HOME » NEWS » Trend » VIRAL NEWS AUSTRIAN MAN CHARGED NEARLY 9000 RUPEES FINE FOR FARTING PROVOCATIVELY IN PUBLIC SCT STG

ಹೂಸು ಬಿಟ್ಟಿದ್ದಕ್ಕೆ 44 ಸಾವಿರ ರೂ. ದಂಡ; ಕೋರ್ಟ್ ಮೊರೆ ಹೋಗಿ ದಂಡ ಕಡಿಮೆ ಮಾಡಿಸಿಕೊಂಡ ಭೂಪ!

ಪೊಲೀಸರ ಮೇಲೆ ‘ಪ್ರಚೋದನಕಾರಿಯಾಗಿ ಹೂಸು ಬಿಡುವ ಮೂಲಕ’ ಸಾರ್ವಜನಿಕ ಸಭ್ಯತೆಯನ್ನು ಮರೆತಿದ್ದಕ್ಕೆ ಅಪರಿಚಿತ ವ್ಯಕ್ತಿಯ ಮೇಲೆ ವಿಯೆನ್ನಾದಲ್ಲಿ ದಂಡ ವಿಧಿಸಲಾಗಿದೆ

news18-kannada
Updated:April 12, 2021, 12:39 PM IST
ಹೂಸು ಬಿಟ್ಟಿದ್ದಕ್ಕೆ 44 ಸಾವಿರ ರೂ. ದಂಡ; ಕೋರ್ಟ್ ಮೊರೆ ಹೋಗಿ ದಂಡ ಕಡಿಮೆ ಮಾಡಿಸಿಕೊಂಡ ಭೂಪ!
ಸಾಂದರ್ಭಿಕ ಚಿತ್ರ
  • Share this:
ಕಳೆದ ವರ್ಷ ಸಾರ್ವಜನಿಕವಾಗಿ ಜೋರಾಗಿ ಹೂಸು ಬಿಟ್ಟಿದ್ದಕ್ಕೆ ಆಸ್ಟ್ರಿಯಾದ ವ್ಯಕ್ತಿಯೊಬ್ಬನಿಗೆ 500 ಯುರೋಗಳಷ್ಟು ಅಂದರೆ ಸುಮಾರು 44,000 ರೂ. ದಂಡವನ್ನು ವಿಧಿಸಲಾಗಿತ್ತು. ಈ ವಿಷಯವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ ನಂತರ ಈಗ ದಂಡವನ್ನು 100 ಯುರೋಗಳಿಗೆ ಸುಮಾರು 9 ಸಾವಿರ ದಂಡ ರೂ. ಗೆ ಕಡಿಮೆ ಮಾಡಿದ್ದಾರೆ. ಪೊಲೀಸರ ಮೇಲೆ ‘ಪ್ರಚೋದನಕಾರಿಯಾಗಿ ಹೂಸು ಬಿಡುವ ಮೂಲಕ’ ಸಾರ್ವಜನಿಕ ಸಭ್ಯತೆಯನ್ನು ಮರೆತಿದ್ದಕ್ಕೆ ಅಪರಿಚಿತ ವ್ಯಕ್ತಿಯ ಮೇಲೆ ವಿಯೆನ್ನಾದಲ್ಲಿ ದಂಡ ವಿಧಿಸಲಾಗಿದೆ ಎಂದು LadBible ವರದಿ ಮಾಡಿತ್ತು. ಆದರೆ, ಈ ಬಗ್ಗೆ ಆತ ಕೋರ್ಟ್‌ ಮನವಿ ಹೋದ ಕಾರಣ ಆತನಿಗೆ ಕಡಿಮೆ ಮೊತ್ತವನ್ನು ಪಾವತಿಸಲು ಅವಕಾಶ ನೀಡಲಾಗಿದೆ.

ನ್ಯಾಯಾಲಯದಲ್ಲಿ, ಆ ವ್ಯಕ್ತಿಯು ತನಗೆ ವಿಧಿಸಲ್ಪಟ್ಟ ಭಾರಿ ಮೊತ್ತದ ವಿರುದ್ಧ ವಾದ ಮಾಡಿದ್ದು, ಮತ್ತು ಆ ಘಟನೆ  ಒಂದು ‘ಜೈವಿಕ ಪ್ರಕ್ರಿಯೆ’ ಎಂದು ಹೇಳಿದನು. ಅಲ್ಲದೆ, “ಉದ್ದೇಶಪೂರ್ವಕವಾಗಿ” ಮಾಡಿದರೂ ಸಹ ಗಾಳಿಯನ್ನು ಬೀಸುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ನ್ಯಾಯಸಮ್ಮತವೆಂದು ಪರಿಗಣಿಸಬೇಕು ಎಂದು ಹೇಳಿಕೊಂಡಿದ್ದ.

ಉದ್ಯಾನವನದ ಬೆಂಚ್‌ನಿಂದ ಎದ್ದು, ಪೊಲೀಸ್‌ ಅಧಿಕಾರಿಗಳನ್ನು ನೋಡುತ್ತಾ ಉದ್ದೇಶಪೂರ್ವಕವಾಗಿಯೇ ಹೆಚ್ಚು ಶಬ್ದ ಮಾಡಿ ಹೂಸು ಬಿಟ್ಟಿದ್ದಾನೆ. ಹಾಗೂ ಪೊಲೀಸರು ಇದನ್ನು ಪ್ರಶ್ನಿಸಿ ನೀನು ಯಾರೆಂದು ಕೇಳಿದಾಗ ಆ ವ್ಯಕ್ತಿ ‘ಪ್ರಚೋದನಕಾರಿ ಮತ್ತು ಸಹಕಾರವಿಲ್ಲದೆ’ ವರ್ತಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು ಎಂದು ಡೈಲಿ ಮೇಲ್ ವರದಿ ಮಾಡಿದೆ.

ಆಸ್ಟ್ರಿಯಾದಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯವು ಶಬ್ದಗಳು ಮತ್ತು ಸಂವಹನ ಸೇರಿದಂತೆ ವಿವಿಧ ರೂಪಗಳನ್ನು ತೆಗೆದುಕೊಳ್ಳಬಹುದು ಮತ್ತು ಇದು ಕೇವಲ ಮಾತಿಗೆ ಸೀಮಿತವಾಗಿಲ್ಲ.
ಈ ವಿಚಾರದ ಬಗ್ಗೆ ತೀರ್ಪು ನೀಡುವಾಗ ನ್ಯಾಯಾಲಯವು ‘ಧ್ವನಿ ಅಥವಾ ಸಂವಹನವು ಸಂವಹನ ಉದ್ದೇಶವನ್ನು ಹೊಂದಿರಬೇಕು’ಎಂದು ಹೇಳಿದ್ದು, ಇಲ್ಲಿ ಅದು ಆ ರೀತಿ ಇಲ್ಲ ಎಂದೂ  ತಿಳಿಸಿದೆ.

ಆದರೂ, ಈ ಸಂವಹನ ವಿಧಾನವು ‘ಸಭ್ಯತೆಯ ಗಡಿಗಳನ್ನು ಮೀರಿದೆ’ ಎಂದು ನ್ಯಾಯಾಲಯವು ಆ ವ್ಯಕ್ತಿಯ ಕ್ರಮವನ್ನು ‘ಹಾಸ್ಯಾಸ್ಪದ’ ಎಂದು ಪರಿಗಣಿಸಿದೆ. ಆದರೂ, ಆತನ ಅಪರಾಧದ ಪ್ರಮಾಣವನ್ನು ಗಮನಿಸಿ ನ್ಯಾಯಾಲಯವು ದಂಡವನ್ನು ಕಡಿಮೆ ಮಾಡಿದೆ. ಇದು ಆತನ ಮೊದಲ ಅಪರಾಧ ಎಂದೂ ಕೋರ್ಟ್ ಹೇಳಿದೆ.

ಜನರು ಹೂಸಿನಿಂದಲೇ ಹಣ ಸಂಪಾದಿಸಿದ ಮೊದಲ ವಿಲಕ್ಷಣ ಘಟನೆ ಇದಲ್ಲ. ಕೆಲವು ವಾರಗಳ ಹಿಂದೆ, 48 ವರ್ಷದ ಮಹಿಳೆಯೊಬ್ಬರು ತನ್ನ ಹೂಸಿನ ವಿಡಿಯೋಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಮೂಲಕ ತಿಂಗಳಿಗೆ 4,200 ಡಾಲರ್‌ ಅಂದರೆ  3.05 ಲಕ್ಷ ರೂ. ಗಳಿಸಿದ್ದಾಳೆಂದು ವರದಿಯಾಗಿದೆ. ಮಾಜಿ ಟ್ರಾವೆಲ್ ಏಜೆಂಟ್ ಎಮ್ಮಾ ಮಾರ್ಟಿನ್ 1999 ರಿಂದ ಈ ವಿಲಕ್ಷಣ ವ್ಯವಹಾರದಲ್ಲಿದ್ದಾರೆ ಮತ್ತು ನೆಟ್ಟಿಗರು ಇಂಟರ್‌ನೆಟ್‌ನಲ್ಲಿ ಆಕೆ ಗ್ಯಾಸ್‌ ಬಿಡುವುದನ್ನು ನೋಡುತ್ತಾರೆ. ಅದಕ್ಕೆ ತಿಂಗಳಿಗೆ 4.99 ಡಾಲರ್‌ ಶುಲ್ಕವನ್ನೂ ಆಕೆ ವಿಧಿಸುತ್ತಾಳೆ.

ದಕ್ಷಿಣ ಕೆರೊಲಿನಾದ ರಾಕ್ ಹಿಲ್‌ ಮೂಲದ ಇಬ್ಬರು ಮಕ್ಕಳ ತಾಯಿ ಈಗ 20 ಕ್ಕೂ ಹೆಚ್ಚು ವರ್ಷಗಳಿಂದ ಈ ರೀತಿ ವಿಡಿಯೋಗಳನ್ನು ಮಾಡುತ್ತಾಳೆ. ಇದಕ್ಕಾಗಿ ಆಕೆ ಸಲಾಡ್, ಆಸ್ಪರಾಗಸ್‌ ಮತ್ತು ಅವಕಾಡೊಗಳನ್ನು ಒಳಗೊಂಡಿರುವ ಉತ್ತಮ ಪ್ರದರ್ಶನ ನೀಡಲು ಸಹಾಯ ಮಾಡುವಂತೆ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಕಟ್ಟುನಿಟ್ಟಿನ ಆಹಾರವನ್ನು ಅನುಸರಿಸುತ್ತಾರೆ. ಈ ಬಗ್ಗೆ ಡೈಲಿ ಮೇಲ್‌ಗೆ ತಿಳಿಸಿರುವ ಎಮ್ಮಾ, ತಾನು ಬಹಳಷ್ಟು ಮೆಕ್ಸಿಕನ್ ಆಹಾರವನ್ನು ತಿನ್ನುತ್ತೇನೆ ಮತ್ತು ಬೇಯಿಸಿದ ಬೀನ್ಸ್ ನೊಂದಿಗೆ ಕೋಲ್ಸ್‌ಲಾ ತನ್ನ ನೆಚ್ಚಿನದು ಎಂದೂ ಆ ಮಹಿಳೆ ಹೇಳಿಕೊಂಡಿದ್ದಾಳೆ.
Published by: Sushma Chakre
First published: April 12, 2021, 12:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories