Viral Video: ಥೇಟ್ ಸುನಾಮಿ ಅಪ್ಪಳಿಸಿದಂತೆ ಕಾಣುತ್ತಿದೆ ಮೋಡಗಳ ಈ ದೃಶ್ಯ! ಪ್ರಕೃತಿ ವೈಭವಕ್ಕೆ ನೋಡುಗರು ಮೂಕಸ್ತಬ್ಧ

ಈ ವಿಡಿಯೋ ನೋಡಿದ ನಿಮಗೆ ಇದೆಂಥಾ ಪ್ರಕೃತಿಯ ವೈಚಿತ್ರ್ಯ ಎನಿಸುವುದರಲ್ಲಿ ಸಂಶಯನೇ ಇಲ್ಲ. ಮೋಡವು ಒಮ್ಮೊಮ್ಮೆ ಒಂದು ರೀತಿ ಭಾಸವಾಗುತ್ತದೆ. ಆದರೆ ಈ ವಿಡಿಯೋದಲ್ಲಿ ನೋಡಿ ಮೋಡ ಥೇಟ್ ಸುನಾಮಿ ಉಕ್ಕಿ ಬರುತ್ತಿದ್ದಂತೆ ಕಾಣುತ್ತಿದೆ.

ಸುನಾಮಿಯಂತೆ ಕಾಣುವ ಮೋಡ

ಸುನಾಮಿಯಂತೆ ಕಾಣುವ ಮೋಡ

  • Share this:
ಪ್ರಕೃತಿ ನಿಜಕ್ಕೂ ಹಲವಾರು ಅಚ್ಚರಿಗಳ, ಕೌತುಕಗಳ, ಭವ್ಯವಾದ ತಾಣವಾಗಿದೆ. ಕೆಲವೊಮ್ಮೆ ಅದರ ರೌದ್ರ ನರ್ತನದಿಂದ ಮನುಷ್ಯರನ್ನು ತಲ್ಲಣ ಗೊಳಿಸಿದರೆ, ಇನ್ನೊಮ್ಮೆ ಅದರ ಭವ್ಯವಾದ ಅಚ್ಚರಿಗಳಿಂದ ನೋಡುಗರನ್ನು ಮೂಕವಿಸ್ಮಿತರನ್ನಾಗಿ ಮಾಡಿ ಬಿಡುತ್ತದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿರುವ ಮೋಡದ (Cloud) ವಿಡಿಯೋವೇ ಎಲ್ಲವನ್ನೂ ವಿವರಿಸುತ್ತದೆ. ಮೋಡ, ಮಳೆ (Rain) ಬರುತ್ತಿದೆ ಎನ್ನುವಾಗ ಒಂದು ರೀತಿ, ಬಿಸಿಲಿದ್ದಾಗ ಇನ್ನೊಂದು ರೀತಿ ಹೀಗೆ ಹವಮಾನಕ್ಕೆ ತಕ್ಕಂತೆ ಮೋಡದ ವೇಗ, ಬಣ್ಣ, ಆಕಾರ ಬದಲಾಗುತ್ತದೆ. ಒಮ್ಮೊಮ್ಮೆ ಹಿಮದ ಬಂಡೆಯಂತೆ ಶ್ವೇತ ವರ್ಣದಲ್ಲಿ, ಇನ್ನೊಮ್ಮೆ ಕಪ್ಪು ಸುಂದರಿಯಾಗಿ ಕಾರ್ಮೋಡದ ರೀತಿ ಮಿಂಚುತ್ತವೆ ಮೋಡಗಳು. ಆದರೆ ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾದ ಈ ಮೋಡದ ವಿಡಿಯೊ ಕ್ಲಿಪ್ನಲ್ಲಿ ಮಾತ್ರ ಇರುವುದೇ ಬೇರೆ.

ಈ ವಿಡಿಯೋ ನೋಡಿದ ನಿಮಗೆ ಇದೆಂಥಾ ಪ್ರಕೃತಿಯ ವಿಚಿತ್ರ ಎನಿಸುವುದರಲ್ಲಿ ಸಂಶಯನೇ ಇಲ್ಲ. ಅದೇನು ಅಂತೀರಾ ಇಲ್ಲಿದೆ ನೋಡಿ ಈ ಮೋಡದ ಭವ್ಯ ದೃಶ್ಯದ ವಿವರಣೆ. ಮೇಲೆ ಹೇಳಿದಂತೆ ಮೋಡವು ಒಮ್ಮೊಮ್ಮೆ ಒಂದು ರೀತಿ ಭಾಸವಾಗುತ್ತದೆ. ಆದರೆ ಈ ವಿಡಿಯೋದಲ್ಲಿ ನೋಡಿ ಮೋಡ ಥೇಟ್ ಸುನಾಮಿ ಉಕ್ಕಿ ಬರುತ್ತಿದ್ದಂತೆ ಕಾಣುತ್ತಿದೆ.

ವಿಡಿಯೋದಲ್ಲಿ ಏನಿದೆ?
ಸಾಲುಗಟ್ಟಿದ ಮನೆಯ ಹಿಂದೆ ಮೋಡವು ಸುನಾಮಿ ರೀತಿ ಕಾಣುತ್ತಿದೆ. 23 ಸೆಕೆಂಡ್ ಗಳ ಈ ವಿಡಿಯೋದಲ್ಲಿ ಮೋಡಗಳು ನಿಜಕ್ಕೂ ಸುನಾಮಿಯನ್ನು ಹೋಲುವ ರೀತಿ ಕಂಡು ಬಂದಿದೆ. ಇನ್ನೇನು ಸುನಾಮಿ ಅಪ್ಪಳಿಸಿ ಇಲ್ಲಿನ ಮನೆಗಳನ್ನು ಕೊಚ್ಚಿಕೊಂಡು ಹೋಗುತ್ತದೆ ಎನ್ನುವಂತೆ ಈ ಮೋಡಗಳು ರಚನೆಯಾಗಿವೆ. ಈ ರೀತಿಯಾದ ಅಸಾಮಾನ್ಯ ಮೋಡಗಳ ರಚನೆಯನ್ನು ಆರ್ಕಸ್ ಅಥವಾ ರೋಲ್ ಕ್ಲೌಡ್ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: Footwear: ಈ ಗ್ರಾಮದಲ್ಲಿ ಅಪ್ಪಿತಪ್ಪಿ ಚಪ್ಪಲಿ ಹಾಕಿ ಓಡಾಡಿದ್ರೆ ಶಿಕ್ಷೆ ಗ್ಯಾರೆಂಟಿ!

ತುಲನಾತ್ಮಕವಾಗಿ ತಂಪಾದ ಗಾಳಿಯು ಚಂಡಮಾರುತವನ್ನು ಹೋಲುವ ಬೆಚ್ಚಗಿನ ಮತ್ತು ಡ್ಯಾಂಪರ್ ಗಾಳಿಯಲ್ಲಿ ಮುಂದಕ್ಕೆ ಚಲಿಸಿದಾಗ ರೋಲ್ ಮೋಡಗಳು ಗುಡುಗುಗಳ ಅಂಚಿನಲ್ಲಿ ರೂಪುಗೊಳ್ಳುತ್ತವೆ. ತಕ್ಷಣಕ್ಕೆ ಈ ದೃಶ್ಯ ನೋಡಿದರೆ ಅಯ್ಯೋ ಸುನಾಮಿ ಅಲೆಗಳು ಎಷ್ಟು ದೊಡ್ಡದಾಗಿವೆ ಎನಿಸಬಹುದು, ಆದರೆ ನೀರಿನ ದೊಡ್ಡ ಅಲೆಗಳಂತೆ ಕಾಣುವ ಈ ದೃಶ್ಯದಲ್ಲಿ ಅಸಲಿಗೆ ಇರುವುದು ಮಾತ್ರ ಮೋಡಗಳು. ರೆಡ್ಡಿಟ್ ನಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೋದಲ್ಲಿ "ಇದನ್ನು ನಾನು ಸುನಾಮಿ ಎಂದು ಭಾವಿಸಿದೆ, ನಾನು ಈ ರೀತಿಯ ಮೋಡಗಳನ್ನು ಹಿಂದೆಂದೂ ನೋಡಿರಲಿಲ್ಲ" ಎಂಬ ಶೀರ್ಷಿಕೆ ನೀಡಿ ಹಂಚಿಕೊಳ್ಳಲಾಗಿದೆ. ಆದರೆ ವೀಡಿಯೊ ಚಿತ್ರೀಕರಣಗೊಂಡ ಸ್ಥಳ ಎಲ್ಲಿ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.ಸುನಾಮಿಯಂತೆ ಕಾಣುವ ಮೋಡದ ದೃಶ್ಯದ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು?
ಸುನಾಮಿಯಂತೆ ಕಾಣುವ ಮೋಡದ ದೃಶ್ಯದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಂತೆ ಸಾಕಷ್ಟು ವೈರಲ್ ಆಗಿದೆ. ವಿಡಿಯೋ 90,000ಕ್ಕೂ ಲೈಕ್ಸ್ ಮತ್ತು 2,200 ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಗಳಿಸಿದೆ. ಹಲವಾರು ಇಂಟರ್ನೆಟ್ ಬಳಕೆದಾರರು ಮೋಡದ ವಿಚಿತ್ರ ರಚನೆ ಕಂಡು ಸಂಪೂರ್ಣವಾಗಿ ಭಯಾನಕ ಮತ್ತು ಭವ್ಯವಾಗಿದೆ ಎಂಬೆಲ್ಲಾ ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.

ಒಬ್ಬ ಬಳಕೆದಾರರು “ಅದು ಇಂಟರ್ ಸ್ಟೆಲ್ಲಾರ್‌ನಲ್ಲಿನ ಬೃಹತ್ ಗ್ರಹಗಳ ಉಬ್ಬರವಿಳಿತದ ಅಲೆಯಂತೆ ಕಾಣುತ್ತದೆ. ನಾನು ಅದನ್ನು ಸಿನಿಮಾಗಳಲ್ಲಿ ನೋಡಿದ್ದೆ ಈಗ ನಿಜಕ್ಕೂ ನೋಡುತ್ತಿದ್ದೇನೆ, ಈ ದೃಶ್ಯ ನೋಡುತ್ತಿದ್ದ ಹಾಗೆ ಜೋರಾಗಿ ಕಿರುಚಿಕೊಂಡೆ ಎಂದೂ ಸಹ ಬರೆದಿದ್ದಾರೆ. ಮತ್ತೊಬ್ಬ ನೆಟ್ಟಿಗ ತಮಾಷೆಯಾಗಿ ಕಾಮೆಂಟ್ ಮಾಡುತ್ತ "ನಾನು ನನ್ನ ಕಾರನ್ನು ತೆಗದುಕೊಂಡು ಪ್ಯಾಕ್ ಮಾಡಿಕೊಂಡು ಹೊರಡುತ್ತಿದ್ದೇನೆ” ಎಂದಿದ್ದಾನೆ.

ಇದನ್ನೂ ಓದಿ: Viral Video: ಅಬ್ಬಾ ಡೈನೋಸಾರ್ ಕಂಡಿವೆ ಅಂತೆ! ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಫುಲ್ ವೈರಲ್

ಆಕಾಶದಲ್ಲಿ ಸುನಾಮಿ ರೀತಿ ಭೂಮಿಗೆ ಇಳಿಯಲು ಸಜ್ಜಾದ ಮೋಡದ ದೃಶ್ಯ ಬೆರಗು ಮೂಡಿಸಿದೆ. ಪ್ರಕೃತಿಯ ವೈಶಿಷ್ಟ್ಯಕ್ಕೆ ಬೆರಗಾದ ಸ್ಥಳೀಯರು ವಿಚಿತ್ರ ಮೋಡ ಕಂಡು ಅಚ್ಚರಿಗೊಂಡಿದ್ದಾರೆ. ನಿವಾಸಿಗಳು ಸಹ ಈ ಅಪರೂಪದ ದೃಶ್ಯಗಳನ್ನ ತಮ್ಮ ಮೊಬೈಲುಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.
Published by:Ashwini Prabhu
First published: