Twitter: ಟ್ವಿಟ್ಟರ್ ಸಿಇಒ ಪರಾಗ್ ಅಗ್ರವಾಲ್ ಪತ್ನಿ ಎಂಥಾ ಬುದ್ದಿವಂತೆ ಗೊತ್ತೇ..?

Twitter: ಸದ್ಯಕ್ಕೆ ವಿನೀತಾ ಈಗ ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಪರಾಗ್ ಮತ್ತು ಪುಟ್ಟ ಮಗನಾದ ಅನ್ಶ್ ಅವರೊಂದಿಗೆ ವಾಸಿಸುತ್ತಿದ್ದಾರೆ.

ವಿನೀತಾ ಅಗರವಾಲ್‌

ವಿನೀತಾ ಅಗರವಾಲ್‌

  • Share this:
ಇತ್ತೀಚೆಗೆ ಜನಪ್ರಿಯ ಸಾಮಾಜಿಕ ಮಾಧ್ಯಮವಾದ (Social Media)ಟ್ವಿಟ್ಟರ್‌​ನ (Twitter')ಹೊಸ ಸಿಇಒ ಆಗಿ ಭಾರತೀಯ ಮೂಲದ(Indian-born) ಪರಾಗ್ ಅಗರವಾಲ್‌ರನ್ನು(Parag Agrawal) ಆಯ್ಕೆ ಮಾಡಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಈ ಸ್ಥಾನ ವಹಿಸಿಕೊಂಡಾಗಿನಿಂದಲೂ ಪರಾಗ್​ ಅಗರವಾಲ್‌ಗೆ ಜನರಿಂದ ಅಭಿನಂದನೆಯ ಸಂದೇಶಗಳ ಮಹಾಪೂರವೇ ಹರಿದು ಬರುತ್ತಿದೆ ಎಂದು ಹೇಳಬಹುದು.ಪರಾಗ್​ ಅಗರವಾಲ್‌​ ಟ್ವಿಟ್ಟರ್​ ಸಿಇಒ ಸ್ಥಾನವನ್ನು ಅಲಂಕರಿಸಿದ ಬಳಿಕ ಅವರ ಕುರಿತಾಗಿ ಹಲವಾರು ಸುದ್ದಿಗಳು ವೈರಲ್​ ಆಗುತ್ತಿವೆ. ಅಲ್ಲದೆ ಜನರು ಸಹ ಅಂತರ್ಜಾಲದಲ್ಲಿ ಇವರ ವೈಯ್ಯಕ್ತಿಕ ಜೀವನದಿಂದ ಹಿಡಿದು, ಫೋಟೋ, ಅವರು ವಿದ್ಯಾಭ್ಯಾಸ ಮಾಡಿದ ಕಾಲೇಜು, ಕಲಿತಂತಹ ಕೋರ್ಸ್​, ಭಾರತದ(India) ಯಾವ ರಾಜ್ಯದವರು ಇವರು, ಹೀಗೆ ಅನೇಕ ಕುತೂಹಲ (Interesting)ಪ್ರಶ್ನೆಗಳಿಗೆ ಉತ್ತರವನ್ನು ಇವತ್ತಿನವರೆಗೂ ತಿಳಿದುಕೊಳ್ಳುತ್ತಲೇ ಇದ್ದಾರೆ. ಒಟ್ಟಾರೆ ಟ್ವಿಟ್ಟರ್​ ನೂತನ ಸಿಇಒ ಪರಾಗ್​ ಅಗರವಾಲ್‌ ​ಹೆಸರು ಟ್ರೆಂಡಿಂಗ್​​ನಲ್ಲಿರುವುದಂತೂ ಸುಳ್ಳಲ್ಲ.

ವಿನೀತಾ ಅಗರವಾಲ್‌ ಅವರ ಬಗ್ಗೆ
ನಿಮ್ಮ ಕುತೂಹಲ ಮತ್ತು ಹುಡುಕಾಟಕ್ಕೆ ನಮ್ಮ ಕಡೆಯಿಂದಲೂ ಒಂದು ಮುಖ್ಯವಾದ ಮಾಹಿತಿ ನಿಮಗೆ ಒದಗಿಸುತ್ತೇವೆ. ಅದೇನಪ್ಪಾ ನಮಗೆ ಗೊತ್ತಿರದ ಮಾಹಿತಿ ಅಂತಾ ನಿಮ್ಮ ಮನಸ್ಸಿನಲ್ಲಿ ಪ್ರಶ್ನೆಯೊಂದು ಮೂಡಬಹುದು. ಜನರು ಪರಾಗ್ ವಯಸ್ಸು, ಸಂಬಳ ಮತ್ತು ಕುಟುಂಬದ ವಿವರಗಳನ್ನು ಗೂಗ್ಲಿಂಗ್ ಮಾಡಲು ಈಗಾಗಲೇ ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ: Parag Agrawal: IIT Bombayಯಿಂದ Twitter CEOವರೆಗೆ ಪರಾಗ್​ ಅಗರ್ವಾಲ್​ ಕುರಿತ ಕೆಲವು ಮಾಹಿತಿ!

ಪರಾಗ್ ಪತ್ನಿ ವಿನೀತಾ ಅಗರವಾಲ್‌ ಅವರ ಬಗ್ಗೆ ನಿಮಗೆ ಗೊತ್ತೇ..? ನಾವು ವಿಷಯಗಳನ್ನು ತಿಳಿದುಕೊಳ್ಳುತ್ತಾ ಹೋದಂತೆ ನಮಗೆ ಒಂದು ಅವರ ಬಗ್ಗೆ ಪ್ರಭಾವಶಾಲಿ ಮಾಹಿತಿ ಸಿಕ್ಕಿತು. ಅವರು ಎಂಥಾ ಬುದ್ದಿವಂತೆ ಗೊತ್ತೇ ನಿಮಗೆ, ಅವರು ಓದಿರುವುದನ್ನು ನೀವು ಕೇಳಿದರೆ ನಿಮ್ಮ ಕಣ್ಣಿನ ಹುಬ್ಬು ಮೇಲೇರದೆ ಇರದು. ಅವರು ಏನು ಓದಿರುವುದು ಮತ್ತು ಯಾವ ಹುದ್ದೆಯಲ್ಲಿದ್ದಾರೆ ತಿಳಿದುಕೊಳ್ಳೋಣ ಬನ್ನಿ.

ವೃತ್ತಿಯಲ್ಲಿ ವೈದ್ಯೆ
ಸದ್ಯಕ್ಕೆ ವಿನೀತಾ ಈಗ ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಪರಾಗ್ ಮತ್ತು ಪುಟ್ಟ ಮಗನಾದ ಅನ್ಶ್ ಅವರೊಂದಿಗೆ ವಾಸಿಸುತ್ತಿದ್ದಾರೆ. ಅವರ ಟ್ವಿಟ್ಟರ್‌ ಬಯೋ ಪ್ರಕಾರ, ವಿನೀತಾ ವೃತ್ತಿಯಲ್ಲಿ ಒಬ್ಬ ವೈದ್ಯರಾಗಿದ್ದಾರೆ ಮತ್ತು ಸ್ಟ್ಯಾನ್‌ಫೋರ್ಡ್ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಸಹಾಯಕ ಕ್ಲಿನಿಕಲ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಷ್ಟೇ ಅಲ್ಲ, ಅವರು ವೆಂಚರ್ ಕ್ಯಾಪಿಟಲ್ ಕಂಪನಿ ಆ್ಯಂಡ್ರೆಸೆನ್ ಹೋರೊವಿಟ್ಜ್‌ಗಾಗಿ ಬರೆಯುತ್ತಾರೆ.

ಸಹಾಯಕ ಕ್ಲಿನಿಕಲ್ ಪ್ರೊಫೆಸರ್
ಕಂಪನಿಯ ವೆಬ್‌ಸೈಟ್‌ ಪ್ರಕಾರ, ವಿನೀತಾ ಆಶ್ಚರ್ಯಕರವಾದ ಶೈಕ್ಷಣಿಕ ಮತ್ತು ವೃತ್ತಿಪರ ಇತಿಹಾಸ ಹೊಂದಿದ್ದಾರೆ. ವಿನೀತಾ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಜೈವಿಕ ಭೌತಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿ ಮತ್ತು ಹಾರ್ವರ್ಡ್ ವೈದ್ಯಕೀಯ ಶಾಲೆಯಿಂದ ಎಂ.ಡಿ ಮತ್ತು ಪಿಎಚ್‌ಡಿ ಪದವಿಗಳನ್ನು ಹೊಂದಿದ್ದಾರೆ ಮತ್ತು ಆ್ಯಂಡ್ರೆಸೆನ್ ಹೋರೊವಿಟ್ಜ್‌ನಲ್ಲಿ ಪಾಲುದಾರರಾಗಿದ್ದಾರೆ.

ಅವರು ಸ್ಟ್ಯಾನ್‌ಫೋರ್ಡ್‌ನಲ್ಲಿ ತನ್ನ ಕ್ಲಿನಿಕಲ್ ರೆಸಿಡೆನ್ಸಿ ಪೂರ್ಣಗೊಳಿಸಿದರು ಮತ್ತು ‘ಇಂಟರ್‌ನಲ್ ಮೆಡಿಸಿನ್’ ನಲ್ಲಿ ಬೋರ್ಡ್‌ನಿಂದ ಪ್ರಮಾಣೀಕರಿಸಲ್ಪಟ್ಟಿದ್ದಾರೆ. ವಿನೀತಾ ಸ್ಟ್ಯಾನ್‌ಫೋರ್ಡ್‌ನಲ್ಲಿ ಸಹಾಯಕ ಕ್ಲಿನಿಕಲ್ ಪ್ರೊಫೆಸರ್ ಆಗಿ ರೋಗಿಗಳನ್ನು ಸಹ ನೋಡುವ ಕೆಲಸ ಮುಂದುವರಿಸಿದ್ದಾರೆ.

ಅಭಿನಂದನೆಗಳು
ನವೆಂಬರ್ 29 ರಂದು, ಪರಾಗ್ ಅಗ್ರವಾಲ್ ಅವರನ್ನು ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್‌ನ ಹೊಸ ಸಿಇಒ ಎಂದು ಘೋಷಿಸಲಾಯಿತು. ಪ್ರಕಟಣೆಯ ನಂತರ, ಹೊಸ ಸಿಇಒ ಟ್ವೀಟರ್‌ನಲ್ಲಿ "ಜ್ಯಾಕ್ ನಾಯಕತ್ವದಲ್ಲಿ ನಾವು ಸಾಧಿಸಿದ ಎಲ್ಲವನ್ನೂ ನಿರ್ಮಿಸಲು ನಾನು ಎದುರು ನೋಡುತ್ತಿದ್ದೇನೆ ಮತ್ತು ಮುಂದಿನ ಅವಕಾಶಗಳಿಂದ ನಾನು ತುಂಬಾನೇ ಉತ್ಸುಕನಾಗಿದ್ದೇನೆ. ನನಗೆ ನೀಡಿದಂತಹ ಕೆಲಸವನ್ನು ಚೆನ್ನಾಗಿ ಮಾಡುವ ಮೂಲಕ ಸಾರ್ವಜನಿಕ ಸಂಭಾಷಣೆಯನ್ನು ಭವಿಷ್ಯತ್ತಿನಲ್ಲಿ ನಮ್ಮ ಗ್ರಾಹಕರು ಮತ್ತು ಷೇರುದಾರರಿಗೆ ಅದ್ಭುತ ಮೌಲ್ಯವನ್ನು ನಾವು ನೀಡುತ್ತೇವೆ" ಎಂದು ಬರೆದಿದ್ದಾರೆ.

ಇದನ್ನೂ ಓದಿ:  Parag Agrawal​ ಸಿಇಒ ಆಗುತ್ತಿದ್ದಂತೆ ಟ್ವಿಟರ್​ ತೊರೆದ ಹಿರಿಯ ಅಧಿಕಾರಿಗಳು; ಕಾರಣ ಇದು!

ಇದಕ್ಕೆ ಶ್ರೇಯಾ ಘೋಷಾಲ್ ಅವರ ಪೋಸ್ಟ್ ಅನ್ನು ಮತ್ತೆ ಹಂಚಿಕೊಂಡಿದ್ದಾರೆ ಮತ್ತು ಅದಕ್ಕೆ "ಅಭಿನಂದನೆಗಳು ಪರಾಗ್. ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಇದೆ! ನಮಗೆ ಇದು ತುಂಬಾ ಖುಷಿಯ ದಿನ ಇದನ್ನು ಆಚರಿಸಬೇಕು” ಎಂದು ಟ್ವೀಟ್ ಮಾಡಿದ್ದಾರೆ
Published by:vanithasanjevani vanithasanjevani
First published: