Viral News: ತನ್ನನ್ನೇ ಮದ್ವೆಯಾಗಿ ಕಾರಣ ಬಿಚ್ಚಿಟ್ಟ 77ರ ವೃದ್ಧೆ

 ಡೊರೊಥಿ ಫಿಡೆಲಿ

ಡೊರೊಥಿ ಫಿಡೆಲಿ

Old Woman Marriage: ಈ ಹಿಂದೆ ಇವರು ಸಹ ಎಲ್ಲರಂತೆ ಸಹಜವಾದ ಮದುವೆಯಾಗಿದ್ದರು. 1965ರಲ್ಲಿ ಪುರುಷನೊಂದಿಗೆ ಮದುವೆಯಾಗಿದ್ದ ಇವರು 9 ವರ್ಷಗಳ ನಂತರ ವಿಚ್ಛೇದನ ಪಡೆದಿದ್ದರು.

  • Share this:

ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಚಿತ್ರ-ವಿಚಿತ್ರವಾದ ವಿವಾಹಗಳು (Marriage) ಸಾಕಷ್ಟು ವರದಿಯಾಗುತ್ತಿದ್ದು, ಹುಬ್ಬೇರಿಸುವಂತಹ ಹಲವು ಮದುವೆಗಳನ್ನು ಕಾಣುತ್ತಿದ್ದೇವೆ. ಹೆಣ್ಣು, ಹೆಣ್ಣನ್ನೇ ವರಿಸುವುದು, ಗಂಡು-ಗಂಡನ್ನೇ (Same Sex Marriage) ಮದುವೆಯಾಗುವುದು ಅಪರೂಪವಾಗಿಯೇನೂ ಉಳಿದಿಲ್ಲ. ಈಗ ಯುಎಸ್ ನಲ್ಲಿ ಇದಕ್ಕೂ ಮೀರಿ ವಿಚಿತ್ರ ಘಟನೆಯೊಂದು ನಡೆದಿದ್ದು, ಇಲ್ಲಿ 77 ವರ್ಷದ ಮಹಿಳೆಯೊಬ್ಬರು (Woman) ಒಂದು ಅಸಾಮಾನ್ಯ ವಿವಾಹಕ್ಕೆ ನಾಂದಿ ಹಾಡಿದ್ದಾರೆ.


ಹೌದು, ಡೊರೊಥಿ ಫಿಡೆಲಿ ಎಂಬ 77 ವರ್ಷ ವಯಸ್ಸಿನ ಮಹಿಳೆ ತನ್ನನ್ನು ತಾನೇ ವಿವಾಹವಾಗುವ ಮೂಲಕ ಅಚ್ಚರಿಗೆ ಕಾರಣಳಾಗಿದ್ದಾರೆ.


ಕುಟುಂಬದ ಸಮ್ಮುಖದಲ್ಲಿ ಮದುವೆ


ಈ ಸಾಂಕೇತಿಕ ವಿವಾಹವು ಮೇ 13 ರಂದು ಓಹಿಯೋದ ಗೋಶೆನ್‌ನಲ್ಲಿರುವ ಓ'ಬನ್ನಾನ್ ಟೆರೇಸ್ ನಿವೃತ್ತಿ ಸಮುದಾಯದಲ್ಲಿ ನೆರೆಹೊರೆಯವರು, ಸ್ನೇಹಿತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ನಡೆದಿದೆ.


"ಇದೊಂದು ಭಾವನಾತ್ಮಕ ದಿನ. ನನಗೆ ಖುಷಿ ಮತ್ತು ರೋಮಾಂಚನವಾಗುತ್ತಿದೆ” ಎಂದು ಫಿಡೆಲಿ ಹೇಳಿದ್ದಾರೆ.


viral news 77-Year-Old us Woman Marries Herself stg mrq
ಸಾಂದರ್ಭಿಕ ಚಿತ್ರ


ಮದುವೆ ಹಿಂದಿನ ಕಾರಣ ಹೇಳಿದ ವೃದ್ಧೆ


"ನಾನು ಜೀವನದಲ್ಲಿ ಎಲ್ಲ ಕರ್ತವ್ಯವನ್ನು ಮಾಡಿದ್ದೇನೆ. ಮಕ್ಕಳು, ಮೊಮ್ಮಕ್ಕಳಿಗೆ ಮಾಡಬೇಕಾದ ಜವಾಬ್ದಾರಿಯೆಲ್ಲವನ್ನು ನಿರ್ವಹಿಸಿದ್ದೇನೆ. ಈಗ ನನಗೆ ನಾನು ಏನಾದರೂ ಮಾಡಿಕೊಳ್ಳುವ ಸಮಯ. ಹಾಗಾಗಿ ಈ ಮದುವೆ” ಎಂದು ಫಿಡೆಲಿ ಔಟ್ಲೆಟ್ಗೆ ಹೇಳಿದ್ದಾರೆ.


ತನ್ನನ್ನು ತಾನು ಮದುವೆಯಾಗಬೇಕೆಂದು ನಿರ್ಧರಿಸಿದ ನಂತರ ಫಿಡೆಲಿ ಸಾಕಷ್ಟು ವಿಶೇಷವಾದ ತಯಾರಿಯನ್ನು ಸಹ ಮಾಡಿಕೊಂಡಿದ್ದರಂತೆ. ಇದಕ್ಕೆ ಅವರ ಜೊತೆಯಾಗಿರುವುದು ಅವರ ಮಗಳು ಹಾಗೂ ರೀಟಾರೈಮೆಂಟ್ ಹೋಮ್ ನ ಪ್ರಾಜೆಕ್ಟ್ ಮ್ಯಾನೇಜರ್ ರೋಬ್.


ತಾಯಿಗೆ ಬಟ್ಟೆ ಕೊಡಿಸಿದ ಮಗಳು


ಅವರ ಮಗಳಂತೂ ಹೆಚ್ಚು ಸಂತೋಷಿತಳಾಗಿ, ಮದುವೆಗಾಗಿ ಹೊಸ ಬಟ್ಟೆಗಳು ಹಾಗೂ ಹೂವುಗಳನ್ನು ತಂದು ಮದುವೆ ಸ್ಥಳವನ್ನು ಅಲಂಕರಿಸಿದರಂತೆ. ಜೊತೆಗೆ, ಮದುವೆಗೆ ಬಂದಿದ್ದ ಎಲ್ಲರಿಗೂ ಸ್ವತಃ ಅಡುಗೆ ಮಾಡಿ ಬಡಿಸಿದರಂತೆ.


ಎರಡು ಹಂತದ ಬಿಳಿ ಕೇಕ್ ಮತ್ತು ಮೇಲ್ಭಾಗದಲ್ಲಿ ಕೆಂಪು ಗುಲಾಬಿಗಳು, ಜೊತೆಗೆ ಹೃದಯದ ಆಕಾರದ ಬಿಸ್ಕತ್ತುಗಳು ಮತ್ತು ಫಿಂಗರ್ ಸ್ಯಾಂಡ್‌ವಿಚ್‌ಗಳನ್ನು ಘಂಟೆಗಳ ಆಕಾರದಲ್ಲಿ ಬಳಸಿ ವಿವಾಹದ ಸ್ಥಳವನ್ನು ಬಹು ಸುಂದರವಾಗಿ ಅಲಂಕರಿಸಲಾಗಿತ್ತಂತೆ. .


ಸ್ವಯಂ ವಿವಾಹದ ಆಲೋಚನೆ ಬಂದಿದ್ದು ಹೀಗೆ


ಅಂದಹಾಗೆ, ಫಿಡೆಲಿ ಅವರಿಗೆ ಸ್ವಯಂ ವಿವಾಹವಾಗುವ ಆಲೋಚನೆ ಬಂದಿದ್ದು, ನೆರೆಹೊರೆಯವರಿಂದ. ಟಾಕ್ ಶೋನಲ್ಲಿ ಮಹಿಳೆಯೊಬ್ಬರು ಈ ರೀತಿ ಮಾಡುವುದನ್ನು ನೋಡಿದ ನೆರೆಹೊರೆಯವರು ಅದನ್ನು ಇವರೊಂದಿಗೆ ಹಂಚಿಕೊಂಡಾಗ “ಹೌದು, ನಾನೇಕೆ ನನ್ನನ್ನೇ ಮದುವೆಯಾಗಬಾರದು” ಎಂದು ಪ್ರಶ್ನಿಸಿಕೊಂಡೆ. ಆ ಆಲೋಚನೆ ನನಗೆ ಹೊಸ ಉತ್ಸಾಹ ನೀಡಿತು Ms ಫಿಡೆಲಿ ಹೇಳಿದ್ದಾರೆ ಎಂದು WLWT ವರದಿ ಮಾಡಿದೆ.
ಈ ಹಿಂದೆ ಎಲ್ಲರಂತೆ ಮದುವೆಯಾಗಿದ್ದ ಫಿಡೆಲಿ


ಫಿಡೆಲಿ ಈಗ ಸ್ಚಯಂ ವಿವಾಹವಾಗುತ್ತಿದ್ದರೂ, ಈ ಹಿಂದೆ ಇವರು ಸಹ ಎಲ್ಲರಂತೆ ಸಹಜವಾದ ಮದುವೆಯಾಗಿದ್ದರು. 1965ರಲ್ಲಿ ಪುರುಷನೊಂದಿಗೆ ಮದುವೆಯಾಗಿದ್ದ ಇವರು 9 ವರ್ಷಗಳ ನಂತರ ವಿಚ್ಛೇದನ ಪಡೆದಿದ್ದರು.


"ನಾನು ಸುಮಾರು 40 ವರ್ಷಗಳಿಂದ ನನ್ನೊಂದಿಗೆ ನಾನು ಜೀವನ ನಡೆಸುತ್ತಿದ್ದೇನೆ. ಇದುವರೆಗೂ ಕೇವಲ ಮಕ್ಕಳು ಮತ್ತು ಮೊಮ್ಮಕ್ಕಳನ್ನು ನೋಡಿಕೊಳ್ಳುವಲ್ಲಿ ನನ್ನ ಜೀವನದ ಬಹುಭಾಗವನ್ನು ಕಳೆದುಹೋಗಿದೆ. ಈಗ ನನ್ನ ಸಮಯ, ನನ್ನನ್ನು ನಾನು ಗಮನಿಸಿಕೊಳ್ಳುವ ಸಮಯ ಎಂದು ಫಿಡೆಲಿ ತಮ್ಮ ಮುಂದಿನ ಜೀವನದ ಬಗ್ಗೆ ಉತ್ಸುಕರಾಗಿದ್ದಾರೆ.


ಇಂತಹ ಪ್ರಕರಣ ಹೊಸದೇನಲ್ಲ


ಹೌದು, ವ್ಯಕ್ತಿಯೊಬ್ಬರು ತನ್ನನ್ನು ತಾನು ಮದುವೆಯಾಗುತ್ತಿರುವುದು ಇದೇ ಮೊದಲೇನಲ್ಲ. ವಿದೇಶದಲ್ಲಿ ಮಾತ್ರವಲ್ಲದೆ, ಭಾರತದಲ್ಲೂ ಸಹ ಇಂತಹ ಕೆಲವು ಪ್ರಕರಣಗಳು ನಡೆದಿವೆ.


ಇದನ್ನೂ ಓದಿ:  Sharad Pawar Mango: ಮಾವಿನ ಹಣ್ಣಿಗೆ ಶರದ್ ಪವಾರ್ ಹೆಸರಿಟ್ಟ ರೈತ! ಅಭಿಮಾನ ಅಂದ್ರೆ ಇದೇ ನೋಡಿ


ಗುಜರಾತ್ ಕಂಪನಿಯೊಂದರಲ್ಲಿ ಹಿರಿಯ ನೇಮಕಾತಿ ಅಧಿಕಾರಿಯಾಗಿರುವ ಕ್ಷಮಾ ಬಿಂದು ತನ್ನನ್ನು ತಾನೇ ವಿವಾಹವಾಗುವುದಾಗಿ ಹೇಳಿ, ಜೂನ್ 11ರಂದು ಸಂಪ್ರದಾಯಬದ್ಧವಾಗಿ ದೇವಾಲಯದಲ್ಲಿ ತನ್ನನು ತಾನು ಮದುವೆಯಾಗಿ ಹನಿಮೂನ್ ಗೆ ಸಹ ಹೋಗಿದ್ದಳು. ಇದು ಭಾರತದಲ್ಲಾದ ಮೊದಲ ಸೋಲೋಗಮಿ ಅಥವಾ ಸ್ವಯಂ ವಿವಾಹ. ಇದಕ್ಕೆ ಹಲವರಿಂದ ವಿರೋಧ ಸಹ ವ್ಯಕ್ತವಾಗಿತ್ತು.

top videos


    ಇನ್ನು ಆಕ್ಸ್ ಫರ್ಡ್ ನ ಉಗಾಂಡ ಮೂಲದ ವಿದ್ಯಾರ್ಥಿನಿಯೊಬ್ಬಳು ಪೋಷಕರ “ಮದುವೆಯಾಗಲೇಬೇಕು” ಎಂಬ ಒತ್ತಡದಿಂದ ಬೇಸತ್ತು, ತನ್ನನ್ನು ತಾನೇ ವಿವಾಹವಾಗಿದ್ದಳು.

    First published: