Viral Video: ಚಾಲಕನಿಲ್ಲದೆಯೇ ರಸ್ತೆಯುದ್ದಕ್ಕೂ ಚಲಿಸುವ ಸೈಕಲ್ ರಿಕ್ಷಾ! ಭಯಹುಟ್ಟಿಸೋ ವಿಡಿಯೋ ವೈರಲ್

ನಾವಿಲ್ಲಿ ಇದೀಗ ತೋರಿಸುತ್ತಿರುವ ಈ ವಿಡಿಯೋ ನೋಡಿದ ಮೇಲೆ ನಿಮಗೆ ಈ ಥರದ್ದೇ ಒಂದು ಭಾವನೆ ಮೂಡಬಹುದು. ಅರೇ ಇದು ಸಾಧ್ಯಾನಾ ಅಂತಾನೂ ನಿಮಗೆ ಅನ್ನಿಸಬಹುದು. ಅದ್ಯಾವ ವಿಡಿಯೋ, ಏನಾಗಿದೆ ಇಲ್ಲಿದೆ ಮಾಹಿತಿ.

ತನ್ನಷ್ಟಕ್ಕೆ ಮುಂದೆ ಸಾಗುತ್ತಿರುವ ಸೈಕಲ್ ರಿಕ್ಷಾ

ತನ್ನಷ್ಟಕ್ಕೆ ಮುಂದೆ ಸಾಗುತ್ತಿರುವ ಸೈಕಲ್ ರಿಕ್ಷಾ

  • Share this:
ನಿರ್ಜೀವ ವಸ್ತುಗಳು (Inanimate object) ತಂತಾನೇ ಚಲಿಸಿದರೆ (moved) ಅಥವಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸ್ವಯಂಚಾಲಿತವಾಗಿ (Automatic) ಹೋಗುತ್ತಿದ್ದರೆ ನಿಮಗೆ ಏನೆನಿಸಬಹುದು?. ಖಂಡಿತ ನೀವು ಭೂತ-ಪ್ರೇತಗಳಂತ (Ghost) ನಕಾರಾತ್ಮಕ ಶಕ್ತಿಗಳನ್ನು (Negative energy) ನಂಬುವವರಾದರೆ ಒಂದು ಕ್ಷಣ ಬೆಚ್ಚಿ ಬೀಳುವುದು ಪಕ್ಕಾ. ಸಾಮಾನ್ಯವಾಗಿ ಮನೆಯಲ್ಲಿ (Home) ಗಾಳಿ ರಭಸಕ್ಕೆ (wind blows) ಮನೆಯ ಕುರ್ಚಿ (Chair) ಅಥವಾ ಇನ್ಯಾವುದೇ ವಸ್ತುಗಳು (Things) ಅತ್ತಿಂದಿತ್ತ ಚಲಿಸಿದರೆ ಸಾಕು, ನಾವು ಅದರ ಹಿಂದಿನ ಕಾರಣದ ಬಗ್ಗೆ ಕಿಂಚಿತ್ತೂ ಯೋಚಿಸದೇ ಇದ್ಯಾವುದೋ ಕಾಟವೇ ಸರಿ ಎಂದುಕೊಂಡು ಬಿಡುತ್ತವೆ.

ನಾವಿಲ್ಲಿ ಇದೀಗ ತೋರಿಸುತ್ತಿರುವ ಈ ವಿಡಿಯೋ ನೋಡಿದ ಮೇಲೆ ನಿಮಗೆ ಈ ಥರದ್ದೇ ಒಂದು ಭಾವನೆ ಮೂಡಬಹುದು. ಅರೇ ಇದು ಸಾಧ್ಯಾನಾ ಅಂತಾನೂ ನಿಮಗೆ ಅನ್ನಿಸಬಹುದು. ಅದ್ಯಾವ ವಿಡಿಯೋ, ಏನಾಗಿದೆ ಇಲ್ಲಿದೆ ಮಾಹಿತಿ.

ತನ್ನಷ್ಟಕ್ಕೆ ಮುಂದೆ ಸಾಗುತ್ತಿರುವ ಸೈಕಲ್ ರಿಕ್ಷಾ
ಸೈಕಲ್ ರಿಕ್ಷಾ ಒಂದು ನಗರದಲ್ಲಿ ತಾನಾಗಿಯೇ ಮುಂದೆ ಸಾಗುತ್ತಿರುವ ವಿಡಿಯೋ ವೈರಲ್ ಆಗಿದೆ. ನೆಟಿಜನ್‌ಗಳು ಇದು ದೆವ್ವ ಅಂತೆಲ್ಲಾ ಭಾವಿಸುತ್ತಿದ್ದಾರೆ. ದಾರಿಯಲ್ಲಿ ಸೈಕಲ್ ರಿಕ್ಷಾವು ಇತರೆ ವಾಹನಗಳಿಗೆ ಸಂಚಾರಕ್ಕೆ ಅಡ್ಡಿಯಾಗದಂತೆ ಜನನಿಬಿಡ ರಸ್ತೆಯಲ್ಲಿ ಹೇಗೆ ಹೋಗಿ ಮತ್ತೆ ಸರಾಗವಾಗಿ ಪಾದಚಾರಿ ಮಾರ್ಗಕ್ಕೆ ಹಿಂತಿರುಗುತ್ತದೆ ಎಂಬುವುದನ್ನು ನಾವಿಲ್ಲಿ ನೋಡಬಹುದು. ಈ ವಿಡಿಯೋ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗಿದ್ದಲ್ಲದೇ ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ.

ಸೈಕಲ್ ರಿಕ್ಷಾದ ವಿಲಕ್ಷಣ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರನ್ನು ತಲೆ ಕೆಡಿಸಿಕೊಳ್ಳುವಂತೆ ಮಾಡಿದೆ. ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಕ್ಲಿಪ್ ವೈರಲ್ ಆಗಿದ್ದು, ವಿಡಿಯೋ ನೋಡಿದ ನಿಮಗೂ ಅಚ್ಚರಿ ಮೂಡಿಸುವುದರಲ್ಲಿ ಅನುಮಾನವಿಲ್ಲ. ಮತ್ತು ನೀವು ದೆವ್ವ, ಭೂತ, ಪ್ರೇತಗಳನ್ನು ನಂಬುವವರಾದರೆ ಕ್ಲಿಪ್‌ನ ಹಿಂದೆ ನೀವು ಕೆಲವು ಅಸಾಮಾನ್ಯ ಕಾರಣವನ್ನು ಹುಡುಕಲೂಬಹುದು.

ಇದನ್ನೂ ಓದಿ: Haunted Places: ಜಗತ್ತಿನಲ್ಲಿಯೇ ಅತ್ಯಂತ ಭಯಾನಕ ಸ್ಥಳಗಳಿವು! ಇಲ್ಲಿ ಹಗಲಲ್ಲೂ ಓಡಾಡಲ್ಲ ಜನ

ಮಾನವನ ಸಹಾಯವಿಲ್ಲದೇ ತಂತಾನೇ ಚಲಿಸುವ ವಿಡಿಯೋವನ್ನು ಮೂಲತಃ ಲಿಮನ್ ಸರ್ಕರ್‌ ಚಿತ್ರಿಸಿದ್ದಾರೆ. ಗಾಳಿ, ಮಳೆ, ಚಂಡಮಾರುತದ ಸಮಯದಲ್ಲಿ ಜನನಿಬಿಡ ರಸ್ತೆಯಲ್ಲಿ ಸೈಕಲ್ ರಿಕ್ಷಾ ಹೇಗೆ ಸ್ವಯಂಚಾಲಿತವಾಗಿ ಚಲಿಸುತ್ತಿದೆ ಎಂಬುವುದನ್ನು ವಿಡಿಯೋದಲ್ಲಿ ನೋಡಬಹುದು.

19 ಸೆಕೆಂಡ್ ವಿಡಿಯೋದಲ್ಲಿ ಏನಿದೆ?
ಕೆಲವೇ ಸೆಕೆಂಡುಗಳ ವಿಡಿಯೋ ಕ್ಲಿಪ್ ನಲ್ಲಿ ಸೈಕಲ್ ರಿಕ್ಷಾವೊಂದು ಅದರ ಮಾಲೀಕನ ಸಹಾಯ ಕೂಡ ಇಲ್ಲದೇ ಸರಾಗವಾಗಿ ರಸ್ತೆಯ ಮೇಲೆ ಪ್ರಯಾಣ ಆರಂಭಿಸುತ್ತದೆ. ಹಾಗೆಯೇ ಸ್ವಲ್ಪ ದೂರ ಹೋಗಿ ಮತ್ತೆ ಪಾದಾಚಾರಿ ರಸ್ತೆಗೆ ಮರಳುತ್ತದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಷಯವೆಂದರೆ ಸೈಕಲ್ ರಿಕ್ಷಾದ ಮೇಲೆ ಯಾರೂ ಕುಳಿತುಕೊಂಡಿಲ್ಲ ಮತ್ತು ಯಾರೂ ಸಹ ಅದನ್ನು ಚಲಾಯಿಸುತ್ತಿಲ್ಲ. ರಿಕ್ಷಾವು ರಸ್ತೆಯಲ್ಲಿ ಬೇರೆ ವಾಹನಗಳಿಗೆ ಅಡ್ಡಿಯಾಗದಂತೆ ಜನನಿಬಿಡ ರಸ್ತೆಯಲ್ಲಿ ಸರಿಯಾದ ರೀತಿಯ ಸಂಚಾರವನ್ನು ನಿರ್ವಹಿಸುತ್ತದೆ ಮತ್ತು ನಂತರ ಸರಾಗವಾಗಿ ಪಾದಚಾರಿ ಮಾರ್ಗಕ್ಕೆ ಹಿಂತಿರುಗುತ್ತದೆ. ಇದಾದ ಬಳಿಕ ಸೈಕಲ್ ರಿಕ್ಷಾದ ಮಾಲೀಕ ಅದನ್ನು ಹಿಂದಕ್ಕೆ ಎಳೆದುಕೊಳ್ಳುವುದನ್ನು ವಿಡಿಯೋದಲ್ಲಿ ನೋಡಬಹುದು.

ಇದನ್ನೂ ಓದಿ: Incredible India: ಭಾರತದ ಅದ್ಭುತ ಸೌಂದರ್ಯಕ್ಕೆ ನಾರ್ವೆ ಅಧಿಕಾರಿ ಫಿದಾ, ನೀವೂ ಫೋಟೋ ನೋಡಿ

"ಆಟೋ ವಾಯ್ಸ್ ಕಮಾಂಡ್ ಮತ್ತು ಆಟೋ ಪಾರ್ಕಿಂಗ್ ಜೊತೆಗೆ ಟೆಸ್ಲಾ ಸೈಕಲ್ ರಿಕ್ಷಾ" ಎಂಬ ಶೀರ್ಷಿಕೆ ನೀಡಿ ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಲಾಗಿದೆ.

ಸಾಕಷ್ಟು ವೈರಲ್ ಆದ ವಿಡಿಯೋ
ಸದ್ಯ ಈ ವೀಡಿಯೊ ಈಗಾಗ್ಲೇ 760k ವೀಕ್ಷಣೆಗಳನ್ನು ಮತ್ತು ಹಲವಾರು ಕಾಮೆಂಟ್ ಗಳನ್ನು ಪಡೆದುಕೊಂಡಿದೆ. ವಿಡಿಯೋಗೆ ನೆಟಿಜನ್‌ಗಳಿಂದ ಹಲವಾರು ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ರಿಕ್ಷಾವನ್ನು ಎಲಾನ್ ಮಸ್ಕ್ ನೋಡಲು ಹೆಮ್ಮೆಪಡುತ್ತಾರೆ ಎಂದು ಕೆಲವರು ಗಮನಸೆಳೆದರೆ, ಇತರರು ವಾಹನಕ್ಕೆ ದೆವ್ವ ಹಿಡಿದಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಅಚ್ಚರಿಯನ್ನು ಎಮೋಜಿ ಮೂಲಕ ವ್ಯಕ್ತಪಡಿಸಿದ್ದಾರೆ.ವಿಡಿಯೋದ ಹಿಂದಿರುವ ಅಸಲಿ ಸತ್ಯ!?
ವಿಡಿಯೋದಲ್ಲಿ ನೋಡುವಂತೆ ಆ ಪ್ರದೇಶದಲ್ಲಿ ಚಂಡಮಾರುತ ಸಹಿತ ಭಾರಿ ಗಾಳಿ ಮತ್ತು ಮಳೆ ಬರುತ್ತಿರುವುದನ್ನು ನೋಡಬಹುದು. ಹೀಗಾಗಿ ಗಾಳಿ ರಭಸಕ್ಕೆ ಸೈಕಲ್ ರಿಕ್ಷಾ ಸ್ವಯಂ ಚಾಲಿತವಾಗಿ ಮುಂದಕ್ಕೆ ಹೋಗಿದೆ ಎನ್ನಬಹುದು.
Published by:Ashwini Prabhu
First published: