• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral News: ಟಿಕೆಟ್ ತೊಗೊಳ್ಳಿ ಅಂದಿದ್ದಕ್ಕೆ ಮಗುವನ್ನ ಏರ್ಪೋರ್ಟ್​​​​ನಲ್ಲಿಯೇ ಬಿಟ್ಟು ಹೋದ ದಂಪತಿ

Viral News: ಟಿಕೆಟ್ ತೊಗೊಳ್ಳಿ ಅಂದಿದ್ದಕ್ಕೆ ಮಗುವನ್ನ ಏರ್ಪೋರ್ಟ್​​​​ನಲ್ಲಿಯೇ ಬಿಟ್ಟು ಹೋದ ದಂಪತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚೆಕ್-ಇನ್ ಕೌಂಟರ್‌ನಲ್ಲಿರುವ ಕನ್ವೇಯರ್ ಬೆಲ್ಟ್ ಬಳಿಯೇ ತಮ್ಮ ಮಗುವನ್ನು ಬಿಟ್ಟು ಹೋಗಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

  • Trending Desk
  • 2-MIN READ
  • Last Updated :
  • Share this:

ಪೋಷಕರು (Parents) ಹೆತ್ತ ಮಕ್ಕಳನ್ನು (Children) ಯಾವುದೇ ಪರಿಸ್ಥಿತಿಯಲ್ಲಿ ಕೈ ಬಿಡಲ್ಲ. ಅವರ ಕಷ್ಟ-ಸುಖದಲ್ಲಿ ಭಾಗಿಯಾಗುತ್ತಾರೆ. ಕುಗ್ಗಿ ಹೋದ ಸಮಯದಲ್ಲಿ ಧೈರ್ಯ ತುಂಬುತ್ತಾರೆ. ಎಂತಹದ್ದೇ ಪರಿಸ್ಥಿತಿಯಾದರೂ ಸಹ ಬೆನ್ನ ಹಿಂದೆ ನಿಂತು ಮಕ್ಕಳಿಗೆ  ನೆರಳಾಗಿರುತ್ತಾರೆ. ಇದು ಸರ್ವಕಾಲಕ್ಕೂ ಸತ್ಯ ಕೂಡ ಹೌದು. ಆದರೆ ಇಂತಹ ಪೋಷಕರಿಗೆ ತದ್ವಿರುದ್ಧ ಎನ್ನುವಂತೆ ಇಸ್ರೇಲ್‌ನಲ್ಲಿ (Israel  Airport) ಒಂದು ಘಟನೆ ನಡೆದಿದೆ ನೋಡಿ. ಅದು ಅಂತಿಂತ ಘಟನೆಯಲ್ಲ, ಒಂದು ಕ್ಷಣ ಅಯ್ಯೋ ಹೀಗೂ ತಂದೆ-ತಾಯಿ (Father And Mother) ಇರ್ತಾರಾ ಅಂತನಿಸುತ್ತದೆ.


ಮಗುವಿಗೆ ಟಿಕೆಟ್‌ ತೆಗೆದುಕೊಳ್ಳಲು ಚಕಾರ


ಘಟನೆ ಏನೆಂದರೇ, ವಿಮಾನದಲ್ಲಿ ತೆರಳುವ ದಂಪತಿ (Couple) ತಮ್ಮ ಪುಟ್ಟ ಮಗುವಿಗೆ ಟಿಕೆಟ್‌ ಖರೀದಿ ಮಾಡಿಲ್ಲ. ಹೀಗಾಗಿ ಅವರನ್ನು ಚೆಕ್-ಇನ್ ಕೌಂಟರ್‌ನಲ್ಲಿ ತಡೆಯಲಾಯಿತು ಮತ್ತು ಟಿಕೆಟ್‌ (Ticket) ನಾವು ಖರೀದಿ ಮಾಡಲ್ಲ ಅಂತನೂ ದಂಪತಿ ಸಿಬ್ಬಂದಿ ಜೊತೆ ಚಕಾರ ಎತ್ತಿದ್ದಾರೆ. ಇಷ್ಟಕ್ಕೆ ಮಗೀತು ಅಂದುಕೊಂಡ್ರಾ? ಇಲ್ಲ ನೋಡಿ ಘಟನೆ ಅಸಲಿಯತ್ತು ಇಲ್ಲಿಂದ ಶುರು.


ಚೆಕ್-ಇನ್ ಕೌಂಟರ್‌ನಲ್ಲಿಯೇ ಮಗು ಬಿಟ್ಟು ನಡೆದ ಪೋಷಕರು


ಬೆಲ್ಜಿಯಂನ ದಂಪತಿಗೆ ಇಸ್ರೇಲ್‌ನ ಟೆಲ್ ಅವೀವ್‌ನ ಬೆನ್-ಗುರಿಯನ್ ವಿಮಾನ ನಿಲ್ದಾಣದಲ್ಲಿ(Ben Gurion International Airport) ಮಗುವಿಗೆ ಟಿಕೆಟ್‌ ಇಲ್ಲ ಎಂದು ತಡೆಹಿಡಿದಿದ್ದಕ್ಕೆ ಮಗುವನ್ನು ಚೆಕ್-ಇನ್ ಡೆಸ್ಕ್‌ನಲ್ಲಿ ಬಿಟ್ಟುಹೋಗಿ ಏರ್‌ಲೈನ್ ಸಿಬ್ಬಂದಿಗೆ ಶಾಕ್‌ ನೀಡಿದ್ದಾರೆ.


Viral News couple abandoned their infant at the check-in counter at Israel airport stg mrq
ಸಾಂದರ್ಭಿಕ ಚಿತ್ರ


ಚೆಕ್-ಇನ್ ಕೌಂಟರ್‌ಗೆ ಆಗಮಿಸಿದ ನಂತರ, ದಂಪತಿಗೆ ತಮ್ಮ ಶಿಶುವಿಗೆ ಟಿಕೆಟ್ ಖರೀದಿಸಲು ವಿಮಾನಯಾನ ಸಂಸ್ಥೆಯು ಕೇಳಿಕೊಂಡಿದೆ ಎಂದು ವರದಿಯಾಗಿದೆ. ಆದರೆ ಇದನ್ನು ಲೆಕ್ಕಿಸದೇ ವಾದ ಮಾಡಿದ ದಂಪತಿ ಪುಟ್ಟ ಮಗು ಅಂತಾನೂ ನೋಡದೇ ಮಗುವನ್ನು ಅಲ್ಲೇ ಬಿಟ್ಟು ಮುಂದೆ ಹೋಗಿ ತಮ್ಮ ವಿಮಾನವನ್ನು ಏರಿದ್ದಾರೆ.


ಚೆಕ್-ಇನ್ ಕೌಂಟರ್‌ನಲ್ಲಿರುವ ಕನ್ವೇಯರ್ ಬೆಲ್ಟ್ ಬಳಿಯೇ ತಮ್ಮ ಮಗುವನ್ನು ಬಿಟ್ಟು ಹೋಗಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.


ಮಗುವನ್ನು ಸ್ಟ್ರೋಲರ್‌ನಲ್ಲಿಯೇ ಬಿಟ್ಟು ಹೋದ ದಂಪತಿ


ಐರ್ಲೆಂಡ್ ಮೂಲದ ರೈನೈರ್ ಸಿಬ್ಬಂದಿ (Ryanair airlines flight) ಸ್ಥಳೀಯ ಪತ್ರಿಕಾಗೋಷ್ಠಿಯಲ್ಲಿ ದಂಪತಿಗಳು ತಮ್ಮ ಮಗುವನ್ನು ಸ್ಟ್ರೋಲರ್‌ನಲ್ಲಿಯೇ ವಿಮಾನ ನಿಲ್ದಾಣದಲ್ಲಿ ಬಿಟ್ಟು ನಡೆದಿದ್ದಾರೆ. ನಾವು ಈ ರೀತಿಯ ಘಟನೆಗಳನ್ನು ಎಂದೂ ನೋಡಿರಲಿಲ್ಲ, ಇದನ್ನು ನಂಬಲೂ ಕೂಡ ಅಸಾಧ್ಯವಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.


Viral News couple abandoned their infant at the check-in counter at Israel airport stg mrqViral News couple abandoned their infant at the check-in counter at Israel airport stg mrq
ಸಾಂದರ್ಭಿಕ ಚಿತ್ರ


ದಂಪತಿ ತಮ್ಮ ಮಗುವನ್ನು ಬಿಟ್ಟು ಹೋಗುವಾಗ ಬೆನ್ ಗುರಿಯನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಲ್ಜಿಯಂನ ಬ್ರಸೆಲ್ಸ್‌ಗೆ ರೈನೈರ್ ಏರ್‌ಲೈನ್ಸ್ ವಿಮಾನದಲ್ಲಿ ಚೆಕ್ ಇನ್ ಆಗಿದ್ದರು ಎಂದು ಸಿಎನ್‌ಎನ್ ವರದಿ ಮಾಡಿದೆ.


ತರಾತುರಿಯಲ್ಲಿ ಘಟನೆ ನಡೆದಿದೆ ಎಂದ ಅಧಿಕಾರಿಗಳು


ಈ ಬಗ್ಗೆ ಪ್ರತಿಕ್ರಿಯಿಸಿದ ಏರ್‌ಪೋರ್ಟ್ ಅಧಿಕಾರಿಗಳು, ದಂಪತಿ ತಮ್ಮ ಬೆಲ್ಜಿಯಂ-ಬೌಂಡ್ ಫ್ಲೈಟ್‌ ಸಮಯಕ್ಕೆ ತಡವಾಗಿ ಬಂದಿದ್ದಾರೆ. ಮತ್ತು ಭದ್ರತಾ ಪ್ರೋಟೋಕಾಲ್‌ಗಳನ್ನು ಅನುಸರಿಸುವ ಗಡಿಬಿಡಿಯಲ್ಲಿ ಮಗುವನ್ನು ಮರೆತು ಇಲ್ಲಿಯೇ ಬಿಟ್ಟು ಹೋಗಿದ್ದಾರೆ ಎಂದು ರೈನೈರ್ ಏರ್‌ಲೈನ್ಸ್ ಅಧಿಕಾರಿಗಳು ಹೇಳಿದ್ದಾರೆ.




ಕೊನೆಯದಾಗಿ ಬೆನ್ ಗುರಿಯಾನ್ ವಿಮಾನ ನಿಲ್ದಾಣದಲ್ಲಿನ ಚೆಕ್-ಇನ್ ಏಜೆಂಟ್ ಏರ್‌ಪೋರ್ಟ್ ಸೆಕ್ಯುರಿಟಿಯನ್ನು ಸಂಪರ್ಕಿಸಿ, ಬೆಲ್ಜಿಯಂನ ಬ್ರಸೆಲ್ಸ್‌ಗೆ ರೈನೈರ್ ಏರ್‌ಲೈನ್ಸ್‌ನಲ್ಲಿದ್ದ ಪ್ರಯಾಣಿಕರನ್ನು ಕರೆಸಿದ್ದಾರೆ. ಕೊನೆಗೆ ಪೊಲೀಸರು ಸಮಸ್ಯೆಯನ್ನು ಪರಿಹರಿಸಿ ಮಗುವನ್ನು ಪೋಷಕರ ಬಳಿಗೆ ಒಪ್ಪಿಸಿದ್ದಾರೆ.


ಇದನ್ನೂ ಓದಿ:  Viral Post: 16 ವರ್ಷದ ಬಳಿಕ ತಮ್ಮನ ಕೈ ಸೇರಿದ ಅಕ್ಕ ಓದಿದ ಪುಸ್ತಕ; ಗೃಂಥಾಲಯದ ನೆನಪು ಹಂಚಿಕೊಂಡ ಜನರು


ರೈನೈರ್ ಏರ್‌ಲೈನ್ಸ್‌ನಲ್ಲಿ ಮಕ್ಕಳಿಗೂ ಇದೇ ಟಿಕೆಟ್‌ ಶುಲ್ಕ


ಆನ್‌ಲೈನ್ ಬುಕಿಂಗ್ ಪ್ರಕ್ರಿಯೆಯಲ್ಲಿ ರೈನೈರ್ ಏರ್‌ಲೈನ್ಸ್ ಶಿಶುಗಳನ್ನು ವಿಮಾನ ಟಿಕೆಟ್‌ ಕಾಯ್ದಿರಿಸುವಿಕೆಯಲ್ಲಿ ಸೇರಿಸಲು ಅವಕಾಶ ನೀಡುತ್ತದೆ. ವಯಸ್ಕರ ತೊಡೆಯ ಮೇಲೆ ಕುಳಿತು ಮಗು ತೆಗೆದುಕೊಳ್ಳುವ ಪ್ರತಿ ಏಕಮುಖ ಹಾರಾಟಕ್ಕೆ ಏರ್‌ಲೈನ್ಸ್ $27 (ಅಂದಾಜು ₹2,500) ಶುಲ್ಕ ವಿಧಿಸುತ್ತದೆ. ವಯಸ್ಕರು ಮಗುವನ್ನು ಸೀಟಿನಲ್ಲಿ ಪ್ರಯಾಣಿಸಲು ಬಯಸಿದರೆ, ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಬೇಕು.

Published by:Mahmadrafik K
First published: