ದೆಹಲಿ ಜನರ ಬಾಯಾರಿಕೆ ತಣಿಸುವ 'ಮಡಕೆ ಮ್ಯಾನ್'

news18
Updated:May 7, 2018, 12:19 PM IST
ದೆಹಲಿ ಜನರ ಬಾಯಾರಿಕೆ ತಣಿಸುವ 'ಮಡಕೆ ಮ್ಯಾನ್'
news18
Updated: May 7, 2018, 12:19 PM IST
ನ್ಯೂಸ್ 18 ಕನ್ನಡ

ಬೇಸಿಗೆಯಲ್ಲಿ ಬಾಯಾರಿಕೆ ಹೆಚ್ಚಾಗಿರುತ್ತದೆ. ಇಂತಹ ಸಮಯದಲ್ಲಿ ಕುಡಿಯಲು ಶುದ್ಧ ನೀರು ಸಿಗದಿದ್ದರೆ ಆಗುವ ಪಾಡು ಹೇಳ ತೀರದು. ಆದರೆ ದಕ್ಷಿಣ ದೆಹಲಿಯ ವಿವಿಧ ಭಾಗಗಳಲ್ಲಿ ಇಂತಹ ಸಮಸ್ಯೆ ಕಂಡು ಬರುವುದಿಲ್ಲ. ಏಕೆಂದರೆ ಅಲ್ಲೊಬ್ಬರು 'ಮಟ್ಕಾಮ್ಯಾನ್'(ಮಡಕೆ ಮನುಷ್ಯ) ಇದ್ದಾರೆ.

ಹೌದು, ದೆಹಲಿಯ ಪಂಚೀಲ್ ಪಾರ್ಕ್​ ನಿವಾಸಿ ನಟರಾಜನ್ ಅವರು ಸುತ್ತಮುತ್ತಲಿನ ಜನರಿಗೆ 'ಮಟ್ಕಾಮ್ಯಾನ್' ಎಂಬ ಹೆಸರಿನಿಂದ ಚಿರ ಪರಿಚಿತ. ಈ ಭಾಗದ ಜನರ ಬಾಯಾರಿಕೆಯನ್ನು ತಣಿಸಲು ನಟರಾಜನ್ ಮಾಡುತ್ತಿರುವ ಸಾಮಾಜಿಕ ಸೇವೆಯೇ ಅವರಿಗೆ ಈ ಹೆಸರು ತಂದು ಕೊಟ್ಟಿದೆ. ದಕ್ಷಿಣ ದೆಹಲಿ ಭಾಗದ 70 ಸ್ಥಳಗಳಲ್ಲಿ ನಟರಾಜನ್​ ಅವರು ಮಡಕೆಗಳಲ್ಲಿ ಕುಡಿಯುವ ನೀರು ತುಂಬಿಸಿ ಇಡುತ್ತಾರೆ. ಬೆಳಿಗ್ಗೆ ನಾಲ್ಕುವರೆ ಗಂಟೆಗೆ ಪ್ರಾರಂಭಿಸುವ ಅವರ ಉದಾತ್ತ ಸೇವೆಯಿಂದ ಅನೇಕರು ತಮ್ಮ ದಾಹವನ್ನು ನೀಗಿಸಿಕೊಳ್ಳುತ್ತಿದ್ದಾರೆ,

ಲಂಡನ್​ನಲ್ಲಿ 32 ವರ್ಷಗಳ ಕಾಲ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿರುವ 68ರ ನಟರಾಜನ್ ಅವರದು ಸದ್ಯ ನಿವೃತ್ತಿ ಬದುಕು. 2005ರಲ್ಲಿ ಸ್ವದೇಶಕ್ಕೆ ಮರಳಿದ ಇವರು ಕ್ಯಾನ್ಸರ್ ರೋಗಕ್ಕೆ ಈಡಾಗಿದ್ದರು. ನಿರಂತರ ಚಿಕಿತ್ಸೆಯ ಮೂಲಕ ಕ್ಯಾನ್ಸರ್ ರೋಗವನ್ನು ಗೆದ್ದ ನಟರಾಜನ್​ ಅವರು ತಮ್ಮ ಜೀವನವನ್ನು ಸಾಮಾಜ ಸೇವೆಗೆ ಮುಡಿಪಾಗಿಡಲು ನಿರ್ಧರಿಸಿದರು. ಜೀವನದಲ್ಲಿ ಸಾರ್ಥಕತೆ ಮೆರೆಯಲು ಕ್ಯಾನ್ಸರ್ ಆಸ್ಪ್ರತ್ರೆಯಿಂದಲೇ ತಮ್ಮ ಸೇವಾ ಕಾರ್ಯ ಆರಂಭಿಸಿದ್ದರು. ಅಷ್ಟೇ ಅಲ್ಲದೆ ಬಡವರಿಗೆ ಶವಸಂಸ್ಕಾರ ಮಾಡಲು ಕೂಡ ಇವರು ನೆರವಾಗುತ್ತಾರೆ.

ಒಂದು ದಿನ ಬಾಯಾರಿದಾಗ ಉಚಿತ ನೀರಿನ ಸೇವೆಯ ಬಗ್ಗೆ ಯೋಚನೆ ನಟರಾಜನ್ ಅವರಿಗೆ ಹೊಳೆಯಿತ್ತಂತೆ. ಅಂದಿನಿಂದ ಪ್ರಾರಂಭವಾದ ಮಡಕೆ ಮ್ಯಾನ್​ನ ನೀರುದಾನ ಇಂದು ದೆಹಲಿಯ 70 ಸ್ಥಳಗಳ ಜನರ ಬಾಯಾರಿಕೆಯನ್ನು ತಣಿಸುವಲ್ಲಿ ಮುಖ್ಯ ಪಾತ್ರವಹಿಸಿದೆ. ಇವರು ಸ್ವತಃ ದಿನಕ್ಕೆ ನಾಲ್ಕು ಬಾರಿ ಮಡಕೆಯಲ್ಲಿನ ನೀರನ್ನು ಪರಿಶೀಲಿಸುತ್ತಾರೆ. ಇದರ ಹೊರತಾಗಿ ಪ್ರತಿ ಮಡಕೆಯ ಮೇಲೂ ಅವರ ಫೋನ್ ನಂಬರ್​ ಬರೆದಿಡಲಾಗಿದೆ. ನೀರು ಖಾಲಿಯಾದರೆ ಆ ನಂಬರ್​ಗೆ ಫೋನ್ ಮಾಡಿದರೆ ಸಾಕು, ಖುದ್ದು ನಟರಾಜನ್ ಅವರೇ ಬಂದು ನೀರು ತುಂಬಿಸುತ್ತಾರೆ.
First published:May 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ