VIDEO VIRAL: ಅತ್ತ ಸಿಂಹಗಳು, ಇತ್ತ ಮೊಸಳೆಗಳು – ಕಾಡೆಮ್ಮೆ ಪಾರಾದ ರೋಚಕ ದೃಶ್ಯ ವೈರಲ್


Updated:April 17, 2019, 9:05 PM IST
VIDEO VIRAL: ಅತ್ತ ಸಿಂಹಗಳು, ಇತ್ತ ಮೊಸಳೆಗಳು – ಕಾಡೆಮ್ಮೆ ಪಾರಾದ ರೋಚಕ ದೃಶ್ಯ ವೈರಲ್
ಪಾರಾದ ಕೋಣ

Updated: April 17, 2019, 9:05 PM IST
ಧೈರ್ಯವೊಂದಿದ್ದರೆ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಈ ವೀಡಿಯೋ ಇಂದು ಸಾಕ್ಷಿಯಾಗಿದೆ. ಕೋಣವೊಂದು ಅತ್ತ ಬಲಶಾಲಿ ಸಿಂಹ ಪಡೆಗಳಿಂದ ತಪ್ಪಿಸಿಕೊಂಡು ಇತ್ತ ಮೊಸಳೆಯಿಂದ ಬಾಯಿಯಿಂದ ಜೀವ ಉಳಿಸಿಕೊಂಡು ಹೋರಾಡಿದ ಚಿತ್ರಣ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ದಕ್ಷಿಣ ಆಫ್ರಿಕಾದ ಕ್ರೂಗರ್​  ನ್ಯಾಷನಲ್​ ಪಾರ್ಕ್​ನಲ್ಲಿ  ನಡೆದ ಈ ಘಟನೆಯನ್ನು ಪಾರ್ಕ್​ನ ಹೋಮ್​ ಗೈಡ್​ ಖುಮಾಲೋ ಎಂಬವರು  ವಿಡಿಯೊವನ್ನು ಚಿತ್ರೀಕರಿಸಿದ್ದಾರೆ.

ಇದನ್ನೂ ಓದಿ: ಸ್ಯಾಮ್​ಸಂಗ್​ ‘ಗ್ಯಾಲಕ್ಸಿ ಎಂ20‘ ಖರೀದಿಸಲು ಫ್ರೀ ಬುಕ್ಕಿಂಗ್​ ಅವಕಾಶ​​​​

ಜಿಂಕೆಯನ್ನು ಅಟ್ಟಿಸಿಕೊಂಡು ಬಂದ ಸಿಂಹಗಳು ಪಕ್ಕದಲ್ಲಿದ್ದ ಕೋಣವನ್ನು ಗಮನಿಸಿ ಹಿಡಿಯಲು ಸಂಚು ನಡೆಸಿದೆ. ಈ ವೇಳೆ ಸಿಂಹಗಳಿಂದ ರಕ್ಷಿಸಿಕೊಳ್ಳಲು ಕೋಣವು ಪಕ್ಕದಲ್ಲಿದ್ದ ನೀರಿಗೆ ಇಳಿದು ಈಜಲು ಮುಂದಾಗುತ್ತದೆ. ಆದರೆ ಸಿಂಹಗಳ ಬಾಯಿಯಿಂದ ತಪ್ಪಿಸಿಕೊಂಡ ಕೋಣ ನೀರಿನಲ್ಲಿ ಮೊಸಳೆಯ ಬಾಯಿಗೆ ಸಿಲುಕಿಕೊಂಡಿದೆ. ಧೈರ್ಯ ಮಾಡಿ ಮೊಸಳೆಯ ಜೊತೆ ಹೋರಾಡಿದ ಕೋಣ ನೀರಿನಿಂದ ಮೇಲೆ ಬಂದು ತನ್ನ ಪ್ರಾಣವನ್ನು ರಕ್ಷಣೆ ಮಾಡಿದೆ.

ಇದನ್ನೂ ಓದಿ: ‘ಉಮೇಶ್​ ಜಾಧವ್​ ಗೋಮುಖ ವ್ಯಾಘ್ರ, ಅವನಿಗೆ ನಿಯತ್ತಿಲ್ಲ; ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ

ಸಿಂಹ ಮತ್ತು ಮೊಸಳೆಯಿಂದ ಪಾರಾಗಲು ಹವಣಿಸುತ್ತಿದ್ದ ಸಂದರ್ಭದಲ್ಲಿ ಕೋಣಗಳ ಹಿಂಡು ನೆರವಿಗೆ ಬಂದಿದೆ. ಸಿಂಹಗಳು ಕೋಣಗಳ ಹಿಂಡನ್ನು ಕಂಡು ನೇರವಾಗಿ ಓಟಕ್ಕಿತ್ತಿವೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವೈರಲ್​ ಆಗುತ್ತಿದೆ.




First published:April 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ