• Home
  • »
  • News
  • »
  • trend
  • »
  • Viral News: ಅಬ್ಬಬ್ಬಾ ಏನ್ ಐಡಿಯಾ ಗುರೂ ಇದು; ತಲೆ ಕೂದಲನ್ನು ಹೀಗೂ ತೊಳೆಯಬಹುದು!

Viral News: ಅಬ್ಬಬ್ಬಾ ಏನ್ ಐಡಿಯಾ ಗುರೂ ಇದು; ತಲೆ ಕೂದಲನ್ನು ಹೀಗೂ ತೊಳೆಯಬಹುದು!

ವೈರಲ್ ಫೋಟೋ

ವೈರಲ್ ಫೋಟೋ

ವಿನೂತನವಾದ ರೀತಿಯಲ್ಲಿ ತನ್ನ ತಲೆಯ ಕೂದಲನ್ನು ತೊಳೆದುಕೊಂಡಿದ್ದಾನೆ ನೋಡಿ. ಅವಶ್ಯಕತೆ ಅಂತ ಬಂದಾಗ ವ್ಯಕ್ತಿ ತನ್ನ ಜೀವನವನ್ನು ಸುಲಭಗೊಳಿಸಿಕೊಳ್ಳಲು ಏನೆಲ್ಲಾ ಮಾಡ್ತಾನೆ ಅನ್ನೋದಕ್ಕೆ ಇದೇ ಸಾಕ್ಷಿಯಾಗಿದೆ.

  • Trending Desk
  • 4-MIN READ
  • Last Updated :
  • Share this:

ಸಾಮಾನ್ಯವಾಗಿ ನಾವು ನಮ್ಮ ತಲೆಗೆ ಶಾಂಪೂ (Shampoo) ಹಾಕಿಕೊಂಡರೆ ಅಥವಾ ಸಾಬೂನು ಹಚ್ಚಿಕೊಂಡರೆ ಅದನ್ನು ಬಕೆಟ್ ನಲ್ಲಿ ನೀರು ತುಂಬಿಸಿಕೊಂಡು ಚಿಕ್ಕ ಮಗ್ ನಿಂದ ಒಂದಾದ ಮೇಲೊಂದರಂತೆ ನೀರನ್ನು ತೆಗೆದುಕೊಂಡು ತಲೆಯ ಮೇಲೆ ಹಾಕಿಕೊಂಡು ತಲೆಯ ಕೂದಲನ್ನು (Head Hair) ಚೆನ್ನಾಗಿ ತೊಳೆದುಕೊಳ್ಳುತ್ತೇವೆ. ಇದಕ್ಕೆ ಹೊರತಾಗಿ ಇರುವ ಇನ್ನೊಂದು ವಿಧಾನವೆಂದರೆ ಬಾತ್‌ರೂಮ್​ನಲ್ಲಿರುವ (Bath RoomVi) ಶಾವರ್ ಅನ್ನು ಆನ್ ಮಾಡಿಕೊಂಡು ಅದರ ಕೆಳಗೆ ನಮ್ಮ ತಲೆಯನ್ನು ಬಗ್ಗಿಸಿ, ಕೂದಲನ್ನು ಸ್ವಚ್ಛ ಮಾಡಿಕೊಳ್ಳುತ್ತೇವೆ ಅಂತ ಹೇಳಬಹುದು. ಅರೇ ಇದರ ಬಗ್ಗೆ ಈಗೇಕೆ ಮಾತಾಡುತ್ತಿದ್ದೇವೆ ಅಂತ ನಿಮಗೆ ಸ್ವಲ್ಪ ಆಶ್ಚರ್ಯವಾಗಬಹುದು.


ವಿಷಯ ಏನಪ್ಪಾ ಅಂದರೆ ಇಲ್ಲೊಬ್ಬ ವ್ಯಕ್ತಿ ಈ ಮೇಲೆ ಹೇಳಿದ ಎರಡು ವಿಧಾನಗಳನ್ನು ಹೊರತುಪಡಿಸಿ ಬೇರೆ ವಿನೂತನವಾದ ರೀತಿಯಲ್ಲಿ ತನ್ನ ತಲೆಯ ಕೂದಲನ್ನು ತೊಳೆದುಕೊಂಡಿದ್ದಾನೆ ನೋಡಿ. ಅವಶ್ಯಕತೆ ಅಂತ ಬಂದಾಗ ವ್ಯಕ್ತಿ ತನ್ನ ಜೀವನವನ್ನು ಸುಲಭಗೊಳಿಸಿಕೊಳ್ಳಲು ಯಾವುದಾದರೂ ಒಂದು ಮಾರ್ಗವನ್ನು ಕಂಡು ಹಿಡಿದುಕೊಳ್ಳುತ್ತಾನೆ ಅಂತ ಬಹುಶಃ ಇಂತಹ ವ್ಯಕ್ತಿ ನೋಡಿಯೇ ಹೇಳಿರಬಹುದು.


ಜನರು ಆಗಾಗ್ಗೆ ತಮ್ಮ ಬಳಿ ಇದ್ದಂತಹ ವಸ್ತುಗಳನ್ನು ಮತ್ತು ಮೂಲಭೂತ ಸೌಲಭ್ಯಗಳಿಂದ ಅನನ್ಯ ಮತ್ತು ಉಪಯುಕ್ತವಾದದ್ದನ್ನು ಮಾಡುವುದನ್ನು ನಾವು ನೋಡಿರುತ್ತೇವೆ. ಈಗ ಅಂತಹ ಒಂದು ಶವರ್ ಆವಿಷ್ಕಾರದ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾನೇ ಜೋರಾಗಿ ಹರಿದಾಡುತ್ತಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ತನ್ನ ತಲೆಯ ಕೂದಲನ್ನು ತೊಳೆದುಕೊಳ್ಳುವುದಕ್ಕೆ ವ್ಯಕ್ತಿ ಮಾಡಿರುವ ಪ್ಲ್ಯಾನ್ ನೋಡಿ..


ರೋಮಾ ಬಲ್ವಾನಿ ಎಂಬ ಟ್ವಿಟ್ಟರ್ ಬಳಕೆದಾರರು ಭಾನುವಾರ ಹಂಚಿಕೊಂಡಿರುವ ಈ ವೀಡಿಯೋದಲ್ಲಿ, ಒಬ್ಬ ವ್ಯಕ್ತಿಯು ತನ್ನ ಬೆನ್ನಿನ ಮೇಲೆ ನೀರಿನ ಡ್ರಮ್ ಸಹಾಯದಿಂದ ತನ್ನ ಕೂದಲನ್ನು ತೊಳೆದುಕೊಳ್ಳುವುದನ್ನು ತೋರಿಸುತ್ತದೆ. ಕ್ಲಿಪ್ ಅನ್ನು ಪೋಸ್ಟ್ ಮಾಡುವಾಗ, ಬಲ್ವಾನಿ ಅವರು "ಇದನ್ನು ಮರು ಹಂಚಿಕೊಳ್ಳದೇ ಇರಲು ಸಾಧ್ಯವಾಗಲಿಲ್ಲ. ಸರಳ, ನವೀನ, ವೆಚ್ಚ-ಪರಿಣಾಮಕಾರಿಯಾದ ಐಡಿಯಾ ಮತ್ತು ಇದು ತುಂಬಾನೇ ಚೆನ್ನಾಗಿ ಕೆಲಸ ಮಾಡುತ್ತದೆ. ಇದು ಜುಗಾಡ್! ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.


Video Showing Mans Unique Technique To Wash Hair Surprises Internet
ವೈರಲ್ ಫೋಟೋ


ಬಟ್ಟೆಯ ಸಹಾಯದಿಂದ ಒಬ್ಬ ವ್ಯಕ್ತಿಯು ತನ್ನ ಬೆನ್ನಿನ ಮೇಲೆ ಡ್ರಮ್ ಅನ್ನು ಕಟ್ಟಿಕೊಂಡು ಕುಳಿತಿರುವುದನ್ನು ಕ್ಲಿಪ್ ನ ಪ್ರಾರಂಭದಲ್ಲಿ ನಾವು ನೋಡಬಹುದು. ತನ್ನ ನೆತ್ತಿಯ ಮೇಲೆ ಸಾಬೂನನ್ನು ಹಚ್ಚಿದ ನಂತರ, ಆ ವ್ಯಕ್ತಿಯು ತನ್ನ ಬೆನ್ನನ್ನು ಸ್ವಲ್ಪ ಬಾಗಿಸುವುದನ್ನು ಕಾಣಬಹುದು, ಇದರಿಂದ ಡ್ರಮ್ ನಿಂದ ನೀರು ಅವನ ತಲೆಗೆ ಹರಿಯುತ್ತದೆ ಮತ್ತು ಆ ಸಾಬೂನಿನ ನೊರೆಯನ್ನು ತೊಳೆಯುತ್ತದೆ.


ಈ ವೀಡಿಯೋ ನೋಡಿ ನೆಟ್ಟಿಗರು ಏನ್ ಹೇಳಿದ್ರು ಗೊತ್ತೇ?


ಇಂಟರ್ನೆಟ್ ಬಳಕೆದಾರರು ಈ ವೀಡಿಯೋಗೆ ತ್ವರಿತವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಆ ವ್ಯಕ್ತಿಯ ಪ್ರತಿಭೆಯ ಕಲ್ಪನೆಯನ್ನು ಶ್ಲಾಘಿಸಿದರೆ, ಇತರರು ಕ್ಲಿಪ್ ಕೇವಲ "ಬಡತನ" ದ ಉದಾಹರಣೆ ಎಂದು ವಾದಿಸಿದರು.


"ನಾನು ಜುಗಾಡ್ ಅನ್ನು ಇಷ್ಟಪಡುತ್ತೇನೆ. ಇದು ದೇಸಿ ಥಿಂಕಿಂಗ್" ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಇನ್ನೊಬ್ಬರು "ಬಡತನವನ್ನು ವೈಭವೀಕರಿಸುವುದನ್ನು ನಿಲ್ಲಿಸಿ" ಎಂದು ಹೇಳಿದರು. ಭಾನುವಾರದಿಂದ, ಈ ವೀಡಿಯೋ 15,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ನೂರಾರು ಲೈಕ್ ಗಳನ್ನು ಗಳಿಸಿದೆ.


ಇಂತಹ ಜುಗಾಡ್ ವೀಡಿಯೋಗಳು ತುಂಬಾನೇ ಇವೆ..


ಸಾಮಾಜಿಕ ಮಾಧ್ಯಮಗಳು ಇಂತಹ "ಜುಗಾಡ್" ವೀಡಿಯೋಗಳಿಂದ ತುಂಬಿದೆ. ಈ ಹಿಂದೆ, ಸೊಳ್ಳೆಗಳನ್ನು ಓಡಿಸಲು ನವೀನ ಮಾರ್ಗವನ್ನು ತೋರಿಸುವ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿತ್ತು.


ಇದನ್ನೂ ಓದಿ: Helicopter Car: ಮಾರುತಿ ವ್ಯಾಗನಾರ್‌ಗೆ ಹೆಲಿಕಾಪ್ಟರ್ ಲುಕ್! ಈ ಕಾರು ನಿಜವಾಗಿಯೂ ಹಾರುತ್ತಾ?


ದನದ ಕೊಟ್ಟಿಗೆಯಲ್ಲಿ ಸೊಳ್ಳೆಗಳನ್ನು ತೊಡೆದು ಹಾಕಲು ಗ್ರಾಮಸ್ಥರೊಬ್ಬರು "ದೇಸಿ ಇಂಡಿಯನ್ ಜುಗಾಡ್" ಅನ್ನು ಬಳಸುತ್ತಿರುವುದನ್ನು ವೀಡಿಯೋದಲ್ಲಿ ತೋರಿಸಲಾಗಿತ್ತು.


ಬೇವಿನ ಎಲೆಗಳ ಹೊಗೆಯನ್ನು ಹರಡಲು ವ್ಯಕ್ತಿಯೊಬ್ಬ ವಿದ್ಯುತ್ ಫ್ಯಾನ್ ಅನ್ನು ಬಳಸುತ್ತಿದ್ದನು. ರಕ್ತ ಹೀರುವ ಸೊಳ್ಳೆಗಳನ್ನು ತೊಡೆದು ಹಾಕಲು ಅನೇಕ ಜನರು ಈ ವಿಧಾನವನ್ನು ಬಳಸುತ್ತಾರೆ.

Published by:ಪಾವನ ಎಚ್ ಎಸ್
First published: