Shark Video: ಶಾರ್ಕ್ ಏನಾದ್ರೂ ನುಂಗಿದ್ರೆ ಬಾಯಿ ಒಳಗೆ ಹೇಗಿರುತ್ತೆ? ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆ

ಶಾರ್ಕ್ ಗಂಟಲು ಮತ್ತು ಒಳಭಾಗ ಸೆರೆಯಾಗಿದೆ. ಶಾರ್ಕ್ ರೇಜರ್ ನಂತಹ ಚೂಪಾದ ಹಲ್ಲುಗಳನ್ನು ಹೊಂದಿದೆ ಮತ್ತು ಅದರ ಗಂಟಲಿನ ಆಂತರಿಕ ರಚನೆಯು ಗೋಚರಿಸುತ್ತದೆ. ಈ ಭಯಾನಕ ದೃಶ್ಯ ಕಂಡು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಮುದ್ರದಲ್ಲಿಯ ಜೀವಿಗಳು (Sea) ಹೇಗೆ ಇರುತ್ತವೆ ಎಂಬುದರ ತಿಳಿದುಕೊಳ್ಳಲು ಜನರು ಗೂಗಲ್ (Google) ಮೊರೆ ಹೋಗುತ್ತಾರೆ. ಕೆಲವರು ಜಲಚರ ಜೀವಿಗಳ ಬಗ್ಗೆ ಅಧ್ಯಯನ ಮಾಡುತ್ತಾರೆ. ಇತ್ತೀಚೆಗೆ ಸ್ಕೂಬಾ ಡೈವಿಂಗ್ ಮೂಲಕ ಸಮುದ್ರದಾಳಕ್ಕೆ ಹೋಗಿ ಅಲ್ಲಿಯ ಲೋಕವನ್ನು ಜನಸಾಮಾನ್ಯರು ಕಣ್ತುಂಬಿಕೊಳ್ಳಬಹುದು. ಇನ್ನೂ ಮೊಸಳೆ, ಶಾರ್ಕ್ ಅಂತಹ ಪ್ರಾಣಿಗಳು ತುಂಬಾನೇ ಅಪಾಯಕಾರಿ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಶಾರ್ಕ್ ಎಷ್ಟು ಅಪಾಯಕಾರಿ ಎಂಬುದನ್ನು ಟಿವಿಗಳಲ್ಲಿ ನೋಡಿರುತ್ತಿರಿ. ಶಾರ್ಕ್  ಕುರಿತಾದ ಸಿನಿಮಾಗಳು (Shark Cinema) ರಿಲೀಸ್ ಗೊಂಡಿವೆ. ಆದರೆ ಶಾರ್ಕ್ (Shark Stomach Video) ಏನಾದ್ರು ನುಂಗಿದ್ರೆ ಒಳಗೆ ಹೇಗಿರುತ್ತೆ ಅನ್ನೋದು  ಎಂಬುದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ತಿಮಿಂಗಿಲ, ಮೊಸಳೆ ಅಥವಾ ಶಾರ್ಕ್ ಆಗಿರಲಿ ಅವುಗಳ ಬೇಟೆಯ ವಿಧಾನವು ತುಂಬಾ ಜಾಣತನದಿಂದ ಕೂಡಿರುತ್ತದೆ. ಆ ಬೇಟೆ ಹೊಟ್ಟೆಯೊಳಗೆ ಏನಾಗುತ್ತದೆ ಅನ್ನೋದು ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.

ಕ್ಯಾಮೆರಾ ನುಂಗಿದ ಶಾರ್ಕ್!

ಚಲನಚಿತ್ರ ನಿರ್ಮಾಪಕ ಮತ್ತು ಸಂರಕ್ಷಣಾವಾದಿ ಜಿಮ್ಮಿ ಡಾ ಕಿಡ್ (Zimy Da Kid) ಎಂಬವರು ತಮ್ಮ Instagram ಖಾತೆಯಿಂದ ಈ ಭಯಾನಕ ರೋಮಾಂಚಕಾರಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ನೀರೊಳಗಿನ ಚಿತ್ರೀಕರಣದ ವೇಳೆ ಅವರ ಕ್ಯಾಮೆರಾವನ್ನು ಟೈಗರ್ ಶಾರ್ಕ್ ನುಂಗಿದಾಗ ಅವರು ಈ ವಿಡಿಯೋ ಸಿಕ್ಕಿದೆ.

ಜಿಮ್ಮಿ ಅವರು ಸಾಕ್ಷ್ಯಚಿತ್ರಕ್ಕಾಗಿ ನೀರಿನ ಅಡಿಯಲ್ಲಿ ಚಿತ್ರೀಕರಣ ಮಾಡುತ್ತಿದ್ದರು. ಅವರ Insta-360 ಕ್ಯಾಮೆರಾ ಶಾರ್ಕ್ ‌ನ ಬಾಯಿಯೊಳಗೆ ಹೋಗಿದೆ. ಕ್ಯಾಮೆರಾ ಆನ್ ಆಗಿದ್ದರಿಂದ ಶಾರ್ಕ್ ಒಳಗಿನ ದೃಶ್ಯವೆಲ್ಲ ಅದರಲ್ಲಿ ದಾಖಲಾಗಿದೆ.

ಇದನ್ನೂ ಓದಿ:  Viral News: ಮಹಿಳಾ ಉದ್ಯೋಗಿಗಳಿಗೆ ಮೇಲ್ ಕಳುಹಿಸಿದ ಬಾಸ್: ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ
 

 

 


View this post on Instagram


 

 

 


A post shared by Zimy Da Kid (@zimydakid)


ಮಾಲ್ಡೀವ್ಸ್‌ ನಲ್ಲಿ ಈ ದೃಶ್ಯ ಸೆರೆ

ಈ ದೃಶ್ಯ ಮಾಲ್ಡೀವ್ಸ್ ನ ಸಮುದ್ರದಲ್ಲಿ ಸೆರೆ ಹಿಡಿಯಲಾಗಿದೆ. ಸಂರಕ್ಷಣಾಧಿಕಾರಿ ಜಿಮ್ಮಿ ಡಾ.ಕಿಡ್  ಶಾರ್ಕ್ ಬಂದ ವೇಳೆ ಅವರು ಪ್ರಾಣಾಪಾಯದಿಂದ ಬದುಕುಳಿದಿದ್ದಾರೆ. ಮೊದಲು ಅವರ ಕ್ಯಾಮೆರಾ ಶಾರ್ಕ್ ಬಾಯಿಯೊಳಗೆ ಹೋಗಿದೆ. ಕೆಲ ಸಮಯದ ನಂತರ ಕ್ಯಾಮೆರಾವನ್ನು ಶಾರ್ಕ್ ಹೊರ ಹಾಕಿದೆ.

ಶಾರ್ಕ್ ಗಂಟಲಿನ ಭಾಗ ಸೆರೆ

ಈ ಸಮಯದಲ್ಲಿ ಕ್ಯಾಮೆರಾದಲ್ಲಿ ಶಾರ್ಕ್ ಗಂಟಲು ಮತ್ತು ಒಳಭಾಗ ಸೆರೆಯಾಗಿದೆ. ಶಾರ್ಕ್ ರೇಜರ್ ನಂತಹ ಚೂಪಾದ ಹಲ್ಲುಗಳನ್ನು ಹೊಂದಿದೆ ಮತ್ತು ಅದರ ಗಂಟಲಿನ ಆಂತರಿಕ ರಚನೆಯು ಗೋಚರಿಸುತ್ತದೆ. ಈ ಭಯಾನಕ ದೃಶ್ಯ ಕಂಡು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಡೈಲಿ ಸ್ಟಾರ್ ವರದಿಯ ಪ್ರಕಾರ, 29 ವರ್ಷದ ಜಿಮ್ಮಿ ಕ್ಯಾಮೆರಾವನ್ನು ನೋಡುವ ಮೂಲಕ ಶಾರ್ಕ್ ದಾಳಿಗೆ ಒಳಗಾಗಿದ್ದಾರೆ. ಶಾರ್ಕ್ ಮನುಷ್ಯರನ್ನು ನುಂಗುವದಿಲ್ಲ, ಬದಲಾಗಿ ತನ್ನ ಚೂಪಾದ ದಂತಗಳಿಂದ ತಿನ್ನುತ್ತದೆ. ಸಮುದ್ರದಲ್ಲಿ ಹೊಳೆಯುವ ವಸ್ತು ಕಾಣುತ್ತಿದ್ದಂತೆ ಬಾಯಿಯೊಳಗೆ ತೆಗೆದುಕೊಂಡಿದೆ.

ಇದನ್ನೂ ಓದಿ:  Love Letter: ಕುಸುಮಾ ನಿನ್ನನ್ನು ಕರೆಯಲು ಬರ್ತೀನಿ; ಬಂತು ವಿಶಾಲ್ ಸಂದೇಶ; ಇಬ್ಬರ ಮದ್ವೆ ನಡೆಯುತ್ತಾ?

ಈ ಬೆಕ್ಕುಗಳಿಗೆ ಮ್ಯೂಸಿಕ್​ ಅಂದ್ರೆ ಅದೇನ್​ ಇಷ್ಟ ಅಂತೀರಾ!

ಸುಮಧುರವಾದ ಹಾಡು (Melodious Song) ಕೇಳುವುದು ಮತ್ತು ಆ ನಾನಾ ರೀತಿಯ ಸಂಗೀತ (Music) ವಾದ್ಯಗಳಿಂದ ಹೊರಬರುವ ಆ ಅದ್ಬುತವಾದ ರಾಗ(Tune) ಗಳನ್ನು ಕೇಳುವುದು ಮತ್ತು ಹಾಗೆಯೇ ಆ ಸಂಗೀತದ ಗುಂಗಿನಲ್ಲಿ ವಿಹರಿಸುವುದು ಎಂದರೆ ಯಾರಿಗೆ ತಾನೇ ಇಷ್ಟ ಇರುವುದಿಲ್ಲ ಹೇಳಿ..? ಕೇವಲ ಮನುಷ್ಯ(Human) ರಷ್ಟೇ ಅಲ್ಲದೆ, ಪ್ರಾಣಿಗಳು (Animals) ಸಹ ವಾದ್ಯಗಳಿಂದ ಹೊರ ಹೊಮ್ಮುವಂತಹ ಆ ರಾಗವನ್ನು ಕೇಳುತ್ತವೆ ಎಂದು ಹೇಳಿದರೆ ನೀವು ಅದನ್ನು ಒಂದು ಕ್ಷಣ ನಂಬಲಿಕ್ಕಿಲ್ಲ. ಹೌದು.. ಸಂಗೀತಕ್ಕೆ ಆ ಶಕ್ತಿ (Power) ಇದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಯಾವುದೇ ರಾಗವನ್ನು ಕೇಳುತ್ತಾ ಇದ್ದರೆ, ಅದನ್ನು ಹಾಗೆಯೇ ಕೇಳುತ್ತಲೇ ಇರಬೇಕು ಎಂದೆನಿಸುತ್ತದೆ.
View this post on Instagram


A post shared by Sarper Duman (@sarperduman)


ಇದು ಕೇಳುಗರನ್ನು ಮಂತ್ರ ಮುಗ್ಧಗೊಳಿಸುತ್ತದೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಈ ಮಾತು ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಲ್ಲ. ಬೆಕ್ಕುಗಳಿಗೂ ಸಹ ಈಗ ಇದು ನಿಜವಾಗಿದೆ, ಏಕೆಂದರೆ ಹೊಸದಾಗಿ ಒಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಎಂದು ಹೇಳಬಹುದು.
Published by:Mahmadrafik K
First published: