HOME » NEWS » Trend » VIRAL NEWS FROM ROADSIDE TEA SELLER TO CAFE CHAIN THIS MBA CHAI WALA YOUNG ENTREPRENEUR INSPIRE YOU STG SCT

MBA Chai Wala: 8000 ರೂ.ನಿಂದ 3 ಕೋಟಿಯ ಬ್ಯುಸಿನೆಸ್; ಈ ಚಾಯ್ ವಾಲಾನ ಸಾಧನೆಗೆ ಮೆಚ್ಚಲೇಬೇಕು!

Success Story: ಅಹಮದಾಬಾದ್​ನಲ್ಲಿ ಎಂಬಿಎ ಓದಬೇಕು ಎನ್ನುವ ಕನಸು ಕಟ್ಟಿಕೊಂಡ ಹುಡುಗನೊಬ್ಬ ಕೊನೆಗೆ ಚಹಾ ಮಾರಿ 3 ಕೋಟಿ ರೂ. ನ ಬ್ಯುಸಿನೆಸ್ ಕಟ್ಟಿ ಸಾಧನೆ ಮಾಡಿದ ಘಟನೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ.

news18-kannada
Updated:February 24, 2021, 7:25 AM IST
MBA Chai Wala: 8000 ರೂ.ನಿಂದ 3 ಕೋಟಿಯ ಬ್ಯುಸಿನೆಸ್; ಈ ಚಾಯ್ ವಾಲಾನ ಸಾಧನೆಗೆ ಮೆಚ್ಚಲೇಬೇಕು!
ಚಾಯ್ ವಾಲಾ ಪ್ರಫುಲ್ ಬಿಲ್ಲೂರ್
  • Share this:
ಜೀವನದಲ್ಲಿ ಕಷ್ಟಗಳು ಬರುವುದು ಸಹಜ. ಆದರೆ ಕಷ್ಟಗಳು ಬಂದವೆಂದು ಕೊರಗಿ ಕುಳಿತುಕೊಳ್ಳುವುದಕ್ಕಿಂತ ಅವುಗಳನ್ನು ಎದುರಿಸಿ ಬೆಳೆಯುವುದೇ ನಿಜವಾದ ಸಾಧನೆ. ಅನೇಕರಿಗೆ ಉನ್ನತ ವ್ಯಾಸಂಗವನ್ನು ಓದಲು ಸಾಧ್ಯವಾಗಿರೋದಿಲ್ಲ. ಅಂತಹವರಿಗೆ ಈ ನೈಜ ಘಟನೆ ಸ್ಪೂರ್ತಿ ತುಂಬುತ್ತದೆ. ಅಹಮದಾಬಾದ್​ನಲ್ಲಿ ಎಂಬಿಎ ಓದಬೇಕು ಎನ್ನುವ ಕನಸು ಕಟ್ಟಿಕೊಂಡ ಹುಡುಗನೊಬ್ಬ ಕೊನೆಗೆ ಚಹಾ ಮಾರಿ 3 ಕೋಟಿ ರೂ. ನ ಬ್ಯುಸಿನೆಸ್ ಕಟ್ಟಿ ಸಾಧನೆ ಮಾಡಿದ ಘಟನೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ.

ಅದು 2017ರ ವರ್ಷ. ಆತನ ಹೆಸರು ಫ್ರಫುಲ್ ಬಿಲ್ಲೂರ್. ಮಧ್ಯಪ್ರದೇಶದ ಆತನಿಗೆ ಅಹಮದಾಬಾದ್ ಐಐಎಂ ಕಾಲೇಜಿನಲ್ಲಿ ಎಂಬಿಎ ಓದಬೇಕು ಎನ್ನುವ ಹಂಬಲವಿತ್ತು. ಆದರೆ ಅದು ಈಡೇರಲಾಗದೇ ಕೊನೆಗೆ ಚಹಾ ಮಾರುವ ಕೆಲಸಕ್ಕೆ ನಿಲ್ಲುತ್ತಾನೆ. ಈ ಕೆಲಸದಲ್ಲಿ ಆತ ಹೇಗೆ ಬೆಳೆದು ಬಂದ? ಆತನ ಲಕ್ಷಗಟ್ಟಲೇ ಹಣ ಸಂಪಾದನೆ ಮಾಡಬೇಕು ಎನ್ನುವ ಆತನ ಕೆಲಸಕ್ಕೆ ಸ್ಪೂರ್ತಿ ಏನು? ಎಲ್ಲವೂ ಇಲ್ಲಿದೆ ನೋಡಿ.

ಆವತ್ತು ಫ್ರಫುಲ್ ಕಣ್ಣಿನಲ್ಲಿ ಇದ್ದಿದ್ದು ಒಂದೇ ಕನಸು. ಅದೇ ಐಐಎಂನಲ್ಲಿ ಎಂಬಿಎ ಮಾಡಬೇಕು ಎನ್ನುವುದು. ಆಗ ತಾನೇ ಕಾಮರ್ಸ್ ಮುಗಿಸಿದ್ದ ಆತ ಒಂದು ಕಂಪನಿಯಲ್ಲಿ ಸೇಲ್ಸ್ಮ್ಯಾನ್ ಆಗಿ ಕೆಲಸಕ್ಕೆ ಸೇರಿದ್ದ. ಅಲ್ಲಿ ಆತನಿಗೆ ಸಿಗುತ್ತಿದ್ದ ಸಂಬಳ ಕೇವಲ 25 ಸಾವಿರ ರೂ. ಇಷ್ಟಕ್ಕೆ ತನ್ನನ್ನು ತಾನು ಸೀಮಿತಗೊಳಿಸದೇ ಎಂಬಿಎ ಓದಬೇಕು ಅಂತ ಕನಸು ಕಾಣುತ್ತಾನೆ. ಹೀಗಾಗಿ ಸೇಲ್ಸ್ಮ್ಯಾನ್ ಕೆಲಸ ಬಿಡುತ್ತಾನೆ.ಎಂಬಿಎಗೆ ಪೂರ್ವಸಿದ್ಧತೆ ಮಾಡಿಕೊಳ್ಳುತ್ತಾನೆ. ಆದರೆ ಎಂಬಿಎ ಪ್ರವೇಶ ಪರೀಕ್ಷೆಯಲ್ಲಿ (CAT) ಪ್ರಫುಲ್ಗೆ ಉತ್ತಮ ಅಂಕಗಳು ಸಿಗುವುದಿಲ್ಲ.

ಇದನ್ನೂ ಓದಿ: ರೋಗನಿರೋಧಕ ಶಕ್ತಿ ಹೆಚ್ಚಿಸಲು ಬಯಸಿದರೆ, ನೆಲ್ಲಿಕಾಯಿ ಸೇವಿಸಿ

ಆತ ಎಂಬಿಎ ಕಾಲೇಜಿನಲ್ಲಿ ಸರಿಯಾಗಿ ಇಂಗ್ಲೀಷ್ ಮಾತನಾಡಬೇಕು ಅಂತ ಇಂಗ್ಲೀಷ್ ಕೋರ್ಸ್ ಕೂಡ ಮಾಡಿದ್ದ. ಆದರೆ ಯಾವುದೇ ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರವೇಶ ಪಡೆಯೋಕೆ ಆತನಿಗೆ ಸಾಧ್ಯವಾಗಲಿಲ್ಲ. ಆದರೆ ಆತನ ಮನೆಯವರು ಯಾವುದಾದರೂ ಕಾಲೇಜಿಗೆ ಪ್ರವೇಶ ಮಾಡಿಸು ಎಂದರೂ ಈತನಿಗೆ ಕೇವಲ ಪ್ರತಿಷ್ಠಿತ ಕಾಲೇಜಿನಲ್ಲಿಯೇ ಎಂಬಿಎಂ ಓದಬೇಕು ಎನ್ನುವ ಹಠವಿತ್ತು.

ಕೊನೆಗೆ ಯಾವುದೇ ಪ್ರತಿಷ್ಠಿತ ಕಾಲೇಜಿನಲ್ಲಿಯೂ ಎಂಬಿಎ ಪ್ರವೇಶ ಸಿಗದೇ ಇದ್ದಾಗ, ತನ್ನ ಎಂಬಿಎ ವ್ಯಾಸಂಗ ಮಾಡಬೇಕು ಎನ್ನುವ ಕನಸನ್ನೇ ಕೈಬಿಟ್ಟ. ಆಗ ತುಂಬಾ ಹತಾಶೆ ಮತ್ತು ಖಿನ್ನತೆ ಆತನನ್ನು ಕಾಡತೊಡಗಿದವು. ಜೀವನದಲ್ಲಿ ಮುಂದೇನು ಎನ್ನುವ ಪ್ರಶ್ನೆ ಕಾಡುತ್ತಿತ್ತು.

ಪ್ರಫುಲ್ ತಲೆಯಲ್ಲಿ ಸಾಕಷ್ಟು ಐಡಿಯಾಗಳು ಓಡಾಡುತ್ತಿದ್ದವು. ಆತ ಇಡೀ ನಗರವನ್ನು ಸುತ್ತಾಡಿ, ಏನು ಮಾಡಬೇಕು ಎನ್ನುವುದನ್ನು ಕಂಡುಕೊಳ್ಳಲು ಪ್ರಯತ್ನಪಟ್ಟ. ಅಲ್ಲದೇ ತಾನೇ ಏನಾದರೂ ಒಂದು ಸ್ವಂತ ಉದ್ಯೋಗ ಆರಂಭಿಸಬೇಕು ಎನ್ನುವ ಆಲೋಚನೆ ಆತನ ತಲೆಗೆ ಬಂದಿತ್ತು. ಇದಕ್ಕೆ ಪೂರಕವಾಗಿ ಮ್ಯಾಕ್ಡೊನಾಲ್ಡ್ ನಲ್ಲಿ ಕೆಲ ಸಮಯ ಕೆಲಸ ಮಾಡಿದ. ಅಲ್ಲಿ ಆತನಿಗೆ ದಿನಕ್ಕೆ ಸಿಗುತ್ತಿದ್ದುದು ಕೇವಲ 300 ರೂಪಾಯಿ ಮಾತ್ರ.ಮ್ಯಾಕ್​ ಡೊನಾಲ್ಡ್​​ನಲ್ಲಿ ಆತ 3 ತಿಂಗಳುಗಳ ಕಾಲ ಕೆಲಸ ಮಾಡಿದ ನಂತರ, ಏನನ್ನಾದರೂ ಮಾಡಬೇಕು ಎನ್ನುವ ಹಂಬಲಕ್ಕೆ ಪೂರಕ ತಯಾರಿ ಮಾಡಿಕೊಂಡಿದ್ದ. ಅಲ್ಲದೇ ಆತ ಯಾವಾಗಲೂ ದೊಡ್ಡದಾಗಿ ಕನಸು ಕಾಣುತ್ತಿದ್ದ. ಚಿಕ್ಕದಾದ ಒಂದು ಸ್ವಂತ ಬ್ಯುಸಿನೆಸ್ ಆರಂಭಿಸಿ ಅದನ್ನೇ ದೊಡ್ಡ ಮಟ್ಟದಲ್ಲಿ ಬೆಳೆಸಬೇಕು ಎನ್ನುವ ಚಾಲೆಂಜ್ ಅನ್ನು ಸ್ವೀಕರಿಸಿದ.

ಆ ದಿನ ಬಂದೇ ಬಿಟ್ಟಿತು. ಅದು ಜುಲೈ 25, 2017. ಪ್ರಫುಲ್ 8000 ರೂ. ಸಾಲದೊಂದಿಗೆ ತನ್ನ ಬ್ಯುಸಿನೆಸ್ ಆರಂಭಿಸಿದ. ಆ ಬ್ಯುಸಿನೆಸ್ ಬೇರೆನೂ ಅಲ್ಲ. ಚಹಾ ಮಾರುವ ಬ್ಯುಸಿನೆಸ್. ತನ್ನ ಟೀ ಸ್ಟಾಲ್ಗೆ 'ಎಂಬಿಎ ಚಾಯ್ ವಾಲಾ' ಎನ್ನುವ ಹೆಸರನ್ನಿಟ್ಟ. ಮೂರುವರೆ ವರ್ಷಗಳ ಕೆಳಗೆ 8000 ರೂಪಾಯಿಯಲ್ಲಿ ಆರಂಭವಾದ ಈ ವ್ಯವಹಾರ, ಇವತ್ತು 3 ಕೋಟಿಗೆ ಬಂದು ನಿಂತಿದೆ ಎಂದರೆ ನೀವು ನಂಬಲೇಬೇಕು.

ತನ್ನ ಬ್ಯುಸಿನೆಸ್ ವಿಭಿನ್ನವಾಗಿ ಇರಬೇಕು ಎಂದು ವಿಭಿನ್ನವಾದ ಪ್ರಯತ್ನಗಳನ್ನು ಮಾಡಿದ. ಮಣ್ಣಿನ ಕಪ್ನಲ್ಲಿ ಗ್ರಾಹಕರಿಗೆ ಚಹಾ ನೀಡೋಕೆ ಶುರು ಮಾಡಿದ. ಅಲ್ಲದೇ ಟೀ ಜೊತೆಗೆ ಟೋಸ್ಟ್ ನೀಡುತ್ತಿದ್ದ. ತಾನು ಈ ಹಿಂದೆ ಕಲಿತ ಇಂಗ್ಲೀಷ್ ಭಾಷೆ ಹೊಸ ಗ್ರಾಹಕರನ್ನು ಸೆಳೆಯೋಕೆ ಸಹಾಯವಾಯಿತು. ಅಲ್ಲದೇ ನೋಡುನೋಡುತ್ತಿದ್ದಂತೆಯೇ, ದಿನಕ್ಕೆ 10,000ಕ್ಕಿಂತಲೂ ಹೆಚ್ಚು ಚಹಾ ಮಾರಾಟ ಆಗೋಕೆ ಶುರುವಾಯಿತು. ಚಹಾ ಬ್ಯುಸಿನೆಸ್ ಪ್ರಫುಲ್ನ ಕೈ ಹಿಡಿದಿತ್ತು.

ಇಲ್ಲಿಯತನಕ ಮನೆಯವರಿಗೆ ಈ ವಿಷಯ ಹೇಳಿರಲಿಲ್ಲ ಪ್ರಫುಲ್. ಆದರೆ ಅದೊಂದಿನ ತನ್ನ ಮನೆಯವರಿಗೆ ಪ್ರಫುಲ್ ಚಹಾ ಮಾರುತ್ತಾನೆ ಎನ್ನುವ ವಿಷಯ ಗೊತ್ತಾಯಿತು, ಅವರಿಗೆ ಇದನ್ನು ಅರಗಿಸಿಕೊಳ್ಳೋಕೆ ಕಷ್ಟವಾಯಿತು. ಆದರೆ ಸಮಯ ಆತನನ್ನು ಈ ರೀತಿ ಮಾಡಿಸಿರಬಹುದು ಎಂದು ಸುಮ್ಮನಾದರು. ಒಳ್ಳೆಯ ಕುಟುಂಬದಿಂದ ಬಂದ ಪ್ರಫುಲ್, ಈ ರೀತಿ ಚಹಾ ಮಾರುವ ನಿರ್ಧಾರಕ್ಕೆ ಬರುವುದು ಸುಲಭ ಆಗಿರಲಿಲ್ಲ. ಅನೇಕ ಸ್ನೇಹಿತರು ಆತನನ್ನು ಕಂಡು ಆವತ್ತು ಕೀಟಲೆ ಮಾಡಿದ್ದರು.

ಚಹಾ ಮಾರುವುದು ಏನು ಪ್ರಫುಲ್ಗೆ​ಗೆ ಸುಲಭ ಕೆಲಸ ಆಗಿರಲಿಲ್ಲ. ಅನೇಕ ಸಮಸ್ಯೆಗಳನ್ನು ಆತ ಎದುರಿಸಿದ. ಕೆಲವು ಗೂಂಡಾಗಳು ಆತನನ್ನು ಆ ಸ್ಥಳದಿಂದ ಬೇರೆ ಕಡೆಗೆ ಸ್ಥಳಾಯಿಸುವಂತೆ ಹೆದರಿಸಿದರು. ಅಲ್ಲದೇ ಪೊಲೀಸರು ಕೂಡ ಈತನಿಗೆ ಸಮಸ್ಯೆ ಮಾಡಿದರು. ಇದನ್ನೆಲ್ಲ ಮೆಟ್ಟಿ ನಿಂತ ಪ್ರಫುಲ್ ಕೊನೆಗೆ ರಸ್ತೆ ಪಕ್ಕ ಟೀ ಮಾರುವುದನ್ನು ಬಿಟ್ಟು ಒಂದು ಸ್ವಂತ ಅಂಗಡಿ ಹಾಕಿದ. ನಂತರ ಬ್ಯುಸಿನೆಸ್ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಹೋಯಿತು. ಇವತ್ತು ಪ್ರಫುಲ್ 3 ಕೋಟಿಯ ಬ್ಯುಸಿನೆಸ್ ನಡೆಸುತ್ತಿದ್ದಾನೆ. ಹೀಗೆ ಅನೇಕರಿಗೆ ಈತ ಸ್ಪೂರ್ತಿಯಾಗಿದ್ದಾನೆ.
Published by: Sushma Chakre
First published: February 24, 2021, 7:25 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories