Viral News: ಮಂಟಪಕ್ಕೆ ಬರೋ ಮುಂಚೆ ತಲೆ ಬೋಳಿಸಿಕೊಂಡು ಬಂದ ವಧು; ಆಕೆ ಹಾಗೆ ಮಾಡೋಕೆ ಕೊಟ್ಟ ಕಾರಣ ವಿಚಿತ್ರ..!

ಬೊರೊನಾ ಸಂಪ್ರದಾಯದ ಹೆಣ್ಣು ಮಕ್ಕಳಿಗೆ ಮದುವೆ ಆಗುವವರೆಗೂ ಮಾತ್ರ ತಮ್ಮ ತಲೆಕೂದಲು ಬೆಳೆಸಲು ಅವಕಾಶ ನೀಡಲಾಗುತ್ತದೆ. ಮದುವೆಗೂ ಮುಂಚೆ ಅವರ ಎಲ್ಲಾ ತಲೆ ಕೂದಲನ್ನೂ ಸಂಪೂರ್ಣವಾಗಿ ಬೋಳಿಸಲಾಗುತ್ತದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬ ಮಾತನ್ನು ಕೇಳಿದ್ದೇವೆ. ಗಂಡು-ಹೆಣ್ಣಿನ ನಡುವಿನ ಪವಿತ್ರ ಬಂಧಕ್ಕೆ ಮದುವೆ ಎಂಬ ಹೆಸರಿಟ್ಟಿದ್ದಾರೆ. ತಮ್ಮ ಜೀವಿತಾವಧಿಯಲ್ಲಿ ಗಂಡ-ಹೆಂಡತಿಯಾಗಿ ಒಟ್ಟಿಗೆ ಉಳಿಯುವ ಭರವಸೆಗೂ ಮದುವೆ ಆಗಿದೆ. ಮದುವೆ ಎಂಬ ಬಂಧಕ್ಕೆ ಪ್ರಪಂಚದಾದ್ಯಂತ ಒಂದೇ ಮೌಲ್ಯ ಇದ್ದರೂ ಸಹ, ಇದನ್ನು ಪ್ರತಿಯೊಂದು ದೇಶ ಮತ್ತು ಧರ್ಮದಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ಮದುವೆಯ ಸಂಪ್ರದಾಯಗಳು ದೇಶದಿಂದ ದೇಶಕ್ಕೆ, ಧರ್ಮದಿಂದ ಧರ್ಮಕ್ಕೆ ವಿಭಿನ್ನವಾಗಿರುತ್ತವೆ. ಮದುವೆಯ ಮುಂಚೆ ಅಥವಾ ನಂತರ ವಧು-ವರರು ಕೆಲವೊಂದು ಸಂಪ್ರದಾಯ, ಆಚರಣೆಗಳನ್ನು ಪಾಲಿಸಬೇಕಾಗುತ್ತದೆ. ಆದರೆ ಈ ಸಮುದಾಯದಲ್ಲಿ ಮದುವೆಗೆ ಮುಂಚೆ ವಧುವಿನ ತಲೆಯನ್ನು ಬೋಳಿಸಲಾಗುತ್ತದೆ. ಕೇಳಲು ವಿಚಿತ್ರವೆನಿಸಿದರೂ ಈ ಅಪರೂಪದ ಆಚರಣೆ ನಿಜವಾಗಿಯೂ ನಡೆಯುತ್ತದೆ.

  ಬೊರಾನಾ ಬುಡಕಟ್ಟು ಸಮುದಾಯದಲ್ಲಿ ಈ ವಿಚಿತ್ರ ಆಚರಣೆಯನ್ನು ಪಾಲಿಸಲಾಗುತ್ತದೆ. ಮದುವೆಗೂ ಮುನ್ನ ವಧುವಿನ ತಲೆಯನ್ನು ಬೋಳಿಸಿ ಬಳಿಕ ಆಕೆಗೆ ಮದುವೆ ಮಾಡಲಾಗುತ್ತದೆ. ದಕ್ಷಿಣ ಆಫ್ರಿಕಾದ ಸೋಮಾಲಿಯಾ ಮತ್ತು ಇಥಿಯೋಪಿಯಾ ಮಧ್ಯ ಇರುವ ಬೊರಾನಾ ಬುಡಕಟ್ಟು ಜನಾಂಗದವರು ಈ ಆಚರಣೆ ಮಾಡುತ್ತಾರೆ. ಈ ಸಮುದಾಯದಲ್ಲಿ 500 ಸಾವಿರ ಜನರಿದ್ದಾರೆ. ಇದು ಪುರುಷ ಪ್ರಧಾನ ಸಮಾಜವಾಗಿದೆ. ಹೀಗಾಗಿ ಇಡೀ ಗ್ರಾಮದ ಜವಾಬ್ದಾರಿಯನ್ನು(ಪ್ರಾಣಿಗಳನ್ನೂ ಒಳಗೊಂಡಂತೆ) ಗಂಡಸರೇ ವಹಿಸಿಕೊಂಡಿದ್ದಾರೆ. ಇನ್ನು, ಮಹಿಳೆಯರಿಗೆ ಮನೆಗಳನ್ನು ಅಲಂಕೃತಗೊಳಿಸುವುದು ಸೇರಿದಂತೆ ಎಲ್ಲಾ ಸಂಪ್ರದಾಯಗಳ ಆಚರಣೆಯ ಹೊಣೆಯನ್ನು ನೀಡಲಾಗಿದೆ.

  ಇದನ್ನೂ ಓದಿ:ಇಲ್ಲಿ ದಂಪತಿಗಳಿಗೆ ಮಕ್ಕಳನ್ನು ಹೊಂದಲು ಹಣ ನೀಡುತ್ತಿದ್ದಾರಂತೆ!

  ಬೊರೊನಾ ಸಂಪ್ರದಾಯದ ಹೆಣ್ಣು ಮಕ್ಕಳಿಗೆ ಮದುವೆ ಆಗುವವರೆಗೂ ಮಾತ್ರ ತಮ್ಮ ತಲೆಕೂದಲು ಬೆಳೆಸಲು ಅವಕಾಶ ನೀಡಲಾಗುತ್ತದೆ. ಮದುವೆಗೂ ಮುಂಚೆ ಅವರ ಎಲ್ಲಾ ತಲೆ ಕೂದಲನ್ನೂ ಸಂಪೂರ್ಣವಾಗಿ ಬೋಳಿಸಲಾಗುತ್ತದೆ. ಬಳಿಕ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಲಾಗುತ್ತದೆ. ಒಳ್ಳೆಯ ಗಂಡ ಸಿಗುತ್ತಾನೆ ಎಂಬ ನಂಬಿಕೆಯಿಂದ ವಧುವಿನ ತಲೆ ಕೂದಲನ್ನು ಬೋಳಿಸಲಾಗುತ್ತದೆ. ಹೆಣ್ಣು ಮಕ್ಕಳು ಮದುವೆಗೂ ಮುನ್ನ ತಮ್ಮ ತಲೆಯನ್ನು ಬೋಳಿಸಿಕೊಂಡರೆ, ಅವರು ಒಳ್ಳೆಯ ಗಂಡನನ್ನು ಪಡೆದು ಸುಖವಾಗಿರುತ್ತಾರೆ ಎಂಬುದು ಆ ಸಂಪ್ರದಾಯದ ಜನರ ನಂಬಿಕೆ.

  ಈ ಜನಾಂಗದ ಇನ್ನೊಂದು ಶಾಕಿಂಗ್ ವಿಷಯ ಏನೆಂದರೆ, ಇವರು ಮದುವೆಯಲ್ಲಿ ಫೋಟೋ ತೆಗೆಸುವುದಿಲ್ಲ, ಇದು ಒಳ್ಳೆಯ ಆಚರಣೆ ಅಲ್ಲವಂತೆ. ಫೋಟೋ ತೆಗೆಸಿದರೆ ದೇಹದಲ್ಲಿ ರಕ್ತದ ಕೊರತೆ ಕಾಣಿಸುತ್ತದೆ ಎಂದು ಅಲ್ಲಿನ ಜನರು ನಂಬುತ್ತಾರೆ.. ಹೀಗೆ ಇಲ್ಲಿನ ಜನರ ಮೂಢನಂಬಿಕೆಯಿಂದಾಗಿ ಹೆಣ್ಣುಮಕ್ಕಳು ತಮ್ಮ ತಲೆ ಕೂದಲನ್ನು ಕಳೆದುಕೊಳ್ಳುತ್ತಾರೆ.

  ಸದ್ಯದ ವರದಿ ಪ್ರಕಾರ, ಹೆಣ್ಣುಮಕ್ಕಳು ಈಗ ಹಳ್ಳಿಯನ್ನು ತೊರೆದು ನಗರಗಳತ್ತ ಮುಖ ಮಾಡಿದ್ದಾರೆ. ಸುಂದರ ಜೀವನವನ್ನು ಕಟ್ಟಿಕೊಳ್ಳಲು ಆ ಗೊಡ್ಡು ಸಂಪ್ರದಾಯಗಳ ಬಲೆಯಿಂದ ಬಿಡಿಸಿಕೊಳ್ಳುತ್ತಿದ್ದಾರೆ.

  ಹೆಣ್ಣುಮಕ್ಕಳಿಗೆ ಕೇಶವೇ ಲಕ್ಷಣ. ಅದರಲ್ಲೂ ಮದುವೆ ಸಂದರ್ಭದಲ್ಲಿ ಕೇಶಾಲಂಕಾರಕ್ಕೆ ಹೆಚ್ಚಿನ ಒತ್ತುನೀಡುತ್ತಾರೆ. ಬಗೆ-ಬಗೆಯ ಅಲಂಕಾರಗಳಿಂದ ತಮ್ಮ ಕೇಶರಾಶಿಯನನ್ನು ಅಲಂಕೃತಗೊಳಿಸಿಕೊಳ್ಳುತ್ತಾರೆ. ಸೀರೆ, ಒಡವೆಗೆ ಮಾನ್ಯತೆ ಕೊಟ್ಟಷ್ಟೇ, ಕೇಶಾಲಂಕಾರಕ್ಕೂ ಹೆಚ್ಚಿನ ಮಹತ್ವ ನೀಡುತ್ತಾರೆ. ಆದರೆ ಈ ಬೊರಾನಾ ಬುಡಕಟ್ಟು ಜನಾಂಗದಲ್ಲಿ ಇದಕ್ಕೆ ತದ್ವಿರುದ್ಧವಾಗಿ ಆಚರಣೆಯನ್ನು ಪಾಲಿಸುತ್ತಾರೆ. ಮೂಢನಂಬಿಕೆಗಳಿಗೆ ಜೋತು ಬಿದ್ದಿದ್ದಾರೆ. ಈಗ ಕಾಲ ಬದಲಾಗಿದ್ದು, ಅಲ್ಲಿನ ಹೆಣ್ಣು ಮಕ್ಕಳು ಸುಂದರವಾದ ಜೀವನ ಕಟ್ಟಿಕೊಳ್ಳಲು, ನಗರಗಳತ್ತ ಮುಖ ಮಾಡಿದ್ದಾರೆ.
  Published by:Latha CG
  First published: