Viral News: ಈ ನಾಯಿ 3 ಸೆಕೆಂಡ್ ಮಾಡಿದ ಅವಾಂತರಕ್ಕೆ ಕುಟುಂಬಕ್ಕೆ ಬಿತ್ತು ಭಾರೀ ದಂಡ!

ಒಂದು ಕುಟುಂಬದವರಿಗೆ ಪೊಲೀಸರು ದಂಡ ವಿಧಿಸಿದ ರಶೀದಿ ಬಂದಿದೆ. ಆ ರಶೀದಿಯನ್ನು ತೆರೆದು ನೋಡಿದಾಗ ಅವರಿಗೆ ದೊಡ್ಡ ಆಘಾತವಾಗಿದೆ ಎಂದು ಹೇಳಬಹುದು. ಏಕೆಂದರೆ ಆ ದಂಡವನ್ನು ಕಾರನ್ನು ತುಂಬಾನೇ ವೇಗವಾಗಿ ಓಡಿಸಿದ್ದಕ್ಕೆ ವಿಧಿಸಲಾಗಿತ್ತು.

ವೈರಲ್ ಫೋಟೋ

ವೈರಲ್ ಫೋಟೋ

  • Share this:
ಯಾರಿಗೆ ತಾನೇ ತಮ್ಮ ವಾಹನದ (Vehicle) ಮೇಲೆ ಪೊಲೀಸರು ವಿಧಿಸುವ ದಂಡವನ್ನು (Police Fine) ನೋಡಲು ಇಷ್ಟವಾಗುತ್ತದೆ ಹೇಳಿ..? ನಾವೆಲ್ಲಾದರೂ ರಸ್ತೆಯಲ್ಲಿ ಸಿಸಿಟಿವಿ ಕ್ಯಾಮೆರಾ (CCTV Camera) ಇದೆಯೋ ಇಲ್ಲವೋ ಎಂದುಕೊಂಡು ನೋಡಿ ನಮ್ಮ ವಾಹನದ ವೇಗವನ್ನು (Vehicle Speed) ಹೆಚ್ಚಿಸಿಕೊಳ್ಳುತ್ತೇವೆ. ಕೆಲವೊಮ್ಮೆ ಪೊಲೀಸರು ಆ ರಸ್ತೆಯಲ್ಲಿ ದ್ವಿಚಕ್ರ ವಾಹನಗಳನ್ನು (Two Wheelers) ಅಡ್ಡಗಟ್ಟಿ ಹೆಲ್ಮೆಟ್ (Helmet) ಮತ್ತು ಡ್ರೈವಿಂಗ್ ಲೈಸೆನ್ಸ್ (Driving License) ಅನ್ನು ಚೆಕ್ ಮಾಡುತ್ತಿದ್ದಾರೆ ಎಂದು ಗೊತ್ತಾದರೆ ಸಾಕು, ಆ ಪೊಲೀಸರು ವಿಧಿಸುವ ದಂಡವನ್ನು ತಪ್ಪಿಸಿಕೊಳ್ಳಲು ಬೇರೆ ರಸ್ತೆ(New Way)ಗಳನ್ನು ಹುಡುಕುತ್ತೇವೆ.

ಒಟ್ಟಿನಲ್ಲಿ ಪೊಲೀಸರು ಹಾಕಬಹುದಾದ ಎಲ್ಲಾ ರೀತಿಯ ದಂಡವನ್ನು ತಪ್ಪಿಸಿಕೊಳ್ಳಲು ಸದಾ ಮೈಯೆಲ್ಲಾ ಕಣ್ಣಾಗಿ ವಾಹನ ಚಲಾಯಿಸುತ್ತಾ ಇರುತ್ತೇವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಅದರಲ್ಲೂ ನಿಮ್ಮ ಕಾರನ್ನು ಅಥವಾ ದ್ವಿಚಕ್ರ ವಾಹನವನ್ನು ಬೇರೆಯವರು ಓಡಿಸುತ್ತಿದ್ದು, ವಾಹನ ನಿಮ್ಮ ಮಾಲೀಕತ್ವದ ಹೆಸರಿನ ಮೇಲೆ ಇದ್ದು, ಆ ದಂಡ ನಿಮ್ಮ ವಿಳಾಸಕ್ಕೆ ಬಂದರೆ ಆ ಒಂದು ಸುದ್ದಿಯನ್ನು ಸುಲಭವಾಗಿ ಜೀರ್ಣಿಸಿಕೊಳ್ಳುವುದಕ್ಕೆ ಆಗುವುದೇ ಇಲ್ಲ.

ಮನೆಗೆ ಬಂದ ದಂಡದ ರಶೀದಿ

ಇಂತಹದೇ ಒಂದು ಘಟನೆ ಈಗ ಜರ್ಮನಿಯಲ್ಲಿ ನಡೆದಿದ್ದು, ಒಂದು ಕುಟುಂಬದವರಿಗೆ ಪೊಲೀಸರು ದಂಡ ವಿಧಿಸಿದ ರಶೀದಿ ಬಂದಿದೆ. ಆ ರಶೀದಿಯನ್ನು ತೆರೆದು ನೋಡಿದಾಗ ಅವರಿಗೆ ದೊಡ್ಡ ಆಘಾತವಾಗಿದೆ ಎಂದು ಹೇಳಬಹುದು. ಏಕೆಂದರೆ ಆ ದಂಡವನ್ನು ಕಾರನ್ನು ತುಂಬಾನೇ ವೇಗವಾಗಿ ಓಡಿಸಿದ್ದಕ್ಕೆ ವಿಧಿಸಲಾಗಿತ್ತು.

ಇದನ್ನೂ ಓದಿ:  Australia: ಅಪರೂಪದ ಬಿಳಿ ಕಾಂಗರೂ ಪತ್ತೆ..! ಫೊಟೋ ವೈರಲ್

ಆ ಜರ್ಮನಿಯ ಕುಟುಂಬವು ಕಾರಿನ ಸ್ಟೇರಿಂಗ್ ಹಿಡಿದು ಅವರ ಮನೆಯ ನಾಯಿ ಕುಳಿತಿದ್ದ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಆದರೆ ದಂಡ ಮಾತ್ರ ಆ ಕಾರಿನ ಒಡೆಯನ ಹೆಸರಿಗೆ ಬಂದಿದೆ. ಆ ಫೋಟೋದಲ್ಲಿ ನಾಯಿ ಕುಳಿತು ಕಾರನ್ನು ಓಡಿಸುತ್ತಿದೆ ಮತ್ತು ಇದಕ್ಕೆ 50 ಯೂರೋ ದಂಡವನ್ನು ವಿಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇಲ್ಲಿ ಪ್ರಶ್ನೆ ಕಾಡುತ್ತಿದ್ದುದ್ದು ಈ ನಾಯಿ ಹೇಗೆ ಹೆದ್ದಾರಿ ಮೇಲೆ ಕಾರನ್ನು ಓಡಿಸಿಕೊಂಡು ಹೋಯಿತು ಅಂತ.

ಕಾರ್ ಸ್ಟೇರಿಂಗ್ ಹಿಡಿದು ಕುಳಿತ ನಾಯಿ

ನಾವು ಈ ಹಿಂದೆ ಸಹ ಈ ನಾಯಿಗಳು ಕಾರಿನಲ್ಲಿ ಕುಳಿತ್ತಿದ್ದಂತಹ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಬಾರಿ ನೋಡಿದ್ದೇವೆ. ಆದರೆ ಕಾರಿನ ಸ್ಟೇರಿಂಗ್ ಹಿಡಿದು ಕುಳಿತಿರುವ ಫೋಟೋ ಮತ್ತು ಇಂತಹ ಒಂದು ದಂಡವನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇವೆ ಅಂತಾನೆ ಹೇಳಬಹುದು.

ಆದರೆ ಇಲ್ಲಿ ನಡೆದಿದ್ದು ಏನಪ್ಪಾ ಎಂದರೆ ಕಾರು ಓಡಿಸುತ್ತಿದ್ದವರು ಬೇರೆಯವರು, ಆದರೆ ಸೀಟ್ ಬೆಲ್ಟ್ ಹಾಕಿರದ ನಾಯಿ ಚಂಗನೆ ಪಕ್ಕದ ಚಾಲಕರ ಸೀಟಿನಲ್ಲಿರುವವರ ಮಡಿಲಿಗೆ ಹಾರಿ ಕುಳಿತುಕೊಂಡಿದೆ ಮತ್ತು ಕಾರು ವೇಗವಾಗಿರುವುದರಿಂದ ದಂಡ ವಿಧಿಸುವ ಸಲುವಾಗಿ ಕ್ಲಿಕ್ಕಿಸುವ ಫೋಟೋದಲ್ಲಿ ನಾಯಿ ಸ್ಟೇರಿಂಗ್ ಹಿಡಿದು ಕಾರು ಓಡಿಸುತ್ತಿರುವ ಹಾಗೆ ಬಂದಿದೆ ಎಂದು ತಿಳಿದುಬಂದಿದೆ.

ಫೋಟೋ ಅಸಲಿ ಸತ್ಯ ಏನು?

“ಆದರೂ ಈ ಫೋಟೋ ಮಾತ್ರ ಸತ್ಯವಾದದ್ದು” ಎಂದು ಕಾರಿನ ಮಾಲೀಕರ ಅಳಿಯ ಹೇಳಿದ್ದು, “ನಾಯಿಗಳು ಕಾರಿನಲ್ಲಿ ಕುಳಿತಾಗ ಅವುಗಳ ಸುರಕ್ಷತೆಗಾಗಿ ಸೀಟ್ ಬೆಲ್ಟ್ ಇರುತ್ತದೆ. ಆದರೆ ಅವತ್ತು ನನ್ನ ಮಾವ ಅದಕ್ಕೆ ಸೀಟ್ ಬೆಲ್ಟ್ ಹಾಕದೇ ಮರೆತು ಹೋಗಿದ್ದು ಮತ್ತು ಅದು ಹಾರಿ ಬಂದು ಚಾಲಕರ ಮಡಿಲಲ್ಲಿ ಬಂದು ಕುಳಿತದ್ದು ಇಷ್ಟೆಲ್ಲಾ ಗೊಂದಲ ಸೃಷ್ಟಿಗೆ ಕಾರಣವಾಯಿತು” ಎಂದು ಕಾರಿನ ಮಾಲೀಕರ ಅಳಿಯರೊಬ್ಬರು ಹೇಳಿದರು.

ಇದನ್ನೂ ಓದಿ:  Viral Video: ಇರ್ಫಾನ್ ಖಾನ್ ಓ ಹೊ ಹೊ ಹೊ ಹಾಡಿಗೆ ವಧುನಿನ ಸಖತ್ ಡ್ಯಾನ್ಸ್..!

“ಈ ನಾಯಿಯು ಟ್ರಾಫಿಕ್ ಸಿಗ್ನಲ್ ಬಳಿ ಇರುವ ಸಿಸಿಟಿವಿ ಕ್ಯಾಮೆರಾ ಫೋಟೋ ಕ್ಲಿಕ್ಕಿಸುವ ಸಮಯಕ್ಕೆ ಸರಿಯಾಗಿ ಚಂಗನೆ ಹಾರಿ ನನ್ನ ಮಾವನ ಮಡಿಲಲ್ಲಿ ಬಂದು ಕುಳಿತಿದೆ. ಅದರಲ್ಲೂ ಒಂದು ನಗುವ ಸಂಗತಿಯೆಂದರೆ ಈ ನಾಯಿ ಬಂದು ಕುಳಿತಿದ್ದು ಕೇವಲ 3 ಸೆಕೆಂಡುಗಳ ಕಾಲ ಮಾತ್ರ” ಎಂದು ಅಳಿಯ ಹೇಳಿದರು.
Published by:Mahmadrafik K
First published: