(Video) | ಇವರೇ ಜಗತ್ತಿನ ಅತ್ಯಂತ ಕಿರಿಯ ವಯಸ್ಸಿನ ಕೋಟ್ಯಾಧಿಪತಿಗಳು

ತಂದೆ ತಾಯಿ ಗಳಿಸಿದ್ದರಿಂದ ಬಿಲಿಯನೇರ್​ ಸ್ಥಾನ ಪಡೆದವರು ಒಂದು ಕಡೆಯಾದರೆ, ಕಷ್ಟಪಟ್ಟು ಸ್ವಂತವಾಗಿ ಬೆಳೆದುಬಂದವರು ಇನ್ನೊಂದು ಕಡೆ. ಉದಾಹರಣೆಗೆ ಮಾರ್ಕ್​ ಝೂಕರ್​ಬರ್ಗ್​. ಇವರು ಹುಟ್ಟಿನಿಂದ ಶ್ರೀಮಂತರಲ್ಲ. ಆದರೆ ಅವರಲ್ಲಿದ್ದ ಕ್ರಿಯಾಶೀಲ ವ್ಯಕ್ತಿತ್ವ ಅವರನ್ನು ಉತ್ತುಂಗಕ್ಕೆ ಅತ್ಯಲ್ಪ ಅವಧಿಯಲ್ಲಿ ಕೊಂಡೊಯ್ಯಿತು

news18
Updated:February 5, 2019, 5:04 PM IST
(Video) | ಇವರೇ ಜಗತ್ತಿನ ಅತ್ಯಂತ ಕಿರಿಯ ವಯಸ್ಸಿನ ಕೋಟ್ಯಾಧಿಪತಿಗಳು
ಕೈಲಿ ಜೆನ್ನರ್​
news18
Updated: February 5, 2019, 5:04 PM IST
ಬೆಂಗಳೂರು: ಕಷ್ಟಪಟ್ಟು ದಶಕಗಳ ಕಾಲ ದುಡಿದರೂ ಗಳಿಸಲು ಅಸಾಧ್ಯವಾದಷ್ಟು ಸಂಪತ್ತನ್ನು ಹುಟ್ಟುತ್ತಲೇ ಪಡೆದ ಹಲವು ಲಕ್ಕಿ ಬಿಲಿಯನೇರ್​ಗಳು ನಮ್ಮೊಡನಿದ್ದಾರೆ. ಆದರೆ ಕೆಲವರು ಅತ್ಯಂತ ವೇಗವಾಗಿ ಸಂಪತ್ತನ್ನು ಗಳಿಸಿ ಕಿರಿಯ ವಯಸ್ಸಿಗೇ ಸಮಾಜದಲ್ಲಿ ದೊಡ್ಡ ಹೆಸರು ಮತ್ತು ಸಂಪತ್ತನ್ನು ಗಳಿಸಿದವರೂ ಇದ್ದಾರೆ.

ತಂದೆ ತಾಯಿ ಗಳಿಸಿದ್ದರಿಂದ ಬಿಲಿಯನೇರ್​ ಸ್ಥಾನ ಪಡೆದವರು ಒಂದು ಕಡೆಯಾದರೆ, ಕಷ್ಟಪಟ್ಟು ಸ್ವಂತವಾಗಿ ಬೆಳೆದುಬಂದವರು ಇನ್ನೊಂದು ಕಡೆ. ಉದಾಹರಣೆಗೆ ಮಾರ್ಕ್​ ಝೂಕರ್​ಬರ್ಗ್​. ಇವರು ಹುಟ್ಟಿನಿಂದ ಶ್ರೀಮಂತರಲ್ಲ. ಆದರೆ ಅವರಲ್ಲಿದ್ದ ಕ್ರಿಯಾಶೀಲ ವ್ಯಕ್ತಿತ್ವ ಅವರನ್ನು ಉತ್ತುಂಗಕ್ಕೆ ಅತ್ಯಲ್ಪ ಅವಧಿಯಲ್ಲಿ ಕೊಂಡೊಯ್ಯಿತು. ಜಗತ್ತಿನ ಅತಿ ಹೆಚ್ಚು ಜನ ಉಪಯೋಗಿಸುವ ಸಾಮಾಜಿಕ ಜಾಲತಾಣ ಫೇಸ್​ಬುಕ್​. ಇದನ್ನು ಹುಟ್ಟಿಹಾಕಿ ಕಿರಿಯ ವಯಸ್ಸಿನ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

ವಿದ್ಯೆ ಕೈ ಹಿಡಿಯದಿದ್ದರೂ ಕ್ರಿಯಾಶೀಲ ವ್ಯಕ್ತಿತ್ವ ಹಲವರನ್ನು ಬಹಳ ಎತ್ತರಕ್ಕೆ ಕರೆದೊಯ್ದಿದೆ. ಕೆಲವರು ತಮ್ಮ ಓದಿನ ಮೂಲಕವೇ ಶ್ರೇಯಸ್ಸು ಗಳಿಸಿದ್ದಾರೆ. ಅವರೆಲ್ಲರ ವಿವರ ಈ ಕೆಳಗಿನ ವಿಡಿಯೋದಲ್ಲಿದೆ.

First published:February 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ