಲ ಅಂತ ತಾಳಿ ಕಟ್ಟಲ್ಲ ಎಂದ ವರ!


ವಧುವಿನ ಕುಟುಂಬವು ಈ ವಿಷಯ ತಿಳಿದ ಕೂಡಲೇ ಆ ಮದುವೆಯನ್ನು ರದ್ದುಗೊಳಿಸಿದ್ದಾರೆ. ನಂತರ ಆ ಮದುವೆಯ ವ್ಯವಸ್ಥೆಗಳ ವೆಚ್ಚವನ್ನು ಭರಿಸುವಂತೆ ಆ ವರನನ್ನು ಕೇಳಿದ್ದಾರೆ.


"ನಾವು ಇನ್ನೂ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಸಮಗ್ರ ತನಿಖೆಯ ನಂತರ ನಾವು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ" ಎಂದು ಮತೌರ್ ಠಾಣಾಧಿಕಾರಿ ನವೀನ್ ಪಾಲ್ ಹೇಳಿದ್ದಾರೆ.

Published by:Mahmadrafik K
First published: