• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • 3 ಕೋಟಿ ರೂ ಮೌಲ್ಯದ ಕಲಾಕೃತಿಯನ್ನು ಪೇಂಟಿಂಗ್‌ ಮೂಲಕವೇ ಹಾನಿ ಮಾಡಿದ ಸಿಯೋಲ್‌ ದಂಪತಿ..!

3 ಕೋಟಿ ರೂ ಮೌಲ್ಯದ ಕಲಾಕೃತಿಯನ್ನು ಪೇಂಟಿಂಗ್‌ ಮೂಲಕವೇ ಹಾನಿ ಮಾಡಿದ ಸಿಯೋಲ್‌ ದಂಪತಿ..!

ಕಲಾಕೃತಿ

ಕಲಾಕೃತಿ

ಅಮೆರಿಕದ ಖ್ಯಾತ ಗ್ರಾಫಿಟಿ ಕಲಾವಿದ ಜೊನೊನ್ ಅವರ ಕಲಾಕೃತಿಗಳನ್ನು ಹಾನಿಗೊಳಿಸಿದ ಆರೋಪ ದಕ್ಷಿಣ ಕೊರಿಯಾದ ದಂಪತಿಗೆ ಎದುರಾಗಿದೆ. ಆ ಕೋಟ್ಯಂತರ ರೂ. ಮೌಲ್ಯದ ಕಲಾಕೃತಿಯನ್ನು ಪಾರ್ಟಿಸಿಪೇಟರಿ ಆರ್ಟ್ ಎಂದು ತಪ್ಪಾಗಿ ಭಾವಿಸಿದ್ದಾರೆ ಎಂದು ಪ್ರದರ್ಶನದ ಮುಖ್ಯಸ್ಥರು ಶುಕ್ರವಾರ ಹೇಳಿದರು.

ಮುಂದೆ ಓದಿ ...
  • Share this:

ದಕ್ಷಿಣ ಕೊರಿಯಾ(ಏಪ್ರಿಲ್ 05): ಚಿತ್ರಕಲೆ ಬಿಡಿಸುವುದು ಅಂದರೆ ಹಲವರಿಗೆ ಇಷ್ಟ. ಕೆಲವು ಕಲಾಕೃತಿಗಳು, ಪೇಂಟಿಂಗ್‌ಗಳು ಕೋಟಿಗಟ್ಟಲೆ ಮೌಲ್ಯ ಬೆಲೆಬಾಳುತ್ತದೆ. ಆದರೆ, ಈ ರೀತಿ ಕೋಟಿಗಟ್ಟಲೆ ಮೌಲ್ಯದ ಕಲಾಕೃತಿಯನ್ನು ಕೇವಲ ಬಣ್ಣ ಬಳಿಯುವ ಮೂಲಕವೇ ಹಾನಿ ಮಾಡಿರುವ ಘಟನೆ ದಕ್ಷಿಣ ಕೊರಿಯಾದಲ್ಲಿ ನಡೆದಿದೆ. ಇನ್ನು, ಪೇಂಟಿಂಗ್‌ ಅನ್ನು ಹಾನಿಮಾಡಿದ್ದು ಯಾಕೆ ಗೊತ್ತಾ..?


ಅಮೆರಿಕದ ಖ್ಯಾತ ಗ್ರಾಫಿಟಿ ಕಲಾವಿದ ಜೊನೊನ್ ಅವರ ಕಲಾಕೃತಿಗಳನ್ನು ಹಾನಿಗೊಳಿಸಿದ ಆರೋಪ ದಕ್ಷಿಣ ಕೊರಿಯಾದ ದಂಪತಿಗೆ ಎದುರಾಗಿದೆ. ಆ ಕೋಟ್ಯಂತರ ರೂ. ಮೌಲ್ಯದ ಕಲಾಕೃತಿಯನ್ನು ಪಾರ್ಟಿಸಿಪೇಟರಿ ಆರ್ಟ್ ಎಂದು ತಪ್ಪಾಗಿ ಭಾವಿಸಿದ್ದಾರೆ ಎಂದು ಪ್ರದರ್ಶನದ ಮುಖ್ಯಸ್ಥರು ಶುಕ್ರವಾರ ಹೇಳಿದರು. 240cm x 700cm ಅಳತೆಯ ಶೀರ್ಷಿಕೆರಹಿತ ಕಲಾಕೃತಿಯ ಮೌಲ್ಯ 500,000 ಡಾಲರ್‌ ನಷ್ಟಿದೆ ಎಂದು ಅಂದಾಜಿಸಲಾಗಿದೆ. ಈ ಕಲಾಕೃತಿಯನ್ನು ಸಿಯೋಲ್‌ನಲ್ಲಿ ಪ್ರೇಕ್ಷಕರ ಸಮ್ಮುಖದಲ್ಲಿ 2016 ರಲ್ಲಿ ಜೊನ್‌ಒನ್ ಚಿತ್ರಿಸಿದ್ದರು.


ಆ ಕಲಾಕೃತಿಯೊಂದಿಗೆ ಪೇಂಟ್‌ನ ಕ್ಯಾನ್‌ಗಳು ಮತ್ತು ಬ್ರಷ್‌ಗಳನ್ನು ಅಥವಾ ಕುಂಚಗಳನ್ನು ಇಡಲಾಗಿತ್ತು. ಏಕೆಂದರೆ ಅದನ್ನೂ ಕಲಾಕೃತಿಯ ಭಾಗವನ್ನಾಗಿ ಪರಿಗಣಿಸಲಾಗಿತ್ತು. ಆದರೆ, ಅದನ್ನು ತಪ್ಪಾಗಿ ತಿಳಿದ ದಂಪತಿ ನಾವೂ ಅದರಲ್ಲಿ ಪೇಂಟಿಂಗ್ ಮಾಡಬಹುದು ಎಂದು ತಿಳಿದು ಆ ರೀತಿ ಎಡವಟ್ಟಾಗಿದೆ ಎಂದು ತಿಳಿದುಬಂದಿದೆ. ಸಿಯೋಲ್‌ನ ಲೋಟ್ಟೆ ಲೊಟ್ಟೆ ವರ್ಲ್ಡ್ ಮಾಲ್‌ನ ಗ್ಯಾಲರಿಯೊಂದರಲ್ಲಿ ಅದನ್ನು ಪ್ರದರ್ಶನಕ್ಕೆ ಇಡಲಾಗಿತ್ತು.


ಭಾನುವಾರ ಆ ಘಟನೆ ನಡೆದಿದ್ದು, ಪುರುಷ ಹಾಗೂ ದಂಪತಿ ಕೆಲವು ಬಣ್ಣಗಳನ್ನು ತೆಗೆದುಕೊಂಡು ತಮಗಿಷ್ಟಬಂದಂತೆ ಕಲಾಕೃತಿಯ ಮೇಲೆ ಉಜ್ಜಿದ್ದಾರೆ ಎಂಬುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಗ್ಯಾಲರಿ ಪ್ರದರ್ಶನ ಸಿಬ್ಬಂದಿ ಹೇಳಿದ್ದಾರೆ.


ನಂತರ ಪೊಲೀಸರು ದಂಪತಿಯನ್ನು ಬಂಧಿಸುವ ಮೊದಲು ಮಾಲ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ನಂತರ ಅವರದು ಪ್ರಾಮಾಣಿಕ ತಪ್ಪು ಎಂದು ತೋರುತ್ತಿರುವುದರಿಂದ ಅವರ ಮೇಲೆ ಆರೋಪಗಳನ್ನು ಸಲ್ಲಿಸದಿರಲು ನಿರ್ಧರಿಸಿದೆ ಎಂದು ಪ್ರದರ್ಶನದ ಮುಖ್ಯಸ್ಥ ಕಾಂಗ್ ವೂಕ್ ಹೇಳಿದರು. ಈ ಹಿನ್ನೆಲೆ ಆ ದಂಪತಿಯನ್ನು ವಶಕ್ಕೆ ಪಡೆದ ಕೆಲ ಹೊತ್ತಿನಲ್ಲೇ ಪೊಲೀಸರು ಬಿಡುಗಡೆ ಮಾಡಿದ್ದಾರೆ.


"ಅವರು ಅದನ್ನು ಪಾರ್ಟಿಸಿಪೇಟರಿ ಆರ್ಟ್‌ ಎಂದು ತಿಳಿದು ಅದರಲ್ಲಿ ಪೇಂಟಿಂಗ್ ಮಾಡಲು ಅವಕಾಶವಿದೆ ಎಂದು ಭಾವಿಸಿ ತಪ್ಪು ಮಾಡಿದ್ದಾರೆ''. ''ನಾವು ಪ್ರಸ್ತುತ ಅದನ್ನು ಪುನಃಸ್ಥಾಪಿಸಬೇಕೆ ಎಂಬ ಬಗ್ಗೆ ಕಲಾವಿದರೊಂದಿಗೆ ಚರ್ಚಿಸುತ್ತಿದ್ದೇವೆ." ಎಂದೂ ಕಾಂಗ್ ವೂಕ್ ಹೇಳಿದ್ದಾರೆ.


ಇನ್ನೊಂದೆಡೆ, ಆ ಘಟನೆಯ ನಂತರ ಗ್ಯಾಲರಿಯು ತಂತಿ ಬೇಲಿ ಅಳವಡಿಸಿದ್ದು, ಮತ್ತು “ಮುಟ್ಟಬೇಡಿ” ಎಂಬ ಹೆಚ್ಚುವರಿ ಚಿಹ್ನೆಗಳನ್ನು ಹಾಕಿದೆ.


ಇನ್ನು, ಆ ಕಲಾಕೃತಿ ಪ್ರದರ್ಶನ ಕಾರ್ಯಕ್ರಮದ ಬಗ್ಗೆ ಆ ಘಟನೆಯ ನಂತರ ವಿಚಾರಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಕೆಲವು ಸಂದರ್ಶಕರು ಶುಕ್ರವಾರ ಹಾನಿಗೊಳಗಾದ ಕಲಾಕೃತಿಯ ಫೋಟೋ ತೆಗೆಯುತ್ತಿದ್ದರು ಎಂದು ಕಾಂಗ್ ಹೇಳಿದ್ದಾರೆ.

Published by:Soumya KN
First published: