ಅಚಾನಕ್ಕಾಗಿ 'ಯುವಕ'ರಾದ ಆಲಿಯಾ ಭಟ್​ ಚಿಕ್ಕಪ್ಪ, ಗುರುತು ಹಿಡಿಯುವುದೇ ಕಷ್ಟ!


Updated:August 10, 2018, 7:01 PM IST
ಅಚಾನಕ್ಕಾಗಿ 'ಯುವಕ'ರಾದ ಆಲಿಯಾ ಭಟ್​ ಚಿಕ್ಕಪ್ಪ, ಗುರುತು ಹಿಡಿಯುವುದೇ ಕಷ್ಟ!

Updated: August 10, 2018, 7:01 PM IST
ನ್ಯೂಸ್​ 18 ಕನ್ನಡ

ಮುಂಬೈ(ಆ.10): ವಿಕ್ರಮ್​ ಭಟ್​, ಮೊದಲಿನಿಂದಲೂ ಗಂಭೀರ ಸ್ವರೂಪದ ಸಿನಿಮಾಗಳಿಗೆ ಫೇಮಸ್​. ಅವರು ಯಾವತ್ತೂ ಹಾರರ್​ ಸಿನಿಮಾಗಳನ್ನು ಮಾಡಿ ಜನರಿಗೆ ಮನರಂಜನೆ ನೀಡುತ್ತಾರೆ. ಇವರು ಮಹೇಶ್​ ಭಟ್​ರವರ ಕಿರಿಯ ತಮ್ಮ ಹಾಗೂ ನಟಿ ಆಲಿಯಾ ಭಟ್​ರವರ ಚಿಕ್ಕಪ್ಪ. ಸಿನಿಮಾಗಳಲ್ಲಿ ಪಾತ್ರಕ್ಕೆ ಹೊಂದಿಕೊಳ್ಳುವಂತೆ ಬಹುತೇಕ ನಟರು ತಮ್ಮ ಲುಕ್​ನ್ನೇ ಬದಲಅಯಿಸಿಕೊಳ್ಳುತ್ತಾರೆ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರ. ಉದಾಹರಣೆಗಾಗಿ ದಂಗಲ್​ನಲ್ಲಿ ಅಮೀರ್​ ಖಾನ್​, ಸಂಜೂ ಸಿನಿಮಾದಲ್ಲಿ ರಣ್​ಬೀರ್​ ಕಪೂರ್​, ಪಾ ಸಿನಿಮಾದಲ್ಲಿ ಅಮಿತಾಬ್​ ಬಚ್ಚನ್​ ಹೀಗೆ ಬಹುತೇಕ ಮಂದಿ ತಮ್ಮ ಲುಕ್​ ಬದಲಾಯಿಸುತ್ತಾರೆ.




What do you think??


A post shared by Vikram Bhatt (@vikrampbhatt) on





ಇದೀಗ ಅಜ್ಜನಂತೆ ಕಾಣುತ್ತಿದ್ದ ಆಲಿಯಾ ಭಟ್​ ಚಿಕ್ಕಪ್ಪ ವಿಕ್ರಮ್​ ಭಟ್​ ಇಂತಹುದೇ ಒಂದು ಪ್ರಯೋಗ ಮಾಡಿದ್ದಾರೆ. ಈ ತಮ್ಮ ಪ್ರಯತ್ನದಲ್ಲಿ ಯಶಸ್ವಿಯಅಗಿದ್ದಾರೆ. ಸದ್ಯ ಅವರ ಈ ಹೊಸ ಅವತಾರದ ಫೋಟೋ ಸಾಮಾಜಿಕ ಜಾಲಾತಾಣಗಳಲ್ಲಿ ಬಹಳಷ್ಟು ವೈರಲ್​ ಆಗುತ್ತಿದೆ. ಸಿನಿಮಾ ನಿರ್ಮಾಪಕ ವಿಕ್ರಮ್​ ಭಟ್​ ತಮ್ಮನ್ನು ತಾವು ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದು, 49 ವರ್ಷದ ಅವರಿಗೆ 10 ವರ್ಷ ಕಡಿಮೆಯಾದಂತೆ ಕಾಣಿಸುತ್ತಿದ್ದಾರೆ. ಅಜ್ಜನಂತಿದ್ದ ಅವರು ಯುವಕರಂತೆ ಕಂಡು ಬರುತ್ತಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ಜನರು ಇವರನ್ನು ಗುರುತಿಸಲೂ ವಿಫಲರಾಗುತ್ತಿದ್ದು, ಈ ಮೊದಲಿಗಿಂತಲೂ ಗಂಭೀರವಾಗಿ ಕಾಣುತ್ತಿದ್ದಾರೆಂಬ ಅಭಿಪ್ರಾಯ ವ್ಯಕ್ತವಾಗಿದೆ.



Black or white??


A post shared by Vikram Bhatt (@vikrampbhatt) on





ವಿಕ್ರಮ್​ ಭಟ್​ ಈ ಮೊದಲಿನಿಂದಲೂ ತಮ್ಮ ಸಾಮಾನ್ಯವಾದ ಸಾಲ್ಟ್​ & ಪೆಪ್ಪರ್​(ಕಪ್ಪು ಬಿಳುಪು ಕೂದಲು) ಲುಕ್​ನಿಂದಲೇ ಫೇಮಸ್​ ಆಗಿದ್ದರು. ಆದರೀಗ ಅವರು ತಮ್ಮ ಕೂದಲಿಗೆ ಕಪ್ಪು ಬಣ್ಣ ಹಚ್ಚಿಕೊಂಡಿದ್ದು, ಯುವಕರಂತೆ ಕಾಣುತ್ತಿದ್ದಾರೆ. ಅವರು ತಮ್ಮ ಇನ್ಸ್ಟಾಗ್ರಾಂ ಪೇಜ್​ನಲ್ಲಿ ಹಳೆಯ ಹಾಗೂ ಈಗಿನ ಎರಡೂ ಫೋಟೋ ಶೇರ್​ ಮಾಡಿಕೊಂಡಿದ್ದಾರೆ.
First published:August 10, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ