Viral Video : ‘ರಿಪ್ಪರ್’ ಎಂಬ ಹೆಸರಿನ ಬಾತು ಕೋಳಿ ಮನುಷ್ಯರ ಮಾತನ್ನು ಅನುಕರಣೆ ಮಾಡುತ್ತವೆ; ಅಧ್ಯಯನ

Viral Video of Bird Mimicking Human Voice: ಸಾಮಾನ್ಯವಾಗಿ ಗಿಳಿಗಳು ಮಾತನಾಡುವುದನ್ನು ಕೇಳಿರುತ್ತೇವೆ. ಮನುಷ್ಯರ ಮಾತುಗಳನ್ನು ಅನುಕರಣೆ ಮಾಡುವುದರಲ್ಲಿ ಅವುಗಳದ್ದು ಎತ್ತಿದ ಕೈ. ಆದರೆ ಗಿಳಿ ಮಾತ್ರವಲ್ಲ, ಬಾತು ಕೋಳಿ ಮನುಷ್ಯರಂತೆ ಕೆಟ್ಟ ಮಾತುಗಳನ್ನು ಆಡಬಲ್ಲದು ಎಂದರೆ ನಂಬುತ್ತೀರಾ?

ಬಾತುಕೋಳಿಯ ವೈರಲ್​ ವಿಡಿಯೋ

ಬಾತುಕೋಳಿಯ ವೈರಲ್​ ವಿಡಿಯೋ

  • Share this:
Viral Video: ಮಸ್ಕ್ ಬಾತುಕೋಳಿಗೂ , ಗಿಳಿಗಳು, ಯುರೋಪಿಯನ್ ಸ್ಟಾರ್ಲಿಂಗ್‍ಗಳು , ಮೈನಾ ಹಕ್ಕಿಗಳು ಮತ್ತು ಬಡ್ಜಿರೀಗಾರ್‌ಗಳಂತೆ ಧ್ವನಿಗಳನ್ನು ಕಲಿಯುವ ಸಾಮಥ್ರ್ಯ ಇದೆ ಎಂಬುವುದು ಅಧ್ಯಯನ ಒಂದರಿಂದ ತಿಳಿದು ಬಂದಿದೆ. ಸಾಮಾನ್ಯವಾಗಿ ಗಿಳಿಗಳು ಮಾತನಾಡುವುದನ್ನು ಕೇಳಿರುತ್ತೇವೆ. ಮನುಷ್ಯರ ಮಾತುಗಳನ್ನು ಅನುಕರಣೆ ಮಾಡುವುದರಲ್ಲಿ ಅವುಗಳದ್ದು ಎತ್ತಿದ ಕೈ. ಆದರೆ ಗಿಳಿ ಮಾತ್ರವಲ್ಲ, ಬಾತು ಕೋಳಿ ಮನುಷ್ಯರಂತೆ ಕೆಟ್ಟ ಮಾತುಗಳನ್ನು ಆಡಬಲ್ಲದು ಎಂದರೆ ನಂಬುತ್ತೀರಾ?

ನಂಬುವುದು ಬಿಡಿ, ಆ ಮಾತನ್ನು ಯಾರಾದರೂ ಕೇಳಿದರೆ ಅದನ್ನು ತಮಾಷೆ ಎಂದುಕೊಳ್ಳಬಹುದು. ಆದರೆ ಅದು ತಮಾಷೆ ಅಲ್ಲ ನಿಜ ಎನ್ನುತ್ತಿದೆ ಅಧ್ಯಯನವೊಂದು. ಲೀಡೆನ್ ವಿಶ್ವ ವಿದ್ಯಾನಿಲಯ ಮತ್ತು ಆಸ್ಟ್ರೇಲಿಯಾದ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ, ಕೆಲವೊಂದು ಜಲ ಪಕ್ಷಿಗಳು ಮನುಷ್ಯರು ಮನುಷ್ಯರ ಧ್ವನಿಗಳನ್ನು ಅನುಕರಣೆ ಮಾಡಲು ಮತ್ತು ಇನ್ನು ಕೆಲವು ಬಾಗಿಲು ಬಡಿಯುವಂತಹ ಶಬ್ಧಗಳನ್ನು ಅನುಕರಣೆ ಮಾಡಲು ಕಲಿತಿವೆ ಎಂಬುವುದು ತಿಳಿದು ಬಂದಿದೆ.

ಟಿಡ್‍ಬಿಂಬಿಲ್ಲ ನೇಚರ್ ರಿಸರ್ವ್‍ನಲ್ಲಿ ಬೆಳೆದಿರುವ ಕಸ್ತೂರಿ ಬಾತುಕೋಳಿಯೊಂದು (ಮಸ್ಕ್ ಡಕ್ ) ‘ಯೂ ಬ್ಲಡಿ ಫೂಲ್’ ಎಂಬ ಮಾತನ್ನು ಮರು ಉಚ್ಚಾರ ಮಾಡುವ ಆಡಿಯೋ ಕ್ಲಿಪ್ ಒಂದಿದೆ. ಆ ಕಸ್ತೂರಿ ಬಾತು ಕೋಳಿಗೆ ರಿಪ್ಪರ್ ಎಂದು ಹೆಸರಿಡಲಾಗಿದ್ದು, ಅದರ ಆರೈಕೆ ಮಾಡುವವರಲ್ಲಿ ಯಾರೋ ಒಬ್ಬರು ‘ಯೂ ಬ್ಲಡಿ ಫೂಲ್’ ಎಂದು ಹೇಳಿದ್ದನ್ನು ಕೇಳಿಸಿಕೊಂಡಿರುವ ಅದು, ಅನುಕರಣೆ ಆರಂಭಿಸಿರಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ. ಮತ್ತೊಂದು ಧ್ವನಿ ಮುದ್ರಿಕೆಯಲ್ಲಿ, ಕಸ್ತೂರಿ ಬಾತು ಕೋಳಿ ಬಾಗಿಲು ತೆಗೆಯುವ ಮತ್ತು ಹಾಕುವ ಧ್ವನಿ ಅನುಕರಣೆ ಮಾಡವುದನ್ನು ಕೇಳಿಸಿಕೊಳ್ಳಬಹುದು. ಆಸಕ್ತದಾಯಕ ವಿಷಯವೆಂದರೆ, ಎರಡೂ ಅನುಕರಣೆಗಳನ್ನು ಮಿಲನದ ಪ್ರದರ್ಶನದಲ್ಲಿ ಮಾಡಲಾಯಿತು.

ಇದನ್ನೂ ಓದಿ: Video Viral: ಹುಡುಗಿಯರ ಒಳಉಡುಪೇ ಈತನ ಟಾರ್ಗೆಟ್! ಕಳ್ಳ ಕದ್ದಿರುವ ಅಂಡರ್​ವೇರ್ ಸಂಖ್ಯೆ ತಿಳಿದರೆ ಬೆಚ್ಚಿ ಬಿಳೋದು ಪಕ್ಕಾ!

ಮಸ್ಕ್ ಬಾತುಕೋಳಿಗೂ , ಗಿಳಿಗಳು, ಯುರೋಪಿಯನ್ ಸ್ಟಾರ್ಲಿಂಗ್‍ಗಳು , ಮೈನಾ ಹಕ್ಕಿಗಳು ಮತ್ತು ಬಡ್ಜಿರೀಗಾರ್‍ಗಳಂತೆ ಧ್ವನಿಗಳನ್ನು ಕಲಿಯುವ ಸಾಮಥ್ರ್ಯ ಇದೆ ಎಂಬುವುದು ಈ ಅಧ್ಯಯನ ತಿಳಿದು ಬಂದಿದೆ.

ಇಂತಹ ಫಲಿತಾಂಶವನ್ನು ಹೊರಗೆ ಹಾಕಿರುವ ಪಕ್ಷಿ ಸಂಶೋಧನೆ ಇದೊಂದೇ ಅಲ್ಲ. ಸಿಡ್ನಿಯಲ್ಲಿರುವ ಜುಟ್ಟು ಗಿಣಿಗಳು (ಕಾಕಟೂ) ಕೂಡ ಒಂದನ್ನೊಂದು ಅನುಕರಣೆ ಮಾಡುವುದು ಧ್ವನಿ ಮುದ್ರಣವಾಗಿದೆ.ಇನ್ನು ಕಸ್ತೂರಿ ಬಾತುಕೋಳಿ ರಿಪ್ಪರ್ ಬಗೆಗಿನ ಅಧ್ಯಯನದ ಬಗ್ಗೆ ಹೇಳುವುದಾದರೆ, ಆ ಜಲ ಪಕ್ಷಿಯು ಪುನರಾವರ್ತಿತ ಸರಣಿ ಧ್ವನಿಗಳನ್ನು ಹೊರಹಾಕಿದೆ.

ಇದನ್ನೂ ಓದಿ: Viral Video: ವಿಡಿಯೋ ಕಾಲ್‌ನಲ್ಲಿ ಕುರ್ಚಿ ಮುರಿದು ಫಜೀತಿಗೀಡಾದ ಮಹಿಳೆ; ನಗೆಗಡಲಲ್ಲಿ ತೇಲಿದ ನೆಟ್ಟಿಗರು

“ಶಿಳ್ಳೆ-ಕಿಕ್, ಪಾದಗಳನ್ನು ನೀರಿಗೆ ಹೊಡೆಯುವುದರಿಂದ ಉತ್ಪತ್ತಿಯಾಗುವ ಒಂದು ನಾನ್ ವೋಕಲ್ ಘಟಕವನ್ನು ಹೊಂದಿರುತ್ತದೆ, ಅದರ ನಂತರ ಎರಡು ವಿಭಿನ್ನ ಧ್ವನಿ ಘಟಕಗಳು: ಒಂದು ಮೃದು ಕಡಿಮೆ ಆವರ್ತನದ ಧ್ವನಿಯ ನಂತರ ಒಂದು ಹೆಚ್ಚು ಶಬ್ಧವುಳ್ಳ ಶಿಳ್ಳೆ” ಎಂದು ಸಂಶೋಧಕರು ಆನ್‍ಲೈನ್‍ನಲ್ಲಿ ಮೇಲ್ ಮೂಲಕ ತಿಳಿಸಿದ್ದಾರೆ.
“ಬಾತುಕೋಳಿಯು ಹೊರ ಹಾಕುತ್ತಿರುವ ಧ್ವನಿಯು ಬಹಳ ಅತ್ಯಾಧುನಿಕತೆಯನ್ನು ಸೂಚಿಸುತ್ತದೆ ಮತ್ತು ಧ್ವನಿ ಉತ್ಪಾದನಾ ಕಾರ್ಯತ0ತ್ರದ ಮೇಲೆ ಹೊಂದಿಕೊಳ್ಳಬಲ್ಲ ನಿಯಂತ್ರಣವೂ ಇದೆ” ಎಂದು ಅವರು ಅಧ್ಯಯನದ ಕುರಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Published by:Sharath Sharma Kalagaru
First published: