ಕರಡಿಯನ್ನು (Bear) ಕಾಡಿನಲ್ಲಿ ಅತ್ಯಂತ ಭಯಭೀತ ಪ್ರಾಣಿಗಳೆಂದು ಪರಿಗಣಿಸಲಾಗಿದೆ. ಸಿಂಹದ ವಿರುದ್ಧ ಹೋರಾಡುವ ಶಕ್ತಿಯೂ ಕರಡಿಗೆ ಇದೆ. ಕೆಲವೊಮ್ಮೆ, ಅದರ ದೊಡ್ಡ ಉಗುರುಗಳು ಅವುಗಳನ್ನು ಸಿಂಹಗಳಿಗಿಂತ ಶಾರ್ಪ್ ಇರುತ್ತದೆ. ಕರಡಿಗಳು ಸುಲಭವಾಗಿ ಮರಗಳನ್ನು ಏರಬಹುದು. ಇಂತಹ ಪರಿಸ್ಥಿತಿಯಲ್ಲಿ ಕಾಡಿನಲ್ಲಿ ಸಿಲುಕಿ ಕರಡಿಗೆ ಸಿಕ್ಕಿಬಿದ್ದರೆ ಬದುಕು ದುಸ್ತರವಾಗುತ್ತದೆ. ಕರಡಿಗಳು ಜೇನುತುಪ್ಪವನ್ನು ಪ್ರೀತಿಸುತ್ತಿದ್ದರೂ, ಈ ಪ್ರಾಣಿಗಳು (Animal) ವಾಸ್ತವವಾಗಿ ಮಾಂಸಾಹಾರಿಗಳಾಗಿವೆ. ಕರಡಿ ಹತ್ತಿರ ಬರುತ್ತಿದ್ದಂತೆಯೇ, ಸತ್ತಂತೆ ಮಲಗುತ್ತಾನೆ. ಈ ಕಥೆಯನ್ನೂ (Story) ನಾವು ಕೇಳಿರಬಹುದು. ಅದೇ ರೀತಿಯಾಗಿ ಕರಡಿಗಳು ಸತ್ತ ಮನುಷ್ಯನನ್ನು ತಿನ್ನುವುದಿಲ್ಲ. ಇದೀಗ ಒಂದು ವಿಡಿಯೋ ಸಖತ್ ವೈರಲ್ (Viral) ಆಗ್ತಾ ಇದೆ.
ಈ ಕಾರಣಕ್ಕಾಗಿ ಜನರು ಕರಡಿಗಳಿಂದ ದೂರವಿರಲು ಸೂಚಿಸಲಾಗಿದೆ. ಪ್ರಸ್ತುತ, ಅಂತಹ ಒಂದು ಕರಡಿಯ ವೀಡಿಯೊ ವೈರಲ್ ಆಗುತ್ತಿದೆ, ಇದು ಉಲ್ಲಾಸಕರ ಮತ್ತು ಆಘಾತಕಾರಿಯಾಗಿದೆ. ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ಕಾರನ್ನು ಒಡೆಯಲು ಪ್ರಯತ್ನಿಸುತ್ತಿದೆ. ಆದರೆ ನಂತರ ಏನಾಗುತ್ತದೆ ಅಂತ ನೀವೇ ನೋಡಿ.
ಕರಡಿಯೊಂದು ಏನನ್ನೋ ಹುಡುಕಿಕೊಂಡು ಕಾರ್ ಪಾರ್ಕಿಂಗ್ಗೆ ಬಂದಿದೆ. ಆದರೆ ಆ ಕರಡಿಗೆ ಕಾದಿತ್ತುಒಂದು ಶಾಕ್! ಏನಾದ್ರೂ ತಿನ್ನಲು ಸಿಗುತ್ತಾ ಅಂತ ಕರಡಿ ಕಾಯುತ್ತಾ ಇದೆ. ಕರಡಿ ಕಾರಿನ ಬಾಗಿಲು ತೆರೆದು ಒಳಗೆ ಹೋಗಲು ಹೇಗೆ ಪ್ರಯತ್ನಿಸುತ್ತಿದೆ ಎಂಬುದನ್ನು ವೀಡಿಯೊದಲ್ಲಿ ನೀವು ನೋಡಬಹುದು. ಇದನ್ನು ನೋಡಿ ಅಲ್ಲಿ ನಿಂತಿದ್ದ ಮಕ್ಕಳು ಜೋರಾಗಿ ಕಿರುಚಲು ಪ್ರಾರಂಭಿಸುತ್ತಾರೆ. ಹಾಗೆ ಕಾರ್ ಬಾಗಿಲನ್ನು ತೆಗೆಯಲು ಪ್ರಯತ್ನಿಸುತ್ತದೆ, ಅದು ಸಡನ್ ಆಗಿ ಓಪನ್ ಆಗುತ್ತೆ.
Why the bear looked shook lol pic.twitter.com/tpYyIA9rs6
— Lance🇱🇨 (@BornAKang) December 31, 2022
ಇದನ್ನೂ ಓದಿ: ಕಾಳಗಕ್ಕೆ ರೆಡಿಯಾಗಿದ್ದ ಹುಂಜಗಳು ಲಾಕ್, ಟ್ರೀಟ್ಮೆಂಟ್ಗೆ ಅಂತ 5 ಸಾವಿರ ಖರ್ಚು ಮಾಡಿದ ಖಾಕಿ ಪಡೆ!
ಪ್ರಾಣಿಗಳು ತನ್ನ ಪ್ರದೇಶ ಬಿಟ್ಟು ಮನುಷ್ಯ ಇರುವ ಸ್ಥಳಕ್ಕೆ ಬರುತ್ತಾ ಇದೆ ಅಂದ್ರೆ, ಅದು ಪ್ರಾಣಿಗಳ ತಪ್ಪಲ್ಲ. ಪ್ರಾಣಿಗಳು ಇದ್ದ ಸ್ಥಳಕ್ಕೆ ಮನುಷ್ಯ ಬಂದು ನೆಲೆ ನಿಂತಿದ್ದಾನೆ ಎಂದು ಅರ್ಥ. ಹೀಗಾಗಿ ಅವುಗಳು ತನ್ನ ಪ್ರದೇಶಕ್ಕೆ ಬರುತ್ತವೆ. ಎಂದಿಗೂ ಆಹಾರಗಳನ್ನು ಅರುಸುತ್ತಾ ಇರುತ್ತವೆ. ಹೀಗಾಗಿಯೇ ಪ್ರಾಣಿಗಳು ಕಾಡಿನಿಂದ ನಾಡಿಗೆ ಬರುವುದು.
ಇವುಗಳಿಗೆ ಮನುಷ್ಯರು ನಾನಾರೀತಿಯಾಗಿ ಉಪದ್ರಗಳನ್ನು ನೀಡುತ್ತಾರೆ. ಇಂತಹ ಅದೆಷ್ಟೋ ವಿಡಿಯೋ, ಸುದ್ದಿಗಳು ವೈರಲ್ ಆಗ್ತಾನೇ ಇರುತ್ತೆ. ಪಾಪ ಈ ಕರಡಿಯನ್ನು ನೋಡಿದರೇ ನಗಬೇಕೊ, ಅಳಬೇಕೋ ಎಂದು ತಿಳಿಯುವುದಿಲ್ಲ.
@BornAKang ಹೆಸರಿನ ಖಾತೆಯಿಂದ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಟ್ವಿಟರ್ನಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಕೇವಲ 18 ಸೆಕೆಂಡುಗಳ ಈ ವೀಡಿಯೊ 6.7 ಮಿಲಿಯನ್ ಅಂದರೆ 67 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ವಿಡಿಯೋವನ್ನು ಲಕ್ಷಾಂತರ ಮಂದಿ ಲೈಕ್ ಮಾಡಿದ್ದಾರೆ. ಈ ವಿಡಿಯೋಗೆ ಜನರು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ