ಸನ್ನೆ ಭಾಷೆಯಲ್ಲಿ ರಾಷ್ಟ್ರಗೀತೆ ಹಾಡಿ ದೇಶಪ್ರೇಮ ಮೆರೆದ ಪುಟಾಣಿಗಳು; ವಿಡಿಯೋ ವೈರಲ್​

ನೆಟ್ಟಿಗರು ಮಕ್ಕಳು ರಾಷ್ಟ್ರಗೀತೆ ಹಾಡುವ ಶೈಲಿಗೆ ಶಹಬ್ಬಾಸ್​ ಎನ್ನುತ್ತಿದ್ದಾರೆ. ಜೊತೆಗೆ ಅವರ ದೇಶಭಕ್ತಿಗೆ ಸಲಾಂ ಹೇಳುತ್ತಿದ್ದಾರೆ.

ರಾಷ್ಟ್ರಗೀತೆ ಹಾಡುತ್ತಿರುವ ವಿಶೇಷ ಚೇತನ ಮಕ್ಕಳು

ರಾಷ್ಟ್ರಗೀತೆ ಹಾಡುತ್ತಿರುವ ವಿಶೇಷ ಚೇತನ ಮಕ್ಕಳು

 • Share this:
  ಗಣರಾಜ್ಯೋತ್ಸವಕ್ಕೆ ಇನ್ನು 6 ದಿನಗಳಷ್ಟೇ ಬಾಕಿ ಇದೆ. ಜನವರಿ 26ರಂದು ದೇಶದೆಲ್ಲೆಡೆ ಸಂಭ್ರಮದಿಂದ 71ನೇ ಗಣರಾಜ್ಯೋತ್ಸವವನ್ನು ಆಚರಣೆ ಮಾಡಲಾಗುತ್ತದೆ. ಈ ಸಮಯದಲ್ಲಿ ವಿಶೇಷ ಚೇತನ ಮಕ್ಕಳು ವಿಭಿನ್ನವಾಗಿ ರಾಷ್ಟ್ರಗೀತೆ ಹಾಡಿರುವ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ. 

  ಶ್ರವಣ ದೋಷವುಳ್ಳ ಮಕ್ಕಳು ಸನ್ನೆ ಭಾಷೆಯ ಮೂಲಕ ರಾಷ್ಟ್ರಗೀತೆಯನ್ನು ಹಾಡಿದ್ದಾರೆ. ವಿಭಿನ್ನ, ಕ್ರಿಯಾಶೀಲ ಮತ್ತು ವಿಶಿಷ್ಟ ಶೈಲಿಯಲ್ಲಿ ಮಕ್ಕಳು 'ಜನಗಣಮನ...' ಎಂದು ಹಾಡುವುದನ್ನು ನೋಡಿದರೆ ಮೈ ನವಿರೇಳುತ್ತದೆ.  ಯೂ ಟ್ಯೂಬ್​ನಲ್ಲಿ 2017ರಿಂದಲೂ ಹರಿದಾಡುತ್ತಿರುವ ಈ ವಿಡಿಯೋ ನೆಟ್ಟಿಗರಿಂದ ಸಾಕಷ್ಟು ಮೆಚ್ಚುಗೆ ಪಡೆದಿದೆ. ಗಣರಾಜ್ಯೋತ್ಸವ ಹತ್ತಿರವಾಗುತ್ತಿದ್ದಂತೆ ಫೇಸ್​ಬುಕ್​, ಟ್ವಿಟರ್​ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಈ ಹಳೆ ವಿಡಿಯೋ ಮತ್ತಷ್ಟು ವೈರಲ್ ಆಗುತ್ತಿದೆ.

     ನೆಟ್ಟಿಗರು ಮಕ್ಕಳು ರಾಷ್ಟ್ರಗೀತೆ ಹಾಡುವ ಶೈಲಿಗೆ ಶಹಬ್ಬಾಸ್​ ಎನ್ನುತ್ತಿದ್ದಾರೆ. ಜೊತೆಗೆ ಅವರ ದೇಶಭಕ್ತಿಗೆ ಸಲಾಂ ಹೇಳುತ್ತಿದ್ದಾರೆ.

   
  First published: