leopard: ಹಿಮ ಚಿರತೆಯ ವಿಡಿಯೋವೊಂದು ಸಾಮಾಜಿಕ ಜಾಲ ತಾಣದಲ್ಲಿ ನೋಡುಗರನ್ನು ಮತ್ತೆ ಮತ್ತೆ ಕಣ್ಣರಳಿಸಿ ನೋಡುವಂತೆ ಮಾಡಿದೆ. ಆ ವಿಡಿಯೋದಲ್ಲಿ ಹಿಮ ಚಿರತೆ ಅಂತದ್ದೇನು ಘನ ಕಾರ್ಯ ಮಾಡುತ್ತಿದೆ ಎಂದುಕೊಂಡಿರಾ? ಹಿಮ ಚಿರತೆ ತನ್ನ ಬೇಟೆಯನ್ನು ಅಟ್ಟಿಸಿಕೊಂಡು ಹೋಗುತ್ತಾ, ಹಿಮದಿಂದ ಆವೃತವಾದ ಪರ್ವತದ ಮೇಲಿಂದ ಕೆಳಗೆ ಬೀಳುವ ದೃಶ್ಯವುಳ್ಳ ವಿಡಿಯೋವದು. ಬೇಟೆಯನ್ನು ಅಟ್ಟಿಸಿಕೊಂಡು ಹೊರಟ ಹಿಮ ಚಿರತೆ ಮಾತ್ರ ಮೇಲಿಂದ ಬೀಳುವುದಿಲ್ಲ, ಅದರ ಬೇಟೆಯೂ ಜೊತೆಗೆ ಬೀಳುತ್ತದೆ. ಚಿರತೆ ತನ್ನ ಬೇಟೆಯನ್ನು ಬಿಡಲೊಲ್ಲದೆ, ಕುರಿ ಚಿರತೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾ, ಎರಡೂ ಪ್ರಾಣಿಗಳು ತಮ್ಮ ಪ್ರಯತ್ನದಲ್ಲಿ ಹೊರಳಾಡುತ್ತಾ, ಉರುಳಾಡುತ್ತಾ ಪರ್ವತದ ಮೇಲಿಂದ ಬೀಳುವ ದೃಶ್ಯವಂತೂ ರೋಚಕವಾಗಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಧಾ ರಮೆನ್ ಹಂಚಿಕೊಂಡಿದ್ದಾರೆ.
Snow leopard is now the State animal of Ladakh.
This clip is from the Secret Lives of Snow leopard. Credits to the documentary team. pic.twitter.com/F7gLPdT8se
— Sudha Ramen IFS 🇮🇳 (@SudhaRamenIFS) September 1, 2021
ಈ ವಿಡಿಯೋವನ್ನು ಇದುವರೆಗೆ 34 ಸಾವಿರ ಮಂದಿ ವೀಕ್ಷಿಸಿದ್ದಾರೆ. ವೈರಲ್ ಆಗಿರುವ ಈ ವಿಡಿಯೋ, ಕುತೂಹಲದಿಂದ ನೋಡಿಸಿಕೊಂಡು ಹೋಗುತ್ತದೆ. ಹೆಣ್ಣು ಹಿಮ ಚಿರತೆಯು ತನ್ನ ಬೇಟೆಯಾದ, ಒಂದು ಭರಾಲ್ ಅಥವಾ ನೀಲಿ ಕುರಿಯೆಂದು ಜನಪ್ರಿಯವಾಗಿರುವ ಕುರಿಯನ್ನು ಹಿಡಿಯಲು ಪ್ರಯತ್ನಿಸುತ್ತಿರುತ್ತದೆ. ಅವುಗಳ ಆ ಹಿಡಿಯುವ ಮತ್ತು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಅವೆರಡು ಪರ್ವತದ ತುದಿಯಿಂದ ಕೆಳಗೆ ಬೀಳುತ್ತವೆ.
“ಹಿಮ ಚಿರತೆ ಈಗ ಲಡಾಕ್‍ನ ರಾಜ್ಯ ಪ್ರಾಣಿ. ಈ ದೃಶ್ಯ ಸೀಕ್ರೆಟ್ ಲೈಫ್ಸ್ ಆಫ್ ಸ್ನೋ ಲೆಪಾರ್ಡ್ ನದ್ದು. ಇದರ ಶ್ರೇಯ ಸಾಕ್ಷ್ಯ ಚಿತ್ರ ತಂಡಕ್ಕೆ ಸಲ್ಲಬೇಕು” ಎಂದು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಧಾ ರಮೆನ್ ವಿಡಿಯೋದ ಜೊತೆ ಪೋಸ್ಟ್‍ನಲ್ಲಿ ಬರೆದುಕೊಂಡಿದ್ದಾರೆ.
ಈ ವಿಡಿಯೋವನ್ನು ನೋಡಿದ ನಂತರ ನಮ್ಮೆಲ್ಲರ ಮನದಲ್ಲಿ ಮೊದಲು ಮೂಡುವ ಪ್ರಶ್ನೆ, ಅಷ್ಟು ಮೇಲಿಂದ ಬಿದ್ದ ಬಳಿಕ ಚಿರತೆ ಬದುಕುಳಿಯಿತೇ? ಎಂಬುವುದು. ಹೌದು, ಬದುಕುಳಿಯಿತು. 2018ರಲ್ಲಿ ವೈಲ್ಡ್ ಫಿಲ್ಮ್ಸ್ ಇಂಡಿಯಾದ ಯೂಟ್ಯೂಬ್ ಚ್ಯಾನಲ್‍ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಅವರು ಈ ವಿಡಿಯೋವನ್ನು “ಆಕರ್ಷಕ” ಎಂದು ವರ್ಣಿಸಿದ್ದಾರೆ.
“ನಾವು ಮೊದಲ ನೋಟದಲ್ಲಿ ಗಮನಿಸಿದ ಬಹಳಷ್ಟು ಸಂಗತಿಗಳು ಇದರಲ್ಲಿ ನಡೆದಿವೆ- ಉದಾಹರಣೆಗೆ, ಬಿದ್ದ ಮೊದಲ ಹಂತದ ನಂತರವೂ ಚಿರತೆಯನ್ನು ತನ್ನಿಂದ ಹಿಮ್ಮೆಟ್ಟಿಸುವ ಸಾಮಥ್ರ್ಯವನ್ನು ಭರಾಲ್ ಹೊಂದಿದೆ ಮತ್ತು ಹಿಮ ಚಿರತೆಯು ಕೂಡ ತನ್ನ ಜೀವ ಉಳಿಸಿಕೊಳ್ಳಲು ದೇಹವನ್ನು ಕೌಶಲ್ಯಪೂರ್ಣವಾಗಿ ಉಪಯೋಗಿಸಿಕೊಳ್ಳುತ್ತದೆ. ನಡವಳಿಕೆ ಮತ್ತು ಶರೀರಶಾಸ್ತ್ರದ ದೃಷ್ಟಿಯಿಂದ ಈ ದೃಶ್ಯ ನಮಗೆ ಬಹಳಷ್ಟು ತಿಳಿಸುತ್ತದೆ. ಹಿಮಾಲಯದ ಎಂತಹ ನಾಟಕವಿದು” ಎಂದು ಆ ವಿಡಿಯೋದ ವಿವರಣೆಯಲ್ಲಿ ಬರೆಯಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ