7 ಸಾವಿರ ಕಾರುಗಳು, 2 ಸಾವಿರ ಕೋಟಿಯ ಅರಮನೆ; ಇದು ಬ್ರೂನೈ ಸುಲ್ತಾನ್​ನ ಲೈಫ್​ಸ್ಟೈಲ್!

news18
Updated:September 1, 2018, 11:32 AM IST
7 ಸಾವಿರ ಕಾರುಗಳು, 2 ಸಾವಿರ ಕೋಟಿಯ ಅರಮನೆ; ಇದು ಬ್ರೂನೈ ಸುಲ್ತಾನ್​ನ ಲೈಫ್​ಸ್ಟೈಲ್!
news18
Updated: September 1, 2018, 11:32 AM IST
-ನ್ಯೂಸ್ 18 ಕನ್ನಡ

ವಿಶ್ವದೆಲ್ಲೆಡೆ ಪ್ರಜಾಪ್ರಭುತ್ವದ ಆಡಳಿತ ನಡೆಯುತ್ತಿದೆ. ಆದರೂ ಪ್ರಪಂಚದ ಹಲವೆಡೆ ಈಗಲೂ ರಾಜಾಡಳಿತ ಇರುವುದು ಅಷ್ಟೇ ಸತ್ಯ. ರಾಜವಂಶ ಪ್ರಾಬಲ್ಯ ಹೊಂದಿರುವ ಅನೇಕ ರಾಷ್ಟ್ರಗಳಲ್ಲಿ ಬ್ರೂನೈ ದೇಶ ಕೂಡ ಒಂದು. ಮಲೇಷ್ಯಾ ಮತ್ತು ಇಂಡೊನೇಷ್ಯಾ ನಡುವಿನ ದ್ವೀಪವಾಗಿ ಬ್ರೂನೈ ಎಂಬ ಐಲ್ಯಾಂಡ್ ನೆಲೆ ನಿಂತಿದೆ. ಈ ದ್ವೀಪ ರಾಷ್ಟ್ರವನ್ನು ಆಳುತ್ತಿರುವ ರಾಜ ಸುಲ್ತಾನ್ ಹಸ್ಸನಲ್ ಬೊಲ್ಕಿಯಾ.ವಿಶ್ವದಲ್ಲಿ ಅತಿ ಹೆಚ್ಚಿನ ಸಮಯ ರಾಜವಂಶದ ಆಡಳಿತ ನಡೆಸಿದ ಖ್ಯಾತಿ ಬ್ರಿಟನ್ ರಾಣಿ ಎಲಿಜಬೆತ್(II) ಅವರ ಹೆಸರಲ್ಲಿದೆ. ಆ ನಂತರದ ದಾಖಲೆಯನ್ನು ಬ್ರೂನೈ ದೇಶದ ಸುಲ್ತಾನ್ ​ ನಿರ್ಮಿಸಿದ್ದಾರೆ.  2017 ರಲ್ಲಿ ಸುಲ್ತಾನ್ ಹಸ್ಸನಲ್ ಬೊಲ್ಕಿಯಾ 50 ವರ್ಷಗಳ ಆಡಳಿತವನ್ನು ಪೂರೈಸಿದ್ದಾರೆ. 1967ರಲ್ಲಿ ಸಿಂಹಾಸನ ಏರಿದ್ದ ಸುಲ್ತಾನ್ ಆಡಳಿತ ಈಗಲೂ ಮುಂದುವರೆದಿರುವುದು ಅಚ್ಚರಿ ವಿಷಯ.

21 ನೇ ವಯಸ್ಸಿನಲ್ಲಿ ಪಟ್ಟಾಭಿಷೇಕ

ತಮ್ಮ 21 ನೇ ವಯಸ್ಸಿನಲ್ಲಿ ದೇಶದ ಚುಕ್ಕಾಣಿ ಹಿಡಿದ ಸುಲ್ತಾನ್ ಬೊಲ್ಕಿಯಾ ತನ್ನ ದ್ವೀಪವನ್ನು ಪ್ರವಾಸೋದ್ಯಮದ ಕೇಂದ್ರವಾಗಿಸಿದ್ದಾರೆ. ಆಗ್ನೇಯ ಏಷ್ಯಾದ ಶ್ರೀಮಂತ ರಾಷ್ಟ್ರಗಳಲ್ಲಿ ಕಾಣಿಸಿಕೊಳ್ಳುವ ಬ್ರೂನೈ ದೇಶವನ್ನು ಆರ್ಥಿಕ ಅಭಿವೃದ್ದಿಯತ್ತ ಕೊಂಡೊಯ್ಯುವಲ್ಲಿ ರಾಜ ಹಸ್ಸನಲ್ ಬೊಲ್ಕಿಯಾ ಪಾತ್ರ ಬಲು ದೊಡ್ಡದು.

2500 ಕೊಠಡಿಗಳ ಅರಮನೆ
Loading...

ಬ್ರೂನೈ ದ್ವೀಪವನ್ನು ಕಳೆದ 600 ವರ್ಷಗಳಿಂದ ಬೊಲ್ಕಿಯಾ ರಾಜಮನೆತನ ಆಳುತ್ತಿದ್ದು, ಈ ರಾಜವಂಶಸ್ಥರ ನೂರುಲ್ ಅರಮನೆಯು ವಿಶ್ವದ ಅತಿದೊಡ್ಡ  ಅರಮನೆಗಳಲ್ಲಿ ಒಂದಾಗಿದೆ. 2 ಲಕ್ಷ ಚರದ ಅಡಿ ವಿಸ್ತೀರ್ಣ ಹೊಂದಿರುವ ಈ ಅರಮನೆಯಲ್ಲಿ 2500ಕ್ಕಿಂತ ಹೆಚ್ಚಿನ ಕೊಠಡಿಗಳಿವೆ. ಅಲ್ಲದೆ ಇದರಲ್ಲಿ 257 ಸ್ನಾನ ಗೃಹಗಳು, ಐದು ಈಜುಕೊಳಗಳನ್ನು ನಿರ್ಮಿಸಲಾಗಿದೆ. ಈ ಅರಮನೆಯ ಗುಮ್ಮಟಗಳನ್ನು 22 ಕ್ಯಾರೆಟ್ ಚಿನ್ನದಿಂದ ನಿರ್ಮಿಸಿರುವುದು ಮತ್ತೊಂದು ವಿಶೇಷ. ಒಟ್ಟಾರೆ ಹೇಳಬೇಕೆಂದರೆ ನೂರುಲ್ ಅರಮನೆಯ ಇಂದಿನ ಒಟ್ಟು ಮೌಲ್ಯ ಬರೋಬ್ಬರಿ 2387 ಕೋಟಿ.ರೂ.

ಏಳು ಸಾವಿರ ಕಾರುಗಳ ಒಡೆಯ

ಬ್ರೂನೈ ಸುಲ್ತಾನನ ಜೀವನ ಶೈಲಿ ಹೇಗಿದೆ ಎಂದು ತಿಳಿಯಲು ಅವರು ಹೊಂದಿರುವ ಕಾರುಗಳ ಲೆಕ್ಕವನ್ನು ನೋಡಿದರೆ ಸಾಕು. ಐಷಾರಾಮಿ, ಸ್ಪೋರ್ಟ್ಸ್, ಸ್ಪೆಷಲ್ ಎಡಿಷನ್ ಮತ್ತು ವಿಂಟೇಜ್ ಕಾರುಗಳು ಸೇರಿದಂತೆ ಸರಿ ಸುಮಾರು 7 ಸಾವಿರ ಕಾರುಗಳ ಒಡೆಯ ಬೋರ್ನಿಯೋ ಸುಲ್ತಾನ್. ಈ ಕಾರುಗಳ ಒಟ್ಟು ಮೌಲ್ಯವನ್ನು ಕೂಡಿಸಿದರೆ 3400 ಕೋಟಿ ರೂ. ದಾಟುತ್ತದೆ. ಇದರಲ್ಲಿ 4 ಕೋಟಿ ಬೆಲೆಬಾಳುವ 604 ರೋಲ್ಸ್ ರಾಯ್ಸ್ ಕಾರುಗಳು,  452 ಫೆರಾರಿ ಕಾರು ಮತ್ತು ಒಂದು ಹಡಗು ಸೇರಿದೆ. ಅಷ್ಟೇ ಅಲ್ಲದೆ ತಮಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ 22 ಕೋಟಿ ಡಾಲರ್​ನ ವಿಮಾನವನ್ನು ಸುಲ್ತಾನ್ ಹೊಂದಿದ್ದಾರೆ.

AFP / POOL / WALLY SANTANA


ಹೇರ್ ಕಟ್​ಗೆ 13 ಲಕ್ಷ ರೂ.

ಅದ್ಧೂರಿ ಜೀವನ ಶೈಲಿಯನ್ನು ಮುನ್ನಡೆಸುತ್ತಿರುವ ಸುಲ್ತಾನ್ ಹಸ್ಸನಲ್ ಬೊಲ್ಕಿಯಾ ಅವರಿಗೆ ಮೂವರು ಪತ್ನಿಯರು. ಇವರಿಗೆ ವಾರಸುದಾರರಾಗಿ ಐವರು ಗಂಡುಮಕ್ಕಳು ಮತ್ತು ಏಳು ಹೆಣ್ಣು ಮಕ್ಕಳಿದ್ದಾರೆ. ಇವೆಲ್ಲಕ್ಕಿಂತ ಅಚ್ಚರಿ ಸಂಗತಿಯೆಂದರೆ ಸುಲ್ತಾನ್ ಒಂದು ಬಾರಿ ಕೇಶ ವಿನ್ಯಾಸಕ್ಕಾಗಿ ವ್ಯಯಿಸುವ ವೆಚ್ಚ. ಹೌದು, ಹೇರ್ ಕಟ್​ಗಾಗಿ ಸುಲ್ತಾನ್ ಖರ್ಚು ಮಾಡುತ್ತಿರುವುದು ಬರೋಬ್ಬರಿ 13 ಲಕ್ಷ ರೂ. ಎಂದರೆ ನಂಬಲೇ ಬೇಕು.ಭಾರತದೊಂದಿಗೆ ಉತ್ತಮ ಬಾಂಧವ್ಯ

ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಬ್ರೂನೈ ಸುಲ್ತಾನ್ 69ನೇ ಗಣರಾಜ್ಯೋತ್ಸವದಂದು ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಗಣರಾಜೋತ್ಸವದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಿದ ರಾಜ ಹಸ್ಸನಲ್ ಬೊಲ್ಕಿಯಾ ಖುದ್ದು ವಿಮಾನವನ್ನು ಚಲಾಯಿಸಿದ್ದರು. 71 ವರ್ಷದ ಸುಲ್ತಾನ್ ಬ್ರೂನೈನಿಂದ ದೆಹಲಿಯವರೆಗೆ 4 ಸಾವಿರದ ಏಳುನೂರು ಕಿ.ಮೀ ವಿಮಾನ ಚಲಾಯಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ