Sarus Crane: ಎರಡು ಮೊಟ್ಟೆಯ ಕಥೆ! ಈ ಹಳ್ಳಿಯ ಜನ ಕೊಕ್ಕರೆಗಳಿಗೆ ಹೇಗೆ ಸಹಾಯ ಮಾಡಿದ್ದಾರೆ ಅಂತ ಒಮ್ಮೆ ನೀವೇ ನೋಡಿ

ಗುಜರಾತ್ ನ ಹಳ್ಳಿಗರು ಒಂದು ಹೆಜ್ಜೆ ಮುಂದೆ ಹೋಗಿ ಕೊಕ್ಕರೆಗಳಿಗೆ ಹೇಗೆ ಸಹಾಯ ಮಾಡಿದ್ದಾರೆ ಇಲ್ಲಿ ನೋಡಿ. ಮೋಟೌನ್ ಸನಂದ್‌ನಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ ಗಾನಸರ್ ಗ್ರಾಮದಲ್ಲಿ ಸಾರಸ್ ದಂಪತಿ ಕೊಕ್ಕರೆಗಳು ಇಲ್ಲಿ ಅಪರೂಪದಲ್ಲಿಯೇ ಅಪರೂಪವಾದ ಪಾಲಕರನ್ನು ಕಂಡುಕೊಂಡಿವೆ. ಈ ಗ್ರಾಮಸ್ಥರು ಕೊಕ್ಕರೆಗಳಿಗಾಗಿ ಮಾಡಿರುವ ಕೆಲಸದ ಬಗ್ಗೆ ಕೇಳಿದರೆ ನೀವು ನಿಜಕ್ಕೂ ಬೆರಗಾಗುತ್ತೀರಾ

ಸಾರಸ್‌ ಕ್ರೇನ್‌

ಸಾರಸ್‌ ಕ್ರೇನ್‌

  • Share this:
ಬೇಸಿಗೆಯಲ್ಲಿ (Summer) ನೀರಿನ ಅಭಾವ ಇರುವುದರಿಂದ ಪಕ್ಷಿಗಳಿಗೆ (Birds) ಅನುಕೂಲವಾಗುವಂತೆ ಮನೆಯ ಮಹಡಿ ಮೇಲೆ. ಅಲ್ಲಿ ಇಲ್ಲಿ ನೀರಿಟ್ಟು ಅವುಗಳ ಬಾಯಾರಿಕೆ ತಣಿಸುವ ಕೆಲಸವನ್ನು ಹಲವಾರು ಜನರು ಮಾಡುತ್ತಿರುತ್ತಾರೆ. ಮೂಖ ಪ್ರಾಣಿಗಳ (Animal) ಮೇಲಿನ ಇಂತಹ ಕನಿಕರ ನಿಜಕ್ಕೂ ಪ್ರಶಂಸನೀಯ. ಆದರೆ ಗುಜರಾತ್ ನ (Gujarat) ಹಳ್ಳಿಗರು ಒಂದು ಹೆಜ್ಜೆ ಮುಂದೆ ಹೋಗಿ ಕೊಕ್ಕರೆಗಳಿಗೆ ಹೇಗೆ ಸಹಾಯ ಮಾಡಿದ್ದಾರೆ ಇಲ್ಲಿ ನೋಡಿ. ಮೋಟೌನ್ ಸನಂದ್‌ನಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ ಗಾನಸರ್ ಗ್ರಾಮದಲ್ಲಿ ಸಾರಸ್ ದಂಪತಿ ಕೊಕ್ಕರೆಗಳು ಇಲ್ಲಿ ಅಪರೂಪದಲ್ಲಿಯೇ ಅಪರೂಪವಾದ ಪಾಲಕರನ್ನು ಕಂಡುಕೊಂಡಿವೆ. ಈ ಗ್ರಾಮಸ್ಥರು ಕೊಕ್ಕರೆಗಳಿಗಾಗಿ (Crane) ಮಾಡಿರುವ ಕೆಲಸದ ಬಗ್ಗೆ ಕೇಳಿದರೆ ನೀವು ನಿಜಕ್ಕೂ ಬೆರಗಾಗುತ್ತೀರಾ.!

ಕೃತಕ ಜೌಗು ಪ್ರದೇಶ ನಿರ್ಮಿಸಿದ ಹಳ್ಳಿಗರು
ಗುಜರಾತ್ ಹಳ್ಳಿಯ ಜನರು ಒಂದು ಎಕರೆ ಕೃಷಿ ಭೂಮಿಯನ್ನು ತಾತ್ಕಾಲಿಕ ಕೃತಕ ಜೌಗು ಪ್ರದೇಶವನ್ನಾಗಿ ಪರಿವರ್ತಿಸಿ ಅಲ್ಲಿ ಹೆಣ್ಣು ಕೊಕ್ಕರೆಗೆ ಮೊಟ್ಟೆ ಇಡಲು ಮತ್ತು ಇಟ್ಟಿರುವ ಎರಡು ಮೊಟ್ಟೆಗಳನ್ನು ರಕ್ಷಿಸಲು ಸಹಕರಿಸಿದ್ದಾರೆ. ಗ್ರಾಮಸ್ಥರು ಒಂದು ಎಕರೆ ಕೃಷಿ ಜಮೀನಲ್ಲಿ ನೀರು ತುಂಬಿಸಿ ತಾತ್ಕಾಲಿಕ ಕೃತಕ ಗದ್ದೆಯಾಗಿ ಪರಿವರ್ತಿಸಿದ್ದಾರೆ. ಹೆಣ್ಣು ಕೊಕ್ಕರೆ ಇಟ್ಟಿರುವ ಎರಡು ಮೊಟ್ಟೆಗಳು ಮತ್ತು ಕೊಕ್ಕರೆಗಳ ಮೇಲೆ ಬೇರೆ ಯಾವುದೇ ಕಾಡು ಪ್ರಾಣಿಗಳು ಅಥವಾ ನಾಯಿಗಳು ದಾಳಿ ಮಾಡದಂತೆ ನೋಡಿಕೊಳ್ಳುವ ಸಲುವಾಗಿ ಜಮೀನಿನಲ್ಲಿ ಹಳ್ಳಿಗರು ಕಾವಲು ಕಾದಿದ್ದಾರೆ.

ಕೊಕ್ಕರೆಯ ಪುಟ್ಟ ಮರಿಗಳನ್ನು ನೋಡಲು ಕಾಯುತ್ತಿರುವ ಗ್ರಾಮಸ್ಥರು
ವಾಸ್ತವವಾಗಿ, ಬಾಚುಭಾಯಿ ಠಾಕೋರ್ ಮಾಲೀಕತ್ವದ ಫಾರ್ಮ್ ನಲ್ಲಿ ಹಳ್ಳಿಗರು ಕೃತಕ ಗದ್ದೆ ತಯಾರಿಸಿ ಕೊಕ್ಕರೆಗಳು ಮೊಟ್ಟೆ ಹಾಕಲು ನೆರವು ಮಾಡಿಕೊಟ್ಟಿದ್ದಾರೆ. ಮುಂಬರುವ ವಾರದಲ್ಲಿ ಮೊಟ್ಟೆಗಳು ಮರಿಯಾಗಬೇಕಾಗಿರುವುದರಿಂದ ಪುಟ್ಟ ಮರಿಗಳನ್ನು ನೊಡಲು ಗ್ರಾಮಸ್ಥರು ಹರ್ಷಿತರಾಗಿದ್ದಾರೆ. ಸಾರಸ್ ಕೊಕ್ಕರೆಗಳನ್ನು ತಜ್ಞರು ತೀವ್ರವಾಗಿ ಅಳಿವಿನಂಚಿನಲ್ಲಿರುವ ಜಾತಿಯೆಂದು ಪರಿಗಣಿಸಿದ್ದಾರೆ.

ಮೊಟ್ಟೆಗಳಿಗೆ ಹಾನಿಯಾಗದಂತೆ ಕೈಯಿಂದ ಭತ್ತದ ಕೊಯ್ಲು ತೆಗೆಯುವ ಜನ
ಕಳೆದ ದಶಕದಲ್ಲಿ ಔಪಚಾರಿಕ ಎಣಿಕೆ ನಡೆಯದಿದ್ದರೂ, ಈ ಸಂಖ್ಯೆ ಸುಮಾರು 600 ಪಕ್ಷಿಗಳಿಗೆ ಇಳಿಕೆ ಕಂಡಿದೆ ಎಂದು ಪಕ್ಷಿ ತಜ್ಞರು ಹೇಳುತ್ತಾರೆ. ಇಂತಹ ಸನ್ನಿವೇಶದಲ್ಲಿ ಪಕ್ಷಿಗಳ ರಕ್ಷಣೆಗೆ ಹಳ್ಳಿಗಳ ಸಾಮೂಹಿಕ ಪ್ರಯತ್ನ ಶ್ಲಾಘನೀಯ. ಕಳೆದ ಒಂದು ತಿಂಗಳಿನಿಂದ ಸಾರಸ್ ಕ್ರೇನ್ ಮೊಟ್ಟೆಗಳನ್ನು ರಕ್ಷಿಸಲು ನಾವು ಸಾಧ್ಯವಿರುವ ಎಲ್ಲವನ್ನೂ ಮಾಡಿದ್ದೇವೆ. ಇದು ಏಕೈಕ ಪ್ಲಾಟ್ಫಾರ್ಮ್ ಆಗಿದ್ದು, ಯಂತ್ರದಿಂದ ಭತ್ತದ ಕೊಯ್ಲು ಮಾಡದೆ, ಮೊಟ್ಟೆಗಳಿಗೆ ಹಾನಿಯಾಗದಂತೆ ಕೈಯಿಂದ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:  Gold Mine: ಭಾರತದ ಈ 3 ಹಳ್ಳಿಗಳಲ್ಲಿ ಇರುವೆಗಳ ಬಾಯಲ್ಲೂ ಚಿನ್ನ! 23 ಕೋಟಿ ಟನ್ ಚಿನ್ನದ ಗಣಿ ಪತ್ತೆ ಮಾಡಿದ್ದು ಇರುವೆಗಳು

ಕೊಕ್ಕರೆಗಳಿಗೆ ಅನುಕೂಲಕರವಾದ ಜಾಗ
ಗ್ರಾಮದ ಜಮೀನೊಂದರಲ್ಲಿ ಸಾರಸ್‌ ಕೊಕ್ಕರೆ ದಂಪತಿ ಮೊಟ್ಟೆ ಇಟ್ಟಿರುವ ಬಗ್ಗೆ ಏವಿಯನ್‌ ಸಂಶೋಧಕ ದೇಸಲ್‌ ಪಾಗಿ ಅವರು ಸರಪಂಚ್‌ ಭೋಜಾಜಿ ಠಾಕೂರ್‌ ಅವರಿಗೆ ಮಾಹಿತಿ ನೀಡಿದ್ದರು. ರಾಜ್ಯದಲ್ಲಿ ಸಾರಸ್‌ ಕ್ರೇನ್‌ ಅಧ್ಯಯನ ನಡೆಸುತ್ತಿರುವ ಪಂಡಿತ್‌ ಜುಲೈನಿಂದ ಆಗಸ್ಟ್ ವರೆಗೆ ಸಾರಸ್ ಕ್ರೇನ್‌ಗಳ ಸಾಮಾನ್ಯ ಸಂತಾನಭಿವೃದ್ಧಿ ಸಮಯವಾಗಿರುವುದರಿಂದ ಎರಡು ದಶಕಗಳಿಗೂ ಹೆಚ್ಚು ಕಾಲ ಈ ಆವಿಷ್ಕಾರದಿಂದ ಪುಳಕಿತನಾಗಿದ್ದೆ ಎಂದಿದ್ದಾರೆ. ಆ ಜಾಗದಲ್ಲಿ ನಾವು ಸ್ಥಳವನ್ನು ಹುಡುಕಿದೆವು ಮತ್ತು ಸಾರಸ್ ಕೊಕ್ಕರೆಗಳಿಗೆ ವಾಸಿಸಲು ಮತ್ತು ಮೊಟ್ಟೆಗಳನ್ನು ಹಾಕಲು ಅನುಕೂಲಕರ ಜಾಗ ನಿರ್ಮಿಸಿದೆವು ನಾವು ಕೊಕ್ಕರೆಗಳಿಗೆ ಸಾಕಷ್ಟು ನೀರನ್ನು ಮಣ್ಣಿನಲ್ಲಿ ತುಂಬಿದೆವು ಎನ್ನುತ್ತಾರೆ ಪಂಡಿತ್.

ಕೊಕ್ಕರೆಗಳನ್ನು ರಕ್ಷಿಸುವಲ್ಲಿ ಮಕ್ಕಳ ಮುಂದಾಳತ್ವ
ಬಚುಭಾಯಿ ಹೇಳುವ ಪ್ರಕಾರ, ಕಾಡು ಪ್ರಾಣಿಗಳ ಪ್ರವೇಶವನ್ನು ತಡೆಯಲು ಜಮೀನಿನ ಗಡಿಯನ್ನು ಸಹ ಅಗೆಯಲಾಯಿತು. ಹಳ್ಳಿಗಳ ಮಕ್ಕಳು ಪಕ್ಷಿಗಳನ್ನು ರಕ್ಷಿಸುವಲ್ಲಿ ಮುಂದಾಳತ್ವ ವಹಿಸಿದ್ದಾರೆ. ಒಂದು ತಿಂಗಳಿನಿಂದ ಈಗ ನಾವು ಮೊಟ್ಟೆ ಮತ್ತು ಪಕ್ಷಿಗಳ ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದೇವೆ.

ಇದನ್ನೂ ಓದಿ:  China Food: ಹಕ್ಕಿಗೂಡಿನ ಸೂಪ್​ನಿಂದ ಜೇಡಗಳ ಫ್ರೈ ತನಕ! ಚೀನಾದ ವಿಚಿತ್ರ ಆಹಾರಗಳಿವು

ಪಾಗಿ ಪ್ರಕಾರ, ಮೊಟ್ಟೆಗಳನ್ನು ಸಂತಾನೋತ್ಪತ್ತಿಯ ಅವಧಿಯಲ್ಲಿ ಇಡಲಾಗುತ್ತದೆ, ಇದು ಅಸಾಮಾನ್ಯ ಸಂಗತಿಯಾಗಿದೆ. ಮೊಟ್ಟೆಗಳು ಮರಿ ಮಾಡಲು 28 ರಿಂದ 35 ದಿನಗಳ ನಡುವೆ ತೆಗೆದುಕೊಳ್ಳುತ್ತದೆ. ಹಳ್ಳಿಯ ಜಮೀನಿನಲ್ಲಿ ಎರಡು ಸಾರಸ್ ಕ್ರೇನ್‌ಗಳು ಕಾಣಿಸಿಕೊಳ್ಳುವುದು ಅಪರೂಪದ ದೃಶ್ಯವಾಗಿದೆ ಎಂದಿದ್ದಾರೆ. ಒಟ್ಟಾರೆ ಪಕ್ಷಿಗಳ ಸಂತಾನೋತ್ಪತ್ತಿಗೆ ಮತ್ತು ಅವುಗಳಿಗೆ ಆಶ್ರಯ ನೀಡಿರುವ ಗ್ರಾಮಸ್ಥರ ಕೆಲಸ ನಿಜಕ್ಕೂ ಮೆಚ್ಚುವಂತದ್ದೇ ಸರಿ.
Published by:Ashwini Prabhu
First published: