Viral Video: ಓಡುವ ಮಹಿಳೆಯನ್ನು ಹಿಂಬಾಲಿಸಿದ ಕುರಿ ಹಿಂಡು, ನೋಡಿದವರಿಗೆ ಖುಷಿ ಕೊಡುತ್ತೆ ಈ ವೈರಲ್‌ ವಿಡಿಯೋ!

Viral Video: ಎಲಿಯಾನರ್‌ ಸ್ಕೋಲ್ಜ್‌ ಎನ್ನುವವರು ಸೆಪ್ಟೆಂಬರ್ 18 ರಂದು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡ ವಿಡಿಯೋ ಒಂದು ವೈರಲ್ಲ ಆಗಿದೆ. ವೈರಲ್ ಆದ ಸುಂದರ ವಿಡಿಯೋ ಇಲ್ಲಿದೆ ನೋಡಿ.

ಕುರಿಗಳ ಗುಂಪು

ಕುರಿಗಳ ಗುಂಪು

  • Share this:
ನಿಸರ್ಗದಲ್ಲಿ ಓಡಾಡುವುದು, ಹಸಿರನ್ನು (Green) ಅನುಭವಿಸುವುದು, ಪ್ರಕೃತಿಯ ಸೊಬಗನ್ನು ಆಸ್ವಾದಿಸುವುದು, ಪ್ರಾಣಿ ಪಕ್ಷಿಗಳ ಕೂಗನ್ನು ಆಲಿಸುವುದು ಎಂಥವರ ಪಾಲಿಗೂ ಒಂದು ಚೆಂದದ ಅನುಭೂತಿ. ಕಾಡಿನ (Forest) ಮಧ್ಯೆ ಅಥವಾ ಪರ್ವತಗಳಲ್ಲಿ ಟ್ರೆಕ್ಕಿಂಗ್‌ ಹೋಗುವುದು ಒಂದು ಅದ್ಭುತ ಅನುಭವ. ಪ್ರಕೃತಿಯ ಮಧ್ಯೆ ನಡೆಯುವ ಅನುಭವವಿದೆಯಲ್ಲ ಅದು ಗಮ್ಯ ಸ್ಥಾನ ತಲುಪೋ ಅನುಭವಕ್ಕಿಂತ ಚೆಂದನೆಯದಾಗಿರುತ್ತದೆ. ಅದನ್ನು ಅನುಭವಿಸಿದವರಿಗೇ ಗೊತ್ತು ಅದರ ಸಂತೋಷ ಎಂಥದ್ದು ಅನ್ನುವುದು. ಹೀಗೆಯೇ ಕಾಡಿನ ಮಧ್ಯೆ ಟ್ರಯಲ್‌ ರನ್ನರ್‌ ಹಿಂದೆ ಓಡುತ್ತಿರುವ (Run) ನೂರಾರು ಕುರಿಗಳ ಹಿಂಡಿನ ಒಂದು ಕ್ಯೂಟ್‌ ವಿಡಿಯೋ ಅಂತರ್ಜಾಲದಲ್ಲಿ ಸಖತ್‌ ವೈರಲ್‌ (Viral)  ಆಗಿದೆ.

ಅಂದಹಾಗೆ ಇದು ನಡೆದದ್ದು ಫ್ರಾನ್ಸ್‌ ನಲ್ಲಿ. ಎಲಿಯಾನರ್‌ ಸ್ಕೋಲ್ಜ್‌ ಎನ್ನುವವರು ಸೆಪ್ಟೆಂಬರ್ 18 ರಂದು ಇನ್​​ಸ್ಟಾಗ್ರಾಂನಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅವರು ಈ ಪೋಸ್ಟ್ ಕೆಳಗೆ ಇದು ನಾನು ನೋಡಿದ ಅತ್ಯುತ್ತಮ ಸಂಗತಿ. ಈ ಕುರಿಗಳು ಆಕೆಯನ್ನು ಬೆನ್ನಟ್ಟಿವೆ ಅಂತ ನೀವು ಭಾವಿಸುತ್ತೀರಾ?" ಅನ್ನೋ ಕ್ಯಾಪ್ಶನ್‌ ನೀಡಿದ್ದಾರೆ.ಫ್ರಾನ್ಸ್‌ ನಲ್ಲಿ ಏಕಾಂಗಿಯಾಗಿ ಪಾದಯಾತ್ರೆ ಮಾಡೋವಾಗ ಮಿಸ್ ಸ್ಕೋಲ್ಜ್ ಅವರು ಈ ವೀಡಿಯೊವನ್ನು ಸೆರೆಹಿಡಿದಿದ್ದಾರೆ. ಇದು ಪರ್ವತಗಳಲ್ಲಿ ಓಟಗಾರರೊಬ್ಬರನ್ನ ನೂರಕ್ಕೂ ಹೆಚ್ಚು ಕುರಿಗಳಿರುವ ದೊಡ್ಡ ಹಿಂಡು ಹಿಂಬಾಲಿಸುತ್ತಿರುವುದನ್ನು ತೋರಿಸುತ್ತದೆ.

ಹಿಂಬಾಲಿಸಿದ ಕುರಿ ಹಿಂಡು

ಫ್ರಾನ್ಸ್‌ನಲ್ಲಿ ನಾನು ಏಕಾಂಗಿಯಾಗಿ ಚಾರಣ ಮಾಡುವಾಗ ನಾನು ಎದುರಿಸಿದ ವಿಶಿಷ್ಟ ಅನುಭವ ಇದು. ಈ ಅನುಭವದ ಬಗ್ಗೆ ಯೋಚಿಸುವುದನ್ನು ನಿಲ್ಲಿಸಲೇ ಆಗಲಿಲ್ಲ ಎನ್ನುತ್ತಾರೆ ಮಿಸ್ ಸ್ಕೋಲ್ಜ್. ಓಡುತ್ತಿದ್ದ ಆ ಮಹಿಳೆ ಸ್ಕೋಲ್ಜ್ ಅವರೊಂದಿಗೆ ಮಾತನಾಡಲು ಕೆಲವು ನಿಮಿಷಗಳ ಕಾಲ ನಿಲ್ಲುತ್ತಿದ್ದಂತೆ, ಕುರಿಗಳು ಸಹ ನಿಂತುಕೊಳ್ಳುತ್ತವೆ. ಅವರು ಮಾತನಾಡುವಾಗ ತಾಳ್ಮೆಯಿಂದ ಕಾದು ಮತ್ತೆ ಆಕೆ ಓಡತೊಡಗಿದ ಮೇಲೆ ಇಡೀ ಕುರಿಗಳ ಹಿಂಡು ಮತ್ತೆ ಆಕೆಯನ್ನು ಹಿಂಬಾಲಿಸುತ್ತವೆ.

ಇದನ್ನೂ ಓದಿ: ನೀರಿನಾಳದಲ್ಲಿ ಮೂನ್ ವಾಕ್ ಮಾಡ್ತಾನೆ ಈತ! ಎಷ್ಟು ಚಂದ ಇದೆ ನೋಡಿ

11.8 ಮಿಲಿಯನ್ ಲೈಕ್ ಪಡೆದ ವಿಡಿಯೋ

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಆದಾಗಿನಿಂದ 11.8 ಮಿಲಿಯನ್ ಜನರು ನೋಡಿದ್ದಾರೆ. ಅಲ್ದೇ 6.9 ಲಕ್ಷ ಲೈಕ್‌ ಪಡೆದಿದೆ. ಇನ್ನು ಈ ವಿಡಿಯೋಕ್ಕೆ ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ. ಇದನ್ನು ನೋಡಿ ಕೆಲವರು ಖುಷಿ ಪಟ್ಟು ಕಾಮೆಂಟ್‌ ಹಾಕಿದರೆ ಇನ್ನೂ ಕೆಲವರು ಇದನ್ನು ಟೀಕೆ ಮಾಡಿದ್ದಾರೆ. ಹಾಗೆ ಕಾಮೆಂಟ್‌ ಮಾಡಿದವರಲ್ಲಿ ಒಬ್ಬರು ಇದು ಎಂದೆಂದಿಗೂ ಹುಚ್ಚುತನದ ಸಂಗತಿಯಾಗಿದೆ. ಅವರು ಎಷ್ಟು ಮೈಲಿ ಓಡಿದ್ದಾರೆ ಎಂಬ ಯಾವುದಾದರೂ ವಿಡಿಯೊ ಇದ್ದರೆ ನಾನು ಆಶ್ಚರ್ಯ ಪಡುತ್ತೇನೆʼ ಎಂದಿದ್ದಾರೆ.
View this post on Instagram


A post shared by Eleanor Scholz (@elea_gram)


ಇದನ್ನೂ ಓದಿ: ವಿದ್ಯಾರ್ಥಿನಿಯರ ಸ್ನಾನ ಮಾಡುವ ವಿಡಿಯೋ ಲೀಕ್; ರಾತ್ರಿಯಿಡೀ ಧರಣಿ, ಇಬ್ಬರು ಅರೆಸ್ಟ್

ಇನ್ನೆಷ್ಟೋ ಜನ ಈ ಕುರಿಗಳ ಹಿಂಡು ತುಂಬಾ ಮುದ್ದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಅದಲ್ಲದೆ ಮಹಿಳೆಯನ್ನೇ ಹಿಂಬಾಲಿಸುವ ಅಷ್ಟೊಂದು ಕುರಿಗಳನ್ನು ನೋಡಿ ಆಶ್ಚರ್ಯಪಟ್ಟಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ

ಸಾಮಾಜಿಕ ಜಾಲತಾಣ ಅಂದಮೇಲೆ ಕಾಮೆಂಟ್‌ ಗಳಲ್ಲಿ ಒಳ್ಳೆಯದು ಹಾಗೂ ಕೆಟ್ಟದ್ದು ಎರಡೂ ವಿಧದ ಅಭಿಪ್ರಾಯಗಳು ಇದ್ದೇ ಇರುತ್ತವೆ. ಆದ್ರೆ ನಿಸರ್ಗದ ಮಧ್ಯೆ ಓಡುವುದೋ, ಚಾರಣ ಮಾಡುವುದೋ,  ಅಥವಾ ಸ್ವಲ್ಪ ಹೊತ್ತು ಕುಳಿತಿದ್ದು ಅಲ್ಲಿನ ಸೌಂದರ್ಯ ಅನುಭವಿಸುವುದೋ, ಇವೆಲ್ಲವೂ ಮನಸ್ಸಿಗೆ ಖುಷಿ ಕೊಡುವ ವಿಚಾರವೇ.ಲೋಕದ ಚಿಂತೆಯೆಲ್ಲ ಮರೆತು ಸ್ಪೂರ್ತಿ ನೀಡೋ ಪ್ರಕೃತಿಕ ಸೌಂದರ್ಯದಲ್ಲಿ ಕಳೆದುಹೋಗುವುದೇ ಒಂದು ಅನುಭೂತಿ. ಇಂಥ ಅನುಭವಗಳನ್ನ ನಾವಿಂದು ಸುಲಭವಾಗಿ ಅಂತರ್ಜಾಲದಲ್ಲಿ ನೋಡಬಹುದು ಅನ್ನೋದೇ ಖುಷಿಯ ವಿಚಾರ.
First published: