HOME » NEWS » Trend » VIDEO VIRAL LITTLE GIRL DOZES OFF ON STAGE DURING DANCE PERFORMANCE STG HG

ವೇದಿಕೆ ಮೇಲೆ ನಿದ್ದೆ ಮಾಡುತ್ತಲೇ ಲಕ್ಷಾಂತರ ಮಂದಿ ಹೃದಯಗೆದ್ದ ಪುಟ್ಟ ಪೋರಿ; ವಿಡಿಯೋ ವೈರಲ್

ಈ ಘಟನೆ ನಡೆದಿದ್ದು ಚೀನಾದ ವೆನ್‌ಜುವಾ ಎಂಬಲ್ಲಿ. ಇವಳ ಮುಗ್ಧತೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

news18-kannada
Updated:April 1, 2021, 12:03 PM IST
ವೇದಿಕೆ ಮೇಲೆ ನಿದ್ದೆ ಮಾಡುತ್ತಲೇ ಲಕ್ಷಾಂತರ ಮಂದಿ ಹೃದಯಗೆದ್ದ ಪುಟ್ಟ ಪೋರಿ; ವಿಡಿಯೋ ವೈರಲ್
Image credit: YouTube
  • Share this:
ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ಪುಟ್ಟ ಪೋರಿಯದ್ದೇ ಹವಾ. ಈ ಪುಟ್ಟ ಹುಡುಗಿ ಸಾಮಾಜಿಕ ಜಾಲತಾಣದ ಜೊತೆಗೆ ಲಕ್ಷಾಂತರ ಹೃದಯಕ್ಕೆ ಲಗ್ಗೆ ಇಟ್ಟಿದೆ. ಒಂದು ಡ್ಯಾನ್ಸ್ ವೇದಿಕೆ. ಆ ವೇದಿಕೆ ಮೇಲೆ ಗುಲಾಬಿ ಬಣ್ಣದ ಫ್ರಾಕ್ ತೊಟ್ಟ ಪುಟ್ಟ ಪುಟ್ಟ ಪೋರಿಯರು ಮಾಡುತ್ತಿರುವ ಡ್ಯಾನ್ಸ್ ಕಣ್ಣಿಗೆ ಹಬ್ಬ. ಆದರೆ ಇವರುಗಳ ಮಧ್ಯೆ ಇರುವ ಒಂದು ಪುಟ್ಟ ಪೋರಿಗೆ ತಾನು ಎಲ್ಲಿದ್ದೇನೆ ಎಂದು ತಿಳಿಯದೇ ವೇದಿಕೆ ಮೇಲೆಯೇ ತೂಕಡಿಸುತ್ತಿದ್ದಳು. ಸುತ್ತಮುತ್ತಲೂ ನಿಂತಿರುವ ಆಕೆಯ ಸ್ನೇಹಿತರು ನೃತ್ಯ ಮಾಡುತ್ತಿದ್ದಾರೆ. ಆದರೆ ಆಕೆಗೆ ನಾನು ಡ್ಯಾನ್ಸ್ ಮಾಡುವುದನ್ನು ಬಿಟ್ಟು ವೇದಿಕೆಯ ಮಧ್ಯೆ ನಿದ್ರಿಸುತ್ತಾ, ತೂಕಡಿಸುತ್ತಾ ಕುಳಿತಿರುವ ಬಗ್ಗೆ ಅರಿವೇ ಇಲ್ಲ. ಆ ಪುಟ್ಟ ಹುಡುಗಿಯ ಜೊತೆಗಾರ್ತಿ ಆಕೆಯನ್ನು ಎಚ್ಚರಿಸಿದರೂ, ಪದೇಪದೇ ನೋಡಿದರೂ ಅವಳು ಮಾತ್ರ ನಿದ್ರಾ ಸಾಗರದಲ್ಲಿ ತೇಲುತ್ತಿದ್ದಳು. ಇದನ್ನು ನೋಡಿದ ಪ್ರೇಕ್ಷಕರು ಡ್ಯಾನ್ಸ್ ಮಾಡುವವರನ್ನು ಗಮನಿಸದೇ ಎಲ್ಲರೂ ಆ ಪುಟ್ಟ ಕಂದಮ್ಮನ ಮೇಲೆ ದೃಷ್ಟಿ ನೆಟ್ಟರು. ಆ ಪುಟ್ಟ ಕಂದಮ್ಮನ ಮುಗ್ಧತೆ ಲಕ್ಷಾಂತರ ಮಂದಿಯ ಹೃದಯ ಕದ್ದಿದ್ದಂತೂ ನಿಜ.

ಈ ಘಟನೆ ನಡೆದಿದ್ದು ಚೀನಾದ ವೆನ್‌ಜುವಾ ಎಂಬಲ್ಲಿ. ಇವಳ ಮುಗ್ಧತೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಸುಮಾರು ಒಂದೂವರೆ ನಿಮಿಷ ಇರುವ ಈ ವಿಡಿಯೋವನ್ನು ಸೌತ್ ಚೀನಾ ಮಾರ್ನಿಂಗ್ ಮಾರ್ಚ್ 26 ರಂದು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದೇ ತಡ ಸುಮಾರು 4 ಲಕ್ಷ ಮಂದಿ ವಿಡಿಯೋವನ್ನು ವೀಕ್ಷಿಸಿದ್ದು, 500 ಕ್ಕೂ ಹೆಚ್ಚು ಕಮೆಂಟ್‌ಗಳು ಹರಿದು ಬಂದಿದೆ.

‘ನನ್ನ ಮಗಳು ಮಧ್ಯಾಹ್ನದ ವೇಳೆ ನಿದ್ದೆ ಮಾಡುತ್ತಾಳೆ. ಆದರೆ ಆ ದಿನ ಆಕೆಗೆ ಮಧ್ಯಾಹ್ನ ಡ್ಯಾನ್ಸ್ ಶೋ ಇತ್ತು. ಅದೇ ಸಮಯಕ್ಕೆ ಆಕೆಗೆ ನಿದ್ದೆ ಬಂದ ಕಾರಣ ವೇದಿಕೆಯ ಮೇಲೆಯ ನಿದ್ದೆ ಮಾಡಿದ್ದಾಳೆ. ಶೋ ಮುಗಿದರೂ ಆಕೆ ಎಚ್ಚರಗೊಂಡಿಲ್ಲ' ಎಂದು ಘಟನೆ ಕುರಿತು ಆಕೆಯ ಅಮ್ಮ ವಿವರಿಸಿದ್ದಾಳೆ.

ನೆಟ್ಟಿಗರು ಆ ಸುಂದರ ಕ್ಷಣಗಳನ್ನು ನೋಡಿ ಖುಷಿ ಪಟ್ಟಿದ್ದು ಕಮೆಂಟ್‌ಗಳ ಸುರಿಮಳೆಯನ್ನೇ ಗೈದಿದ್ದಾರೆ. ಇದರಲ್ಲಿ ಒಬ್ಬರು ನಾನು ಕೆಲಸದ ವೇಳೆ ಇದೇ ರೀತಿ ಎಂದು ಹೇಳಿದರೆ, ಮತ್ತೊಬ್ಬರು, ಈ ಶೋದಲ್ಲಿ ನನ್ನ ಪಾತ್ರ ಸ್ಲೀಪಿಂಗ್ ಬ್ಯೂಟಿ ಎಂದರೆ, ಮತ್ತೊಬ್ಬರು ಆ ಹುಡುಗಿಯ ನಿದ್ದೆ ಇತರರ ಡ್ಯಾನ್ಸ್‌ಗಿಂತ ತುಂಬಾ ಚೆನ್ನಾಗಿತ್ತು ಎಂದು ಹೇಳಿದ್ದಾರೆ. ಇನ್ನು ಪ್ರತಿಯೊಬ್ಬರು ಉಳಿದ ಮಕ್ಕಳ ನೃತ್ಯ ನೋಡುವುದನ್ನು ಬಿಟ್ಟು ಪ್ರತಿಯೊಬ್ಬರು ಆ ಹುಡುಗಿಯ ಫೋಟೋ ಕ್ಲಿಕ್ಕಿಸುವುದು, ವಿಡಿಯೋ ಮಾಡುತ್ತಿದ್ದರು. ಅಷ್ಟಾಗಿ ಬೇರೆ ಮಕ್ಕಳ ಡ್ಯಾನ್ಸ್‌ ಅನ್ನು ನೋಡಿಯೇ ಇಲ್ಲ ಎಂದೇ ಹೇಳಬಹುದು.



ನಿಜ ಮಕ್ಕಳು ಮುಗ್ಧರು, ಅವರ ಆಟ, ಡ್ಯಾನ್ಸ್ ಊಟ ಹೀಗೆ ಅವರ ಪ್ರತಿ ಚಟುವಟಿಕೆಗಳು ಕಣ್ಣಿಗೆ ಹಬ್ಬ, ಮನಸ್ಸಿಗೆ ಮುದ ನೀಡುತ್ತದೆ.
First published: April 1, 2021, 11:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories