HOME » NEWS » Trend » VIRAL NEWS CUSTOMER LEAVES TIP 400 TIMES BIGGER THAN PRICE OF HIS BILL AND SAYS YOU GUYS WORK HARD TO STAFF STG SCT

Viral News: ಊಟದ ಬಿಲ್​ಗಿಂತ 400 ಪಟ್ಟು ಹೆಚ್ಚು ಹಣ ನೀಡಿದ ಗ್ರಾಹಕ; ರೆಸ್ಟೋರೆಂಟ್ ಮಾಲೀಕ ಮೂರ್ಛೆ ಹೋಗೋದೊಂದೇ ಬಾಕಿ!

ತಿಂಡಿ ಆರ್ಡರ್ ಮಾಡಿದ ಗ್ರಾಹಕರೊಬ್ಬರು, ತಮ್ಮ ತಿಂಡಿಗಿಂತ 400 ಪಟ್ಟು ಹೆಚ್ಚು ಹಣವನ್ನು ಟಿಪ್ಸ್ ನೀಡಿದ್ದಾರೆ. ಈ ಮೂಲಕ ರೆಸ್ಟೋರೆಂಟ್ ಮಂದಿಗೆ ಪರೋಕ್ಷವಾಗಿ ಕೋವಿಡ್ ವೇಳೆ ಸಹಾಯ ಮಾಡಿದ್ದಾರೆ.

Trending Desk
Updated:June 25, 2021, 11:22 AM IST
Viral News: ಊಟದ ಬಿಲ್​ಗಿಂತ 400 ಪಟ್ಟು ಹೆಚ್ಚು ಹಣ ನೀಡಿದ ಗ್ರಾಹಕ; ರೆಸ್ಟೋರೆಂಟ್ ಮಾಲೀಕ ಮೂರ್ಛೆ ಹೋಗೋದೊಂದೇ ಬಾಕಿ!
ಬಿಲ್
  • Share this:

ಲಾಕ್‍ಡೌನ್, ಕೋವಿಡ್-19 ಕಾರಣ ಇಡೀ ವಿಶ್ವದಾದ್ಯಂತ ರೆಸ್ಟೋರೆಂಟ್ ಉದ್ಯಮ ಸಂಪೂರ್ಣ ಕುಸಿದಿದೆ. ಎಷ್ಟೋ ಹೋಟೆಲ್‍ಗಳು, ರೆಸ್ಟೋರೆಂಟ್‍ಗಳು ನಷ್ಟ ಅನುಭವಿಸಿದ ಕಾರಣ ಮುಚ್ಚಲ್ಪಟ್ಟಿವೆ. ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡು ಜೀವನ ಸಾಗಿಸುವುದು ಕಷ್ಟವಾಗುತ್ತಿದೆ. ಆದರೆ ಇದೀಗ ಸರ್ಕಾರ ಕೋವಿಡ್ ಕಡಿಮೆಯಾಗಿರುವ ಕಾರಣ ವ್ಯಾಪಾರ ಮಾಡಲು ಆನ್‍ಲೈನ್ ಡೆಲಿವರಿ ಸೇರಿದಂತೆ ನಾನಾ ರೀತಿಯಲ್ಲಿ ಅವಕಾಶ ನೀಡಿದೆ. ಆ ಕಾರಣ ಗ್ರಾಹಕರ ಬಾಯಿರುಚಿಯನ್ನು ತಣಿಸಲು ರೆಸ್ಟೋರೆಂಟ್‍ಗಳು ತಯಾರಾಗಿವೆ. ಹಾಗಾಗಿ ಎಷ್ಟು ದೂರ ಕ್ರಮಿಸಿಯಾದರೂ ಗ್ರಾಹಕರ ಸೇವೆ ಮಾಡುವ, ಇಷ್ಟಪಟ್ಟಿದ್ದನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡುತ್ತಿವೆ.


ಈ ಮಧ್ಯೆ ಅಮೆರಿಕದಲ್ಲೊಂದು ಘಟನೆ ನಡೆದಿದೆ. ತಿಂಡಿ ಆರ್ಡರ್ ಮಾಡಿದ ಗ್ರಾಹಕರೊಬ್ಬರು, ತಮ್ಮ ತಿಂಡಿಗಿಂತ 400 ಪಟ್ಟು ಹೆಚ್ಚು ಹಣವನ್ನು ಟಿಪ್ಸ್ ನೀಡಿದ್ದಾರೆ. ಈ ಮೂಲಕ ರೆಸ್ಟೋರೆಂಟ್ ಮಂದಿಗೆ ಪರೋಕ್ಷವಾಗಿ ಕೋವಿಡ್ ವೇಳೆ ಸಹಾಯ ಮಾಡಿದ್ದಾರೆ.



ಗ್ರಾಹಕರೊಬ್ಬರು ನ್ಯೂ ಹ್ಯಾಂಪ್‍ಶೈರ್ನ‌ ಲಂಡನ್‍ಡೇರಿಯ ಸ್ಟಂಬಲ್ ಇನ್ ಬಾರ್ ಮತ್ತು ಗ್ರಿಲ್‍ನಲ್ಲಿ ಒಂದೆರಡು ಚಿಲಿ ಡಾಗ್ಸ್, ಹುರಿದ ಉಪ್ಪಿನಕಾಯಿ ಚಿಪ್ಸ್ ಮತ್ತು ಪಾನೀಯಗಳನ್ನು ಆರ್ಡರ್ ಮಾಡಿದ್ದರು. ಇಷ್ಟು ತಿನಿಸಿಗೆ ಅವರ ಬಿಲ್ 2,812.44 ಪೈಸೆ ಆಗಿತ್ತು. ಆದರೆ ಅವರು ಪಾವತಿಸಿದ್ದು, 11,869,936 ರೂ.


ಇದನ್ನೂ ಓದಿ: Shocking News: ಮಾಂತ್ರಿಕನಿಂದ ದಿನವೂ ಕನಸಲ್ಲೇ ಅತ್ಯಾಚಾರ!; ಮಹಿಳೆಯ ದೂರು ಕೇಳಿ ಪೊಲೀಸರೇ ಶಾಕ್

ಆದರೆ ಸಿಬ್ಬಂದಿ ಇವರು ನೀಡಿದ ಇಷ್ಟೊಂದು ದೊಡ್ಡ ಮೊತ್ತದ ಟಿಪ್ಸ್ ಅನ್ನು ಗಮನಿಸಲೇ ಇರಲಿಲ್ಲ. ನಂತರ ಬಿಲ್ ಅನ್ನು ನೋಡಿ ಅವರು ನೀಡಿದ ಮೊತ್ತ ನೋಡಿ ಆಶ್ಚರ್ಯಕ್ಕೊಳಗಾದೆವು ಎಂದು ರೆಸ್ಟೋರೆಂಟ್ ಮಾಲೀಕರಾದ ಮೈಕ್ ಜರೆಲ್ಲಾ ಡಬ್ಲ್ಯೂಎಮ್‍ಯುಆರ್-ಟಿವಿಗೆ ತಿಳಿಸಿದ್ದಾರೆ.


ಇದು ಕ್ರೆಡಿಟ್ ಕಾರ್ಡ್ ರೂಪದಲ್ಲಿತ್ತು. ಇದನ್ನು ಅವರು ರಿಜಿಸ್ಟರ್ ಪಕ್ಕದಲ್ಲಿಟ್ಟು, ಎಲ್ಲವನ್ನೂ ಒಂದೇ ಸ್ಥಳದಲ್ಲಿ ಖರ್ಚು ಮಾಡಬೇಡಿ ಎಂದು ಸಲಹೆ ನೀಡಿದರು.


ಇದನ್ನು ತಿಳಿದು ಆ ರಶೀದಿಯನ್ನು ಹಿಂತಿರುಗಿಸಿದಾಗ, ಇದು ನಿಮಗಾಗಿಯೇ ನೀಡಿದ್ದೇವೆ. ನಿಮ್ಮಲ್ಲೇ ಇಟ್ಟುಕೊಳ್ಳಿ ಎಂದು ಹೇಳಿದರು. ನಿಜವಾಗಿಯೂ.. ಎಂದು ಹೋಟೆಲ್ ಸಿಬ್ಬಂದಿ ಕೇಳಿದಾಗ ಹೌದು. ನೀವು ಕಷ್ಟಪಟ್ಟು ಕೆಲಸ ಮಾಡುತ್ತೀರಿ ಎಂದು ಹೇಳಿದರು ಎಂಬುದಾಗಿ ಜರೆಲ್ಲಾ ತಿಳಿಸಿದರು. ಗ್ರಾಹಕರು ತಪ್ಪಾಗಿ ನೀಡಿದ್ದಾರೆ ಎಂದು ಕೇಳಿದಾಗ ಇಲ್ಲ ಖುದ್ದಾಗಿ ನಿಮಗೆ ನೀಡಿದ್ದೇನೆ. ಇದರಲ್ಲಿ ಯಾವುದೇ ತಪ್ಪಾಗಿಲ್ಲ ಎಂದು ಉತ್ತರಿಸಿದರು ಎಂದು ತಿಳಿಸಿದರು. ಮಾನವೀಯತೆ ಮೆರೆದ ಇವರು ತಮ್ಮ ಹೆಸರನ್ನು ಗೌಪ್ಯವಾಗಿಡಲು ಬಯಸಿದರು.

ಇದನ್ನೂ ಓದಿ: Fire Accident: ಚೀನಾದ ಮಾರ್ಷಲ್ ಆರ್ಟ್ಸ್ ಶಾಲೆಯಲ್ಲಿ ಅಗ್ನಿ ದುರಂತ; 18 ಮಕ್ಕಳು ಸಜೀವ ದಹನ

ಕೋವಿಡ್ ಸಮಯದಲ್ಲಿ ಎಲ್ಲಾ ರೆಸ್ಟೋರೆಂಟ್‍ಗಳು ಮುಚ್ಚಲ್ಲಪಟ್ಟಿದ್ದವು. ಇಂತಹ ವೇಳೆಯಲ್ಲೂ ಹೊರಗಡೆ ಹೋಗಿ ಗ್ರಾಹಕರಿಗೆ ನೀಡಬೇಕೆಂಬ ಆದೇಶವನ್ನು ಒಪ್ಪಿಕೊಂಡು ಪಾಲಿಸಿದ್ದರು. ಕಷ್ಟದ ಸಮಯದಲ್ಲೂ ಶ್ರಮವಹಿಸಿದ ಸಿಬ್ಬಂದಿಗೆ ಮೊದಲೇ ಹಣ ಪಾವತಿಸಲು ತಂಡ ಯೋಜಿಸಿದೆ.



Youtube Video

ನಿಜವಾಗಿಯೂ ಒಂದು ರುಚಿಕಟ್ಟಾದ ಅಡುಗೆಯ ಹಿಂದೆ ಬಹುದೊಡ್ಡ ಶ್ರಮವಿರುತ್ತದೆ. ಇದನ್ನು ಗಮನಿಸಿದ ಅವರು ಬಹುದೊಡ್ಡ ಮೊತ್ತದ ಟಿಪ್ಸ್ ಅನ್ನು ನೀಡಿದ್ದಾರೆ. ಇದು ಅವರ ಉದಾರ ಗುಣ ಎಂದು ಜರೆಲ್ಲಾ ಅವರು ಅನಾಮಧೇಯ ವ್ಯಕ್ತಿಯ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ.



First published: June 25, 2021, 11:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories