Viral Video: ವಧುವಿಗೆ ವರನ ಸ್ನೇಹಿತ ಕೊಟ್ಟ ಆ ಉಡುಗೊರೆ; ಎಲ್ಲರೆದುರು ಗಿಫ್ಟ್ ತೆರೆದ ವಧು ಏನು ಮಾಡಿದಳು ಗೊತ್ತಾ?

ಇತ್ತೀಚೆಗೆ ಇಂತಹ ವಿಚಿತ್ರವಾದ ಸನ್ನಿವೇಶಗಳಿಂದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದು, ವಿಡಿಯೋ ತುಣುಕುಗಳು ವೈರಲ್ ಆಗುತ್ತಿವೆ.

Photo Credit: Facebook

Photo Credit: Facebook

  • Share this:

ಮದುವೆಯಲ್ಲಿ ವರನಿಗೆ ವಧುವಿನ ಅಕ್ಕ ತಂಗಿಯರು ತಮ್ಮ ಭಾವನ ಶೂಗಳನ್ನು ಯಾರಿಗೂ ಸಿಗದಂತೆ ಮುಚ್ಚಿಟ್ಟು ನಂತರ ತಮ್ಮ ಭಾವನ ಹತ್ತಿರ ಅವರ ಶೂಗಳನ್ನು ಹಿಂದಿರುಗಿಸಲು ಹಣವನ್ನು ಕೇಳುತ್ತಾರೆ. ಅವರು ಕೇಳಿದ ಹಣವನ್ನು ನೀಡಿದ ಬಳಿಕವೇ ಶೂಗಳನ್ನು ತಿರುಗಿ ನೀಡುತ್ತಾರೆ. ಹಾಗೆಯೇ ವರನ ಕಡೆಯವರು ವಧುವಿಗೆ ವಿಚಿತ್ರವಾದ ಉಡುಗೊರೆಯನ್ನು ಬಹಳ ಪೇಪರ್​ಗಳಿಂದ ಪ್ಯಾಕ್ ಮಾಡಿ ನೀಡುವುದು ನಾವೆಲ್ಲರೂ ಕೇಳಿರುವ ಮತ್ತು ನೋಡಿರುವ ವಿಷಯವಾಗಿದೆ. ಆದರೆ ಇಲ್ಲೊಬ್ಬ ವರನ ಸ್ನೇಹಿತ, ನವ ವಧುವಿಗೆ ನೀಡಿದ ಉಡುಗೊರೆಯನ್ನು ನೀವು ನೋಡಿದರೆ ನಗುವುದಂತೂ ಗ್ಯಾರಂಟಿ. ಮದುವೆಗಳಲ್ಲಿ ಇಂತಹ ಕುಚೇಷ್ಟೆಗಳು ಇರದೇ ಹೋದರೆ ಅಷ್ಟೊಂದು ಸಡಗರವು ಅನ್ನಿಸುವುದಿಲ್ಲ. ಆದರೆ ಇಲ್ಲಿ ಉಡುಗೊರೆಯೊಂದನ್ನು ನೋಡಿದ ನವ ವಧು ಕೋಪಿಸಿಕೊಂಡಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.


ಇತ್ತೀಚೆಗೆ ಇಂತಹ ವಿಚಿತ್ರವಾದ ಸನ್ನಿವೇಶಗಳಿಂದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದು, ವಿಡಿಯೋ ತುಣುಕುಗಳು ವೈರಲ್ ಆಗುತ್ತಿವೆ. ಈ ವಿಡಿಯೋದಲ್ಲಿ ವಧುವಿಗೆ ವರನ ಸ್ನೇಹಿತನೊಬ್ಬನು ಒಂದು ಉಡುಗೊರೆ ನೀಡುತ್ತಾನೆ. ಅನಂತರ ಆ ಉಡುಗೊರೆಯನ್ನು ವಧುವು ಎಲ್ಲರ ಸಮ್ಮುಖದಲ್ಲಿ ತೆರೆದು ನೋಡಿ ಕೋಪಗೊಳ್ಳುತ್ತಾರೆ. ಏಕೆಂದರೆ ಆ ಉಡುಗೊರೆಯನ್ನು ತೆರೆದು ನೋಡಿದಾಗ ಅದರಲ್ಲಿ ಚಿಕ್ಕ ಮಕ್ಕಳು ಹಾಲು ಮತ್ತು ನೀರನ್ನು ಕುಡಿಸಲು ಬಳಸುವ ಚಿಕ್ಕ ಬಾಟಲಿಯೊಂದಿರುತ್ತದೆ. ಆ ಉಡುಗೊರೆಯನ್ನು ನೋಡಿದ ಅಕ್ಕ ಪಕ್ಕದಲ್ಲಿ ನಿಂತ ಜನರು ಜೋರಾಗಿ ನಗಲಾರಂಭಿಸಿದರು.


ಅದನ್ನು ನೋಡಿದ ನವ ವಧು ಕೋಪ ಮಾಡಿಕೊಂಡು ಆ ಉಡುಗೊರೆಯನ್ನು ನೀಡಿದವರ ಕಡೆಗೆ ಕೋಪದಿಂದ ನೋಡಿ ಕೈಯಿಂದ ಅದನ್ನು ಕೆಳಗೆ ಬಿಸಾಡುತ್ತಾಳೆ. ಅನಂತರ ಮತ್ತೆ ಯಾರೋ ಅದನ್ನು ಆಕೆಯ ಮಡಿಲಲ್ಲಿ ಇಡುತ್ತಾರೆ. ನಂತರ ಮತ್ತೆ ಅಲ್ಲಿಂದ ಎತ್ತಿಕೊಂಡು ಪಕ್ಕಕ್ಕೆ ಇಡುತ್ತಾರೆ.


Video: ವಿಶ್ವದ ಅತ್ಯಂತ ಪ್ರಕಾಶಮಾನವಾದ ಟಾರ್ಚ್ ನಿರ್ಮಿಸಿದ ಯೂಟ್ಯೂಬರ್; ಗಿನ್ನೆಸ್ ವಲ್ಡ್ ರೆಕಾರ್ಡ್​​ಗೆ ಸೇರ್ಪಡೆ!

ಈ ವಿಡಿಯೋವನ್ನು ಬಂಟಿ ಠಾಕೂರ್ ಎಂಬಾತನು ಫೇಸ್ಬುಕ್​ನಲ್ಲಿ ಹಂಚಿಕೊಂಡಿದ್ದು, ಇದುವರೆಗೂ ಅದನ್ನು 10 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಅಲ್ಲದೆ 3.17 ಲಕ್ಷ ಜನರು ನೋಡಿ ಇಷ್ಟ ಪಟ್ಟಿದ್ದಾರೆ. ಇಂತಹ ಅನೇಕ ತರಹದ ಘಟನೆಗಳು ಇತ್ತೀಚಿನ ದಿನಗಳಲ್ಲಿ ತುಂಬಾ ನಡೆಯುತ್ತಿವೆ.




ಇದನ್ನೂ ಓದಿ: ಚಹಾ ಕುಡಿತೀರಾ? ಆರೋಗ್ಯಕರ ತೂಕ ಹೆಚ್ಚಳಕ್ಕಾಗಿ 6 ವಿಧದ ಚಹಾ ಇಲ್ಲಿದೆ

ಕೆಲವು ವಾರಗಳ ಹಿಂದೆ ಜೈಪುರ್​ನ ಸುಕಿಂದದಲ್ಲಿ ಸಹ ವರನು ತನ್ನ ಮದುವೆಯಲ್ಲಿ ತಮ್ಮ ಆಪ್ತರಿಗೆ ವಧುವಿನ ಮನೆಯವರು ಬಾಡೂಟ ಹಾಕಲಿಲ್ಲ ಎಂದು ಕೋಪಗೊಂಡು ಮದುವೆ ಮನೆಯಿಂದ ಹೊರ ನಡೆಯುತ್ತಾರೆ ಮತ್ತು ಮಹೋಬಾದಲ್ಲಿ ನಡೆದಂತಹ ಇನ್ನೊಂದು ಘಟನೆಯಲ್ಲಿ ವಧು ತನ್ನ ಮದುವೆಯಲ್ಲಿ ಖುಷಿಯಿಂದ ತನ್ನ ಗಂಡನಾಗುವವನ ಕೈ ಹಿಡಿದುಕೊಂಡು ಸಪ್ತಪದಿ ತುಳಿಯಲು ಆರಂಭಿಸಿ, 6 ಸುತ್ತುಗಳನ್ನು ಸುತ್ತಿದ ನಂತರ ಯಾವುದೋ ಕಾರಣಕ್ಕೆ ಮದುವೆಯನ್ನು ನಿರಾಕರಿಸಿದ್ದಾಳೆ. ಹಿರಿಯರೆಲ್ಲರೂ ಆಕೆಯ ಮನವೊಲಿಸಲು ಪ್ರಯತ್ನಿಸಿದರೂ ವಧು ತನ್ನ ನಿರ್ಧಾರವನ್ನು ಬದಲಾಯಿಸಲಿಲ್ಲ.

First published: